Latest Updates
-
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು!
ಪುರುಷ ತನಗಿಂತ ಹಿರಿಯ ವಯಸ್ಸಿನ ಮಹಿಳೆಯತ್ತ ಆಕರ್ಷಿತನಾಗಲು ಕಾರಣಗಳಿವು
ಮದುವೆಗೆ ಹುಡುಗಿ ನೋಡುವಾಗ ಅಥವಾ ಗರ್ಲ್ ಫ್ರೆಂಡ್ ಅಂತ ಹೇಳುವಾಗ ಹುಡುಗಿಯ ವಯಸ್ಸು ಹುಡುಗನಿಗಿಂತ ಕಡಿಮೆ ಇರಬೇಕು ಎಂಬುವುದೇ ಸಮಾಜದ ಬಲವಾದ ನಂಬಿಕೆ. ಹುಡುಗಿಯ ವಯಸ್ಸು ಹುಡುಗನಿಗಿಂತ ಅಧಿಕವಿದ್ದರೆ ಅಯ್ಯೋ! ಎಂದು ಹುಬ್ಬೇರಿಸುತ್ತಾರೆ. ಅರೇಂಜ್ ಮ್ಯಾರೇಜ್ ಆದರೆ ಹುಡುಗಿಯ ವಯಸ್ಸು ಹುಡುಗನಿಗಿಂತ ಅಧಿಕವಿದೆ ಎಂದ ತಕ್ಷಣ ಮನೆಯವರು ಆ ಪ್ರಪೋಸಲ್ ನಿರಾಕರಿಸಿ ಬಿಡುತ್ತಾರೆ.

ಆದರೆ ಲವ್‌ನಲ್ಲಿ ವಯಸ್ಸು ನೋಡದವರೂ ಇರುತ್ತಾರೆ. ಲವ್ ಬ್ಲೈಂಡ್ ಅಂತ ಹೇಳುವುದು ಅದಕ್ಕೇ ಅಲ್ಲವೇ? ಅಲ್ಲದೆ ತಮಗಿಂತ ದೊಡ್ಡವರನ್ನು ಹುಡುಗರು ಇಷ್ಟ ಪಡಲು ಕೂಡ ಕೆಲವೊಂದು ಕಾರಣಗಳೂ ಇವೆಯಂತೆ. ಅದರಲ್ಲೂ ಈ ಕಾರಣಗಳಿಗೆ ಹುಡುಗರು ತಮಗಿಂತ ಹಿರಿಯ ವಯಸ್ಸಿನ ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ:

1. ಹಿರಿಯ ಮಹಿಳೆಗಿಂತ ತಮಗಿಂತ ಪಕ್ವತೆ ಇರುವುದರಿಂದ
ತಮಗಿಂತ ಹಿರಿಯ ವಯಸ್ಸಿನವರಿಗೆ ಹೆಚ್ಚು ಪಕ್ವತೆ ಇರುತ್ತದೆ, ಅಲ್ಲದೆ ಇವರನ್ನು ಅವರು ತುಂಬಾ ಡಿಪೆಂಡ್ ಆಗುವ ಸ್ವತಂತ್ರರಾಗಿರುತ್ತಾರೆ. ವೃತ್ತಿಯನ್ನು ನಿಭಾಯಿಸುವ ಚಾಕಚಕ್ಯತೆ ಅಥವಾ ಕೌಶಲ್ಯ ಇವೆಲ್ಲಾ ಅವರತ್ತ ಆಕರ್ಷಿಸುವಂತೆ ಮಾಡುತ್ತದೆ.

2. ಅವರಿಗೆ ಅನುಭವ ಅಧಿಕವಿರುತ್ತದೆ
ತಮಗಿಂತ ಹಿರಿಯ ವಯಸ್ಸಿನ ಮಹಿಳೆಗೆ ಅಧಿಕ ಅನುಭವಿರುವುದು ಕೂಡ ಅವರತ್ತ ಆಕರ್ಷಿತರಾಗಲು ಒಂದು ಕಾರಣವಾಗಿದೆ. ಅದು ಸಂಬಂಧವಾಗಲಿ, ಬದುಕಾಗಲಿ, ಸೆಕ್ಸ್ ಆಗಲಿ, ಅವರಿಗೆ ತನ್ನ ಹುಡುಗನಿಗೆ ಏನು ಬೇಕು, ಏನು ಬೇಡ ಎಂಬುವುದು ತಿಳಿದಿರುತ್ತದೆ. ಅಲ್ಲದೆ ತಮಗಿಂತ ಕಿರಿಯ ವಯಸ್ಸಿನ ಮಹಿಳೆಯಾದರೆ ಗಂಡನಿಗೆ ಅಥವಾ ಬಾಯ್‌ಫ್ರೆಂಡ್‌ಗೆ ಮಾಡುವಷ್ಟು ಕಿರಿಕಿರಿ ಮಾಡುವಷ್ಟು ಹಿರಿಯ ವಯಸ್ಸಿನ ಮಹಿಳೆಯರು ಮಾಡುವುದಿಲ್ಲ ಎಂದು ಅಧ್ಯಯನ ಹೇಳಿದೆ.

3. ಹಿರಿಯ ವಯಸ್ಸಿನ ಮಹಿಳೆಯರು ಪ್ರಾಮಾಣಿಕರು, ಓಪನ್ ಮೈಂಡ್ ಆಗಿರುತ್ತಾರೆ
ಹಿರಿಯ ವಯಸ್ಸಿನ ಮಹಿಳೆಯರು ಸಂಬಂಧದಲ್ಲಿ ಪ್ರಾಮಾಣಿಕರಾಗಿರುತ್ತಾರೆ. ತಮಗೆ ಇಷ್ಟವಾಗದ್ದನ್ನು ನೇರವಾಗಿ ಹೇಳುತ್ತಾರೆ. ಇವರ ಜೊತೆ ಸಂಬಂಧ ಜಟಿಲವಾಗಿರುವುದಿಲ್ಲ. ಅಲ್ಲದೆ ತಮ್ಮ ಹುಡುಗನ ಸಾಹಸ, ಹುಚ್ಚತನಕ್ಕೆ ಜೊತೆ ನಿಲ್ಲುತ್ತಾರೆ. ಈ ಗುಣ ಪುರುಷನನ್ನು ಆಕರ್ಷಿಸುತ್ತದೆ.

ಭ್ರಮೆಗಿಂತ ವಾಸ್ತವದಲ್ಲಿರುತ್ತಾರೆ
ತಮ್ಮ ಹುಡುಗನಿಗಿಂತ ಹಿರಿಯರಾಗಿದ್ದರೆ ಅವರ ನಡವಳಿಕೆಯಲ್ಲಿ ಒಂದು ಪಕ್ವತೆ ಕಾಣಬಹುದು. ತಮ್ಮ ಪ್ರೀತಿಯನ್ನು ಬಣ್ಣದ ಮಾತುಗಳಲ್ಲಿ ಸಾಮಾಜಿಕ ತಾಣದಲ್ಲಿ ಹೇಳುವ ಬದಲಿಗೆ ನೇರವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೆ ಅವರು ಭ್ರಮೆಯಲ್ಲಿರುವುದಕ್ಕಿಂತ ಜೀವನ ಅನುಭವದಿಂದ ವಾಸ್ತವವನ್ನು ಅರಿತುಕೊಂಡು ವರ್ತಿಸುತ್ತಾರೆ.

ಅವರನ್ನು ಆಗಾಗ ರಮಿಸಬೇಕಾಗಿಲ್ಲ
ಚಿಕ್ಕ ಪ್ರಾಯದವರಾಗಿದ್ದರೆ ತಮ್ಮ ಪುರುಷನ ಗಮನ ಸೆಳೆಯಲು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ ಹಿರಿಯ ಮಹಿಳೆಯಾಗಿದ್ದರೆ ಅವರು ಈ ರೀತಿ ವರ್ತಿಸುವುದಿಲ್ಲ, ಅಲ್ಲದೆ ಅವರು ಚಿಕ್ಕ-ಪುಟ್ಟ ವಿಷಯಗಳಿಗೆ ತಮ್ಮನ್ನು ಅವನು ರಮಿಸಿ ಮುದ್ದಾಡಲಿ ಎಂದು ಬಯಸುವುದೂ ಅಲ್ಲ.

6. ಅವರು ತುಂಬಾ ಬೆಂಬಲ ನೀಡುತ್ತಾರೆ
ತಮಗಿಂತ ಚಿಕ್ಕವನಾಗಿದ್ದರೆ ಅವನ ಬಗ್ಗೆ ಅವರಿಗೊಂದು ಕಾಳಜಿ ಇರುತ್ತದೆ, ಅಲ್ಲದೆ ಅವರಿಗೆ ಎಲ್ಲಾ ವಿಷಯದಲ್ಲಿ ತುಂಬಾ ಬೆಂಬಲ ನೀಡುತ್ತಾರೆ. ಅಲ್ಲದೆ ತಮ್ಮ ಕಾರ್ಯವನ್ನು ಸ್ವತಂತ್ರವಾಗಿ ಮಾಡುವುದರಿಂದ ಅದು ಪುರುಷನಿಗೆ ತುಂಬಾ ಇಷ್ಟವಾಗುವುದು.

ತಮ್ಮ ಶರೀರದ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುವುದಿಲ್ಲ
ಹಿರಿಯ ವಯಸ್ಸಿನ ಮಹಿಳೆಯಾದರೆ ಆತ್ಮವಿಶ್ವಾಸ ಅಧಿಕವಿರುತ್ತದೆ. ಅಲ್ಲದೆ ತಮ್ಮ ದೇಹದ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಹೇಗೆ ಕಾಣುತ್ತೇನೆ ಎಂದು ಯೋಚಿಸು ಬದಲು ಅವನನ್ನು ಹೇಗೆ ಖುಷಿಯಲ್ಲಿ ಇಡಲಿ ಎಂದು ಯೋಚಿಸುತ್ತಾರೆ.

ಸೆಕ್ಸ್‌ನಲ್ಲಿ ಸಹಕರಿಸುತ್ತಾರೆ
ಚಿಕ್ಕ ಪ್ರಾಯದವರಾದರೆ ಇಂಥ ವಿಷಯಗಳಲ್ಲಿ ನಾಚಿಕೆ ಇರುತ್ತದೆ ಹಾಗೂ ಏನೂ ಬಾಯಿ ಬಿಟ್ಟು ಹೇಳುವುದಿಲ್ಲ. ಆದರೆ ದೊಡ್ಡವರಾದರೆ ಇಂಥ ವಿಷಯದಲ್ಲಿ ನಾಚಿಕೆ, ಸಂಕೋಚ ಬಿಟ್ಟು ಸಹಕರಿಸುತ್ತಾರೆ.



Click it and Unblock the Notifications