Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಸಂಗಾತಿ ನಿರುದ್ಯೋಗಿಯಾಗಿದ್ದರೆ ಸಂಸಾರದಲ್ಲಿ ತಪ್ಪಿದ್ದಲ್ಲ ಈ ಸಮಸ್ಯೆ
ಯಾವುದೇ ಉದ್ಯೋಗವಿಲ್ಲ, ಬ್ಯುಸ್‌ನೆಸ್ ಇಲ್ಲ, ವರಮಾನ ಇಲ್ಲ ಎಂದಾದರೆ ಅಂಥವರ ಸಂಸಾರದಲ್ಲಿ ತಾಪತ್ರೆ ತಪ್ಪಿದ್ದಲ್ಲ. ಉದ್ಯೋಗಂ ಪುರುಷ ಲಕ್ಷಣಂ ಅಂತಾರೆ, ಯಾವುದೇ ಕೆಲಸ ಮಾಡದೆ, ಮನೆ ಖರ್ಚಿಗೆ ದುಡ್ಡು ನೀಡದೇ ಇದ್ದರೆ ಆರ್ಥಿಕ ಸಂಕಟ ಉಂಟಾಗುವುದು ಮಾತ್ರವಲ್ಲ, ಸಂಬಂಧ ಕೂಡ ಹಾಳಾಗುವುದು. ಯಾವುದೇ ಹೆಣ್ಣಾಗಿರಲಿ ತನ್ನ ಗಂಡ ದುಡಿದು ಸಂಪಾದಿಸಬೇಕೆಂದೇ ಬಯಸುತ್ತಾಳೆ, ದುಡ್ಡಿಗಾಗಿ ಮತ್ತೊಬ್ಬರ ಎದುರಿಗೆ ಕೈ ಚಾಚುವುದು ಅವಳ ಸ್ವಾಭಿಮಾನಕ್ಕೆ ಅಡ್ಡಿಯಾಗುತ್ತೆ, ಹೀಗಾಗಿ ಉದ್ಯೋಗ ತುಂಬಾನೇ ಮುಖ್ಯವಾಗಿರುತ್ತೆ.
ಕೆಲವೊಮ್ಮೆ ನಾವು ಯಾವುದೋ ಕೆಲಸ ಮಾಡುತ್ತಿರುತ್ತೇವೆ, ಯಾವುದೋ ಒಂದು ಕಾರಣ ಆ ಕೆಲಸ ಬಿಡಬೇಕಾಗುತ್ತೆ, ಮತ್ತೊಂದು ಕೆಲಸ ಸಿಗುವುದು ಸುಲಭವಾಗಿರಲ್ಲ, ಹಾಗಂತ ಸುಮ್ಮನೆ ಕೂರಲೇಬಾರದು. ಇಲ್ಲಿದ್ದರೆ ಮನೆಯಲ್ಲಿ ಜಗಳ ಶುರುವಾಗುವುದು. ಏಕೆಂದರೆ ಸಂಬಂಧದಲ್ಲಿ ಪ್ರೀತಿ ಮಾತ್ರ ಸಾಲದು, ಹಣನೂ ಅಷ್ಟೇ ಅವಶ್ಯಕವಾಗಿರುತ್ತೆ. ತುಂಬಾ ಲಕ್ಷುರಿ ಅಲ್ಲದಿದ್ದರೆ ಒಂದು ಒಳ್ಳೆಯ ಜೀವನ ನಡೆಸಲು ಹಣ ಬೇಕೇಬೇಕು. ಮನೆಯಲ್ಲಿ ಗಂಡಸು ದುಡಿಯದಿದ್ದರೆ ಆ ಮನೆಯ ಆರ್ಥಿಕ ಸ್ಥಿತಿಯ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತದೆ.
ಬರೀ ಗಂಡಸರು ಮಾತ್ರ ದುಡಿದರೆ ಸಾಕಾ? ಹೆಂಗಸರು ದುಡಿಯುವುದು ಬೇಡ್ವೆ ಎಂದು ಕೇಳುವುದಾದರೆ ಅದು ಅವರ ಆಯ್ಕೆಗೆ ಸಂಬಂಧಪಟ್ಟದ್ದು ಆಗಿರುತ್ತೆ. ಆದರೆ ಆರ್ಥಿಕ ಭದ್ರತೆ ಬಗ್ಗೆ ಪ್ರತಿಯೊಬ್ಬ ಮಹಿಳೆಯೂ ಯೋಚಿಸಲೇಬೇಕು. ಏಕೆಂದರೆ ಮುಂದೇನಾಗುತ್ತೋ ಯಾರಿಗೂ ಗೊತ್ತಿರಲ್ಲ, ಹಾಗಾಗಿ ಹೊರಗಡೆ ದುಡಿಯಲಿ, ಹೌಸ್ ವೈಫ್ ಆಗಿರಲಿ ಅವಳಿಗೆ ಅವಳದ್ದೇ ಆದ ಆರ್ಥಿಕ ಭದ್ರತೆ ಬೇಕು. ಕೆಲವು ಮಹಿಳೆಯರನ್ನು ನೋಡುತ್ತೇವೆ, ಮನೆಯ ಎಲ್ಲಾ ಆರ್ಥಿಕ ಜವಾಬ್ದಾರಿ ಗಂಡ ನೋಡಿಕೊಳ್ಳುತ್ತಿರುತ್ತಾನೆ, ಆದರೆ ಅವನು ಅಕಾಲಿಕ ಮರಣವೊಂದಿದಾಗ ಅಥವಾ ಅವರಿಗೆ ಕಾಯಿಲೆ ಬಂದು ದುಡಿಮೆ ನಿಂತಾಗ ಆ ಮನೆಯ ಪರಿಸ್ಥಿತಿ ತುಂಬಾನೇ ದುಃಸ್ಥರವಾಗುತ್ತೆ. ಅದೇ ಪತ್ನಿ ಕೂಡ ಆರ್ಥಿಕ ಸ್ವಾಲಂಬಿಯಾಗಿದ್ದರೆ ಬದುಕಿನಲ್ಲಿ ಅಭದ್ರತೆ ಕಾಡುವುದು ಕಡಿಮೆ.
ಆದ್ದರಿಂದ ಮಹಿಳೆಯರು ವರಮಾನ ಚಿಕ್ಕದಾಗಿರಲಿ, ಹೆಚ್ಚಾಗಿರಲಿ ತಮ್ಮ ಆರ್ಥಿಕ ಭದ್ರತೆಯನ್ನು ತಾವೇ ನೋಡಿಕೊಳ್ಳಬೇಕು.

ಸಂಸಾರದಲ್ಲಿ ಉದ್ಯೋಗ ತುಂಬಾ ಮುಖ್ಯವೇ?
ಹೌದು ಹೆಣ್ಣಾಗಲಿ, ಗಂಡಾಗಲಿ ಆರ್ಥಿಕ ಭದ್ರತೆ ತುಂಬಾನೇ ಮುಖ್ಯವಾಗುತ್ತೆ. ಇಬ್ಬರು ದುಡಿದರೆ ತಮ್ಮ ಖರ್ಚುಗಳು ಸರಿದೂಗಿಸಿಕೊಂಡು ಹೋಗಬಹುದು, ಮತ್ತಷ್ಟು ಉತ್ತಮ ಜೀವನ ನಡೆಸಬಹುದು. ಎಷ್ಟೋ ಹೌಸ್‌ವೈಫ್ಸ್ ಮನೆಯಲ್ಲಿಯೇ ಇದ್ದು ತಮಗೆ ಗೊತ್ತಿರುವ ವಿದ್ಯೆ ಅಥವಾ ಕಲೆಯಿಂದ ಹಣವನ್ನು ಗಳಿಸುತ್ತಿದ್ದಾರೆ. ಆರ್ಥಿಕ ಸ್ವಾಲಂಬಿಯಾಗುವ ಕಡೆ ಪ್ರತಿಯೊಬ್ಬರೂ ಗಮನ ನೀಡಿ.

ಪತ್ನಿ ದುಡಿಯದಿದ್ದರೆ
ನಿಮ್ಮ ಪತ್ನಿ ಹೊರಗಡೆ ದುಡಿಯುತ್ತಿಲ್ಲ ಎಂದಾದರೆ ಅವಳೇನೂ ಮಾಡುತ್ತಿಲ್ಲ ಎಂದು ನೀವು ಭಾವಿಸಿದರೆ ಅದು ತಪ್ಪು. ನೀವು ಮನೆಗೆ ಬರುವಾಗ ರುಚಿಯಾದ ಅಡುಗೆ ಸಿಗುತ್ತಿದೆ, ಮನೆ ಸ್ವಚ್ಛವಾಗಿದೆ, ನಿಮ್ಮ ಬಟ್ಟೆಗಳು ಶುಭ್ರವಾಗಿವೆ ಎಂದಿರುವಾಗ ಆ ಕ್ರೆಡಿಟ್ ಅವಳಿಗೆ ಕೊಡುವುದಕ್ಕೆ ಮರೆಯಬೇಡಿ. ಅವಳಿಗೆ ಏನಾದರೂ ಮಾಡಬೇಕೆಂಬ ಅಭಿರುಚಿ ಇದೆಯೇ ಎಂದು ತಿಳಿದು ಅವಳ ಆಸೆಗೆ ಒತ್ತಾಸೆಯಾಗಿ ನಿಂತರೆ ಅವಳು ಕೂಡ ಆರ್ಥಿಕ ಸ್ವಾಲಂಬಿಯಾಗುತ್ತಾಳೆ.

ಪತಿ ದುಡಿಯದಿದ್ದರೆ
ಯಾವುದೋ ಕಾರಣಕ್ಕೆ ಪತಿ ಕೆಲಸ ಕಳೆದುಕೊಂಡಿದ್ದಾರೆ ಅವರು ದುಡಿಯುತ್ತಿಲ್ಲ ಎಂದಾದರೆ ಅವರು ಮತ್ತಷ್ಟು ಮಾನಸಿಕವಾಗಿ ಕುಸಿಯುವ ಮಾತುಗಳನ್ನಾಡಬೇಡಿ, ಈ ಕೆಲಸವಿಲ್ಲದಿದ್ದರೆ ಮತ್ತೊಂದು ಸಿಗುತ್ತೆ ಎಂದು ಹೇಳಿ, ನಿಮ್ಮ ಬೆಂಬಲ, ಮಾತುಗಳಿಂದ ಅವರ ಆತ್ಮವಿಶ್ವಾಸ ಹೆಚ್ಚಿಸಿ, ಖಂಡಿತ ಹೊಸದೊಂದು ಕೆಲಸ ಹುಡುಕುವ ಅಥವಾ ಬ್ಯುಸ್‌ನೆಸ್ ಮಾಡುವತ್ತ ಮನಸ್ಸು ಮಾಡುತ್ತಾರೆ.
ಒಮ್ಮೆ ಸೋಲಾಯಿತು ಎಂದಾದರೆ ಅದೇ ಕೊನೆಯಲ್ಲ... ದುಡಿಯುವವನಿಗೆ ದುಡಿದು ಗಳಿಸಲು ನಮ್ಮ ಮುಂದೆ ಅನೇಕ ಒಳ್ಳೆಯ ಮಾರ್ಗಗಳಿವೆ, ಏನಂತೀರಿ?



Click it and Unblock the Notifications
