Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಪ್ಪಂದಿರ ದಿನದ ವಿಶೇಷ ಲೇಖನ: ನನ್ನ ಅಪ್ಪನೇ ನನ್ನ ಬೆಸ್ಟ ಫ್ರೆಂಡ್
ಅಪ್ಪ ಅಂದರೆ ಯಜಮಾನ, ಜವಾಬ್ದಾರಿ, ಭಯ, ಮನೆಯ ಒಡೆಯ, ಪ್ರೀತಿ, ಕಾಳಜಿ ಹೀಗೆ ಹತ್ತಾರು ಪದಗಳು ಮನಸ್ಸಲ್ಲಿ ಮೂಡುತ್ತದೆ. ಅಪ್ಪನನ್ನು ಒಂದೆರಡು ಪದಗಳಲ್ಲಿ ವರ್ಣಿಸಲು ಖಂಡಿತಾ ಸಾಧ್ಯವಿಲ್ಲ. ಅಂಥಾ ಅಪ್ಪನಿಗೆ ಶುಭಾಶಯ ಸಲ್ಲಿಸಲು ವಿಶ್ವಾದ್ಯಂತ ಜೂನ್ 21ರಂದು ಅಪ್ಪಂದಿರ ದಿನಾಚರಣೆಯನ್ನು ಆಚರಿಸುತ್ತಾರೆ.
ಬೋಲ್ಡ್ ಸ್ಕೈ ಕನ್ನಡ ಸಹ ಅಪ್ಪನಿಗೆ ನಮನ ಸಲ್ಲಿಸಲು ಓದುಗರಿಂದ ತಮ್ಮ ಅಪ್ಪನ ಕುರಿತ ಲೇಖನಗಳನ್ನು ಆಹ್ವಾನಿಸಲಾಗಿತ್ತು. ಮಂಗಳೂರಿನ ಪ್ರಥಮ ಬಿ.ಎ ವಿದ್ಯಾರ್ಥಿನಿ ಅಖಿಲಾ ಅವರು ತಮ್ಮ ಅಪ್ಪನ ಹೀಗೆ ವರ್ಣಿಸಿದ್ದಾರೆ ಮುಂದೆ ಓದಿ.
"ನೋಡಲು ಕೋಪಿಷ್ಟ, ಆದರೆ ಮನಸ್ಸು ಜೇನ ಹನಿ. ಸದಾ ನಮಗಾಗಿ ದುಡಿಯುವ ಶ್ರಮಿಕ. ತಾನು ಹರಕಲು ಬಟ್ಟೆ ತೊಟ್ಟಾದರೂ ನನಗೆ ಮಾತ್ರ ಬಣ್ಣ ಬಣ್ಣದ ಅಂಗಿ ಕೊಡಿಸುವ ಮಹಾತ್ಯಾಗಿ. ನನಗೆ, ನನ್ನಾಸೆಗೆಂದೇ ಜೀವನದ ಪ್ರತಿ ನಿಮಿಷ, ದೇವರಲ್ಲಿ ಬೇಡುವ ಒಂದೇ ಒಂದು ಜೀವ, ನನಗೆ ದೊರೆತಿರುವ ಮಾಣಿಕ್ಯ ಅದು ಅಪ್ಪ...

ಹೆಗಲ ಮೇಲೆ ಹೊತ್ತು ಕೂಸುಮರಿ ಮಾಡಿದ, ಜ್ವರ ಬಂದಾಗ ಬಿಗಿದಪ್ಪಿದ ನೆನಪು ಹಾಗೇ ಇದೆ. ನಮ್ಮ ಸುಖಕ್ಕಾಗಿ ತನ್ನ ಜೀವನವನ್ನು ಸವೆಸಿದ, ತಪ್ಪುಗಳನ್ನು ತಿದ್ದಿ ಸರಿ ದಾರಿಯಲ್ಲಿ ನಡೆಸಿ ದಾರಿಯುದ್ದಕ್ಕೂ ಬೆಂಗಾವಲಾಗಿ ನಿಂತವ ನನ್ನ ಅಪ್ಪ. ಸಂಸಾರದ ತಕ್ಕಡಿ ತೂಗಿಸುತ್ತಲೇ, ಅರಳುತ್ತಿದ್ದ ಕನಸು ಮುದುಡಿ ಹೋದಾಗ ಮತ್ತೆ ಬಲ ತುಂಬಿ ಕೈ ಹಿಡಿದ. ಜೀವನದ ಉದ್ದಗಲಕ್ಕೂ ನನ್ನೀ ಬದುಕಿನ ಪಯಣಕ್ಕೆ ನನ್ನ ಮೊದಲ ಹೀರೋ ಈ ಅಪ್ಪ.
ಪ್ರತಿ ಬಾರಿಯೂ ಹೆದರಿದಾಗ ಜೊತೆಗಿರುವ ನೋವ ನುಂಗುತ್ತಾ ನಗುವ ಹಂಚುವ, ಯಾರೇ ಏನೆಂದರೂ ಚಿಂತಿಸದೇ ತಾಳ್ಮೆಯಿಂದ ಕನಸಿನತ್ತ ಹೆಜ್ಜೆ ಹಾಕು ಎಂದ ಸಾಹುಕಾರ, ನನ್ನ ಬದುಕಿಗೆ ಶಕ್ತಿ, ಸ್ಫೂರ್ತಿ ನನ್ನ ಅಪ್ಪ.
ಎಲ್ಲಾ ಹೆಣ್ಣು ಮಕ್ಕಳ ಬದುಕಿಗೆ ಅವರ ತಂದೆಯೇ ನಾಯಕ, ಆದರೆ ನನಗೆ ನನ್ನ ತಂದೆ ಒಬ್ಬ ಬೆಸ್ಟ್ ಫ್ರೆಂಡ್. ಅಪ್ಪ ಎಂಬ ಜೀವವನ್ನ ವರ್ಣಿಸಲು ಹೊರಟರೆ ಪದಗಳೇ ಸಾಲದು ಏಕೆಂದರೆ ಅಪ್ಪ ಆಕಾಶವಿದ್ದಂತೆ.... ಲವ್ ಯು ಅಪ್ಪಾ...
ಅಖಿಲಾ
ಪ್ರಥಮ ಬಿ. ಎ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
ಅಂತಾರಾಷ್ಟ್ರೀಯ ಯೋಗ ದಿನ



Click it and Unblock the Notifications
