Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಪತ್ನಿ ಕೋಪದಲ್ಲಿದ್ದಾಗ ಕೂಲ್ ಮಾಡಲು ಹೀಗೆ ಮಾಡಿ
ಕೋಪ ಮೂಗಿನ ಮೇಲೆಯೇ ಇರುತ್ತದೆ ಎಂಬ ಮಾತು ಕೇಳಿದ್ದೀವಿ, ಆದರೆ ಬಹುತೇಕ ಹೆಣ್ಣು ಮಕ್ಕಳಿಗೆ ಕೋಪ ಎನ್ನುವುದು ಸ್ವಲ್ಪ ಹೆಚ್ಚೇ ಇರುತ್ತದೆ. ಇದಕ್ಕೆ ಕಾರಣ ಹಲವು, ಕುಟುಂಬದ ಜವಾಬ್ದಾರಿ, ಮಕ್ಕಳ ಜವಾಬ್ದಾರಿ, ಕೆಲಸಕ್ಕೆ ಹೋಗುವವರಾದರೆ ಕೆಲಸದ ಒತ್ತಡ ಹೀಗೆ ಹತ್ತಾರು ಸಮಸ್ಯೆಗಳು. ಈ ಕಾರಗಳಿಂದಲೋ ಏನೋ ಸಣ್ಣ ಸಣ್ಣ ವಿಷಯಗಳಿಗೂ ಕೋಪ ಮಾಡಿಕೊಳ್ಳುವುದರಲ್ಲಿ ಮಹಿಳೆಯರು ಸದಾ ಮುಂದು.

ಈ ಸಂದರ್ಭದಲ್ಲಿ ನಿಮ್ಮ ಕೋಪಗೊಂಡ ಹೆಂಡತಿಯನ್ನು ನಿಭಾಯಿಸಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂದು ನೀವು ಭಾವಿಸಿದರೆ, ಆಕೆಯ ಕೋಪದಿಂದ ನಿಮ್ಮನ್ನು ಪಾರುಮಾಡುವ, ಕೋಪದ ವಾತಾವರಣ ತಿಳಿಗೊಳಿಸುವ ಕೆಲವು ನಿಯಮಗಳು ಅಥವಾ ಸಲಹೆಗಳನ್ನು ನೀಡಲಿದ್ದೇವೆ:

ಪತ್ನಿಯ ನೆಚ್ಚಿನ ವಿಷಯ ಹಾಗೂ ದೌರ್ಬಲ್ಯ ತಿಳಿಯಿರಿ
ಪ್ರತಿಯೊಬ್ಬರಿಗೂ ನೆಚ್ಚಿನ ಅತವಾ ಪ್ರಿಯವಾದ ವಿಷಯಗಳು ಇದ್ದೇ ಇರುತ್ತದೆ. ಅಲ್ಲದೇ ಒಂದಿಲ್ಲೊಂದು ವಿಚಾರಗಳಿಗೆ ಅವರ ಮನಸ್ಸು ಕರಗುತ್ತದೆ. ಅದನ್ನು ನೆನಪಿಟ್ಟುಕೊಳ್ಳಿ ಮತ್ತು ನೀವು ಅವಳ ಕೋಪವನ್ನು ಹೆಚಿಸುವಂಥ ಅಥವಾ ಆಹ್ವಾನಿಸುವ ಪ್ರಮಾದವನ್ನು ಮಾಡಿದರೆ, ಅವಳು ನಿಮ್ಮ ಮೇಲೆ ಕೋಪಗೊಳ್ಳುವಂತೆ ಮಾಡಿ, ಸಿಟ್ಟನ್ನು ಹೊರಹಾಕಿಸಿ ನಂತರ ತಕ್ಷಣವೇ ಅವಳ ಬಳಿಗೆ ಬಂದು ನಿಮ್ಮ ಕ್ಷಮಿಸಿ ಎಂದು ಹೇಳಿ, ಅವರ ನೆಚ್ಚಿನ ವಸ್ತುಗಳಿಂದ ಅವರನ್ನು ಓಲೈಸಿ.

ಕೋಪದಲ್ಲಿದ್ದಾಗ ಸಮಾಧಾನ ಮಾಡಲೇಬೇಡಿ
ನಿಮ್ಮ ಪತ್ನಿ ನಿಮ್ಮ ಮೇಲೆ ಸಿಟ್ಟು ಮಾಡಿಕೊಂಡರೆ ಮತ್ತು ಅವರು ತುಂಬಾನೆ ಕೋಪದಲ್ಲಿದ್ದರೆ ಅವರೊಂದಿಗೆ ವಾದ ಮಾಡುವುದು ಅರ್ಥಹೀನ. ಶಾಂತವಾಗುವಂತೆ ಅವಳನ್ನು ಕೇಳುವ ಪ್ರಯತ್ನ ಮಾಡಬೇಡಿ, ಏಕೆಂದರೆ ಅದು ಅವಳನ್ನು ಮತ್ತಷ್ಟು ಪ್ರಚೋದಿಸುತ್ತದೆ. ವರ ಇಟ್ಟನ್ನು ಹೊರಹಾಲು ಬಿಡಿ, ನಂತರ ತಾಳ್ಮೆಯಿಂದ ಸಂವಹನ ಮಾಡಿ. ಅವರ ಸಿಟ್ಟನ್ನು ತರ್ಕಸಬೇಡಿ ಹಾಗೂ ಶಾಂತಗೊಳಿಸಲೂಬೇಡಿ, ಇದು ಅವರ ಸಿಟ್ಟಿಗೆ ಇನ್ನಷ್ಟು ಬೆಂಕಿಹಾಕಿದಂತಾಗುತ್ತದೆ.

ಪತ್ನಿಯ ಕೆಲಸಗಳಿಗೆ ಸಹಕರಿಸಿ
ನಿಮ್ಮ ಪತ್ನಿ ಸಿಟ್ಟಿನಲ್ಲಿದ್ದಾಗ ಅವಳ ಕೆಲವು ಕೆಲಸಗಳನ್ನು ನೀವೆ ಮಾಡಿ ಮುಗಿಸಿಬಿಡಿ ಅದು ಅವಳ ಸಿಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಸಿಟ್ಟಿನಲ್ಲಿದ್ದಾಗ ನೀಡಿದ ಹೇಳಿಕೆಗಳನ್ನು ಮತ್ತೆ ಚರ್ಚಿಸಲು ಹೋಗಬೇಡಿ. ಸಿಟ್ಟಿನ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ.

ಸಾಂದರ್ಭಿಕವಾಗಿ ಶರಣಾಗಿಬಿಡಿ
ಸುಮ್ಮನಿರುವ ಅಥವಾ ವಾದ ಮಾಡುವ ಬದಲು, ಪತ್ನಿಗೆ ಶರಣಾಗುವುದು ಉತ್ತಮ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ನೀವು ನಿಮ್ಮ ಹೆಂಡತಿಯ ಮಾತನ್ನು ಒಪ್ಪುತ್ತೀರಿ ಎಂದು ಕಿರುಚುವ ಬದಲು ನಿಮ್ಮ ದೇಹ ಭಾಷೆಯ ಮೂಲಕವೇ ತಿಳಿಸಿಹೇಳಿ. ತಾಳ್ಮೆಯಿಂದ ವರ್ತಿಸಿ. ಸಾಂದರ್ಭಿಕವಾಗಿ ನಿಮ್ಮ ತಲೆಯನ್ನು ಆಡಿಸಿ ಮತ್ತು ನೀವು ಅವಳ ಮಾತಿಗೆ ಶರಣಾಗುತ್ತೀರಿ ಎಂದು ಸೂಚಿಸುವ ಕೆಲವು ನಿಧಾನ ನಿಟ್ಟುಸಿರುಗಳನ್ನು ಬಿಡಿ.



Click it and Unblock the Notifications











