Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಗರ್ಲ್ಸ್ ಪುರುಷರ ಈ ಸೀಕ್ರೆಟ್ ತಿಳಿದುಕೊಂಡ್ರೆ ರಿಲೇಷನ್‌ಶಿಪ್‌ನಲ್ಲಿ ಸಮಸ್ಯೆನೇ ಬರಲ್ಲ
ಪುರುಷರ ಫೀಲಿಂಗ್ಸ್ ಗಳ ಬಗ್ಗೆ ಹುಡುಗಿಯರಿಗೆ ಎಷ್ಟು ಗೊತ್ತು? ನೀವು ಈ ಸೀಕ್ರೆಟ್ ತಿಳಿದುಕೊಂಡ್ರೆ ಲೈಫ್ ಜಿಂಗಾಲಾಲ!
ಪ್ರೀತಿ ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ. ನಾವು ದೂರವಿದ್ದರೂ ಆ ಮಾಯೆ ನಮ್ಮ ಸುತ್ತ ಗಿರಕಿ ಹೊಡೆಯುತ್ತಿರುತ್ತದೆ. ಪ್ರೀತಿ ಎಂದರೆ ಮದುವೆ ಆದ ನಂತರ ಆರಂಭವಾಗುವ ಸುಂದರ ಬಾಂಧವ್ಯದ ಹೊಸ ಚಾಪ್ಟರ್ ಆಗಿರಬಹುದು ಅಥವಾ ಮದುವೆಗೂ ಮುನ್ನ ಇರುವ ಲವ್ ಆಗಿರಬಹುದು. ಯಾವುದೇ ರೀತಿಯ ಪ್ರೀತಿಯಾದರು ಆ ರಿಲೇಶನ್ ಶಿಪ್ ಚೆನ್ನಾಗಿರಬೇಕು ಅಂದರೆ ಅಲ್ಲಿ ಪ್ರೀತಿಯ ಜೊತೆಗೆ ಇಬ್ಬರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಯಾಕೆಂದರೆ ಪತಿ ನನ್ನ ಅರ್ಥ ಮಾಡಿಕೊಂಡಿಲ್ಲ, ಪತ್ನಿ ನನ್ನ ಅರ್ಥ ಮಾಡಿಕೊಂಡಿಲ್ಲ ಎನ್ನುವ ಕಾರಣಕ್ಕೆ ಅನೇಕ ಸಂಬಂಧಗಳು ಮುರಿದು ಬೀಳುವುದನ್ನು ನಾವು ನೋಡುತ್ತೇವೆ. ಎಷ್ಟೋ ವರ್ಷಗಳಿಂದ ಜೊತೆಗಿರುವ ಪತ್ನಿ ತನ್ನ ಗಂಡನ ಇಷ್ಟಗಳ ಬಗ್ಗೆ ತಿಳಿದುಕೊಳ್ಳುವಲ್ಲಿ ವಿಫಲರಾಗಿರುವ ಘಟನೆಗಳು ಇವೆ. ಪತಿ ಕೂಡ ವೈಫಲ್ಯ ಕಂಡ ಘಟನೆಗಳು ಇವೆ. ಹೀಗಾಗಿ ಇವತ್ತು ನಾವು ನಿಮಗೆ ಪುರುಷರು ಹೇಳಿಕೊಳ್ಳದ ಕೆಲವೊಂದು ಟಾಪ್ ಸಿಕ್ರೇಟ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಯುವಕರ ಬಯಕೆ ಹೇಗಿರುತ್ತೆ? ಇದಕ್ಕೆ ಯುವತಿ ಏನು ಮಾಡಬೇಕು? ಎನ್ನುವುದನ್ನು ನಾವು ಇವತ್ತು ತಿಳಿಸಿಕೊಡುತ್ತೇವೆ. ಇದು ಎಲ್ಲ ಪುರುಷರಿಗೆ ಅನ್ವಯಿಸುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅನೇಕರ ಫೀಲಿಂಗ್ಸ್ ಹೀಗೆ ಇರುತ್ತೆ ಅನ್ನುವುದು ಹಲವು ಸಮೀಕ್ಷೆಗಳಿಂದ ತಿಳಿದುಬಂದಿದೆ.

ಪುರುಷರು ಫಿಲೀಂಗ್ಸ್ ನ್ನು ಒಪನ್ ಆಗಿ ತೋರಿಸಲ್ಲ!
ನಮ್ಮಲ್ಲಿ ಅನೇಕ ಪುರುಷರಿದ್ದಾರೆ ತನ್ನ ಪತ್ನಿ ಅಥವಾ ಪ್ರೇಯಸಿಯನ್ನು ತುಂಬಾನೆ ಇಷ್ಟ ಪಡುತ್ತಾರೆ. ಆದರೆ ಎಂದಿಗೂ ಅವರು ಅದನ್ನು ಬಹಿರಂಗವಾಗಿ ತೋರಿಸುವುದಿಲ್ಲ. ಹೀಗಾಗಿ ಈ ವಿಚಾರಕ್ಕೆ ಅನೇಕ ಸಂಬಂಧದಲ್ಲಿ ಒಡಕು ಕೂಡ ಉಂಟಾಗುತ್ತದೆ. ಅನೇಕರು "ಏನೋ ನೀನು ಸ್ವಲ್ಪನೂ ಕೇರಿಂಗ್ , ಫೀಲಿಂಗ್ ಮಾಡಲ್ಲ ಅಂತ ಜಗಳ ಕೂಡ ಆಡಿಕೊಳ್ಳುತ್ತಾರೆ. ಆದರೆ ಪುರುಷರಿಗೆ ಪ್ರತ್ಯಕ್ಷಕ್ಕಿಂತ ಪರೋಕ್ಷವಾಗಿ ಫೀಲಿಂಗ್ಸ್ ತೋರಿಸೋದು ಇಷ್ಟವಂತೆ. ನೀವು ಈ ಬಗ್ಗೆ ಟೆಸ್ಟ್ ಮಾಡಬೇಕು ಎಂದರೆ ಡೈರೆಕ್ಟ್ ಆಗಿ ಅವರನ್ನೇ ಕೇಳಿದರೆ ನಿಮಗೆ ಉತ್ತರ ಸಿಗುತ್ತದೆ. ಉದಾಹರಣೆಗೆ ನೀವು ನಿಮ್ಮ ಗಂಡ ಅಥವಾ ಪ್ರೇಮಿ ಜೊತೆ " ನಿನಗೆ ನಮ್ಮ ಮೊದಲ ಭೇಟಿಯಲ್ಲಿ ಏನು ಅನಿಸಿತ್ತು" ಎಂದು. ಈ ವೇಳೆ ನಿಮಗೆ ನಿಮ್ಮ ಗಂಡ ಅಥವಾ ಪ್ರೇಮಿಯಿಂದ ಸಿಗುವ ಉತ್ತರ ನಿಮ್ಮನ್ನ ಮೂಕ ವಿಸ್ಮಿತರಾಗಿ ಮಾಡುತ್ತೆ. ಯಾಕೆಂದರೆ ಅನೇಕ ಪುರುಷರು ತಮ್ಮ ಪ್ರೇಯಸಿಯನ್ನು ಮೊದಲು ಮೀಟ್ ಮಾಡಿರುವ ಬಗ್ಗೆ ಯಾವತ್ತೂ ನೆನಪು ಇಟ್ಟುಕೊಂಡಿರುತ್ತಾರೆ. ಅಲ್ಲದೇ ಅವರು ಬೆಟ್ಟದಷ್ಟು ಫಿಲೀಂಗ್ಸ್ ಇಟ್ಟುಕೊಂಡಿರುತ್ತಾರೆ. ಆದರೆ ಬಹಿರಂಗವಾಗಿ ತೋರಿಸಲ್ಲ ಅಷ್ಟೇ.

ಯುವಕರು ಐ ಲವ್ ಯೂ ಹೇಳುವುದೇ ವಿಭಿನ್ನವಾಗಿ!
ಪುರುಷರು ಸಾಮಾನ್ಯ ರೂಪದಲ್ಲಿ ಐ ಲವ್ ಯೂ ಹೇಳಲು ಬಯಸುವುದಿಲ್ಲ. ಪದಗಳಿಂಗಿಂತ ಜಾಸ್ತಿಯಾಗಿ ಏನಾದ್ರೂ ಆಕ್ಷನ್ ಮೂಲಕ ತೋರಿಸಲು ಹತೋರೆಯುತ್ತಾರೆ. ಅದರಲ್ಲೂ ಯುವ ಪ್ರೇಮಿಗಳ ಸ್ಟೈಲೇ ಬೇರೆ. ಮನೆ ಮುಂದೆ ಬಂದು ನಾಮ ಫಲಕದಲ್ಲಿ ಲವ್ ಯೂ ಅನ್ನೋ ಮೂಲಕ ತನ್ನ ಪ್ರೇಮ ನಿವೇದನೆ ಯುವತಿ ಮುಂದೆ ಇಡುತ್ತಾರೆ. ಅನೇಕರು ಸಿನಿಮಾ ಮಂದಿರದಲ್ಲಿ, ಮೈದಾನಗಳಲ್ಲಿ, ಬಸ್ ಗಳಲ್ಲಿ ಹೀಗೆ ವಿಭಿನ್ನವಾಗಿ ಸರ್ಪ್ರೈಸ್ ಕೊಡುವುದುಂಟು. ಹೀಗಾಗಿ ಯಾವತ್ತೂ ಯುವಕನ ಬಳಿ ಲವ್ ಯೂ ಅನಿಸಿಕೊಳ್ಳುದಕ್ಕೆ ಆಸೆ ಪಡಬೇಡಿ. ಅವರು ಯಾವತ್ತೂ ವಿಭಿನ್ನವಾಗಿ ಲವ್ ಯೂ ಅನ್ನೋದಕ್ಕೆ ಇಷ್ಟ ಪಡುತ್ತಾರೆ. ಇನ್ನು ಕೆಲವರು ಕೈಗಳ ಮೂಲಕ ಸನ್ನೆ ತೋರಿಸಿ ಐ ಲವ್ ಯೂ ಅನ್ನುತ್ತಾರೆ. ಕೆಲವು ಯುವಕರು ಲವ್ ಅನ್ನೋದಕ್ಕಿಂತ ಹಣೆ ಮೇಲೆ ಮುತ್ತಿಡುವುದುಂಟು. ಇದು ಎಲ್ಲರಿಗೂ ಅನ್ವಯಿಸಲ್ಲ. ಕೆಲವರು ಒಪನ್ ಆಗಿ ಐ ಲವ್ ಯೂ ಅನ್ನುತ್ತಾರೆ.

ಪುರುಷರಿಗೆ ಯಾವತ್ತೂ ಕಮಿಟ್ ಮೆಂಟ್ ಜಾಸ್ತಿ!
ಪ್ರೀತಿಯಲ್ಲಿ ಕಮಿಟ್ ಮೆಂಟ್ ಇಲ್ಲದೆ ಹಲವು ಪ್ರೇಮ ವೈಫಲ್ಯ ಕಂಡಿರುವುದು ಇದೆ. ಕಮಿಟ್ ಮೆಂಟ್ ವಿಚಾರದಲ್ಲಿ ಯುವಕರು ಯಾವುತ್ತೂ ಒಂದು ಕೈ ಮೇಲೂ. ಯಾಕೆಂದರೆ ನಾವು ಕೇಳಿರುವ ಅನೇಕ ಪ್ರೇಮ ವೈಫಲ್ಯದಲ್ಲಿ ಹುಡುಗನಿಗಿಂತ ಹುಡುಗಿಯೇ ಜಾಸ್ತಿ ಕೈ ಕೊಟ್ಟು ಹೋಗಿರುತ್ತಾಳೆ. ಆದರೆ ಹುಡುಗ ಹಾಗೇ ಅಲ್ಲ ಒಂದು ಬಾರಿ ಒಂದು ಹುಡುಗಿಯನ್ನು ಪ್ರೀತಿಸಿದರೆ ಆಕೆಯನ್ನೇ ಮದುವೆಯಾಗಲು ಇಚ್ಚಿಸುತ್ತಾನೆ. ಇನ್ನು ಮದುವೆಯಾದ ಬಳಿಕವೂ ಆಕೆಯ ತನ್ನ ಮುಂದಿನ ಜನ್ಮಧ ಅರ್ಧಾಂಗಿಯಾಗಿರಲಿ ಎಂದು ಆಶಿಸುತ್ತಾನೆ. ಇದು ಸಂಬಂಧದ ಮೇಲಿರುವ ಯುವಕರ ಕಮಿಟ್ ಮೆಂಟ್.

ಪುರುಷರು ಜಾಸ್ತಿ ಕೇರಿಂಗ್, ಲವಿಂಗ್ ಇಷ್ಟ ಪಡುತ್ತಾರೆ!
ಪುರುಷರು ಯಾವತ್ತೂ ತಮ್ಮ ಫಿಲೀಂಗ್ಸ್ ಹಾಗೂ ಕೇರಿಂಗ್ ನ್ನು ಯುವತಿ ಅಥವಾ ಪತ್ನಿಗೆ ತೋರಿಸಲ್ಲ. ಬಟ್ ಅವರು ಯಾವತ್ತೂ ಪತ್ನಿಯಿಂದ ಟೂ ಮಚ್ ಕೇರಿಂಗ್ ಅಂಡ ಲವಿಂಗನ್ನು ಇಷ್ಟಪಡುತ್ತಾರೆ. ಅಲ್ಲದೇ ಯುವತಿಯರ ಬಳಿ ಇರುವ ಪೊಸೆಸಿವ್ ನೆಸ್ ಕೂಡ ಪುರುಷರಿಗೆ ಇಷ್ಟ ಆಗುತ್ತೆ. ಉದಾಹರಣೆಗೆ ಪತಿ ಯಾವುದೋ ಯುವತಿ ಜೊತೆ ಲಲ್ಲೆ ಹೊಡೆಯುತ್ತಿದ್ದಾರೆ ಪತ್ನಿ ಅದನ್ನು ಪ್ರಶ್ನಿಸಿದರೆ ಇದನ್ನು ಪುರುಷರು ಇಷ್ಟಪಡುತ್ತಾರೆ. ಇದಲ್ಲದೇ ನಿಮಗೆ ಏನಾದರೂ ಸಮಸ್ಯೆ ಆಗಿದೆ ಅದನ್ನು ಕೇರ್ ಹಾಗೂ ಲವ್ ಮೂಲಕ ಕೇಳಿದರೆ ಅದು ಪುರುಷರಿಗೆ ಖುಷಿ ಕೊಡುತ್ತದೆ.

ಸ್ಟ್ರಾಂಗ್ ಬಾಂಡಿಂಗ್ ಗಾಗಿ ಪುರುಷರು ಏನು ಮಾಡುತ್ತಾರೆ?
ಪುರುಷರು ತಮ್ಮ ಪಾರ್ಟ್ನರ್ ಜೊತೆಗೆ ಉತ್ತಮ ಸಂಬಂಧ ಹೊಂದಲು ಇಷ್ಟಪಡುತ್ತಾರೆ. ತಮ್ಮ ನಡುವೆ ಸ್ಟ್ರಾಂಗ್ ಬಾಂಡಿಂಗ್ ಗಾಗಿ ಒಟ್ಟಿಗೆ ಕೆಲಸ ಮಾಡಲು ಬಯಸುತ್ತಾರೆ. ಉದಾಹರಣೆ ಕಿಚನ್ ನಲ್ಲಿ ಪತ್ನಿಗೆ ಸಹಾಯ, ಒಟ್ಟಿಗೆ ಜಾಗಿಂಗ್ ಅಥವಾ ವಾಕಿಂಗ್ ಗೆ ಹೋಗೋದು. ಜಿಮ್ ಗೆ ಇಬ್ಬರು ಒಟ್ಟಿಗೆ ಹೋಗುವುದನ್ನು ಇಷ್ಟಪಡುತ್ತಾರೆ. ಅಲ್ಲದೇ ಸೆಕ್ಸ್ ಕೂಡ ಯುವಕನಲ್ಲಿ ಯುವತಿ ಮೇಲೆ ಗಟ್ಟಿ ಬಾಂಡಿಂಗ್ ಸೃಷ್ಟಿಸುತ್ತೆ.

ಪುರುಷರು ತಮಗಾಗಿ ಸಮಯ ಕಳೆಯಲು ಬಯಸುತ್ತಾರೆ!
ಅನೇಕ ಕಡೆ ಬ್ಯಾಚುಲರ್ ಆಗಿದ್ದ ಯುವಕ ಮದುವೆ ಆದ ನಂತರ ಬದಲಾಗುತ್ತಾನೆ ಎಂದು ಹೇಳುತ್ತಾರೆ. ಅದು ನಿಜ ಕೂಡ ಹೌದು, ಮದುವೆ ಬಳಿಕ ಅವರನ್ನು ಕಟ್ಟಿ ಹಾಕಿದಂತೆ ಅವರಿಗೆ ಅನಿಸುತ್ತದೆ. ನಿಜಕ್ಕೂ ಪುರುಷರು ಫ್ರೀಯಾಗಿ ಇರಲು ಬಯಸುತ್ತಾರೆ. ಅಂದರೆ ತಮಗಾಗಿ ಸಮಯ ಕಳೆಯಲು ಬಯಸುತ್ತಾರೆ. ಫ್ರೆಂಡ್ಸ್ ಜೊತೆ ಹೊರಗೆ ಸುತ್ತಾಡಲು, ಜಿಮ್ ಗೆ ಹೋಗಲು, ಆಟ ಆಡಲು ಹೋಗಲು, ಟ್ರಿಪ್ ಗೆ ಹೋಗಲು ಬಯಸುತ್ತಾರೆ. ಇದನ್ನು ಅರಿತು ಪತ್ನಿ ನಡೆದುಕೊಂಡರೆ ಅವರ ವೈವಾಹಿಕ ಜೀವನ ಸೂಪರ್ ಆಗಿರುವುದಲ್ಲಿ ಎರಡು ಮಾತಿಲ್ಲ.

ಪುರುಷ ಸೆಕ್ಸ್ ಬಗ್ಗೆ ಜಾಸ್ತಿ ಯೋಜನೆ ಮಾಡುತ್ತಾನೆ!
ಪುರುಷನಿಗೆ ಲವ್, ಕೇರಿಂಗ್ ಯಾವ ರೀತಿ ಇರುತ್ತೋ ಅದೇ ರೀತಿ ತನ್ನ ಜೀವನದಲ್ಲಿ ತನ್ನ ಸಂಗಾತಿಯಿಂದ ಸೆಕ್ಸ್ ಬಯಸುತ್ತಾನೆ. ಸಮೀಕ್ಷೆಗಳ ಪ್ರಕಾರ, ಪ್ರತಿನಿತ್ಯ ಪುರುಷರು ಸೆಕ್ಸ್ ಬಗ್ಗೆ ಯೋಚನೆ ಮಾಡುತ್ತಾರಂತೆ. ಆದರೆ ಇದು ಎಲ್ಲರಿಗೂ ಅನ್ವಯವಾಗುದಿಲ್ಲ. ಕೆಲವರು ನಿಯಮತ ಸೆಕ್ಸ್ ಇಷ್ಟ ಪಡುತ್ತಾರೆ. ಆದರೆ ಪುರುಷರಿಗೆ ಸೆಕ್ಸ್ ಅಂದರೆ ಒಂದು ಎಮೋಶನ್ ಆಗಿರುತ್ತೆ. ಅದು ಹಾರ್ಟ್ ಟು ಹಾರ್ಟ್ ಕನೆಕ್ಟ್ ಆಗುವ ದಾರಿ ಎಂದು ಅಂದುಕೊಂಡಿರುತ್ತಾರೆ. ಅಲ್ಲದೇ ಕೆಲವರು ಯುವತಿ ಜೊತೆ ಸೆಕ್ಸ್ ಮಾಡಿದರೆ ಕೂಡಲೇ ಕನೆಕ್ಟ್ ಆಗಿ ಬಿಡುತ್ತಾರೆ. ಮತ್ತೆ ಎಂದಿಗೂ ಅವರ ಕೈ ಬಿಡುವುದಿಲ್ಲ.

ರೋಮ್ಯಾಂಟಿಕ್ ಸಂಗಾತಿಯನ್ನು ಇಷ್ಟಪಡುತ್ತಾರೆ!
ಇನ್ನು ಸೆಕ್ಸ್ ವಿಚಾರಕ್ಕೆ ಬಂದರೆ ಅನೇಕ ಪುರುಷರು ರೊಮ್ಯಾಂಟಿಕ್ ಪತ್ನಿಯನ್ನು ಇಷ್ಟಪಡುತ್ತಾರೆ. ಸಿನಿಮಾದಲ್ಲಿ ಕಾಣುವಂತಹ ರೋಮ್ಯಾನ್ಸ್ ಗಳನ್ನು ಪತ್ನಿ ಜೊತೆ ಮಾಡಲು ಇಚ್ಚೆ ಪಡುತ್ತಾರೆ. ಅದಲ್ಲದೇ ರೊಮ್ಯಾಂಟಿಕ್ ಆಗಿ ಅವರ ಜೊತೆ ಡ್ಯಾನ್ಸ್, ಮಾಡುವುದು, ಪಾರ್ಟಿ ಮಾಡುವುದನ್ನು ಕೂಡ ಪುರುಷರು ಇಷ್ಟಪಡುತ್ತಾರೆ.

ಹೊಗಳುವಿಕೆ ಇಷ್ಟಪಡುತ್ತಾರೆ!
ನಮ್ಮಲ್ಲಿ ಅನೇಕ ಮನೆಗಳಲ್ಲಿ ಗಲಾಟೆಯಾದಾಗ ಬೇರೆಯವರೊಂದಿಗೆ ತನ್ನ ಪತಿಯನ್ನು ಹೋಲಿಸುವುದು ಉಂಟು. ಇದು ಸಂಪೂರ್ಣ ತಪ್ಪು. ಯಾಕೆಂದರೆ, ಪುರುಷರು ತನ್ನನ್ನು ಬೇರೆಯವರಿಗೆ ಹೋಲಿಸುವುದು ಇಷ್ಟಪಡುವುದಿಲ್ಲ. ನೀವು ಆತನಿಗೆ ಹೊಗಳಿಕೆಯ ಮಾತು ಹೇಳಿದರೆ ಆತ ಹಿಗ್ಗುತ್ತಾನೆ. ಆದರೆ ಯಾವತ್ತೂ ಹೋಲಿಕೆ ಇಷ್ಟಪಡುವುದಿಲ್ಲ.

ಸಮಸ್ಯೆಗಳನ್ನು ಇತ್ಯಾರ್ಥಪಡಿಸುವುದೇ ಪುರುಷರು!
ಕುಟುಂಬ ಅಥವಾ ಲವ್ ಎಂದಾಗ ಸಣ್ಣ ಪುಟ್ಟ ಜಗಳವಾಗುವುದು ಸಾಮಾನ್ಯ ಆದರೆ. ಇಂತಹ ಘಟನೆಗಳು ನಡೆದರೆ ಅದನ್ನು ಸರಿಪಡಿಸುವುದು ಪುರುಷರಾಗಿರುತ್ತಾರೆ. ಉದಾಹರಣೆಗೆ ರಾತ್ರಿ ಮಲಗುವ ಮುನ್ನ ಗಲಾಟೆ ಆಗಿದ್ದರೆ ಅದನ್ನು ಪುರುಷ ಬೆಳಗ್ಗೆಯಾಗುವಾಗ ಮರೆತಿರುತ್ತಾರೆ. ಮರೆಯದಿದ್ದರೂ ಆ ಸಮಸ್ಯೆಯನ್ನು ಬಗೆಹರಿಸಿ ಪ್ರೀತಿಯನ್ನು ಮುಂದುವರಿಸುವಂತೆ ಕೋರುತ್ತಾನೆ.
ಇವು ಪುರುಷರ ಬಗ್ಗೆಗ್ಗಿನ ಸಿಕ್ರೇಟ್ ಗಳಾಗಿದೆ. ಹೀಗೆ ಪುರುಷರ ಸಿಕ್ರೇಟ್ ಗಳನ್ನು ಅರಿತು ಸಂಗಾತಿ ಬಾಳಿದರೆ ಜೀವನದಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ.



Click it and Unblock the Notifications











