ಈ ರೀತಿಯೆಲ್ಲಾ ಇದ್ದಾಗ ಮದುವೆಗೆ 'ಒಕೆ' ಹೇಳದಿದ್ದರೆ ಒಳ್ಳೆಯದು

ಮದುವೆ ಎಂಬುವುದು ಹುಡುಗಾಟವಲ್ಲ ಎಂದು ಹಿರಿಯರು ಹೇಳ್ತಾರೆ, ಆದರೆ ಇತ್ತೀಚಿನ ಕೆಲ ಮದುವೆಗಳನ್ನು ನೋಡುವಾಗ ಇಷ್ಟವಿಲ್ಲದೆ ಮೇಲೆ ಏಕೆ ಮದುವೆಯಾಗಿ ಇವರ ಖುಷಿಯನ್ನು ಹಾಳು ಮಾಡಿಕೊಳ್ಳುವುದಲ್ಲದೆ, ಮತ್ತೊಬ್ಬರ ಜೀವನವನ್ನೂ ಹಾಳು ಮಾಡುತ್ತಿದ್ದಾರೆ ಎಂದನಿಸದೆ ಇರಲ್ಲ.

Relationship tips

ಇವರಿಗೆ ಮದುವೆಯಾಗಲು ಇಷ್ಟ ಇರಲ್ಲ, ಆದರೆ ಯಾವುದೋ ಕಾರಣಕ್ಕೆ ಮದುವೆಯಾಗುತ್ತಾರೆ. ಮನೆಯವರ ಒತ್ತಾಯಕ್ಕೆ ಇರಬಹುದು ಅಥವಾ ಮತ್ಯಾವುದೋ ಕಾರಣಕ್ಕೆ ಇರಬಹುದು, ಮದುವೆಯಾದ ಮೇಲೆ ನಾನು ಬಯಸಿದಂಥ ಜೀವನ ಸಂಗಾತಿ ಇವಳಲ್ಲ/ ಇವನ್ನಲ್ಲ ಎಂದು ಕೊರಗುತ್ತಾ, ಅವರ ಜೊತೆ ನೆಟ್ಟಗೆ ಸಂಸಾರ ಮಾಡುವುದಿಲ್ಲ.

ಹೀಗೆ ಮಾಡುವುದರಿಂದ ಇವರು ಇವರ ಬದುಕಿನ ನೆಮ್ಮದಿ ಮಾತ್ರ ಹಾಳು ಮಾಡಿಕೊಳ್ಳುವುದಲ್ಲ, ಅವರನ್ನು ಮದುವೆಯಾದವರ ಜೀವನ ಕೂಡ ಹಾಳು ಮಾಡುತ್ತಾರೆ. ಆದ್ದರಿಂದ ಮದುವೆಗೆ ಮುಂಚೆ ಈ ರೀತಿಯಿದ್ದರೆ ಅಥವಾ ನಿಮಗೆ ಈ ರೀತಿ ಅನಿಸಿದರೆ ನೀವು ಇನ್ನೂ ಮದುವೆಗೆ ರೆಡಿಯಾಗಿಲ್ಲ ಎಂದರ್ಥ:

1. ನಿಮ್ಮ ಸಂಗಾತಿಯ ಬಗ್ಗೆ ಸರಿಯಾಗಿ ಗೊತ್ತಿಲ್ಲದಿದ್ದರೆ

1. ನಿಮ್ಮ ಸಂಗಾತಿಯ ಬಗ್ಗೆ ಸರಿಯಾಗಿ ಗೊತ್ತಿಲ್ಲದಿದ್ದರೆ

ಅರೇಂಜ್‌ ಮ್ಯಾರೇಜ್‌ನಲ್ಲಿ ತಮ್ಮ ಸಂಗಾತಿ ಬಗ್ಗೆ ಹೆಚ್ಚಾಗಿ ಗೊತ್ತಿರುವುದಿಲ್ಲ, ಆದರೆ ಈಗ ಮೊದಲಿನಂತೆ ಪೋಷಕರು ನಾವು ನೋಡಿದ ಹುಡುಗ ಅಥವಾ ಹುಡುಗಿಯನ್ನೇ ಮದುವೆಯಾಗಬೇಕೆಂದು ಒತ್ತಾಯ ಮಾಡುವುದು ತುಂಬಾ ಕಡಿಮೆ, ಮಕ್ಕಳ ಆಸೆ, ಆಯ್ಕೆಗೆ ತುಂಬಾನೇ ಮಹತ್ವ ಕೊಡುತ್ತಾರೆ. ಆದ್ದರಿಂದ ಅರೇಂಜ್‌ ಮ್ಯಾರೇಜ್‌ ಆದರೂ ಒಬ್ಬರಿಗೊಬ್ಬರು ತಿಳಿದುಕೊಳ್ಳಲು, ಅರ್ಥ ಮಾಡಿಕೊಳ್ಳಲು ಸಮಯವಿರುತ್ತದೆ. ಆ ಪ್ರಯತ್ನ ಮಾಡದೇ ಇದ್ದರೆ ಮದುವೆಯಾಗಬೇಡಿ. ಏಕೆಂದರೆ ಮದುವೆಯ ನಂತರ ತುಂಬಾ ಸಮಸ್ಯೆಗಳು ಬರಬಹುದು.

2. ನಿಮ್ಮ ರಹಸ್ಯಗಳನ್ನು ಶೇರ್‌ ಮಾಡಲು ಹಿಂದೇಟು ಹಾಕುವುದಾದರೆ

2. ನಿಮ್ಮ ರಹಸ್ಯಗಳನ್ನು ಶೇರ್‌ ಮಾಡಲು ಹಿಂದೇಟು ಹಾಕುವುದಾದರೆ

ಮದುವೆಯಾಗುವ ಮುಂಚೆ ನೀವು ನಿಮ್ಮ ಬಗ್ಗೆ, ನೀವು ಈ ಹಿಂದೆ ಯಾವುದಾದರೂ ರಿಲೇಷನ್‌ಶಿಪ್‌ನಲ್ಲಿದ್ದರೆ ಅದರ ಬಗ್ಗೆ ಹೇಳಲು ನೀವು ರೆಡಿಯಿಲ್ಲ ನೀವು ಇನ್ನೂ ಮದುವೆಗೆ ಸಿದ್ಧವಿಲ್ಲ ಎಂದು ಹೇಳಬಹುದು.

ನೀವು ಮದುವೆಯಾಗಲು ರೆಡಿ ಅಂದಾದರೆ ನಿಮ್ಮ ಸಂಗಾತಿ ಬಳಿಯಿಂದ ಯಾವ ವಿಷಯವನ್ನೂ ಮರೆಮಾಚಬೇಡಿ.

3. ನಿಮ್ಮಿಬ್ಬರ ನಡುವೆ ಜಗಳವೇ ಇಲ್ಲವೆಂದರೆ

3. ನಿಮ್ಮಿಬ್ಬರ ನಡುವೆ ಜಗಳವೇ ಇಲ್ಲವೆಂದರೆ

ಪ್ರೀತಿಯಿದ್ದಲ್ಲಿ ಜಗಳವಿದ್ದೇ ಇರುತ್ತದೆ, ಅದು ಶೇ. 100ರಷ್ಟು ಸತ್ಯ. ನಿಮ್ಮಿಬ್ಬರಲ್ಲಿ ಯಾವುದೇ ಜಗಳವಾಗಿಲ್ಲ ಎಂದರೆ ನಿಮ್ಮಿಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂದು ಹೇಳಬಹುದು. ಒಂದು ಒಳ್ಳೆಯ ರಿಲೇಷನ್‌ಶಿಪ್‌ನಲ್ಲಿ ಸಣ್ಣ-ಪುಟ್ಟ ಜಗಳ, ಸ್ವಲ್ಪ ಪೊಸೆಸಿವ್, ಹುಸಿಮುನಿಸು ಎಲ್ಲಾ ಇದ್ದೇ ಇರುತ್ತದೆ. ಅವೇನೂ ಇಲ್ಲ ಎಂದರೆ ನೀವು ಆ ಸಂಬಂಧದ ಬಗ್ಗೆ ಮರುಚಿಂತೆ ಮಾಡುವುದು ಒಳ್ಳೆಯದು.

4. ನಿಮ್ಮ ಮೌಲ್ಯಗಳಿಗೆ ಪ್ರಾಮುಖ್ಯತೆ ಇಲ್ಲವೆಂದರೆ

4. ನಿಮ್ಮ ಮೌಲ್ಯಗಳಿಗೆ ಪ್ರಾಮುಖ್ಯತೆ ಇಲ್ಲವೆಂದರೆ

ನಿಮಗೆ ನಿಮ್ಮ ಸಂಗಾತಿ ಎಂದರೆ ತುಂಬಾ ಇಷ್ಟ, ಆದರೆ ಅವರ ಕಡೆಯಿಂದ ನಿಮ್ಮ ಮೌಲ್ಯಗಳಿಗೆ ಯಾವುದೇ ಸ್ಪಂದನೆ ಇಲ್ಲ ಎಂದರ್ಥ. ಅಂಥವರನ್ನು ಮದುವೆಯಾದರೆ ಜೀವನ ಪೂರ್ತಿ ಒದ್ದಾಡಬೇಕಾಗುತ್ತದೆ, ಅವರಿಗೆ ಅವರ ಲೈಫ್‌, ಅವರ ಕುಟುಂಬ ಇವರೇ ತುಂಬಾ ಮುಖ್ಯ ಎಂದಾದರೆ ಅಂಥ ಮದುವೆಗೆ ಒಕೆ ಅನ್ನದಿದ್ದರೆ ಒಳ್ಳೆಯದು.

5. ಬೇರೆ ಕಡೆಗೆ ಆಕರ್ಷಣೆಯಿದ್ದರೆ

5. ಬೇರೆ ಕಡೆಗೆ ಆಕರ್ಷಣೆಯಿದ್ದರೆ

ನೀವು ಒಬ್ಬರಿಗೆ ಕಮಿಟ್‌ ಆದ ಮೇಲೆ ನಿಯತ್ತು ಇರಬೇಕು, ಆದರೆ ಸಂಬಂಧ ಗಟ್ಟಿಯಾಗುವುದು. ಒಂದು ಸಂಬಂಧದಲ್ಲಿ ಇದ್ದ ಮೇಲೂ ಬೇರೆ ಕಡೆ ಆಕರ್ಷಿತರಾಗುತ್ತಿದ್ದೀರಿ ಎಂದಾದರೆ ನೀವು ನಿಮ್ಮ ಬಾಳ ಸಂಗಾತಿಗೆ ಮೋಸ ಮಾಡಬಹುದಾದ ಸಾಧ್ಯತೆ ಇರುವುದರಿಂದ ನಿಮ್ಮಲ್ಲಿ ಚಂಚಲತೆಯಿದ್ದಾಗ ಮದುವೆಗೆ ಒಕೆ ಹೇಳಬೇಡಿ.

ಈ ಬಗೆಯ ಚಂಚಲತೆ ನಿಮ್ಮ ಜೀವನ ಸಂಗಾತಿ ಆಗುವವರಲ್ಲಿ ಕಂಡು ಬಂದರೂ ನೀವು ಅಲರ್ಟ್‌ ಆಗಿ.

6. ಯಾವಾಗ ಲೈಫ್‌ನಲ್ಲಿ ಸೆಟ್ಲ್‌ ಆಗುತ್ತೇನೆ ಎಂಬ ಐಡಿಯಾ ಇಲ್ಲದಿದ್ದರೆ

6. ಯಾವಾಗ ಲೈಫ್‌ನಲ್ಲಿ ಸೆಟ್ಲ್‌ ಆಗುತ್ತೇನೆ ಎಂಬ ಐಡಿಯಾ ಇಲ್ಲದಿದ್ದರೆ

ಜೀವನದಲ್ಲಿ ಫುಲ್‌ ಸೆಟ್ಲ್‌ ಆಗಿ ಮದುವೆಯಾಗಬೇಕೆಂದರೆ ಬಹುತೇಕ ಜನರಿಗೆ ಮದುವೆ ಆಗುವುದೇ ಇಲ್ಲ, ಎಷ್ಟೋ ಜನ ಮದುವೆಯಾಗುವಾಗ ಅವರ ಬಳಿ ಮನೆ, ಕಾರು ಏನೂ ಇರುವುದಿಲ್ಲ, ನಂತರ ಎಲ್ಲಾ ಆಗಿರುತ್ತದೆ. ಆದರೆ ಅವರಲ್ಲಿ ಮದುವೆಯಾಗುವಾಗ ಕಷ್ಟಪಟ್ಟು ದುಡಿಯುವ ಛಲ ಹಾಗೂ ಒಂದು ಗುರಿ ಇರುತ್ತದೆ. ಕಷ್ಟಪಡಲು ರೆಡಿಯಿಲ್ಲ, ಮುಂದೆ ಗುರಿಯೂ ಇಲ್ಲ ಎಂದಾದರೆ ಮದುವೆಯಾಗಲು ನೀವು ಇನ್ನೂ ರೆಡಿಯಾಗಿಲ್ಲ ಎಂದರ್ಥ.

 7. ಹೊಂದಾಣಿಕೆಗೆ ರೆಡಿಯಿಲ್ಲ ಎಂದಾದರೆ

7. ಹೊಂದಾಣಿಕೆಗೆ ರೆಡಿಯಿಲ್ಲ ಎಂದಾದರೆ

ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ತುಂಬಾನೇ ಮುಖ್ಯ. ಏಕೆಂದರೆ ಯಾರೂ 100% ಪರ್ಫೆಕ್ಟ್ ಆಗಿರಲ್ಲ. ಎಲ್ಲರಲ್ಲೂ ಪ್ಲಸ್‌ ಹಾಗೂ ಮೈನಸ್‌ ಪಾಯಿಂಟ್‌ಗಳಿರುತ್ತವೆ. ನಿಮ್ಮ ಸಂಗಾತಿಯಿಂದ ಕೆಲವೊಂದು ತಪ್ಪುಗಳಾಗುತ್ತೆ, ಅವರ ಕೆಲವು ಗುಣಗಳು ಇಷ್ಟವಾಗದೇ ಹೋಗಬಹುದು, ನೀವು ಹೊಂದಾಣಿಕೆ ರೆಡಿಯಿರಬೇಕು. ಇಲ್ಲ, ನಾನಿರುವುದೇ ಹೀಗೆ, ಅವರು ಹೀಗೆಯೇ ನಡೆದುಕೊಳ್ಳಬೇಕು ಎಂದು ಬಯಸುವುದಾದರೆ ನೀವು ಮದುವೆ ಮಾಡಿಕೊಳ್ಳಬೇಕಾ ಎಂದು ಚಿಂತಿಸುವುದು ಒಳ್ಳೆಯದು.

 8. ನಿಮ್ಮ ಸಂಗಾತಿ ತುಂಬಾ ಬದಲಾಗಬೇಕು ಎಂದು ನೀವು ಬಯಸುವುದಾದರೆ

8. ನಿಮ್ಮ ಸಂಗಾತಿ ತುಂಬಾ ಬದಲಾಗಬೇಕು ಎಂದು ನೀವು ಬಯಸುವುದಾದರೆ

ನಿಮ್ಮ ಸಂಗಾತಿಯಾಗುವವರು ತುಂಬಾ ಬದಲಾಗಬೇಕು ಎಂದು ನೀವು ಬಯಸುವುದಾದರೆ ಅವರ ಬಳಿ ಅದರ ಕುರಿತು ಓಪನ್ ಆಗಿ ಮಾತನಾಡಿ, ಅಲ್ಲದೆ ಅವರಲ್ಲಿ ತುಂಬಾ ಬದಲಾಗಬೇಕೆಂದು ನೀವು ಬಯಸಿದರೆ ಮದುವೆಗೆ ಒಕೆ ಅನ್ನಬೇಡಿ. ಏಕೆಂದರೆ ಅವರಲ್ಲಿ ಬದಲಾವಣೆ ಕಾಣದೇ ಹೋದರೆ ನಿಮಗೆ ನಿರಾಸೆ ಉಂಟಾಗಬಹುದು. ಉದಾಹರಣೆಗೆ ನೀವು ಮದುವೆಯಾಗಲು ಬಯಸುವ ವ್ಯಕ್ತಿಗೆ ಕುಡಿತ ಅಥವಾ ಸಿಗರೇಟ್‌ ಸೇದುವ ಅಭ್ಯಾಸವಿದ್ದರೆ ನೀವು ಅವರು ಆ ಅಭ್ಯಾಸಗಳನ್ನು ಬಿಡಬೇಕೆಂದು ಬಯಸುವುದಾದರೆ ಅವರ ಬಳಿ ಸ್ಪಷ್ಟವಾಗಿ ಮಾತನಾಡಿ. ಅವರು ನಿಮಗೆ ಇನ್ನು ಮುಂದೆ ಕುಡಿಯಲ್ಲ, ಸಿಗರೇಟ್‌ ಸೇದಲ್ಲ ಎಂದು ಹೇಳಿ, ಮದುವೆಯಾಗಿ ಸ್ವಲ್ಪ ದಿನಗಳಲ್ಲಿ ಶುರು ಮಾಡಿದರೆ ತುಂಬಾನೇ ನಿರಾಸೆ, ನೋವು ಉಂಟಾಗುವುದು. ಆದ್ದರಿಂದ ಈ ಬಗ್ಗೆ ಮದುವೆಗೆ ಒಕೆ ಹೇಳುವ ಮುನ್ನ ಒಂದು ಸ್ಪಷ್ಟವಾದ ಮಾತುಕತೆ ಒಳ್ಳೆಯದು.

English summary

Signs You Are Not Ready to Get Married in Kannada

If you see these signs please don't get marry, what are those signs, read on....
Story first published: Wednesday, December 14, 2022, 20:08 [IST]
X
Desktop Bottom Promotion