Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸಂಗಾತಿಗೆ ಪರ್ಸನಲ್ ಸ್ಪೇಸ್ ನೀಡಿದಾಗ ಸಂಬಂಧದಲ್ಲಿ ಏನಾಗುತ್ತೆ ಗೊತ್ತಾ?
ನಾನು ಕಾಲ್ ಮಾಡಿದಾಗ ಯಾರ್ ಜೊತೆ ಮಾತಾಡ್ತಿದ್ದೆ. ನಾನ್ ಕಾಲ್ ಮಾಡಿದೀನಿ ಅಂತ ಗೊತ್ತಿದ್ರೂ ಯಾಕ್ ಪಿಕ್ ಮಾಡಿಲ್ಲ.
ಸಾರಿ, ನಂಗೆ ಫ್ರೆಂಡ್ ಕಾಲ್ ಮಾಡಿದ್ಲು. ಅವಳ ಜೊತೆ ಮಾತಾಡ್ತಿದ್ದೆ..
ನಿನಗೆ ನನಗಿಂತ ನಿನ್ ಫ್ರೆಂಡ್ ಕಾಲೇ ಜಾಸ್ತಿ ಆಯ್ತು ಅಲ್ವಾ?
ಅಯ್ಯೋ. ಹಂಗಲ್ಲ, ತುಂಬಾ ಟೈಮ್ ಆದ್ಮೇಲೆ ಕಾಲ್ ಮಾಡಿದ್ಲು, ಸೋ ಮಾತಾಡ್ಡೆ, ಯಾವಾಗ್ಲೂ ನಿನ್ ಜೊತೆನೇ ಮಾತಡ್ತಾ ಇರಲ್ವಾ?.. ಇದೇ ಈ ಕಾಲದ ರಿಲೇಷನ್‌ಶಿಪ್‌ನಲ್ಲಿ ಇರೋ ಪ್ರತೀ ಹುಡುಗ-ಹುಡುಗಿ ಆಡೋ ಮಾತು. ಇದ್ರಿಂದ ಮುಂದೆ ಇಬ್ಬರಲ್ಲೂ ಮನಸ್ತಾಪ ಶುರುವಾಗಿ ಅದು ಕೊನೆಗೆ ಬ್ರೇಕ್‌ಪ್ ಹಂತಕ್ಕೂ ತಲುಪಿರುವ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೆ ಮುಖ್ಯ ಕಾರಣ ಸಂಗಾತಿ ನನ್ನವರು ಮಾತ್ರ ಅನ್ನೋ ಮೂಢನಂಬಿಕೆ. ನಿಮ್ಮ ಸಂಗಾತಿ ನಿಮಗೆ ಸಿಗೋ ಮೊದಲು ಅವರು ಒಬ್ಬ ಮಗಳು, ಮಗ, ಅಣ್ಣ, ತಂಗಿ, ಗೆಳೆಯ, ಗೆಳತಿಯರು ಇತ್ಯಾದಿ. ನಿಮಗೆ ಸಿಕ್ಕಾದ್ಮೇಲೆ ನಿಮ್ಮ ಸಂಗಾತಿ ಅಷ್ಟೇ ಅನ್ನೋ ಭಾವನೆ ಮೂಡುಸವಂತೆ ಮಾಡುವುದು ಒಂದು ತರಹದ ಹಿಂಸೆಯೇ ಸರಿ. ನಿಮ್ಮ ಸಂಗಾತಿಯ ಪರ್ಸನಲ್ ಲೈಫ್‌ಗೂ ಒಂದು ಸ್ಪೇಸ್ ಕೊಡಿ. ಆಗ ಮಾತ್ರ ನಿಮ್ಮ ಸಂಬಂಧ ಭದ್ರವಾಗಿರುತ್ತೆ. ನೀವು ರಿಲೇಷನ್‌ಶಿಪ್‌ನಲ್ಲಿ ಇರುವಾಗಲೇ ಎಲ್ಲರಿಂದ ದೂರ ಮಾಡಿದ್ರೆ, ಮುಂದೆ ಮದುವೆವರೆಗೂ ನಿಮ್ಮ ಸಂಗಾತಿಯ ಮನಸ್ಸು ಬರುವುದಿಲ್ಲ. ಹಾಗಾಗಿ ನಿಮ್ಮ ಸಂಗಾತಿಗೆ ಯಾಕೆ ಪರ್ಸನಲ್ ಸ್ಪೇಸ್ ಕೊಡಬೇಕು ಅನ್ನೋದಿಕ್ಕೆ ಕಾರಣಗಳು ಇಲ್ಲಿವೆ.
ಇಲ್ಲಿ ಸಂಬಂಧದಲ್ಲಿ ಸ್ಥಳಾವಕಾಶ ನೀಡಬೇಕು ಎನ್ನಲು ಕಾರಣಗಳು ಇಲ್ಲಿವೆ

1. ಉಸಿರುಕಟ್ಟುವ ಸಂಬಂಧ
ನಿಮ್ಮ ಸಂಗಾತಿಯ ಜೊತೆಗೆ ಅತಿಯಾಗಿ ಸಮಯ ಕಳೆಯುವುದರಿಂದ ಇಬ್ಬರಲ್ಲೂ ಉಸಿರು ಗಟ್ಟಿಸುವಂತಹ ಭಾವನೆ ಮೂಡುತ್ತದೆ. ಯಾಕಂದ್ರೆ ಪ್ರತಿಯೊಬ್ಬರಿಗೂ ಅವರದೇ ಆದ ಪರ್ಸನಲ್ ಲೈಫ್ ಇರುತ್ತೆ. ಅದಕ್ಕೂ ಟೈಮ್ ಕೊಡಬೇಕಾಗಿರೋ ಅವಶ್ಯಕತೆ ಇರುತ್ತೆ. ಅದನ್ನು ನೀವು ಕಸಿದುಕೊಂಡರೆ ಉಸಿರುಗಟ್ಟುವಂತಹ ಭಾವನೆ ಮೂಡುತ್ತದೆ. ಸಮಯ ನೀಡುವುದು ನಿಮಗೆ ಮಾತ್ರ ಅಲ್ಲ ನಿಮ್ಮ ಸಂಬಂಧಕ್ಕೂ ಒಳ್ಳೆಯದು. ನಿಮ್ಮ ಸಂಗಾತಿಗೆ ಉಸಿರು ಗಟ್ಟುವಂತೆ ಯಾವತ್ತಿಗೂ ಮಾಡಬೇಡಿ.

2. ಪರ್ಸನಲ್ ಸ್ಪೇಸ್ ನೀಡಿದಾಗ ಏನಾಗುತ್ತೆ?
ನೀವು ನಿಮ್ಮ ಸಂಗಾತಿಗೆ ಪರ್ಸನಲ್ ಸ್ಪೇಸ್ ನೀಡಿದಾಗ ಅವರಲ್ಲೂ ಒಂದು ರೀತಿಯ ಆತ್ಮವಿಶ್ವಾಸ ಬೆಳೆಯುತ್ತೆ. ನನ್ನ ಗೆಳೆಯ-ಗೆಳತಿ ನಂಬಿಕೆ ಇಟು ಹೊರಹೊಗಲು ಅನುಮತಿ ನೀಡಿದ್ದಾರೆ ಅನ್ನೋ ಸಮಾಧಾನವೂ ಇರುತ್ತದೆ. ಇದು ನಿಮ್ಮ ಲೈಫ್ ಹಾಗೂ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ನಂಬಿಕೆಯನ್ನು ಬಲಗೊಳಿಸುತ್ತದೆ.

3. ಅನುಮಾನ ಮೂಡುವುದೇ?
ನಿಮ್ಮ ಸಂಗಾತಿ ರಾತ್ರಿ ವೇಳೆ ಹೊರಹೋದಾಗ ನಿಮ್ಮಲ್ಲಿ ಅನುಮಾನ ಮೂಡುವುದೇ? ನಿಮ್ಮ ಸಂಗಾತಿಯ ಜೊತೆಗೆ ಟೈಮ್ ಕಳೆಯಲು ಆಗದೇ ಇದ್ದಾಗ ಕೆಲವೊಮ್ಮೆ ಅನುಮಾನ ಮೂಡುತ್ತದೆ. ನನ್ನ ಜೊತೆ ಟೈಮ್ ಕಳೀತಾ ಇಲ್ಲ ಎಂಬ ಬೇಜಾರು ಶುರುವಾಗಬಹದು. ಆದರೆ ಅದು ಸರಿಯಲ್ಲ, ಯಾಕಂದ್ರೆ ಅವರಿಗೂ ಬೇರೊಂದು ಲೈಫ್ ಇದ್ಯಲ್ಲಾ? ಅದನ್ನ ನಾವು ಯಾವತ್ತೂ ಕಿತ್ತುಕೊಳ್ಳಬಾರುದು. ಒಬ್ಬರಿಗೊಬ್ಬರು ಅರಿತು ಅವರ ಸುಖ-ಸಂತೋಷಗಳಿಗೂ ಸ್ಪೇಸ್ ನಿಡಬೇಕು.

4. ಸಂಬಂಧದ ಹೊರತಾಗಿಯೂ ಅನೇಕ ವಿಷಯಗಳಿವೆ
ನಿಮ್ಮ ಸಂಬಂಧದ ಹೊರತಾಗಿಯೂ ಜಗತ್ತಿನಲ್ಲಿ ಆಸಕ್ತಿದಾಯಕ ವಿಚಾರಗಳು ಬೇಕಾದಷ್ಟಿವೆ. ನೀವು ಅವುಗಳಿಗೂ ಮನಸ್ಸು ನೀಡಿದರೆ, ನಿಮ್ಮಿಬ್ಬರಲ್ಲಿ ವಿಷಯಗಳನ್ನು ಹಂಚಿಕೊಳ್ಳಲು ನೆರವಾಗುತ್ತದೆ. ನೀವಿಬ್ಬರೂ ಯಾವಾಗಲೂ ಒಟ್ಟಿಗೇ ಇದ್ದರೆ ನಿಮ್ಮ ಬಳಿ ಮಾತಾಡಲು ಅಥವಾ ಶೇರ್ ಮಾಡಿಕೊಳ್ಳಲು ಯಾವುದೇ ವಿಚಾರಗಳಿರುವುದಿಲ್ಲ. ನಿಮಗಾಗಿ ಒಂದು ಟೈಮ್ ಫಿಕ್ಸ್ ಮಾಡಿಕೊಂಡು ಹೊರ ಜಗತ್ತಿನ ಜೊತೆ ಮಿಂಗಲ್ ಆದ್ರೆ ನಿಮ್ಮ ಮನಸ್ಸಿಗೂ ರಿಲಾಕ್ಸ್ ಹಾಗೂ ನಿಮ್ಮ ಸಂಬಂಧಕ್ಕೂ ಒಳ್ಳೆಯದು.

5. ನಿಮ್ಮ ಸಂಗಾತಿಗೂ ಅವರದ್ದೇ ಆದ ಸ್ನೇಹಿತರು ಇರುತ್ತಾರೆ
ನೀವೆಷ್ಟೇ ನಿಮ್ಮ ಸಂಗಾತಿಯನ್ನು ಪ್ರೀತಿಸಿ ಆದರೆ ಆ ಪ್ರೀತಿ ಸಿಗುವ ಮುನ್ನ ಅವರೊಬ್ಬ ವ್ಯಕ್ತಿಯಾಗಿದ್ದರು. ಅವರಿಗೂ ಒಂದು ಲೈಫ್ ಇತ್ತು ಎಂಬುದನ್ನು ಯಾವತ್ತಿಗೂ ಮರೆಯಬೇಡಿ. ಸಂಬಂಧದ ಹೆಸರಲ್ಲಿ ಅಥವಾ ಪ್ರೀತಿ ಹೆಸರಲ್ಲಿ ನಿಮ್ಮತನ್ನವನ್ನು ಕಳೆದುಕೊಂಡು ವರ್ತಿಸಬೇಡಿ. ಪ್ರೀತಿ ಜೀವನದ ಒಂದು ಭಾಗವಾಗಬೇಕೆ ಹೊರತು, ಪ್ರೀತಿಯೇ ಜೀವನವಾಗಬಾರದು.

6. ಖುಷಿಗೆ ವೈಯಕ್ತಿಕತೆ ತುಂಬ ಮುಖ್ಯ
ನೀವು ಯಾರನ್ನೇ ಎಷ್ಟೇ ಹಚ್ಚಿಕೊಂಡಿದ್ದರೂ ನಿಮಗೆ ವೈಯಕ್ತಿಕ ಜೀವನ ತುಂಬಾ ಮುಖ್ಯ. ಅದನ್ನು ಪ್ರೀತಿ ಹೆಸರಲ್ಲಿ ಕಸಿದುಕೊಳ್ಳುವುದನ್ನು ಯಾರೂ ಸಹಿಸುವುದಿಲ್ಲ. ನಿಮ್ಮ ವೈಯಕ್ತಿ ಜೀವನವನ್ನು ಎಂಜಾಯ್ ಮಾಡಲು ಅಥವಾ ಅನುಭವಿಸಲು ಅನುಮತಿ ಸಿಗದೇ ಇದ್ದಾಗ ನಿಮ್ಮಲ್ಲಿ ವಾದಗಳ ಹುಟ್ಟಿಕೊಳ್ಳುತ್ತವೆ. ನೀವು ಖುಷಿಗರಬೇಕು ಅಥವಾ ನಿಮ್ಮ ಸಂಗಾತಿ ಸಂತೋಷವಾಗಿರಬೇಕು ಅಂದ್ರೆ ನಿಮ್ಮ ವೈಯಕ್ತಿಕ ಜೀವನಕ್ಕೂ ಟೈಮ್ ಕೊಡಿ.

7.ಅತೀಯಾದ್ರೆ ಅಮೃತನೂ ವಿಷ
ಹೌದು, ಯಾವುದೇ ವಿಚಾರವಾಗಲೀ ಅತೀಯಾದ್ರೆ ಅಪಾರಕಾರಿಯೇ. ಹಾಗೆಯೇ ಈ ಸಂಬಂಧದ ಕೂಡ. ಯವಾಗಲೂ ಜೊತೆನೇ ಇರಬೇಕು, ನನ್ನ ಜೊತೆ ಅಷ್ಟೇ ಮಾತನಾಡಬೇಕು, ನನ್ನ ಬಗ್ಗೆನೇ ಯೋಚನೆ ಮಾಡಬೇಕು ಅನ್ನೋದು ಎಲ್ಲ ಪ್ರೇಮಿಗಳ ಆಸೆ. ಆದ್ರೆ ಇದ್ಯಾವುದೂ ಅತೀ ಆಗ್ಬಾರ್ದು. ಯಾಕಂದ್ರೆ ಹೀಗೆ ಹೇಳ್ದಾಗ ನಿಮ್ಮ ಸಂಗಾತಿಗೆ ಕಷ್ಟ ಆಗಬಹುದು.



Click it and Unblock the Notifications