ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!

ರಿಲೇಷನ್‌ಶಿಪ್ ನಲ್ಲಿ ಜಗಳಗಳು ಕಾಮನ್. ಆದ್ರೆ ಪ್ರತಿನಿತ್ಯ, ಪ್ರತಿ ಕ್ಷಣ ಸಣ್ಣ-ಪುಟ್ಟ ವಿಚಾರಗಳಿಗೆ ಜಗಳವಾಡೋದು ಸರಿಯಲ್ಲ. ಅಂತಹ ಸಂಬಂಧ ಕಡೆವರೆಗೂ ಉಳಿಯೋದು ಇಲ್ಲ. ಹಾಗೆಂದ ಮಾತ್ರಕ್ಕೆ ಜಗಳವಾಡದೇ ಇರೋ ಸಂಬಂಧಗಳು ಉತ್ತಮ ಅಂತಾನೂ ನಾವು ಹೇಳೋದಿಲ್ಲ.

relationship

ಡಿಬೇಟ್, ಹೆಲ್ತಿ ಡಿಸ್‌ಕಷನ್ ಸಂಬಂಧದಲ್ಲಿ ಇದ್ದರೇನೆ ಚಂದ. ಆಗ ಮಾತ್ರ ನಮ್ಮ ಸಂಗತಿಯನ್ನ ನಾವು ಸರಿಯಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯ. ಕೆಲವೊಂದು ಬಾರಿ ಉತ್ತಮ ಜಗಳಗಳು, ಸಂಬಂಧಗಳು ಯಾವು ರೀತಿ ಬೆಳೆಯುತ್ತಿದೆ ಎಂಬುದನ್ನ ಪ್ರತಿ ನಿಧಿಸುತ್ತದೆ.

ಜಗಳದಲ್ಲಿ ಕೆಲವು ಮಿತಿಗಳು ಕೂಡ ಇದೆ. ಉದಾಹರಣೆಗೆ ಜಗಳವಾಡುವಾಗ ನಾವು ಬಳಸುವ ಪದ ಬಳಕೆ ಕೂಡ ಇಲ್ಲಿ ಮುಖ್ಯವಾಗುತ್ತದೆ. ಮಾತುಗಳು ಪರಸ್ಪರ ಗೌರವ ಪೂರ್ವಕವಾಗಿ ಇರಬೇಕು. ಇದರ ಜೊತೆಗೆ ಜಗಳಗಳು ಸಂಗಾತಿಯ ಮೈ ಮುಟ್ಟಿ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ತಲುಪಬಾರದು. ಹೀಗಾದಾಗ ಸಂಬಂಧಗಳು ಸಂಪೂರ್ಣವಾಗಿ ಹಾಳಾಗಿಬಿಡಬಹುದು. ಜಗಳ ಎಲ್ಲೆ ಮೀರದಂತೆ ನೋಡಿಕೊಳ್ಳುವುದು ಇಬ್ಬರ ಜವಾಬ್ದಾರಿಯಾಗಿದೆ.

ರಿಲೇಶನ್‌ಶಿಪ್‌ನಲ್ಲಿ ಜಗಳಗಳು ಇದ್ದರೆ ಉತ್ತಮ ಎಂದು ಹೇಳುವ 12 ಕಾರಣಗಳು

ಅನೇಕ ಜನರಿಗೆ ನಮ್ಮ ಸಂಬಂಧದಲ್ಲಿ ಯಾವುದು ಸರಿ ಇಲ್ಲ ನಾವು ಪ್ರತಿನಿತ್ಯ ಜಗಳವಾಡುತ್ತೇವೆ ಎಂದು ಅನ್ನಿಸಿರಬಹುದು. ಹಾಗೆಂದ ಮಾತ್ರ ನಮ್ಮ ಎಮೋಷನ್‌ ಕಂಟ್ರೋಲ್ ಮಾಡಿ ನಾವು ನಮ್ಮ ಸಂಗಾತಿಯ ಬಳಿ ಓಪನ್ಅಪ್ ಆಗದೇ ಇದ್ದರೇ ಕೂಡ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಜಗಳಗಳು ನಮ್ಮ ಸಂಬಂಧವನ್ನು ಉತ್ತಮವಾಗಿಸುವ ಸೇತುವೆಯಾಗುತ್ತದೆ ಎಂಬುದಕ್ಕೆ 12 ಉತ್ತಮ ಕಾರಣಗಳು ಇಲ್ಲಿದೆ ನೋಡಿ.

1. ಸಂಗಾತಿಯ ಭಾವನೆ, ಇಷ್ಟ-ಕಷ್ಟಗಳನ್ನು ತಿಳಿಯಬಹುದು

1. ಸಂಗಾತಿಯ ಭಾವನೆ, ಇಷ್ಟ-ಕಷ್ಟಗಳನ್ನು ತಿಳಿಯಬಹುದು

ಹೆಲ್ತಿ ಡಿಸ್ಕಷನ್, ಜಗಳಗಳು ಉತ್ತಮ ಸಂಬಂಧಕ್ಕೆ ಭದ್ರ ಬುನಾದಿ ಹಾಕಿ ಕೊಡುತ್ತದೆ. ಯಾವುದಾದರೂ ಒಂದು ವಿಚಾರದ ಬಗ್ಗೆ ದಂಪತಿಗಳಿಬ್ಬರಲ್ಲಿ ಬೇರೆಯದ್ದೆ ಒಪಿನಿಯನ್ ಇರಬಹುದು. ಇಂತಹ ಸಂದರ್ಭದಲ್ಲಿ ಜಗಳಗಳು ಕಾಮನ್. ಆದ್ರೆ ಇದರಿಂದ ನಿಮ್ಮ ಸಂಗಾತಿಯ ಇಷ್ಟ-ಕಷ್ಟಗಳೇನು ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಮುಂದೆ ಇದೇ ವಿಚಾರ ಬಂದಾಗ ಜಗಳಗಳು ಆಗುವ ಸಂದರ್ಭ ಕಡಿಮೆ.

2. ಜಗಳದಲ್ಲಿ ಪ್ರೀತಿ ಹೆಚ್ಚಾಗುತ್ತದೆ

2. ಜಗಳದಲ್ಲಿ ಪ್ರೀತಿ ಹೆಚ್ಚಾಗುತ್ತದೆ

ಸಂಬಂಧದಲ್ಲಿ ಜಗಳ ಇದ್ದರ ಚೆನ್ನ ಏಕಂದರೆ ಇದು ಪ್ರೀತಿ ಹೆಚ್ಚಾಗಲು ಕಾರಣವಾಗುತ್ತದೆ. ಪ್ರೀತಿ ಇದ್ದ ಕಡೆ ಜಗಳ ಇದ್ದೇ ಇರುತ್ತದೆ. ಪ್ರತಿಯೊಂದು ಜಗಳದ ನಂತರವು ನೀವು ನಿಮ್ಮ ಸಂಗಾತಿಯನ್ನು ದ್ವೇಷಿಸುವುದಿಲ್ಲ. ಬದಲಾಗಿ ಮತ್ತಷ್ಟು ಹೆಚ್ಚು ಪ್ರೀತಿಸುತ್ತೀರಿ. ಬರೀ 5 ನಿಮಿಷಕಷ್ಟೇ ನಿಮ್ಮ ಜಗಳ ಸೀಮಿತವಾಗರುತ್ತದೆ. ಒಂದು ವೇಳೆ ನೀವು ಜಗಳವಾಡಿ ಮಾತನಾಡದೇ ಹೋದರೇ ಆ ಕ್ಷಣ ನಿಮ್ಮ ಸಂಗಾತಿಯನ್ನು ಎಷ್ಟು ಮಿಸ್‌ ಮಾಡಿಕೊಳ್ಳುತ್ತಿದ್ದೀರಿ ಎಂಬ ಅನುಭವ ನಿಮಗಾಗುತ್ತದೆ. ಜಗಳಗಳು ಸರ್ವೇ ಸಾಮಾನ್ಯ ಆದರೆ ಅದರಿಂದ ನಿಮ್ಮ ನಡುವಿನ ಆತ್ಮೀಯತೆ ಹೆಚ್ಚಾಗಲು ಸಹಾಯಕಾರಿಯಾಗುತ್ತದೆ.

3. ಸಂಗಾತಿಯ

3. ಸಂಗಾತಿಯ "Point of View" ನಲ್ಲಿ ಆಲೋಚಿಸಲು ಶುರು ಮಾಡುತ್ತಾರೆ

ನಿಮ್ಮ ಸಂಗಾತಿಯಿಂದ ನಿಮಗೆ ಬೇಸರವಾದಾಗ ಅಥವಾ ಅವರು ನಿಮಗೆ ಇಷ್ಟವಿಲ್ಲದ ಕೆಲಸ ಮಾಡಿದಾಗ ಕೋಪ ಬರೋದು ಸಹಜ. ಆದರೆ ಯಾವತ್ತಾದರೂ ಒಂದು ಬಾರಿ ಅವರ ಜಾಗದಲ್ಲಿ ನಿಂತು ಅವರು ಹೀಗ್ಯಾಕೆ ಮಾಡುತ್ತಿದ್ದಾರೆ ಎಂದು ಆಲೋಚಿಸಿದ್ದೀರಾ..? ಆತ ಅಥವಾ ಆಕೆ ಹೇಳುತ್ತಿರುವುದು ಸರಿನಾ..? ನಾನು ಅವರನ್ನು ಅರ್ಥ ಮಾಡಿಕೊಳ್ಳಬೇಕಿತ್ತು, ಏಕಾಏಕಿ ರಿಯಾಕ್ಟ್ ಮಾಡಿದ್ದು ಸರಿಯಲ್ಲ. ಈ ಥರ ಆಲೋಚನೆಗಳು ನಿಮ್ಮ ತಲೆಯಲ್ಲಿ ಬಂದಿದ್ಯಾ..? ಸಂಬಂಧದಲ್ಲಿ ಸಣ್ಣ-ಪುಟ್ಟ ಜಗಳಗಳು ಆದಾಗ ಮಾತ್ರ ನಿಧಾನವಾಗಿ ನಾವು ಒಂದೊಂದನ್ನೇ ಅಲೋಚಿಸಿ ಅರ್ಥೈಸಿಕೊಳ್ಳುತ್ತೇವೆ.

4. ಮುಕ್ತ ಮನಸ್ಸಿನಿಂದ ಆಲಿಸಲು ಕಲಿಯುತ್ತೇವೆ

ಜಗಳವಾದಾಗ ನಿಮ್ಮ ಪ್ರತಿ ಮಾತು ನಿಮ್ಮ ಸಂಗಾತಿಯನ್ನ ನೋವಿಸುವಂತೆ ಇರಬಾರದು. ಇದರಿಂದ ನಿಮ್ಮ ಸಂಬಂಧ ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬದಲಾಗಿ ನಿಮ್ಮ ಸಂಗಾತಿ ಏನು ಹೇಳುತ್ತಿದ್ದಾರೆ ಎಂಬುದನ್ನು ಮುಕ್ತ ಮನಸ್ಸಿನಿಂದ ಆಲಿಸಲು ಶುರು ಮಾಡಿ. ತಪ್ಪಿದ್ದರೆ ತಿದ್ದಿ ತಿಳಿ ಹೇಳಿ, ಒಂದು ವೇಳೆ ನಿಮ್ಮ ಸಂಗಾತಿಯ ಮಾತು ಸರಿ ಎನಿಸಿದರೆ ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ ಅಲ್ಲಿಗೆ ಎಲ್ಲವೂ ಸುಖಾಂತ್ಯ ಕಾಣುತ್ತದೆ. ಜಗಳಗಳು ನಡೆಯುತ್ತಿದ್ದಾಗ ಮಾತ್ರ ಇಂತಹ ಗುಣಗಳು ನಮ್ಮಲ್ಲಿ ನಿಧಾನವಾಗಿ ಮೈಗೂಡುತ್ತದೆ.

5. ಪರಸ್ಪರ ಕಾಳಜಿ ಹೆಚ್ಚಾಗುತ್ತದೆ

5. ಪರಸ್ಪರ ಕಾಳಜಿ ಹೆಚ್ಚಾಗುತ್ತದೆ

ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಯಾವುದಾದರೊಂದು ವಿಚಾರಕ್ಕೆ ಕಂಪ್ಲೇಂಟ್ ಮಾಡುತ್ತಿದ್ದಾರೆ ಎಂದರೆ ಅವರು ನಿಮ್ಮಿಂದ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದರ್ಥ. ಹೀಗಾಗಿ ನೀವು ಅಂತಹ ನಡವಳಿಯನ್ನ ಬದಲಿಸಿ ಉತ್ತಮ ಬಾಳ ಸಂಗಾತಿಯಾಗಲು ಪ್ರಯತ್ನಿಸಿ. ಒಂದು ವೇಳೆ ಅವರಿಗೆ ನಿಮ್ಮ ಮೇಲೆ ಕಾಳಜಿ ಇರದೇ ಹೋಗಿದ್ದರೆ ಅವರು ನಿಮ್ಮಲ್ಲಿ ಚಕಾರ ಎತ್ತುತಿರಲಿಲ್ಲ. ಅವರಷ್ಟಕ್ಕೆ ಇದ್ದು ಬಿಡುತ್ತಿದ್ದರು.

6. ನಿಮ್ಮಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಲು ಸಹಕಾರಿ

ಸಂಬಂಧವು ದೀ‍‍ರ್ಘಕಾಲ ಮುಂದುವರಿದಂತೆ ಜಗಳವು ಕಡಿಮೆಯಾಗಿ ನಿಮ್ಮ ತಾಳ್ಮೆ, ಪ್ರೀತಿ, ಕಾಳಜಿ ಹೆಚ್ಚಾಗುತ್ತದೆ. ನಂತರ ನೀವು ನಿಮ್ಮ ಸಂಗಾತಿಯ ಬಳಿ ಜಗಳವಾಡುವ ಬದಲು ಅವರಿಗಿಷ್ಟವಿಲ್ಲದ್ದನ್ನು ಮಾಡುವುದನ್ನು ನಿಲ್ಲಿಸುತ್ತೀರಿ. ಮತ್ತು ಅನ್ಯೋನ್ಯವಾಗಿರಲು ಏನು ಮಾಡಿದರೆ ಉತ್ತಮ ಎಂಬುದನ್ನು ಆಲೋಚಿಸುತ್ತೀರಿ.

7. ವಿಶ್ವಾಸ ಹೆಚ್ಚಾಗುತ್ತದೆ

7. ವಿಶ್ವಾಸ ಹೆಚ್ಚಾಗುತ್ತದೆ

ಸಂಬಂಧಗಳು ಉಳಿಯಬೇಕಾದರೆ ವಿಶ್ವಾಸ ತುಂಬಾನೇ ಮುಖ್ಯ ಪಾತ್ರವಹಿಸುತ್ತದೆ. ಜೋಡಿಗಳ ನಡುವೆ ಒಂದು ಬಾರಿ ಯಾವುದಾದರೊಂದು ವಿಚಾರಕ್ಕೆ ಜಗಳವಾದಾಗ ಆತನಿಗೆ ಅಥವಾ ಆಕೆಗೆ ಒಂದು ವಿಚಾರ ಇಷ್ಟವಾಗೋದಿಲ್ಲ ಎಂದು ಗೊತ್ತಾದರೆ ಮತ್ತೆ ಮತ್ತೆ ಅದನ್ನು ರಿಪೀಟ್ ಮಾಡಬಾರದು. ಉದಾಹರಣೆಗೆ ಸುಳ್ಳು ಹೇಳುವುದು. ಹೀಗೆ ಮತ್ತೊಂದು ಬಾರಿ ಇದೇ ವಿಚಾರಕ್ಕೆ ಮನಸ್ತಾಪ ಎದುರಾಗೋದಿಲ್ಲ. ಹೋದಬಾರಿ ಜಗಳವಾದಾಗ ನನ್ನ ನಡವಳಿಗೆ ಸಂಗಾತಿಗೆ ಇಷ್ಟವಾಗಿಲ್ಲ. ಹೀಗಾಗಿ ಇದನ್ನು ಮತ್ತೆ ಪುನರಾವರ್ತಿಸಬಾರದು ಎಂಬ ವಿಚಾರ ಮನಸ್ಸಿನಲ್ಲಿ ಗಟ್ಟಿಯಾಗಿ ನಲೆಯೂರುತ್ತದೆ. ಹೀಗೆ ಒಬ್ಬರ ಮೇಲೆ ಒಬ್ಬರಿಗೆ ಕ್ರಮೇಣ ವಿಶ್ವಾಸ ಹೆಚ್ಚಾಗುತ್ತದೆ.

8. ಸಂಬಂಧ ಗಟ್ಟಿಗೊಳಿಸುತ್ತದೆ

ಸಂಬಂಧದಲ್ಲಿ ಜಗಳ ಉತ್ತಮನಾ? ಇದರಿಂದ ಬಾಂಡಿಗ್ ಹೆಚ್ಚಾಗುತ್ತಾ? ಖಂಡಿತ ಹೌದು. ಆರೋಗ್ಯಕರ ಜಗಳವು ರಿಲೇಷನ್‌ಶಿಪ್‌ನಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಕೆಲವೊಂದು ಬಾರಿ ಜಗಳನ್ನು ಹಿಂದಿನ ತಪ್ಪಿಗೆ ಪಾಠವಿದ್ದಂತೆ. ಏಕೆಂದರೆ ಮನುಷ್ಯ ಮತ್ತದೇ ತಪ್ಪನ್ನು ಮಾಡಲು ಇಷ್ಟ ಪಡುವುದಿಲ್ಲ.ಇದು ಒಬ್ಬನನ್ನು ಉತ್ತಮ ಮನುಷ್ಯನನ್ನಾಗಿ ಮಾಡಲು ಸಹಾಯ ಮಾಡುತ್ತದೆ.

9. ಚರ್ಚೆಗಳನ್ನು ಮಂಡಿಸಲು ಉತ್ತಮ ಸಮಯಕ್ಕಾಗಿ ಕಾಯುತ್ತೀರಿ

9. ಚರ್ಚೆಗಳನ್ನು ಮಂಡಿಸಲು ಉತ್ತಮ ಸಮಯಕ್ಕಾಗಿ ಕಾಯುತ್ತೀರಿ

ಸಂಬಂಧ ಉತ್ತಮವಾಗಿ ದೀರ್ಘವಾದಂತೆ ನಮ್ಮ ಸಂಗಾತಿಯ ಮೂಡ್ ಹೇಗಿರುತ್ತೆ? ಅವರು ಏನನ್ನು ಯೋಚಿಸುತ್ತಿದ್ದಾರೆ ಮತ್ತು ಅವರ ಬೇಕು -ಬೇಡಗಳು ಏನು ಎಂಬುದು ನಮಗೆ ಬೇಗನೆ ತಿಳಿಯುತ್ತದೆ. ನಮ್ಮವರು ಮೂಡ್ ಆಫ್ ಆಗಿದ್ದಾಗ ಅವರು ನಮ್ಮ ಬಳಿ ಮತ್ನಾಡಲು ಇಷ್ಟ ಪಡುವುದಿಲ್ಲ ಆಗ ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಡಬೇಕು. ಸ್ಪಲ್ಪ ಸಮಯದ ನಂತರ ಎಲ್ಲವೂ ಸರಿಯಾಗುತ್ತದೆ. ನಂತರ ನಿಮ್ಮ ಚರ್ಚೆಗಳನ್ನು ಮಂಡಿಸಿ.

10. ಸವಿ ನೆನಪುಗಳು, ಸುಮಧುರ ಕ್ಷಣಗಳು ನಮ್ಮದಾಗುತ್ತದೆ

ನಿಮ್ಮ ಸಂಗಾತಿಯ ಬಳಿ ನೀವು ಆಡಿದ ಮೊದಲ ಜಗಳ ನಿಮ್ಮ ಜೀವನದ ಮಹತ್ವದ ಮೈಲಿಗಲ್ಲಾಗಬಹುದು ಅಂತಹ ಜಗಳವನ್ನು ನೀವು ಸೆಲೆಬ್ರೇಟ್ ಮಾಡಲೇಬೇಕು. ನಿರಂತರ ಜಗಳಗಳು ಹಾಗೂ ಅದರ ಕೆಲ ನೆನಪಿನ ತುಣುಕುಗಳು ನಿಮ್ಮ ಎದೆಯಲ್ಲಿ ಅಚ್ಚಳಿಯದೇ ಉಳಿದು ಹೋಗಬಹುದು. ಅದರಲ್ಲಿ ಕೆಲ ಜಗಳಗಳು ಕಾರಣ ಇಲ್ಲದೇನೆ ನಡೆದಿರಬಹುದು, ಕೆಲವು ಅಸಹ್ಯಕರವಾಗಿರಬಹುದು, ಕೆಲವೊಂದು ಬಾರಿ ಅನಗತ್ಯ ವಿಚಾರಕ್ಕೆ ಜಗಳವಾಡಿರಬಹುದು.

11. ಮನಸ್ಸಿನ ನೋವನ್ನು ಹೊರ ಹಾಕಲು ಸಾಧ್ಯ

11. ಮನಸ್ಸಿನ ನೋವನ್ನು ಹೊರ ಹಾಕಲು ಸಾಧ್ಯ

ಕೆಲವೊಂದು ಬಾರಿ ಏನನ್ನು ಮನಸ್ಸಿನಲ್ಲಿಟ್ಟುಕೊಂಡು ಅದನ್ನೇ ನೆನಪಿಸಿಕೊಂಡು ಕೊರಗುತ್ತಿರುತ್ತೇವೆ. ಅದು ನಮ್ಮ ಸಂಗಾತಿಯ ಮೇಲಿನ ಅಸಮಧಾನವಿರಬಹುದು ಅಥವಾ ಕಾರಣ ಬೇರೆ ಏನೋ ಆಗಿರಬಹುದು. ಮಾತನಾಡಿಯೋ ಅಥವಾ ಜಗಳವಾಡಿಯೋ ಅದನ್ನ ಹೊರ ಹಾಕುವುದರಿಂದ ಮನಸ್ಸಿಗೆ ಏನೋ ನೆಮ್ಮದಿ ಸಿಕ್ಕ ಅನುಭವವಾಗುತ್ತದೆ. ಇದಾದ ಬಳಿಕ ನೀವು ನಿಮ್ಮ ಸಂಗಾತಿಯ ಬಳಿಯೂ ಕಂಪ್ರಮೈಸ್‌ ಮಾಡಿಕೊಳ್ಳಬೇಕು. ಹೀಗಾದಾಗ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.

12. ಹಳೆಯ ಬಾಂಡಿಂಗ್ ಗಟ್ಟಿಯಾಗುತ್ತದೆ.

ಸಾಮಾನ್ಯವಾಗಿ ಸಂಬಂಧದಲ್ಲಿ ಮೊದ ಮೊದಲು ಎಲ್ಲವೂ ಚೆನ್ನಾಗಿರುತ್ತೆ. ರಿಲೇಷನ್‌ಶಿಪ್ ಆರಂಭದಲ್ಲಿ ಎಲ್ಲಾ ದಿನವನ್ನು ಗಿಫ್ಟ್‌ ಕೊಡೋದ್ರ ಮುಖಾಂತರ ಆಚರಣೆ ಮಾಡಲಾಗುತ್ತದೆ. ಆ ನಂತರ ಎಲ್ಲಾವು ಕಡಿಮೆಯಾಗುತ್ತಾ ಬರುತ್ತದೆ. ಆದರೆ ಜಗಳವಾಗಿ ಮತ್ತೆ ಎಲ್ಲವೂ ಸರಿಯಾದಾಗ ಮತ್ತೆ ತನ್ನ ಸಂಗಾತಿಯ ಖುಷಿಗೆ ಏನನ್ನಾದರೂ ಕೊಡಬೇಕು ಅನ್ನಿಸೋದು ಸಹಜ. ಹಾಗಾಗಿ ಜಗಳದಿಂದಾಗಿ ಮತ್ತೆ ಹಳೆಯ ಬಾಂಡಿಂಗ್ ಗಟ್ಟಿಯಾಗುತ್ತದೆ.

ಸಂಬಂಧಗಳು ಅಂದರೇನೆ ಹಾಗೇ ಅದರಲ್ಲಿ ನೋವು-ನಲಿವು, ಸುಖ-ದು:ಖ, ಒಳ್ಳೇದು-ಕೆಟ್ಟದ್ದು ಅನ್ನೋದು ಇದ್ದೇ ಇರುತ್ತದೆ. ಹಾಗಂದ ಮಾತ್ರಕ್ಕೆ ಒಂದು ಬಾರಿ ಜಗಳವಾಡಿದ ತಕ್ಷಣ ಸಂಬಂಧಕ್ಕೆ ತಿಲಾಂಜಲಿ ಇಡೋದು ಸರಿಯಲ್ಲ ಬದಲಾಗಿ ಕೆಟ್ಟದನ್ನು ಮರೆತು ಒಳ್ಳೆಯದ್ದನ್ನು ಜೀವನದಲ್ಲಿ ಅಳವಡಿಸಿಕೊಂಡಿರೆ ಸುಖ ಸಂಸಾರ ನಡೆಸಲು ಸಾಧ್ಯ.

English summary

Reasons why fighting is actually good for a relationship in Kannada

Here are the reasons why fighting is actually good for a relationship in Kannada.
X
Desktop Bottom Promotion