Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೆಲ ಮಹಿಳೆಯರು ಗಂಡನಿಗೆ ಮೋಸ ಮಾಡಲು ಪ್ರಮುಖ ಕಾರಣಗಳಿವು
ಒಬ್ಬ ಪುರುಷನಿಗೆ ಒಬ್ಬ ಮಹಿಳೆ ಎಂದು ಬಾಳುವುದೇ ನಮ್ಮ ಸಮಾಜದಲ್ಲಿ ಗೌರವ. ಆದರೆ ವಿವಾಹೇತರ ಸಂಬಂಧಗಳಿಗೇನು ಕೊರತೆಯಿಲ್ಲ. ಹಾಗಂತ ಈ ರೀತಿಯ ಅನೈತಿಕ ಸಂಬಂಧಗಳ ಕತೆಗಳು ಹಿಂದಿನ ಕಾಲದಿಂದಲೂ ಇವೆ. ಆದರೆ ಈಗೀನ ಕಾಲದಲ್ಲಿ ಇವುಗಳು ಸ್ವಲ್ಪ ಅಧಿಕವಾಗಿದೆ ಅಷ್ಟೇ..

ಹೆಂಡತಿಗೆ ಮೋಸ ಮಾಡುವ ಗಂಡ, ಗಂಡನಿಗೆ ಮೋಸ ಮಾಡುವ ಹೆಂಡತಿಯರ ಸಂಖ್ಯೆಗೇನು ಕಡಿಮೆಯಿಲ್ಲ. ತಮ್ಮ ವೈವಾಹಿಕ ಬದುಕಿನಲ್ಲಿ ಸಿಗದಿರುವ ಪ್ರೀತಿ, ಲೈಂಗಿಕ ಸುಖ ಅಥವಾ ಮತ್ಯಾವುದೋ ಒಂದು ಕಾರಣಕ್ಕೆ ಆಕರ್ಷಿತರಾಗಿ ಅನೈತಿಕ ಸಂಬಂಧ ಬೆಳೆಸುತ್ತಾರೆ.
ಆದರೆ ಕೆಲ ಮಹಿಳೆಯರು ಏಕೆ ತಮ್ಮ ಗಂಡಂದಿರಿಗೆ ಮೋಸ ಮಾಡುತ್ತಾರೆ ಎನ್ನುವುದಕ್ಕೆ ಮೂರು ಪ್ರಮುಖ ಕಾರಣಗಳಿವೆಯಂತೆ.

1. ಸಂಗಾತಿಯಿಂದ ಪ್ರೀತಿ ದೊರಕದೆ ಹೋದಾಗ
ಪ್ರತಿಯೊಬ್ಬ ಹೆಣ್ಣಿಗೂ ನನ್ನ ಗಂಡ ನನ್ನನ್ನು ರಾಣಿಯಂತೆ ನೋಡಿಕೊಳ್ಳಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ನನ್ನನ್ನು ಮುದ್ದು ಮಾಡಬೇಕು, ತುಂಬಾ ಪ್ರೀತಿ ಮಾಡಬೇಕು ಎಂದು ಬಯಸುತ್ತಾರೆ. ಆದರೆ ಯಾವಾಗ ತನ್ನ ಗಂಡನಿಂದ ತಾನು ಬಯಸಿದ ಪ್ರೀತಿ ಸಿಗುವುದಿಲ್ಲವೋ ಆಗ ಬೇರೆ ಯಾರಾದರೂ ತನ್ನ ಬಗ್ಗೆ ಸ್ವಲ್ಪ ಅಕ್ಕರೆ ತೋರಿದರೂ ಅವರ ಕಡೆಗೆ ಆಕರ್ಷಿತರಾಗುತ್ತಾರೆ. ಗಂಡ ನನ್ನನ್ನು ಪ್ರೀತಿಸುತ್ತಿಲ್ಲ ಎಂಬ ಕೋಪದಿಂದ ಆತನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಇನ್ನೊಬ್ಬನ ಆಕರ್ಷಣೆಗೆ ಒಳಗಾಗುತ್ತಾಳೆ.

2. ಲೈಂಗಿಕ ತೃಪ್ತಿಗಾಗಿ
ಮಹಿಳೆ ತನ್ನ ಗಂಡನಿಂದ ಬಯಸಿದ ಲೈಂಗಿಕ ತೃಪ್ತಿ ದೊರೆಯದೇ ಹೋದಾಗ ಬೇರೆ ಪುರುಷನ ಕಡೆಗೆ ಗಮನ ಹರಿಸುತ್ತಾಳೆ, ತನ್ನ ಆಸೆ ಪೂರೈಸಲು ಗಂಡನಿಗೆ ಮೋಸ ಮಾಡುತ್ತಿರುತ್ತಾಳೆ. ಮೊದಲು ಕೆಲವು ವರ್ಷ ಗಂಡನೊಂದಿಗೆ ಹೊಂದಿಕೊಂಡು ಹೋಗಲು ಪ್ರಯತ್ನಿಸುತ್ತಾಳೆ. ಆದರೆ ಆತ ಆಕೆಗೆ ಲೈಂಗಿಕ ತೃಪ್ತಿ ನೀಡದಿದ್ದರೆ ಆ ಒಂದು ಕಾರಣಕ್ಕಾಗಿ ಎಷ್ಟೋ ಮಹಿಳೆಯರು ಪರಪುರುಷನ ತೆಕ್ಕೆಗೆ ಬೀಳುತ್ತಾರೆ. ಇದರಿಂದ ತನ್ನ ಗಂಡ ಮಕ್ಕಳನ್ನು ಬಿಟ್ಟು ಆತನ ಜೊತೆ ಹೋಗಲೂ ಹೇಸುವುದಿಲ್ಲ. ಅಂತಹ ಮಹಿಳೆಗೆ ಗಂಡ ಮಕ್ಕಳಿಗಿಂತ ತನ್ನ ಖುಷಿಯೇ ಪ್ರಮುಖವಾಗಿರುತ್ತದೆ.

3. ಪರಿಸ್ಥಿತಿ
ಗಂಡ ದೈಹಿಕ ಹಿಂಸೆ ನೀಡುವುದು, ಸದಾ ಹೀಯಾಳಿಸುವುದು ಮಾಡುತ್ತಿದ್ದರೆ ಅಂತಹ ಸಂಬಂಧದಿಂದ ಹೊರಹೋಗಬೇಕು ಎಂದು ಬಯಸುತ್ತಾಳೆ.
ಇನ್ನು ಈಗೀನ ಮಾಡರ್ನ್ ಲೈಫ್‌ಸ್ಟೈಲ್ ಗಂಡ-ಹೆಂಡತಿ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಬ್ಬರಿಗೊಬ್ಬರು ಭೇಟಿಯಾಗಲು ಕೆಲವರಿಗೆ ಸಮಯವಿರುವುದಿಲ್ಲ. ಹೀಗಾಗಿ ತನ್ನ ಮಹಿಳೆ ತನ್ನ ಒಂಟಿತನ ಹೋಗಲಾಡಿಸಲು ಅನೈತಿಕ ಸಂಬಂಧ ಬೆಳೆಸುತ್ತಾಳೆ.

4. ಒಂಟಿತನ
ತಾನು ಒಂಟಿ ಎಂಬ ಭಾವನೆ ಆಕೆಗೆ ಕಾಡಲಾರಂಭಿಸಿದರೆ ಅಂತಹ ಮಹಿಳೆ ಪ್ರೀತಿಗಾಗಿ ತವಕಿಸುತ್ತಾಳೆ. ಗಂಡ ಸದಾ ಕೆಲಸದಲ್ಲಿ ಬ್ಯುಸಿಯಾಗಿರುವುದು, ಈಕೆಯ ಭಾವನೆಗಳಿಗೆ ಸ್ಪಂದಿಸದೇ ಇರುವುದು ಮಾಡಿದರೆ ಆಕೆಗೆ ಒಂಟಿತನ ಕಾಡುತ್ತದೆ. ತನ್ನ ಒಂಟಿತನ ಹೋಗಲಾಡಿಸುವ ವ್ಯಕ್ತಿ ಆಕೆಗೆ ಪರಿಚಯವಾದರೆ ಆಕೆ ಆತನ ಕಡೆಗೆ ಆಕರ್ಷಿತಳಾಗುತ್ತಾಳೆ.

5.ಬಾಹ್ಯ ಆಕರ್ಷಣೆಗೆ ಒಳಗಾಗಿ
ತನ್ನ ಪ್ರೀತಿಸುವ ಗಂಡ, ಸುಂದರ ಸಂಸಾರ ಎಲ್ಲವೂ ಇದ್ದರೂ ಕೆಲ ಮಹಿಳೆಯರು ಅನೈತಿಕ ಸಂಬಂಧ ಬೆಳೆಸುತ್ತಾರೆ. ಅದಕ್ಕೆ ಕಾರಣ ಬಾಹ್ಯ ಆಕರ್ಷಣೆ ಅಥವಾ ಆಕೆಯ ದುರಾಸೆ ಅಂತಲೂ ಹೇಳಬಹುದು. ಇಂಥ ಮಹಿಳೆಯರೂ ಎಲ್ಲವೂ ಇದ್ದರೂ ಬೇರೆ ವ್ಯಕ್ತಿಯ ಹಣ ಹಾಗೂ ಪ್ರಭಾವ ನೋಡಿ ಅವರೊಂದಿಗೆ ಅನೈತಿಕ ಸಂಬಂಧ ಬೆಳೆಸುತ್ತಾರೆ.

ಈ ಲಕ್ಷಣಗಳು ಆಕೆಯ ಮೋಸದ ಸೂಚನೆಗಳು
- ಆಕೆಯ ನಡವಳಿಕೆಯಲ್ಲಿ ವ್ಯತ್ಯಾಸ, ಏನಾದರೂ ಕೇಳಿದರೆ ಸುಳ್ಳು ಹೇಳುವುದು
- ಸದಾ ಆಕೆ ಫೋನ್‌ನಲ್ಲಿ ಬ್ಯುಸಿ ಇರುತ್ತಾಳೆ
- ಗಂಡನಿಗೆ ಕಾರಣ ಹೇಳದೆ ತುಂಬಾ ಹಣ ಡ್ರಾ ಮಾಡುವುದು
- ಏನಾದರೂ ಕಾರಣ ಹೇಳಿ ಹೊರಗೆ ಹೋಗುವುದು
- ಅವಳು ಎಲ್ಲಿಗೆ ಹೀಗಿದ್ದಳು, ಯಾರನ್ನು ಭೇಟಿಯಾದಳು ಕೇಳಿದರೆ ಒಂದೋ ಸಿಡಿಮಿಡಿಗೊಳ್ಳುತ್ತಾರೆ, ಇಲ್ಲಾ ಸುಂದರವಾದ ಸುಳ್ಳಿನ ಕತೆ ಹೇಳುತ್ತಾಳೆ
- ನಿಮ್ಮ ಬಗ್ಗೆ ಆಕೆ ಯಾವುದೇ ಆಸಕ್ತಿ ತೋರದಿದ್ದರೆ
ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಸಂಸಾರದಲ್ಲಿ ಎಡವಟ್ಟಾಗಿದೆ ಎಂಬುವುದರ ರೆಡ್ ಅಲರ್ಟ್ ಆಗಿದೆ.



Click it and Unblock the Notifications
