Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಫುಟ್‌ಬಾಲ್ ಮಾಂತ್ರಿಕ ಮೆಸ್ಸಿ, ಪತ್ನಿ ಆಂಟೋನೆಲ್ಲಾ ಅವರ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ
ದಿ ನ್ಯೂ ಮರಡೋನಾ ಎಂದೇ ಖ್ಯಾತಿಯಾದ ಫುಟ್‌ಬಾಲ್ ಮಾಂತ್ರಿಕ ಲಯೋನೆಲ್ ಮೆಸ್ಸಿ. ಭಾನುವಾರ ಕತಾರ್‌ನಲ್ಲಿ ನಡೆದ FIFA ವಿಶ್ವಕಪ್ 2022ನಲ್ಲಿ ಅರ್ಜೆಂಟೀನಾ ರೋಚಕ ಗೆಲುವು ಸದಿಸಲು ಪ್ರಮುಖ ಕಾರಣರಾದ ಮೆಸ್ಸಿ ಪ್ರಪಂಚದಾದ್ಯಂತ ಅಭಿಮಾನಿಗಳ ಹೃದಯಗಳನ್ನು ಗೆದ್ದಿದ್ದಾರೆ.

ಮೈದಾನದಲ್ಲಿ ಜಿಂಕೆಯಂತೆ ಎಗರಿ ಗೋಲ್ ಮಾಡುವ ಮೆಸ್ಸಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಹೇಗಿದ್ದಾರೆ, ಇವರ ಪತ್ನಿ ಆಂಟೊನೆಲಾ ಅವರೊಂದಿಗಿನ ಸ್ಪೂರ್ತಿದಾಯಕ ಪ್ರೇಮಕಥೆಯ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ:

1. ಮೆಸ್ಸಿ ಆಂಟೊನೆಲಾ ಇಬ್ಬರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
ಮೆಸ್ಸಿ ಮತ್ತು ಆಂಟೊನೆಲಾ ಇಬ್ಬರು ಬಾಲ್ಯದ ಗೆಳೆಯರು, ಕೇವಲ ಐದು ವರ್ಷದವರಾಗಿದ್ದಾಗ ಪರಸ್ಪರ ಭೇಟಿಯಾದರು. ಆಂಟೊನೆಲಾ ಅವರು ಮೆಸ್ಸಿಯ ಸೋದರ ಸಂಬಂಧಿಯ ಸ್ನೇಹಿತರಾಗಿದ್ದರು ಮತ್ತು ಅವರು ಆಗಾಗ್ಗೆ ಆಡಲು ಭೇಟಿಯಾಗುತ್ತಿದ್ದರು. ಮೆಸ್ಸಿ ಸಾಕಷ್ಟು ಅಂತರ್ಮುಖಿಯಾಗಿದ್ದರು, ಆದರೂ ಯಾವಾಗಲೂ ಆಂಟೊನೆಲಾರನ್ನು ಭೇಟಿಯಾಗಲು ಹೋಗುತ್ತಿದ್ದರು, ಇಬ್ಬರ ಸ್ನೇಹದ ಮಧುರತೆ ಅತ್ಯುತ್ತಮವಾಗಿತ್ತು. ದಿನ ಕಳೆದಂತೆ ಇಬ್ಬರ ನಡುವೆ ಪ್ರೇಮ ಅಂಕುರಿಸಿತು ನಂತರ ಇಬ್ಬರು ಡೇಟಿಂಗ್ ಮಾಡಲು ಪ್ರಾರಂಭಿಸಿದರು.

2. ಮೆಸ್ಸಿಗಾಗಿ ತನ್ನ ವಿದ್ಯಾಭ್ಯಾಸವನ್ನೆ ನಿಲ್ಲಿಸಿದ ಆಂಟೊನೆಲಾ
ಆಂಟೊನೆಲಾ ಮಾನವಿಕ ಮತ್ತು ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವಾಗಲೇ ಮುಂದೆ ತಾನು ದಂತವೈದ್ಯಶಾಸ್ತ್ರವನ್ನು ಅಧ್ಯಯನ ಮಾಡಿ ವೃತ್ತಿ ಆರಂಭಿಸಲು ನಿರ್ಧರಿಸಿದ್ದರು. ಆದರೆ, ಆ ಸಮಯದಲ್ಲಿ ಫುಟ್‌ಬಾಲ್‌ನ ವೃತ್ತಿಜೀವನಕ್ಕಾಗಿ ಬಾರ್ಸಿಲೋನಾದಲ್ಲಿ ವಾಸಿಸುತ್ತಿದ್ದ ಮೆಸ್ಸಿಗೆ ಆಂಟೊನೆಲಾ ಹತ್ತಿರವಾಗಲು ತನ್ನ ಅಧ್ಯಯನ ತೊರೆದಳು.

3. "ಶತಮಾನದ ಮದುವೆ"ಗೆ ಸಾಕ್ಷಿಯಾದ ಮೆಸ್ಸಿ ಆಂಟೊನೆಲಾ
2017ರ ಜೂನ್ 30ರಂದು ಮೆಸ್ಸಿ ಹಾಗೂ ಆಂಟೊನೆಲಾ ಅವರು ತಮ್ಮ ತವರು ರೊಸಾರಿಯೊದಲ್ಲಿ ವಿವಾಹವಾದರು. ಅದೊಂದು ಅದ್ಭುತ ಸಮಾರಂಭವಾಗಿತ್ತು. ಸಿಟಿ ಸೆಂಟರ್ ಹೋಟೆಲ್‌ನಲ್ಲಿ 260ಕ್ಕೂ ಹೆಚ್ಚು ಅತಿಥಿಗಳ ಸಮ್ಮುಖದಲ್ಲಿ ಉಂಗುರ ಬದಲಿಸಿದರು. ಮೆಸ್ಸಿ ಅವರ ಫುಟ್‌ಬಾಲ್ ತಂಡದ ಕೆಲವು ಸಹ ಆಟಗಾರರು ಸೇರಿದ್ದರು. ಮೆಸ್ಸಿ ಹಾಗ ಆಂಟೊನೆಲಾ ಅವರ ವಿವಾಹ ಸಮಾರಂಭವು "ಶತಮಾನದ ಮದುವೆ" ಎಂಬ ಖ್ಯಾತಿಗೆ ಸಹ ಭಾಜನವಾಯಿತು.

4. ಮೆಸ್ಸಿಗೆ ಆಂಟೊನೆಲಾ ಸದಾ ಬೆಂಬಲ
ಡಿಸೆಂಬರ್ 18, 2022ರಂದು ಬರೋಬ್ಬರಿ 27 ವರ್ಷಗಳ ನಂತರ ಅರ್ಜೆಂಟೀನಾ FIFA ವಿಶ್ವಕಪ್ 2022 ಗೆದ್ದಿತು. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹೆಲುವಿನ ರಸದೌತಣ ಉಣಬಡಿಸಿತು. ಅಂಥಾ ಅಭಿಮಾನಿಗಳಲ್ಲಿ ಒಬ್ಬರಾದ ಮೆಸ್ಸಿ ಪತ್ನಿ ಆಂಟೊನೆಲಾ ಸಹ ತನ್ನ ಪತಿಯ ಕಠಿಣ ಪರಿಶ್ರಮದ ಬಗ್ಗೆ ಹೆಮ್ಮೆ ಪಡುತ್ತಾ, ಗ್ರ್ಯಾಂಡ್ ಟ್ರೋಫಿಗೆ ಕಾರಣರಾದ ಅವರನ್ನು ಅಭಿನಂದಿಸುತ್ತಾ ಹೀಗೆ ಬರೆಯುತ್ತಾರೆ:
"ನನಗೆ ಹೇಗೆ ಪ್ರಾರಂಭಿಸಬೇಕು ಎಂದು ನನಗೆ ತಿಳಿದಿಲ್ಲ. ನಿಮ್ಮ ಬಗ್ಗೆ ನಮಗೆ ತಂಬಾ ಹೆಮ್ಮೆ ಇದೆ. ನಾವು ಎಂದಿಗೂ ಕೊನೆಯವರೆಗೂ ಹೋರಾಡಬೇಕುಮ, ಎಂದಿಗೂ ಏನನ್ನು ಬಿಟ್ಟುಕೊಡಬೇಡಿ ಎಂದು ನಮಗೆ ಕಲಿಸಿದ್ದಕ್ಕಾಗಿ ಧನ್ಯವಾದಗಳು. ಕೊನೆಗೂ ನೀವು ವಿಶ್ವ ಚಾಂಪಿಯನ್ ಆಗಿದ್ದೀರಿ, ನೀವು ಇಷ್ಟು ವರ್ಷಗಳ ಕಾಲ ಏನನ್ನು ಅನುಭವಿಸಿದ್ದೀರಿ ಎಂಬುದು ನಮಗೆ ತಿಳಿದಿದೆ, ನೀವು ಇದನ್ನೇ ಸಾಧಿಸಲು ಬಯಸಿದ್ದೀರಿ". ಎಂದು ಮೆಸ್ಸಿ ಬಗೆಗಿನ ಹೆಮ್ಮೆ, ಪ್ರೇಮ, ಗೌರವ ಹಾಗೂ ಅವರ ಪರಿಶ್ರಮವನ್ನು ಶ್ಲಾಘಿಸಿ ಬರೆದಿದ್ದಾರೆ.
ಗೆಲುವಿನ ನಂತರ ತನ್ನ ಮಕ್ಕಳನ್ನು ಮೈದಾನಕ್ಕೆ ಕರೆದು ಬಿಗಿದಪ್ಪಿ ಗೆಲುವಿನ ಸಂತೋಷ ಅನುಭವಿಸಿದ ಮೆಸ್ಸಿ. ಸದಾ ಕುಟುಂಬಕ್ಕೆ ಆದ್ಯತೆ ನೀಡುತ್ತಾರೆ ಹಾಗೂ ಅವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.



Click it and Unblock the Notifications