For Quick Alerts
ALLOW NOTIFICATIONS  
For Daily Alerts

2022 ರಲ್ಲಿ ಈ 7 ರಾಶಿಯವರಿಗೆ ತಮ್ಮ ಸೋಲ್‌ಮೇಟ್‌ ಸಿಗುವ ಸಾಧ್ಯತೆಯಿದೆಯಂತೆ!

|

ನಾವು 2022 ನೇ ವರ್ಷಕ್ಕೆ ಸಮೀಪಿಸುತ್ತಿದ್ದೇವೆ. ಹೊಸ ಗುರಿ, ಆಕಾಂಕ್ಷೆಗಳು ನಮ್ಮಲ್ಲಿ ಸಾಕಷ್ಟಿವೆ. ಅದರ ಜೊತೆಗೆ 2022 ರಲ್ಲಿ ನಮ್ಮ ಪ್ರೇಮ ಜೀವನ ಹೇಗಿರಲಿದೆ ಎಂಬ ಪ್ರಶ್ನೆಯೂ ಕೆಲವರನ್ನು ಕಾಡಬಹುದು. ಅಂತಹವರಿಗೆ 2022 ರಲ್ಲಿ ಪ್ರೀತಿ ವಿಚಾರದಲ್ಲಿ ಅದೃಷ್ಟವನ್ನು ಪಡೆಯುವ 7 ರಾಶಿಚಕ್ರದ ಚಿಹ್ನೆಗಳನ್ನು ಹಂಚಿಕೊಂಡಿದ್ದೇವೆ. ಈ ಪಟ್ಟಿಯಲ್ಲಿ ನೀವೂ ಇದ್ದೀರಾ ಎಂಬುದನ್ನು ಪರೀಕ್ಷಿಸಿಕೊಳ್ಳಿ.

2022 ರಲ್ಲಿ ಪ್ರೀತಿ ವಿಚಾರದಲ್ಲಿ ಅದೃಷ್ಟವನ್ನು ಪಡೆಯುವ 7 ರಾಶಿಚಕ್ರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ವೃಷಭ ರಾಶಿ:

ವೃಷಭ ರಾಶಿ:

ಒಂಟಿಯಾಗಿರುವ ಈ ರಾಶಿಯವರು ವಿಶೇಷ ವ್ಯಕ್ತಿಯೊಂದಿಗೆ ಜಂಟಿಯಾಗುತ್ತಾರೆ ಮತ್ತು ನಿಷ್ಠಾವಂತ ಸಂಬಂಧವನ್ನು ಪ್ರಾರಂಭಿಸುವ ಸಂಭವನೀಯತೆಯನ್ನು ಹೊಂದಿರುತ್ತಾರೆ. ಇವರು ತಮ್ಮ ಸಂಗಾತಿಯೊಂದಿಗೆ ಉತ್ತಮವಾದ ಜೀವನದ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ಸಂಬಂಧವನ್ನು ಆಮೆಯಂತೆ ನಿಧಾನವಾಗಿ ತೆಗೆದುಕೊಂಡರೂ, ಅವರಿಬ್ಬರ ನಡುವಿನ ಭಾವನಾತ್ಮಕ ಬಂಧವು ಶ್ಲಾಘನೀಯವಾಗಿರುತ್ತದೆ.

ಕರ್ಕ ರಾಶಿ:

ಕರ್ಕ ರಾಶಿ:

ಇವರು 2022 ರಲ್ಲಿ ಅವರ ಸೋಲ್‌ ಮೇಟ್‌ ನ್ನು ಭೇಟಿ ಮಾಡುವ ಅವಕಾಶ ಹೊಂದಿದ್ದಾರೆ. ವರ್ಷದ ಆರಂಭದಲ್ಲಿ ಭಾವನಾತ್ಮಕಕ್ಕಿಂತ ಹೆಚ್ಚು ಭಾವೋದ್ರಿಕ್ತವಾಗಿರುತ್ತದೆ. ಈ ಅವಧಿಯಲ್ಲಿ ಅವರು ಕ್ರಷ್ ಹೊಂದಿರಬಹುದು. ಆದರೆ ನಿಜವಾದ ಸಂಬಂಧವು ವರ್ಷದ ಮೊದಲ ತ್ರೈಮಾಸಿಕದ ನಂತರ ಅವರ ಜೀವನ ಪ್ರವೇಶಿಸುವುದು. ಇವರ ಮನಸ್ಸು ಸಂತೋಷ ಮತ್ತು ತೃಪ್ತಿಯಿಂದ ತುಂಬಿರುತ್ತದೆ.

ಕನ್ಯಾರಾಶಿ:

ಕನ್ಯಾರಾಶಿ:

ಇದು ಪ್ರೀತಿಯಲ್ಲಿ ಅದೃಷ್ಟವಿರುವ ರಾಶಿಚಕ್ರದ ಚಿಹ್ನೆಗಳಲ್ಲಿ ಒಂದಾಗಿದೆ. ಒಂಟಿಯಾಗಿರುವ ವ್ಯಕ್ತಿಗಳು ತಮ್ಮ ಹಳೆಯ ಸ್ನೇಹಿತರಲ್ಲಿ ಅಥವಾ ಕೆಲವು ಕುಟುಂಬದ ಮೂಲಕ ತಮ್ಮ ಜೀವನದ ಪ್ರೀತಿಯನ್ನು ಕಂಡುಕೊಳ್ಳಬಹುದು. ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುವ ಹೆಚ್ಚಿನ ಸಾಧ್ಯತೆಗಳನ್ನು ಹೊಂದಿದ್ದಾರೆ. ಏಪ್ರಿಲ್, 2022 ರ ನಂತರ ಅವರ ಕ್ರಶ್ ಅನ್ನು ಸಮೀಪಿಸಲು ಸರಿಯಾದ ಸಮಯವಾಗಿದ್ದು, ದೀರ್ಘಾವಧಿಯ ಮತ್ತು ಸ್ಥಿರವಾದ ಸಂಬಂಧವನ್ನು ಹೊಂದುತ್ತಾರೆ. ಅವರ ನಡುವೆ ಹೆಚ್ಚು ಸಂವಹನ ಇರುವುದಿಲ್ಲ ಆದರೆ ಅವರ ಪ್ರೇಮಿಗಾಗಿ ಅವರ ಭಾವನೆಗಳು ವರ್ಷದ ಅಂತ್ಯದ ವೇಳೆಗೆ ಹೆಚ್ಚಾಗುತ್ತವೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಇವರು ಭಾವನಾತ್ಮಕ ರೀತಿಯಲ್ಲಿ ಸೂಕ್ಷ್ಮವಾಗಿರುತ್ತಾರೆ. ಏಪ್ರಿಲ್ 2022 ರ ಮಧ್ಯದಿಂದ, ಅವರು ತಮ್ಮ ಪ್ರೀತಿಯ ಮನೆಯಲ್ಲಿ ಬಲವಾದ ಗುರುವಿನ ಆಶೀರ್ವಾದವನ್ನು ಹೊಂದಿರುತ್ತಾರೆ. ಇದು ಅವರ ಜೀವನದಲ್ಲಿ ಸ್ಥಿರ ಸಂಪರ್ಕಗಳನ್ನು ತರುತ್ತದೆ. ಅಲ್ಲದೆ, ಅವರ ಲಗ್ನದ ಮೇಲೆ ಗುರುವಿನ ಅಂಶವು ಅವರ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಬುದ್ಧತೆ ಮತ್ತು ಶಕ್ತಿಯನ್ನು ನೀಡುತ್ತದೆ. ಪ್ರಣಯ ಬಂಧದಲ್ಲಿರುವವರು ತಮ್ಮ ಸಂಪರ್ಕಗಳ ಬಗ್ಗೆ ಗಂಭೀರವಾಗಿರುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರನ್ನು ಕುಟುಂಬಕ್ಕೆ ಪರಿಚಯಿಸುತ್ತಾರೆ.

ಧನು ರಾಶಿ:

ಧನು ರಾಶಿ:

ಧನು ರಾಶಿಯವರ ಪ್ರೀತಿ ಜೀವನ ಯಶಸ್ವಿಯಾಗುತ್ತದೆ. ಅವರ ಐದನೇ ಮನೆಯ ಅಧಿಪತಿಯು ವರ್ಷದ ಆರಂಭದಲ್ಲಿ ಉದಯದ ಚಿಹ್ನೆಯಲ್ಲಿರುತ್ತಾರೆ. ಸಂಬಂಧದಲ್ಲಿರುವವರು ಈ ಅವಧಿಯಲ್ಲಿ ತಮ್ಮ ಸಂಗಾತಿಯ ಬಗ್ಗೆ ಹೆಚ್ಚು ಉತ್ಸಾಹ ತೋರುತ್ತಾರೆ. ಈ ಸಮಯದಲ್ಲಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಬಹುದು. ಒಂಟಿಯಾಗಿರುವ ಜನರು 2022 ರ ಆರಂಭದಲ್ಲಿ ಆಕರ್ಷಣೆಯನ್ನು ಹೊಂದಿರುತ್ತಾರೆ.

ಮಕರ ರಾಶಿ:

ಮಕರ ರಾಶಿ:

ಈಗಾಗಲೇ ಸಂಬಂಧದಲ್ಲಿರುವವರು ತಮ್ಮ ಪಾಲುದಾರರೊಂದಿಗೆ ಜೂನ್ 2022 ರಲ್ಲಿ ಉತ್ತಮ ಹೊಂದಾಣಿಕೆಯನ್ನು ಬೆಳೆಸಿಕೊಳ್ಳುತ್ತಾರೆ. ಅವರ ಸಂಬಂಧದಲ್ಲಿ ಅನ್ಯೋನ್ಯತೆ ಮತ್ತು ಉತ್ಸಾಹವು ಆಗಸ್ಟ್ ತಿಂಗಳಲ್ಲಿ ಉತ್ತುಂಗದಲ್ಲಿರುತ್ತದೆ. 2022 ರ ಅಂತ್ಯದ ವೇಳೆಗೆ ಅವರು ತಮ್ಮ ಪ್ರೀತಿಯನ್ನು ಮದುವೆಯಾಗಬಹುದು. ಅವರು ಜುಲೈ ತಿಂಗಳಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬಹುದು ಆದರೆ ಸೆಪ್ಟೆಂಬರ್ ಅಕ್ಟೋಬರ್ ತಿಂಗಳ ವೇಳೆಗೆ ವಿಷಯಗಳು ಸುಗಮವಾಗಿ ನೆಲೆಗೊಳ್ಳುತ್ತವೆ.

ಮೀನ ರಾಶಿ:

ಮೀನ ರಾಶಿ:

ಸಂಬಂಧಗಳಲ್ಲಿದ್ದವರು, ತಮ್ಮ ಬಂಧದಲ್ಲಿನ ಹೊಸ ಮೋಡಿಗೆ ಸಾಕ್ಷಿಯಾಗುತ್ತಾರೆ. ಅವರು ತಮ್ಮ ಬಂಧದಲ್ಲಿ ಸಂತೋಷದ ಹೊಸ ಆಯಾಮವನ್ನು ಕಂಡುಕೊಳ್ಳುತ್ತಾರೆ. ಈ ಅವಧಿಯಲ್ಲಿ ಅವರ ಬಂಧದ ಬಲವು ಬೆಳೆಯುತ್ತದೆ ಮತ್ತು ಅವರು ತಮ್ಮ ಸಂಬಂಧದಲ್ಲಿ ಅಚಲವಾದ ನಂಬಿಕೆಯನ್ನು ನಿರ್ಮಿಸುತ್ತಾರೆ.

English summary

List of Zodiac Signs Who Will Find Their True Love in 2022

Here we talking about List of Zodiac Signs Who Will Find Their True Love in 2022, read on
Story first published: Wednesday, December 15, 2021, 17:13 [IST]
X
Desktop Bottom Promotion