Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹಸ್ತಮೈಥುನ ಚಟವಿದೆ ಎಂದು ತಿಳಿಸುವ ವರ್ತನೆಗಳಿವು
ಹದಿ ಹರೆಯದ ಪ್ರಾಯಕ್ಕೆ ಬಂದ ಲೈಂಗಿಕ ಹಸಿವು ಹೆಚ್ಚುವುದು, ಲೈಂಗಿಕ ತೃಪ್ತಿ ಪಡೆಯುವುದು ದೈಹಿಕ ಆರೋಗ್ಯಕ್ಕೆ ಅವಶ್ಯಕ ಕೂಡ. ನಾವು ಆರೋಗ್ಯವಾಗಿರಲು ಊಟ, ನಿದ್ದೆ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯಕ್ಕೆ ಲೈಂಗಿಕ ತೃಪ್ತಿ ಅನ್ನುವುದು ಕೂಡ ಅಷ್ಟೇ ಮುಖ್ಯವಾಗಿರುತ್ತೆ. ಲೈಂಗಿಕ ತೃಪ್ತಿ ಪಡೆಯಲು ಒಂದು ಮಾರ್ಗ ಹಸ್ತ ಮೈಥುನ.

ಶೇ.99ರಷ್ಟು ಜನರು ಹಸ್ತ ಮೈಥುನ ಮಾಡುತ್ತಾರೆ, ಸೇ.1ರಷ್ಟು ಜನರು ನಾವು ಮಾಡಲ್ಲ ಎಂದು ಸುಳ್ಳುತ್ತಾರೆ ಎಂಬ ಮಾತಿದೆ. ಇನ್ನೂ ಮದುವೆಯಾಗದವರು, ಸಂಗಾತಿಯಿಂದ ದೂರವಿರುವರು ದೇಹದ ಬಯಕೆ ಈಡೇರಲು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ. ಹಸ್ತ ಮೈಥುನವೆಂಬುವುದು ವರವೂ ಹೌದು, ಶಾಪವೂ ಹೌದು.
ಹಸ್ತ ಮೈಥುನ ಕೆಟ್ಟದೇನೂ ಅಲ್ಲ, ಅದರಿಂದ ಒಳ್ಳೆಯದೂ ಇದೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ. ಆದರೆ ಚಟವಾದರೆ ಮಾತ್ರ ಹಾನಿಯನ್ನು ಉಂಟು ಮಾಡುತ್ತದೆ, ಅದು ಗಂಡ-ಹೆಂಡತಿ ಸಂಬಂಧದಲ್ಲೂ ಬಿರುಕು ಉಂಟು ಮಾಡಬಹುದು.

ಹಸ್ತ ಮೈಥುನ ಚಟವಾದಾಗ
ನಿಮಗೆ ತುಂಬಾ ಲೈಂಗಿಕ ಬಯಕೆ ಆಗಿದೆ ಎಂದಾಗ ಮಾಡುವುದಲ್ಲ, ಬದಲಿಗೆ ಒಂದು ದಿನ ಹಸ್ತ ಮೈಥುನ ಮಾಡದಿದ್ದರೆ ಆ ದಿನದಲ್ಲಿ ಏನೋ ಮಿಸ್ ಆದಂತೆ ಅನಿಸಲಾರಂಭಿಸಿದರೆ ಅದು ಒಳ್ಳೆಯ ಲಕ್ಷಣವಲ್ಲ. ನಿಮ್ಮ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು.

ನಿಮಗೆ ನೀವೇ ನೋವುಂಟು ಮಾಡುವುದು
ಒಂದು ಬಾರಿಗೆ ತೃಪ್ತಿ ಉಂಟಾಗದಿರುವುದು, ನಿಮಗೆ ನೋವು ಮಾಡಿ ಖುಷಿ ಪಡುವುದು ಇವೆಲ್ಲಾ ಅಪಾಯಕಾರಿ ಲಕ್ಷಣಗಳಾಗಿವೆ. ಇದರ ಬದಲಿಗೆ ನಿಮ್ಮ ಮನಸ್ಸನ್ನು ಆರೋಗ್ಯಕರ ಅಭ್ಯಾಸದತ್ತ ತಿರುಗಿಸಿ.

ಸೆಕ್ಸ್ ಬದಲಿಗೆ ಹಸ್ತ ಮೈಥುನದಲ್ಲಿ ಆಸಕ್ತಿ ಹೆಚ್ಚುವುದು
ಸೆಕ್ಸ್‌ಗಿಂತ ಹಸ್ತ ಮೈಥುನವನ್ನೇ ಇಷ್ಟ ಪಡುವುದಾದರೆ ಅದು ಅಪಾಯಕಾರಿ ಲಕ್ಷಣವಾಗಿದೆ. ಅದು ನಿಮ್ಮ ಹಾಗೂ ಸಂಗಾತಿ ನಡುವೆ ಬಿರುಕು ಉಂಟು ಮಾಡುವುದು.

ಒಂದು ಬಾರಿಗೆ ತೃಪ್ರಿಯಾಗದೇ ಇರುವುದು
ಒಂದು ದಿನದಲ್ಲಿ ಒಂದಕ್ಕಿಂತ ಅಧಿಕ ಬಾರಿ ಈ ಕ್ರಿಯೆ ಮಾಡುವುದು, ಇಲ್ಲದಿದ್ದರೆ ಬೇರೆ ಯಾವ ಕಡೆಯೂ ಗಮನ ಕೇಂದ್ರೀಕರಿಸಲು ಸಾಧ್ಯವಾಗದಿರುವುದು ಇವೆಲ್ಲಾ ಅಪಾಯಕಾರಿ ಲಕ್ಷಣಗಳಾಗಿವೆ.

ಬಿಡಲು ಸಾಧ್ಯವಾಗದಿರುವುದು
ಎಷ್ಟು ದಿನ ಹಸ್ತ ಮೈಥುನ ಮಾಡದೇ ಇರಲು ನಿಮ್ಮಿಂದ ಸಾಧ್ಯ ಎಂಬುವುದನ್ನು ಪರೀಕ್ಷಿಸಿ. ಸಾಧ್ಯವಾಗುತ್ತಿಲ್ಲ ವಿನಾಕಾರಣ ಕೋಪ ಬರುತ್ತೆ, ಯಾವುದಕ್ಕೂ ಗಮನ ಕೇಂದ್ರೀಕರಿಸಲು ಸಾಧ್ಯವಿಲ್ಲ ಎಂದಾದರೆ ನೀವು ಚಟ ಬೆಳೆಸಿಕೊಂಡಿದ್ದಾರೆ ಎಂದರ್ಥ.

ನಿಮ್ಮ ಮೇಲೆ ನಿಮಗೆ ನಿಯಂತ್ರಣ ಇಲ್ಲದಿರುವುದು
ಸುತ್ತ ಇರುವವರು ಏನು ಮಾಡಿದರೂ ಕೋಪ ಬರುವುದು, ಕೆಲಸ ಅಥವಾ ಓದಿನ ಕಡೆ ಗಮನ ನೀಡಲು ಸಾಧ್ಯವಾಗದೇ ಹೋಗುವುದು ಇವೆಲ್ಲಾ ಹಸ್ತ ಮೈಥುನ ಚಟವಾಗಿ ಬದಲಾಗಿದೆ ಎಂದು ಹೇಳುವ ಲಕ್ಷಣಗಳಾಗಿವೆ.
ಹಸ್ತ ಮೈಥುನ ಚಟವಾಗುವುದು ಅಪಾಯಕಾರಿ, ಆದ್ದರಿಂದ ಆರೋಗ್ಯಕರ ಚಟುವಟಿಕೆ ಕಡೆ ಗಮನ ಹರಿಸಿ, ಅಗ್ಯತ ಬಿದ್ದರೆ ಲೈಂಗಿಕ ತಜ್ಞರ ಸಲಹೆ ಪಡೆಯಿರಿ.



Click it and Unblock the Notifications
