Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡೆಸ್ಟಿನೇಷನ್ ವೆಡ್ಡಿಂಗನ್ನು ಹೇಗೆ ಪ್ಲಾನ್ ಮಾಡುವುದು?
ಇತ್ತೀಚಿನ ದಿನಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಎನ್ನುವುದು ಟ್ರೆಂಡ್ ಆಗಿದೆ. ತಮ್ಮ ನೆಚ್ಚಿನ ಬಾಳ ಸಂಗಾತಿಯ ಜೊತೆಗೆ ತಮ್ಮ ನೆಚ್ಚಿನ ಜಾಗದಲ್ಲಿ, ತಮ್ಮಿಷ್ಟದಂತೆ ಅದ್ದೂರಿಯಾಗಿ ವಿವಾಹವಾಗುವ ಟ್ರೆಂಡ್ ಹುಟ್ಟಿಕೊಂಡಿದೆ. ಇದು ಕಡಿಮೆ ಜನರೊಂದಿಗೆ ನಡೆಯುವ ವಿವಾಹ ಶೈಲಿಯಾಗಿದ್ದು, ಹೆಚ್ಚು ಬಜೆಟ್ ಅವಶ್ಯವಿರುತ್ತದೆ. ಏಕೆಂದರೆ ಇವು ಸಾಮಾನ್ಯವಾಗಿ ಸಮುದ್ರ ತೀರದಲ್ಲೋ, ಬಂಗಲೆ-ಮಹಲ್‌ನಲ್ಲೋ ವಿಭಿನ್ನವಾಗಿ ಸೆಟ್ ಹಾಕಿ ನಡೆಸುವ ವಿವಾಹವಾಗಿದೆ. ಇದು ಹೆಚ್ಚಾಗಿ ಸೆಲೆಬ್ರೆಟಿಗಳಲ್ಲಿ ಅತಿಯಾಗಿ ಪ್ರಚಲಿತದಲ್ಲಿದ್ದರೂ, ಇತ್ತೀಚೆಗೆ ಪ್ರತಿಯೊಬ್ಬರೂ ಡೆಸ್ಟಿನೇಷನ್ ವೆಡ್ಡಿಂಗ್ ಆಗುವ ಕನಸನ್ನು ಹೊಂದಿರುತ್ತಾರೆ.

ಡೆಸ್ಟಿನೇಶನ್ ವೆಡ್ಡಿಂಗ್ ಎಂದರೇನು?
ಡೆಸ್ಟಿನೇಷನ್ ವೆಡ್ಡಿಂಗ್ ಎಂದರೆ ತಾವು ಇಷ್ಟಪಟ್ಟಿರುವ ಸ್ಥಳಕ್ಕೆ ತೆರಳಿ ಅಲ್ಲಿ ಮದುವೆಯಾಗುವುದು, ಅದು ಬೇರೆ ದೇಶವಾಗಿರಲಿ, ರಾಜ್ಯವಾಗಿರಲಿ ಒಟ್ಟಾರೆ, ನಾವು ಇಷ್ಟಪಟ್ಟಿರುವ ಪ್ರದೇಶಕ್ಕೆ ಹೋಗಿ ಮದುವೆ ಮಾಡಿಕೊಳ್ಳುವುದು. ಇದರಿಂದಾಗಿ ಸಂತೋಷ ಮಾತ್ರವಲ್ಲದೆ ಮದುವೆಯು ಸದಾ ಎಲ್ಲರ ನೆನಪಿನಲ್ಲಿ ಹಸಿರಾಗಿ ಉಳಿಯುತ್ತದೆ.ಇಂತಹ ವಿವಾಹಗಳಿಗೆ ವೆಚ್ಚ ಹೆಚ್ಚಾಗಿರುವ ಕಾರಣ, ಸಾಂಪ್ರದಾಯಿಕ ವಿವಾಹಗಳಿಗಿಂತ ಚಿಕ್ಕದಾಗಿ ನಡೆಯುತ್ತವೆ. ಕೇವಲ ಆಪ್ತ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಪ್ರೀತಿಪಾತ್ರರ ನಡುವೆ ಚಿಕ್ಕದಾಗಿ, ಅದ್ದೂರಿಯಾಗಿ ನಡೆಯುವುದು.
ಡೆಸ್ಟಿನೇಶನ್ ವೆಡ್ಡಿಂಗ್ ಅನುಕೂಲಗಳೇನು?
1. ಹನಿಮೂನ್
ನಿಮ್ಮ ವಿವಾಹ ಸಮಾರಂಭ ಮತ್ತು ಆರತಕ್ಷತೆಯನ್ನು ಬೇರೆ ರಾಜ್ಯ ಅಥವಾ ವಿದೇಶದಲ್ಲಿ ಇಟ್ಟುಕೊಂಡಿದ್ದರೆ, ಅದೇ ಜಾಗದಲ್ಲಿ ಹನಿಮೂನ್ ಕೂಡ ಮಾಡಿಕೊಳ್ಳಬಹುದು. ಇದರಿಂದ ಹೊಸ ಸ್ಥಳದಲ್ಲಿ ಹೆಚ್ಚು ಸಮಯವನ್ನು ಕಳೆಯಬಹುದು. ಈ ಮೂಲಕ ನಿಮ್ಮ ಒಟ್ಟಾರೆ ವೆಚ್ಚವನ್ನು ಕಡಿತಗೊಳಿಸಬಹುದು.
2. ಅನ್ಯೋನ್ಯತೆ :
ನಿಮ್ಮ ಪ್ರೀತಿ-ಪಾತ್ರರೊಂದಿಗೆ ವಿವಾಹ ಸಮಾರಂಭವನ್ನು ಆಚರಿಸಿಕೊಳ್ಳವುದರಿಂದ ನಿಮ್ಮ ನಡುವಿನ ಅನ್ಯೋನ್ಯತೆಯು ಹೆಚ್ಚಬಹುದು. ಸುಂದರವಾದ ಸ್ಥಳದಲ್ಲಿ ನಿಮ್ಮ ಪ್ರೀತಿಯನ್ನು ಆಚರಿಸಲು ನಿಮ್ಮ ಗೆಳಯರು, ಬಂಧುಗಳು ಮತ್ತು ಕುಟುಂಬದ ಸದಸ್ಯರನ್ನು ಕರೆತರಬಹುದು.
3. ವಿಶಿಷ್ಟ ನೆನಪುಗಳು :
ಹೌದು, ಡೆಸ್ಟಿನೇಷನ್ ವೆಡ್ಡಿಂಗ್ ಎನ್ನುವುದೇ ಕೆಲವರಿಗೆ ಕನಸಾಗಿರುತ್ತದೆ. ಅಂತಹ ಕನಸು ನನಸಾಗುವ ಆ ದಿನ ಮತ್ತಷ್ಟು ಸ್ಪೆಷಲ್ ಆಗಿರುತ್ತೆ. ಆ ಜಾಗ, ಅಲ್ಲಿನ ಆಚರಣೆ, ಸಂಭ್ರಮಗಳೆಲ್ಲವೂ ವಿಶಿಷ್ಟ ನೆನಪಾಗಿ ಉಳಿಯುತ್ತವೆ. ಆ ದಿನ ಕಳೆದ ಕ್ಷಣಗಳು ಜೀವನವಿಡೀ ನೆನಪಿಡುವ ನೆನಪಾಗಿರುತ್ತದೆ. ಅಂತಹ ನೆನಪುಗಳನ್ನು ಫೋಟೋ ಆಲ್ಬಮ್ ಮಾಡಿಕೊಳ್ಳುವ ಮುಖಾಂತರ ಇಡೀ ಜೀವನವೇ ಸದಾಹಸಿರಾಗಿರುವಂತೆ ನೋಡಿಕೊಳ್ಳಬಹುದು.
ಡೆಸ್ಟಿನೇಷನ್ ವೆಡ್ಡಿಂಗ್ ನ ಅನಾನುಕೂಲಗಳೇನು?
1. ಹೆಚ್ಚಿನ ವೆಚ್ಚ :
ಡೆಸ್ಟಿನೇಷನ್ ವೆಡ್ಡಿಂಗ್ ಈಗಾಗಲೇ ಹೇಳಿದ ಹಾಗೆ ಹೆಚ್ಚಿನ ಖರ್ಚಿನ ಅಗತ್ಯವಿರುತ್ತದೆ. ಇದರ ಸರಾಸರಿ ವೆಚ್ಚವು ಸಾಂಪ್ರದಾಯಿಕ ಸಮಾರಂಭ ಮತ್ತು ಮನೆಯಲ್ಲಿಯೇ ನಡೆಯುವ ವಿವಾಹಕ್ಕಿಂತ ಹೆಚ್ಚಿನದಾಗಿರುತ್ತದೆ. ಏಕೆಂದರೆ ಇಲ್ಲಿ ಪ್ರಯಾಣ ದರ, ಹೋಟೆಲ್ ಖರ್ಚು ಹಾಗೂ ಇತರ ಸಂಬಂಧಿ ಖರ್ಚುಗಳು ಸಾಮಾನ್ಯವಾಗಿ ಬಂದೇ ಬರುತ್ತದೆ. ಇವೆಲ್ಲವನ್ನು ಭರಿಸುವ ಶಕ್ತಿ ಇದ್ದಲ್ಲಿ ಮಾತ್ರ ಇಂತಹ ವಿವಾಹಗಳಿಗೆ ಹೋಗಬಹುದು.
2. ವೈಯಕ್ತಿಕ ಆಯ್ಕೆಗೆ ಅವಕಾಶ ಕಡಿಮೆ :
ಹೌದು, ಸಾಮಾನ್ಯವಾಗಿ ಡೆಸ್ಟಿನೇಷನ್ ವೆಡ್ಡಿಂಗ್ ಎನ್ನುವುದು ಒಂದು ಈವೆಂಟ್ ಕಂಪನಿ ನಡೆಸಿಕೊಡುತ್ತದೆ. ಹಾಗಿರುವಾಗ ನಿಮಗೆ ಯಾವ ಶಾಸ್ತ್ರ, ಸಂಪ್ರದಾಯಗಳ ಅಗತ್ಯವಿದೆ ಎನ್ನುವ ಅವಕಶಾವಿದ್ದರೂ, ಪ್ರತಿಯೊಂದು ನೀವೇ ಹೇಳಿದಂತೆ ಅಥವಾ ನಿಮ್ಮ ವೈಯಕ್ತಿಕ ಆಯ್ಕೆಗೆ ಅವಕಾಶ ಕಡಿಮೆ ಇರುತ್ತದೆ. ಒಂದು ಪ್ಯಾಕೇಜಿನಲ್ಲಿ ಏನೆಲ್ಲಾ ಬರುವುದೋ ಅದನ್ನಷ್ಟೇ ನಿರಿಕ್ಷೆ ಮಾಡಬಹುದೇ ಹೊರತು, ಎಲ್ಲವನ್ನು ಅಚ್ಚುಕಟ್ಟಾಗಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
3. ಕಡಿಮೆ ಅತಿಥಿಗಳು :
ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಅತಿಥಿಗಳ ಪಟ್ಟಿ ತಯಾರಿಸುವಾಗ ಆದಷ್ಟು ಕಡಿಮೆ ಜನರನ್ನೇ ಆಯ್ಕೆ ಮಾಡುತ್ತೇವೆ. ಏಕೆಂದರೆ, ಇದು ವೆಚ್ಚಕ್ಕೆ ಸಂಬಂಧ ಪಟ್ಟಿರುತ್ತದೆ. ನಿಮ್ಮ ಬಜೆಟ್ ಸರಿಹೊಂದಿಸಲು, ಮದುವೆಗೆ ಬರಬೇಕಾಗಿರುವ ಜನರ ಪಟ್ಟಿಯನ್ನು ಕಡಿತಗೊಳಿಸುತ್ತಾ ಹೋದರೆ, ನಿಮ್ಮ ಅತೀ ಮುಖ್ಯ ಅತಿಥಿಗಳೇ ಕೆಲವೊಮ್ಮೆ ಮಿಸ್ ಆಗಬಹುದು.
ಸ್ಥಳವನ್ನು ಆರಿಸಿ:
ವಿವಾಹವನ್ನು ಎಲ್ಲಿ ಮಾಡಬೇಕೆಂದು ಮುಂಚಿತವಾಗಿ ಯೋಜಿಸಿ. ಸಮುದ್ರ ದಂಡೆಯ ಮೇಲೋ, ಯಾವುದೋ ಮಹಲ್‌ನಲ್ಲೋ ಎಂಬುದನ್ನು ಆಯ್ಕೆ ಮಾಡಿ. ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳು ಆ ಸ್ಥಳದಲ್ಲಿ ಲಭ್ಯವಿರುವುದೇ ಪರಿಶೀಲಿಸಿ. ಇದಲ್ಲದೇ, ಅಲ್ಲಿ ಉಳಿದುಕೊಳ್ಳುವುದರಿಂದ ಆಹಾರ ಸೇರಿದಂತೆ ಇತರ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇರಿಸಿಕೊಳ್ಳಿ. ಮತ್ತೊಂದೆಡೆ, ನೀವು ಬೇರೆ ದೇಶದಲ್ಲಿ ಮದುವೆಯಾಗಲು ಯೋಜಿಸುತ್ತಿದ್ದರೆ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.
ಅತಿಥಿಗಳಿಗಾಗಿ ಹೋಟೆಲ್ ಬುಕ್ ಮಾಡಿ:
ಮದುವೆಗೆ ಬರುವ ಅತಿಥಿಗಳ ವಸತಿಗೆ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ, ನಿಮ್ಮ ಬಜೆಟ್ ಪ್ರಕಾರ ಬುಕ್ ಮಾಡಿ. ಕೆಲವೊಮ್ಮೆ ದುಬಾರಿ ಹೋಟೆಲ್‌ಗಳನ್ನು ಕಾಯ್ದಿರಿಸುವುದರಿಂದ ಸಾಕಷ್ಟು ವೆಚ್ಚವಾಗುತ್ತದೆ. ಅಲ್ಲದೆ, ಎಲ್ಲಾ ಅತಿಥಿಗಳಿಗೆ ಕೊಠಡಿ ಲಭ್ಯತೆ ಖಚಿತವಾಗುವವರೆಗೆ ನಿಮ್ಮ ದಿನಾಂಕವನ್ನು ಅಂತಿಮಗೊಳಿಸಬೇಡಿ. ಇದಲ್ಲದೆ, ವಧು ಮತ್ತು ವರರಿಗೆ ಮುಂಚಿತವಾಗಿ ಕೊಠಡಿಯನ್ನು ಕಾಯ್ದಿರಿಸಿ.
ಮೊದಲು ಅತಿಥಿಗಳನ್ನು ಆಹ್ವಾನಿಸಿ:
ಮದುವೆಗೆ ಆಹ್ವಾನಿಸಲು ಬಯಸುವ ಜನರ ಪಟ್ಟಿಯನ್ನು ತಯಾರಿಸಿ. ಬೇಕಿದ್ದಲ್ಲಿ ಮುಂಚಿತವಾಗಿ ಅವರಿಗೆ ತಿಳಿಸಬಹುದು. ಸಂಬಂಧಿಕರು ಅಥವಾ ಸ್ನೇಹಿತರನ್ನು ಮುಂಚಿತವಾಗಿ ಆಹ್ವಾನಿಸುವುದು ಅವರಿಗೆ ಸಿದ್ಧವಾಗಲು ಪ್ರಯೋಜನ ಆಗುತ್ತದೆ. ಅವರು ಸಮಯಕ್ಕಿಂತ ಮುಂಚಿತವಾಗಿ ಪ್ರಯಾಣ ಮತ್ತು ಪ್ರಯಾಣಕ್ಕಾಗಿ ಸಮಯವನ್ನು ತೆಗೆದುಕೊಳ್ಳಬಹುದು.
ಮದುವೆಗೆ ಮುನ್ನ ಆ ಸ್ಥಳಕ್ಕೆ ಭೇಟಿ ನೀಡಿ:
ಹೋಟೆಲ್ ಅಥವಾ ಸ್ಥಳಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆಯಲು, ಒಮ್ಮೆ ಅಥವಾ ಎರಡು ಬಾರಿ ಹೋಗಿ ನೋಡಿದರೆ ಉತ್ತಮ. ಮದುವೆಯ ದಿನಾಂಕವನ್ನು ಅಂತಿಮಗೊಳಿಸುವ ಮೊದಲು, ಒಮ್ಮೆ ಹೋಗಿ ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲಿಸಿ. ನೀವು ಎರಡನೇ ಬಾರಿಗೆ ಹೋಗಲು ಸಾಧ್ಯವಾಗದಿದ್ದರೆ, ಮದುವೆಗೆ ಒಂದು ವಾರ ಮೊದಲು ಅಲ್ಲಿಗೆ ಹೋಗಲು ಪ್ರಯತ್ನಿಸಿ. ಇದರಿಂದ ನೀವು ಮೇಕ್ಅಪ್ ಅಥವಾ ಉಡುಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಬಹುದು.
ನಿಮಗಾಗಿ ಸಮಯ ನೀಡಿ:
ನಿಮ್ಮ ದೊಡ್ಡ ದಿನಕ್ಕಾಗಿ ತಯಾರಾಗಲು ನಿಮಗೆ ಸಾಕಷ್ಟು ಸಮಯವನ್ನು ನೀಡಿ. ನಿಮ್ಮ ಮದುವೆಯ ಡ್ರೆಸ್ ಫಿಟ್ಟಿಂಗ್ ಪೂರ್ಣಗೊಳಿಸಿ, ಅಲಂಕಾರ ಮತ್ತು ಅಡುಗೆಯನ್ನು ನಿರ್ಧರಿಸಿ. ಪ್ರತಿಯೊಬ್ಬರ ಪಾಸ್‌ಪೋರ್ಟ್‌ಗಳು, ವೀಸಾಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ಸಂಭಾವ್ಯ ಭಾಷೆಯ ಅಡೆತಡೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ.
ಡೆಸ್ಟಿನೇಶನ್ ವೆಡ್ಡಿಂಗ್ ಪ್ಲಾನರ್ ಅನ್ನು ಆರಿಸಿ:
ನೀವು ಹೋಗುತ್ತಿರುವ ರಾಜ್ಯ ಅಥವಾ ದೇಶದಲ್ಲಿ ಇಂತಹ ಈವೆಂಟ್‌ಗಳನ್ನು ಯೋಜಿಸಲು ಇರುವ ವೆಡ್ಡಿಂಗ್ ಪ್ಲಾನರ್ಸ್ ಹುಡುಕಿ. ಇದರಿಂದ ನಿಮ್ಮ ಅರ್ಧದಷ್ಟು ಕೆಲಸ ಮುಗಿದಂತೆ. ಏಕೆಂದರೆ ಹೆಚ್ಚಿನ ವೇಳೆ ಇಡೀ ಮದುವೆಯನ್ನೇ ಇವರೇ ಅಯೋಜಿಸುತ್ತಾರೆ. ಮದುವೆ ಹಾಲ್ ಡೆಕೋರೆಷನ್ನಿಂದ ಹಿಡಿದು, ಫೋಟೋಗ್ರಾಫರ್ಸ್ ತನಕ ಎಲ್ಲವನ್ನೂ ನೋಡಿಕೊಳ್ಳುತ್ತಾರೆ.
ಕಾನೂನು ಮರೆಯಬೇಡಿ:
ಪ್ರತಿಯೊಂದು ದೇಶವೂ ವಿಭಿನ್ನ ಕಾನೂನುಗಳನ್ನು ಹೊಂದಿದೆ. ವಿದೇಶದಲ್ಲಿ ಮದುವೆಯಾಗಲು, ನೀವು ಅದರ ಕಾನೂನುಗಳನ್ನು ಮತ್ತು ನಿಮ್ಮ ತಾಯ್ನಾಡಿನ ಕಾನೂನುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಮದುವೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಕಾನೂನು ದಾಖಲೆಗಳನ್ನು ತರುವುದನ್ನು ಖಚಿತಪಡಿಸಿಕೊಳ್ಳಿ.



Click it and Unblock the Notifications


