Latest Updates
-
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು!
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
ನನ್ನ ಗಂಡ ನನ್ನ ಜೊತೆ ಚೆನ್ನಾಗಿಯೇ ಇದ್ದ, ಆದರೂ ಬೇರೆಯೊಬ್ಬಳ ಸಂಬಂಧದಲ್ಲಿದ್ದಾನೆ, ನನಗೆ ಈ ರೀತಿ ಮೋಸ ಮಾಡುತ್ತಾನೆ ಅಂತ ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ, ನನ್ನ ಜೊತೆ ಎಷ್ಟು ಚೆನ್ನಾಗಿದ್ದ ಆದರೂ ಏಕೆ ಮೋಸ ಮಾಡಿದ ಎಂದು ಗಂಡನ ಅನೈತಿಕ ಸಂಬಂಧ ಗೊತ್ತಾಗ ಹೆಂಡತಿ ಅಳಲು ತೋಡಿಕೊಳ್ಳುತ್ತಾಳೆ.

ಇನ್ನು ಕೆಲವರಿಗೆ ತಮ್ಮ ಗಂಡ ಬೇರೆ ಸಂಬಂಧದಲ್ಲಿರುವುದು ಕೊನೆಯವರೆಗೆ ಗೊತ್ತಾಗುವುದೇ ಇಲ್ಲ, ಏಕೆಂದರೆ ಅಷ್ಟು ಚೆನ್ನಾಗಿ ಇವರ ಜೊತೆ ಇರ್ತಾರೆ, ಆದ್ದರಿಂದ ನನ್ನ ಗಂಡನಿಗೆ ಬೇರೆಯೊಬ್ಬಳ ಜೊತೆ ಸಂಬಂಧವಿದೆ ಎಂದು ಊಹಿಸಲೂ ಸಾಧ್ಯವಿಲ್ಲದಷ್ಟು ಮೈಂಟೇನ್ ಮಾಡಿರುತ್ತಾರೆ.
ಹೆಂಡತಿ ಜೊತೆ ತುಂಬಾ ಚೆನ್ನಾಗಿದ್ದು ಅನೈತಿಕ ಸಂಬಂಧದಲ್ಲಿ ಬೀಳುವುದೇಕೆ. ಸುಖಿ ಸಂಸಾರದಲ್ಲಿದ್ದರೂ ಗಂಡ ಬೇರೆ ಸಂಬಂಧ ಬೆಳೆಸಲು ಏನು ಕಾರಣ ಎಂದು ನೋಡೋಣ ಬನ್ನಿ:

ಸಂಗಾತಿಯಿಂದ ತೃಪ್ತಿ ಸಿಗದಿದ್ದಾಗ
ಸಂಗಾತಿ ಮೇಲೆ ಅವರಿಗೆ ಯಾವುದೇ ಬೇಸರವಿರಲ್ಲ, ಆದರೆ ತಾನು ಬಯಸಿದಂಥ ಸುಖ ಹೆಂಡತಿಯಿಂದ ಸಿಗದಿದ್ದರೆ ಅಥವಾ ಲೈಂಗಿಕ ತೃಪ್ತಿ ಇಲ್ಲದಿದ್ದರೆ ಆ ಕಾರಣಕ್ಕೆ ಹೆಂಡತಿಯನ್ನು ದೂರ ಮಾಡಲು ಮನಸ್ಸಿರುವುದಿಲ್ಲ, ಆದರೆ ತಮಗೆ ಬೇಕಾದ ಸುಖಕ್ಕಾಗಿ ಬೇರೆ ಕಡೆ ಹೋಗುತ್ತಾರೆ.

ಸಂಬಂಧದಲ್ಲಿ ಉಸಿರುಕಟ್ಟುವ ಪರಿಸ್ಥಿತಿ ಇದ್ದಾಗ
ಖುಷಿಯಾಗಿಯೇ ಮದುವೆಯಾಗಿರುತ್ತಾರೆ, ಚೆನ್ನಾಗಿಯೇ ಇರುತ್ತಾರೆ ಆದರೆ ಪತ್ನಿಯ ಕೆಲವೊಂದು ಗುಣ ಅಥವಾ ನಡವಳಿಕೆ ಇಷ್ಟವಿರುವುದಿಲ್ಲ, ಅದನ್ನು ನಾನಾ ಕಾರಣಗಳಿಂದಾಗಿ ಅವರ ಬಳಿ ಹೇಳಿಕೊಳ್ಳಲು ಸಾಧ್ಯವಾಗಲ್ಲ. ಆಗ ತಮ್ಮ ಆಸಕ್ತಿಗೆ ತಕ್ಕ ವ್ಯಕ್ತಿಯನ್ನು ಭೇಟಿಯಾದಾಗ ಅವರ ಕಡೆಗೆ ಆಕರ್ಷಣೆ ಬೆಳೆಯುವುದು.

ಅಸುರಕ್ಷತೆ ಭಾವನೆ
ಅಸುರಕ್ಷತೆ ಭಾವನೆ ಬಂದಾಗ ಕೆಲವರು ಈ ರೀತಿ ಅನಾರೋಗ್ಯಕರವಾಗಿ ಡೀಲ್ ಮಾಡಲು ಪ್ರಯತ್ನಿಸುತ್ತಾರೆ. ಒಳ್ಳೆಯ ಗಂಡ ಹಾಗೂ ಮಕ್ಕಳಿಗೆ ಒಳ್ಳೆಯ ತಂದೆ ಅನಿಸಿಕೊಂಡಿರುತ್ತಾರೆ, ಆದರೆ ಯಾವುದೋ ಅಸುರಕ್ಷತೆ ಭಾವನೆ ಕಾಡಿದಾಗ ಅದನ್ನು ಹೇಳಿಕೊಳ್ಳಲು ಸಾಧ್ಯವಾಗದೆ ಸೀಕ್ರೆಟ್ ಸಂಬಂಧ ಬೆಳೆಸಬಹುದು.
ಅಸುರಕ್ಷತೆ ಭಾವನೆ ಬರಲು ಹಲವಾರು ವಿಷಯಗಳು ಕಾರಣವಾಗಿರಬಹುದು. ಒಂದು ವೇಳೆ ಸರಿಯಾದ ಕೆಲಸ ಇಲ್ಲದಿದ್ದರೆ ಅಥವಾ ಆರ್ಥಿಕ ತೊಂದರೆ, ಹೆಂಡತಿಯಲ್ಲಿ ಆರೋಗ್ಯ ಸಮಸ್ಯೆ ಈ ರೀತಿಯೆಲ್ಲಾ ಇದ್ದಾಗ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಅಡ್ಡ ಮಾರ್ಗ ಹಿಡಿಯುತ್ತಾರೆ. ಆದರೆ ಈ ರೀತಿ ಮಾಡುವ ಮೂಲಕ ತಮ್ಮ ನೆಮ್ಮದಿ ಮತ್ತಷ್ಟು ಹಾಳು ಮಾಡುತ್ತಾರೆ.

ತನ್ನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಭಾವಿಸಿದಾಗ
ಮದುವೆಯಾಗಿ ಮಕ್ಕಳಾದ ಮೇಲೆ ಹೆಂಡತಿ ಮಕ್ಕಳ ಕಡೆ ಗಮನ ಕೊಡುವುದು ಸಹಜ. ಮನೆ ಕೆಲಸ, ಮಕ್ಕಳ ಜವಾಬ್ದಾರಿ ಇವುಗಳ ನಡುವೆ ಮೊದಲಿನಂತೆ ನಿಮಗೆ ನಿಮ್ಮ ಗಂಡನ ಜೊತೆ ಇರಲು ಸಾಧ್ಯವಾಗಲ್ಲ, ಆದರೆ ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಬಿಟ್ಟು ಕೆಲ ಪುರುಷರು ಅವಳು ನನ್ನನ್ನು ಇತ್ತೀಚೆಗೆ ಗಮನಿಸುತ್ತಿಲ್ಲ ಎಂದು ಭಾವಿಸುತ್ತಾರೆ, ಈ ಕಾರಣಕ್ಕೆ ಬೇರೆ ವ್ಯಕ್ತಿ ಅವರ ಭಾವನೆಗೆ ಸ್ಪಂದಿಸಿದರೆ ಆಕರ್ಷಣೆ ಬೆಳೆಯುವುದು.

ಪುರುಷ ಎಂಬ ಅಹಂ
ನಾನು ಪುರುಷ ಎಂಬ ಅಹಂ, ನನ್ನ ಪುರುಷತ್ವ ಸಾಬೀತು ಪಡಿಸಲು ಮನೆಯಲ್ಲಿ ಹೆಂಡತಿ ಇದ್ದರೂ ಹಲವಾರು ಮಹಿಳೆಯರ ಜೊತೆ ಸಂಪರ್ಕ ಇಟ್ಟುಕೊಳ್ಳುವ ಕೆಟ್ಟ ಚಟ ಕೆಲ ಪುರುಷರಲ್ಲಿ ಇರುತ್ತದೆ.

ಮೆಚ್ಯೂರಿಟಿ ಇಲ್ಲದಿರುವುದು
ಕುಟುಂಬ ಎಂದರೇನು? ವೈವಾಹಿಕ ಜೀವನ ಎಂದರೇನು ಎಂಬ ಮೆಚ್ಯೂರಿಟಿ ಇಲ್ಲದೇ ಹೋದರೆ ಮದುವೆಯಾದ ಮೇಲೂ ಫ್ಲರ್ಟ್ ಮಾಡುವ ಸ್ವಭಾವ ಮುಂದುವರೆಸುತ್ತಾರೆ. ನಾನು ಈ ರೀತಿ ಮಾಡಿದರೆ ತನ್ನ ಹೆಂಡತಿಗೆ ಗೊತ್ತಾಗಲ್ಲ ಎಂದು ಭಾವಿಸಿ ಮೋಸ ಮಾಡಲು ಮುಂದಾಗುತ್ತಾರೆ.
ಇನ್ನು ಕೆಲವರಿಗೆ ಈ ರೀತಿ ಫ್ಲರ್ಟ್ ಮಾಡಿದರೆ ಏನೂ ಆಗಲ್ಲ, ಇದೇನು ಸೀರಿಯಸ್ ಸಂಬಂಧವಲ್ಲ, ಟೈಂಪಾಸ್ ಅಷ್ಟೇ ಎಂಜಾಯ್ ಮಾಡೋಣ ಅಂತ ಭಾವಿಸಿ ಫ್ಲರ್ಟ್ ಮಾಡುತ್ತಿರುತ್ತಾರೆ, ಆದರೆ ಈ ರೀತಿ ಮಾಡುವುದರಿಂದ ಹೆಂಡತಿಗೆ ಮೋಸ ಮಾಡಿದಂತಾಗುವುದು ಮಾತ್ರವಲ್ಲ, ಈ ವಿಷಯ ತಿಳಿದರೆ ಸಂಸಾರ ಜೀವನದಲ್ಲಿ ಬಿರುಗಾಳಿಯೇ ಏಳುವುದು.
ಆದ್ದರಿಂದ ಸುಂದರ ಕುಟುಂಬ ನಿಮ್ಮದಾಗಿದ್ದರೆ ಅದರಲ್ಲಿಯೇ ನೆಮ್ಮದಿ ಕಾಣಿ. ಮತ್ತೊಂದು ಸಂಬಂಧ ಅರಿಸಿ ಹೊರಟರೆ ಪತಂಗಕ್ಕೆ ದೀಪದ ಕಡೆಗೆ ಆಕರ್ಷಿತವಾಗಿ ತನ್ನನ್ನು ತಾನು ಸುಟ್ಟುಕೊಂಡಂತಾಗುವುದು ಪರಿಸ್ಥಿತಿ, ನಿಜ ತಾನೆ?



Click it and Unblock the Notifications