Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ನಿಮ್ಮ ಸಂಗಾತಿಯನ್ನು ಬೇರೆಯವರ ಜೊತೆ ಹೋಲಿಕೆ ಮಾಡಿದ್ದೇ ಆದರೆ ನಿಮ್ಮ ಸಂಸಾರ ಜೋಕೆ!
ನೀವು ನಿಮ್ಮ ಸಂಬಂಧವನ್ನು ಬೇರೆಯವರ ಜೊತೆ ಹೋಲಿಕೆ ಮಾಡುತ್ತೀರಾ?
ನನ್ನ ಫ್ರೆಂಡ್ ಗಂಡ ಅವಳನ್ನು ಫಾರಿನ್ ಕರ್ಕೊಂಡು ಹೋದ, ಮತ್ತೊಬ್ಬಳ ಫ್ರೆಂಡ್ ಗಂಡ ಪ್ರತೀ ವೆಡ್ಡಿಂಗ್ ಆ್ಯನಿವರ್ಸಿಗೆ ಕಾಸ್ಟ್ಲಿ ಗಿಫ್ಟ್ ಕೊಡುತ್ತಾನೆ ಅಂತೆಲ್ಲಾ ಹೆಂಡತಿ ಯೋಚಿಸುತ್ತಿರುತ್ತಾಳೆ.

ಗಂಡನಾದವನು ನನ್ನ ಫ್ರೆಂಡ್ ಹೆಂಡತಿ ತುಂಬಾ ದೊಡ್ಡ ಹುದ್ದೆಯಲ್ಲಿದ್ದಾಳೆ, ನನ್ನವಳು ನೋಡಿದರೆ ಹೌಸ್‌ವೈಫ್. ಅವನ ಹೆಂಡತಿ ತುಬಾ ಸುಂದರವಾಗಿದ್ದಾಳೆ, ಆದರೆ ನನ್ನವಳು ಅಷ್ಟು ಸುಂದರವಾಗಿಲ್ಲ ಎಂದೆಲ್ಲಾ ಹೋಲಿಕೆ ಮಾಡುತ್ತಿರುತ್ತಾನೆ.
ಈ ರೀತಿ ಹೋಲಿಕೆ ಮಾಡಲಾರಂಭಿಸಿದರೆ ನಿಮ್ಮ ಸಂಸಾರದ ಸುಖಕ್ಕೆ ನೀವೇ ಗುಂಡಿ ತೋಡುತ್ತಿದ್ದೀರಿ ಎಂದರ್ಥ, ಯಾವಾಗ ನೀವು ನಿಮ್ಮ ವೈವಾಹಿಕ ಬದುಕನ್ನು ಮತ್ತೊಬ್ಬರ ಜೊತೆ ಹೋಲಿಕೆ ಮಾಡಲು ಪ್ರಾರಂಭಿಸುತ್ತೀರೋ ನಿಮ್ಮ ಸಂಸಾರದಲ್ಲಿ ಅಸಮಧಾನ ಉಂಟಾಗುವುದು, ಇದೇ ಅಸಮಧಾನ ಮುಂದೆ ಅನೈತಿಕ ಸಂಬಂಧದ ಕಡೆ ಆಕರ್ಷಿಸುವಂತೆ ಮಾಡಲು ಬಹುದು.

ಈ ಪ್ರಪಂಚದಲ್ಲಿಯೇ ಅತ್ಯಂತ ಸೂಪರ್ ಜೋಡಿ ಯಾರೂ ಇಲ್ಲ
ಪ್ರತಿಯೊಂದು ಸಂಸಾರದಲ್ಲಿ ಒಂದೆಲ್ಲಾ ಒಂದು ನ್ಯೂನತೆ ಇದ್ದೇ ಇರುತ್ತದೆ, ಆ ನ್ಯೂನತೆ ಕಡೆ ಗಮನ ನೀಡದೆ ಹೊಂದಾಣಿಕೆಯಿಂದ ಬಾಳಿದರೆ ಆ ಸಂಸಾರ ತುಂಬಾನೇ ಸುಂದರವಾಗಿರಲು ಸಾಧ್ಯ.

ಬೇರೆಯವರನ್ನು ನೋಡಿದಾಗ ತುಂಬಾ ಬೆಟರ್ ಅನಿಸುತ್ತೆ, ಆದರೆ ಅವರ ಇನ್ನೊಂದು ಸೈಡ್ ಗೊತ್ತಿರುವುದಿಲ್ಲ
ಕೆಲವೊಂದು ಸಂಸಾರ ನೋಡುವಾಗ ಎಂಥ ಜೋಡಿ ನೋಡುವುದಕ್ಕೆ ಒಬ್ಬರೂ ಸುರದ್ರೂಪಿಗಳು, ಇಬ್ಬರಿಗೆ ಕೈ ತುಂಬಾ ಸಂಬಳ, ಮನೆ, ಕಾರು ಎಲ್ಲಾ ಇದೆ ನಮಗಿಂತ ಅವರ ಬದುಕು ಸೂಪರ್ ಆಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಆದರೆ ಅವರ ಸಂಸಾರದ ಹುಳುಕು ಅವರಿಗಷ್ಟೇ ಗೊತ್ತಿರುತ್ತದೆ, ಆದ್ದರಿಂದಲೇ ನೋಡಿ ಎಷ್ಟೋ ಸೆಲೆಬ್ರಿಟಿಗಳ, ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ವೈವಾಹಿಕ ಜೀವನ ಮುರಿದು ಬೀಳುವುದು. ನಮ್ಮ ಕಣ್ಣಿಗೆ ಅವರಿಗೆ ಯಾವುದೇ ಕೊರತೆ ಇರಲ್ಲ, ಹೊರ ಜಗತ್ತಿಗೆ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುವರಂತೆ ಪೋಸ್ ಕೂಡ ಕೊಡುತ್ತಾರೆ. ಅವರ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ನೋಡುವಾಗ ಇಬ್ಬರ ರೊಮ್ಯಾಂಟಿಕ್ ಫೋಟೋಗಳಿಗೇನು ಕಡಿಮೆ ಇರಲ್ಲ, ಸ್ವಲ್ಪ ತಿಂಗಳಿನಲ್ಲಿ ಅವರಿಬ್ಬರ ವಿಚ್ಛೇದನ ಸುದ್ದಿ ಕೇಳಿ ಬರುತ್ತದೆ, ಆದ್ದರಿಂದ ನಾವು ಕಾಣುತ್ತಿರುವುದೇ ನಿಜವಲ್ಲ ಎಂಬುವುದು ಅರಿತುಕೊಳ್ಳುವುದು ಒಳ್ಳೆಯದು.

ಹೋಲಿಕೆಯ ಪ್ರೀತಿ ಒಳ್ಳೆಯಲ್ಲ
ನಿಮ್ಮ ಬದುಕನ್ನು ಬೇರೆಯವರ ಬದುಕಿನ ಜೊತೆ ಹೋಲಿಸಲೇಬೇಡಿ. ಬೇರೆಯವರ ವೈವಾಹಿಕ ಜೀವನದ ಜೊತೆ ಹೋಲಿಕೆ ಮಾಡಲಾರಂಭಿಸಿದರೆ ನಿಮ್ಮ ಜೀವನದಲ್ಲಿ ಕೆಲವೊಂದು ಅಮೂಲ್ಯ ಕ್ಷಣಗಳನ್ನು, ಖುಷಿಯನ್ನು ಮಿಸ್ ಮಾಡುತ್ತೀರಿ. ಬೇರೆಯವರ ಗಂಡ ಮದುವೆ ವಾರ್ಷಿಕೋತ್ಸವಕ್ಕೆ ನೆಕ್ಲೆಸ್ ತಂದುಕೊಟ್ಟಿರಬಹುದು, ಅದೇ ನಿಮ್ಮ ಗಂಡ ಒಂದು ಡ್ರೆಸ್ ಮಾತ್ರ ಕೊಡಿಸಿದ ಅಂದ ಮಾತ್ರ, ನಿಮ್ಮ ಗಂಡನಿಗೆ ನಿಮ್ಮ ಮೇಲೆ ಪ್ರೀತಿಯಿಲ್ಲ ಎಂದು ಭಾವಿಸುವುದು ಮೂರ್ಖತನ. ನಿಮ್ಮ ಸಂಗಾತಿ ಬಳಿ ಅದಿಲ್ಲ, ಇದಿಲ್ಲ ಅಂತ ಹೋಲಿಕೆ ಮಾಡಿ ಕೊರಗುವ ಬದಲು ಅವರಲ್ಲಿ ಏನಿದೆ ಅದರಲ್ಲಿ ಸಂತೋಷವಾಗಿರಲು ಕಲಿತರೆ ಸಂಸಾರ ಆನಂದ ಸಾಗರವಾಗುವುದರಲ್ಲಿ ನೋ ಡೌಟ್.

ಬೇರೆಯವರು ಏನು ಹೇಳುತ್ತಾರೆ ಎಂದು ತಲೆಕೆಡಿಸಿಕೊಳ್ಳಬೇಡಿ
ನಿಮ್ಮ ಬದುಕು ನಿಮಗೆ ಅವರ ಬದುಕು ಅವರಿಗೆ ಆದ್ದರಿಂದ ಬೇರೆಯವರು ಏನು ಹೇಳುತ್ತಾರೆ ಎಂದು ತಲೆಕೆಡಿಸಬೇಡಿ. ನಮ್ಮಲ್ಲಿ ತುಂಬಾ ಜನ ನಮಗಾಗಿ ಬದುಕುವ ಬದಲು ಬೇರೆಯವರಿಗಾಗಿ ಬದುಕುತ್ತಾರೆ, ಅಂಥವರು ಕೊರಗುತ್ತಾ ತಮ್ಮ ಇರುವ ನೆಮ್ಮದಿ ಕಳೆದಕೊಳ್ಳುತ್ತಾರೆ.
ಆದ್ದರಿಂದ ನಿಮ್ಮ ಸಂಸಾರವನ್ನು ಬೇರೆಯವರ ಜೊತೆ ಹೋಲಿಕೆ ಮಾಡಲು ಹೋಗಲೇಬಾರದು, ಹೌದು ತಾನೆ?



Click it and Unblock the Notifications
