Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಗಂಡನಿಗಿಂತ ಹೆಂಡತಿ ದೊಡ್ಡವಳಾದರೆ ಅವರ ಸಂಬಂಧ ಹೀಗಿರುತ್ತದೆ
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅಂತಾರೆ. ಗಂಡು-ಹೆಣ್ಣು ಒಬ್ಬರೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಜೀವನ ನಡೆಸಿದ್ರೆ ಮಾತ್ರ ಮದುವೆ ಯಶಸ್ವಿಯಾಗಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಪ್ರೇಮವಿವಾಹವೇ ಹೆಚ್ಚು ಪ್ರಚಲಿತದಲ್ಲಿರೋದು.

ಅದ್ರಲ್ಲೂ ಇತ್ತೀಚಿನ ಯುವಕರು ವಯಸ್ಸಿನಲ್ಲಿ ತಮಗಿಂತ ಹಿರಿಯ ಮಹಿಳೆಯರನ್ನು ಮದುವೆಯಾಗಲು ಆಸಕ್ತಿ ತೋರಿಸ್ತಿದ್ದಾರೆ. ಅಷ್ಟಕ್ಕು ಹಿರಿಯ ಮಹಿಳೆಯರನ್ನು ಮದುವೆಯಾದ್ರೆ ಉತ್ತಮ ಜೀವನ ನಡೆಸಬಹುದಾ? ವೈವಾಹಿಕ ಜೀವನ ಚೆನ್ನಾಗಿರುತ್ತಾ? ಈ ಸ್ಟೋರಿ ನೋಡಿ.
ಪುರುಷರು ತಮಗಿಂತ ವಯಸ್ಸಿನಲ್ಲಿ ಹಿರಿಯವರನ್ನು ಮದುವೆಯಾಗಲು ಕಾರಣಗಳು
ಮದುವೆ ಅನ್ನೋದು ನಮ್ಮ ಇಚ್ಛೆಗೆ ಒಳಪಟ್ಟಿರೋದು ಒತ್ತಾಯ ಪೂರ್ವಕವಾದ ಮದುವೆಯಲ್ಲಿ ಸುಖವಾಗಿ ಜೀವನ ನಡೆಸೋದು ಕಷ್ಟ. ಮದುವೆಗೆ ವಯಸ್ಸು ಯಾವತ್ತು ಅಡ್ಡಿ ಆಗೋದಿಲ್ಲ. ಹಾಗಾದ್ರೆ ವಯಸ್ಸಿನಲ್ಲಿ ಹಿರಿಯರನ್ನು ಮದುವೆಯಾದ್ರೆ ಆಗೋ ಲಾಭಗಳೇನು..? ನೋಡೋಣ

1. ಮಹಿಳೆಯರು ಹೆಚ್ಚು ಪ್ರಬುದ್ಧರಾಗಿರುತ್ತಾರೆ
ಪ್ರಬುದ್ಧತೆ ಅಥವಾ ಮೆಚ್ಯೂರಿಟಿ ಸಂಬಂಧಲ್ಲಿ ತುಂಬಾನೇ ಮುಖ್ಯವಾಗಿರುತ್ತದೆ. ತಮಗಿಂತ ಹಿರಿಯ ಮಹಿಳೆಯರನ್ನು ಮದುವೆಯಾದಾಗ ಕೆಲವೊಂದು ಲಾಭಗಳೇ ಹೆಚ್ಚು ಯಾಕಂದ್ರೆ ಪುರುಷನನ್ನು ಆಕೆ ಕೈ ಹಿಡಿದು ನಡೆಸುವಷ್ಟು ಪ್ರಬುದ್ಧಳಾಗಿರುತ್ತಾಳೆ. ತಪ್ಪಾದಾಗ ತಿದ್ದಿ ಹೇಳುತ್ತಾಳೆ ಜೊತೆಗೆ ಎಂತಹ ಸಂದರ್ಭ ಎದುರಾದರೂ ಕೂಡ ತಾಳ್ಮೆಯಿಂದ ಎಲ್ಲವನ್ನು ಆಲಿಸಿ ಸರಿಯಾದ ಮಾರ್ಗದರ್ಶನ ನೀಡುತ್ತಾಳೆ.
2. ಮಹಿಳೆಯರು ಸ್ವತಂತ್ರರಾಗಿರುತ್ತಾರೆ
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ವತಂತ್ರರಾಗಿ ಬದುಕಲು ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರು ಹಿರಿಯರಾಗಿದ್ದರೆ ಆರ್ಥಿಕವಾಗಿ ಸಬಲರಾಗಿರುತ್ತಾರೆ. ಮತ್ತು ಅವರು ಪುರುಷರ ಮೇಲೆ ಅವಲಂಬಿರಾಗಲು ಇಷ್ಟ ಪಡೋದಿಲ್ಲ. ಜೊತೆಗೆ ಎಂತಹ ಕಠಿಣ ಸಂದರ್ಭದಲ್ಲೂ ಅವರು ಎದೆ ಗುಂದುವುದಿಲ್ಲ. ಕೆಲವೊಂದು ಸಮಯದಲ್ಲಿ ಆಕೆಯೆ ಗಂಡನಿಗೆ ಸಾಂತ್ವಾನ ಹೇಳಿವಷ್ಟು ಪ್ರಬಲಳಾಗಿರುತ್ತಾಳೆ.

3. ಸುಂದರ ನೆನಪುಗಳನ್ನು ಸೃಷ್ಟಿಸುತ್ತಾರೆ
ಪುರುಷರು ತಮಗಿಂತ ಹಿರಿಯ ಸಂಗಾತಿಯೊಂದಿಗೆ ಸುಂದರ ನೆನಪುಗಳನ್ನು ಸೃಷ್ಟಿ ಮಾಡಬಹುದು. ಮಹಿಳೆ ಪ್ರಬುದ್ಧಳಾಗಿದ್ದಾಗ ಆಕೆ ತನ್ನ ಸಂಗಾತಿಯ ಚೇಷ್ಟೇಯನ್ನು ಸಹಿಸಿಕೊಂಡು ಆಕೆಯನ್ನು ಗೈಡ್ ಕೂಡ ಮಾಡ್ತಾಳೆ. ಹಾಗೂ ಇಂತಹ ಸಂಬಂಧದಲ್ಲಿ ಮನಸ್ತಾಪಗಳು ಹೆಚ್ಚಾಗಿ ಇರೋದಿಲ್ಲ. ಪುರುಷ ತನ್ನ ಸಂಗಾತಿಯೊಂದಿಗೆ ಸುಮಧುರ ನೆನಪುಗನ್ನು ಸೃಷ್ಟಿಸಬಹುದು.
4. ನಿಮ್ಮ ಸಂಗಾಂತಿಯಿಂದ ಕಲಿಯಬಹುದು
ಪುರುಷರಿಗಿಂತ ಮಹಿಳೆಯರು ಯಾವಾಗಲು ಪ್ರಬುದ್ಧರಾಗಿರುತ್ತಾರೆ. ವಯಸ್ಸಿನಲ್ಲಿ ಹಿರಿಯ ಮಹಿಳೆಯರು ಪ್ರತಿ ವಿಷಯದಲ್ಲೂ ಪುರುಷನಿಗೆ ಮಾರ್ಗದರ್ಶನ ನೀಡುತ್ತಾಳೆ. ಅಷ್ಟೇ ಅಲ್ಲ, ದಾಂಪತ್ಯ ಜೀವನದಲ್ಲಿ ಪುರುಷರು ತನ್ನ ಪತ್ನಿಯಿಂದ ನಿಧಾನವಾಗಿ ಎಲ್ಲವನ್ನೂ ಜವಾಬ್ದಾರಿಯಿಂದ ಕಲಿತುಕೊಳ್ಳುತ್ತಾರೆ.

5. ಮಕ್ಕಳನ್ನು ಪಡೆಯಲು ಬಯಸೋದಿಲ್ಲ
ಸಾಮಾನ್ಯವಾಗಿ ಮೊದಲೇ ಮದುವೆಯಾಗಿ ಮಕ್ಕಳಿದ್ದ ಮಹಿಳೆಯರು ಮತ್ತೆ ಎರಡನೇ ಮದುವೆಯಿಂದ ಮಕ್ಕಳನ್ನು ಪಡೆಯಲು ಬಯಸುವುದಿಲ್ಲ. ಎರಡನೇ ಪತಿಯೊಂದಿಗೆ ಖಷಿಯಾಗಿರಲು ಇಚ್ಚಿಸುತ್ತಾರೆ. ಹೀಗಾಗಿ ಮಕ್ಕಳೇ ಬೇಡ ಎನ್ನುವ ಪುರುಷರಿಗೆ ಇದು ಅನುಕೂಲವಾಗಲಿದೆ.
6. ಮಹಿಳೆಯರು ಭಾವನೆಗಳನ್ನು ನಿಯಂತ್ರಿಸುತ್ತಾರೆ
ಸಂಗಾತಿಗಿಂತ ಹಿರಿಯರಾದ ಮಹಿಳೆಯರು ತಮ್ಮ ಭಾವನೆಗಳನ್ನು ನಿಯಂತ್ರಿಸುತ್ತಾರೆ. ಸಾಮಾನ್ಯವಾಗಿ ಅವರು ಭಾವನಾತ್ಮಕ ಜೀವಿ ಆಗಿರುವುದಿಲ್ಲ. ಯಾವುದೇ ಕಠಿಣ ಪರಿಸ್ಥಿತಿಯಾದರೂ ಸಹ ಎದೆಗುಂದುವುದಿಲ್ಲ. ಮತ್ತು ಸುಲಭವಾಗಿ ಜಗ್ಗುವ ಮಹಿಳೆಯರು ಇವರಲ್ಲ. ಆದ್ರೆ ಸಾಮಾನ್ಯವಾಗಿ ಕಿರಿಯ ಮಹಿಳೆಯರು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಹೀಗಾಗಿ ಹಿರಿಯ ಮಹಿಳೆಯರನ್ನು ಮದುವೆಯಾಗುವುದು ಉತ್ತಮ.

7. ಸ್ಥಿರ ಮತ್ತು ಸಂರಕ್ಷಿತ ಜೀವನ ನಡೆಸಬಹದು
ಹಿರಿಯ ಮಹಿಳೆಯಾದವಳು ಪುರುಷನ ಎಲ್ಲಾ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಆಕೆ ಪದೇ ಪದೇ ಬೇರೆ ಸಂಬಂಧಗಳಿಗೆ ಸ್ವಿಚ್ ಆಗೋದಿಲ್ಲ. ಒಂದೇ ಸಂಬಂಧಕ್ಕೆ ಸೀಮಿತಳಾಗಿರುತ್ತಾಳೆ. ತನ್ನ ಸಂಗಾತಿಗೆ ಸುರಕ್ಷಿತ ಭಾವನೆ ಮೂಡುವಂತೆ ಮಾಡುತ್ತಾಳೆ.
8. ಕಾಳಜಿ, ಆತ್ಮೀಯತೆ ಹೆಚ್ಚು
ಸಾಮಾನ್ಯವಾಗಿ ಮಹಿಳೆ ವಯಸ್ಸಿನಲ್ಲಿ ದೊಡ್ಡವರಾಗಿದ್ದಾಗ ಸಂಗಾಂತಿಯನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಸುಖ-ದು:ಖ, ನೋವು-ನಲಿವಿನಲ್ಲಿ ಜೊತೆಯಾಗುತ್ತಾರೆ. ಭಾವನಾತ್ಮಕವಾಗಿ ಕುಗ್ಗಿದಾಗ ತಾಯಿಯಂತೆ ದೈರ್ಯ ತುಂಬುತ್ತಾರೆ. ಇಲ್ಲಿ ನಾವು ಏನು ತಿಳಿದುಕೊಳ್ಳಬೇಕು ಅಂದ್ರೆ ಹಿರಿಯ ಮಹಿಳೆಯರು ಪತಿಯೊಂದಿಗೆ ಹೆಚ್ಚು ಆತ್ಮೀಯರಾಗಿರುತ್ತಾರೆ.
ಮದುವೆಯಾಗುವುದಕ್ಕೆ ಇಂತಹದ್ದೇ ಮಿತಿ ಅನ್ನೋದಿಲ್ಲ. ಇದು ಹೃದಯ-ಹೃದಯಗಳನ್ನು ಬೆಸೆಯುವ ಬಂಧ. ನಮಗೆ ಇಂತವರ ಮೇಲೆ ಪ್ರೀತಿ ಚಿಗುರೊಡೆಯುತ್ತೆ ಅಂತ ಹೇಳೋದಿಕ್ಕಾಗೋಲ್ಲ ಒಟ್ಟಿನಲ್ಲಿ ದಾಂಪತ್ಯ ಜೀವನ ಸುಖವಾಗಿರಬೇಕು ಅಷ್ಟೇ.



Click it and Unblock the Notifications