Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಲೈಂಗಿಕ ಸಮಸ್ಯೆ ಹಾಗೂ ಶೀಘ್ರ ಸ್ಖಲನ ಕುರಿತು ಪುರುಷರು ತಿಳಿದಿರಲೇಬೇಕಾದ ಅಂಶಗಳಿವು
ಪುರುಷರಲ್ಲಿ ಶೀಘ್ರ ಸ್ಖಲನ ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಲೈಂಗಿಕ ಸಮಸ್ಯೆಯಾಗಿದೆ. ಕೆಲವರಿಗೆ ಲೈಂಗಿಕ ಕ್ರಿಯೆ ವೇಳೆ ಶಿಶ್ನನಿಮಿರದೇ ಇರುವುದು, ಶೀಘ್ರ ಸ್ಖಲನ ಮುಂತಾದ ಸಮಸ್ಯೆಗಳು ಕಂಡು ಬರುವುದು. ಈ ಸಮಸ್ಯೆಗಳು ಸಾಮಾನ್ಯವಾಗಿ ಹೆಚ್ಚಿನ ಪುರುಷರಲ್ಲಿ ಕಂಡು ಬರುವ ಸಮಸ್ಯೆಯಾದರೂ ಇದರ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ.
ಕೆಲವರು ಈ ಸಮಸ್ಯೆಯನ್ನು ಲೈಂಗಿಕ ತಜ್ಞರಲ್ಲಿ ಹೇಳಿಕೊಳ್ಳಲು ವರ್ಷಗಟ್ಟಲೆ ತೆಗೆದುಕೊಳ್ಳುತ್ತಾರೆ. ಹಿಂಜರಿಕೆಯಿಂದಾಗಿ ಮೊದಲಿಗೆ ಹೇಳುವುದೇ ಇಲ್ಲ. ಆದರೆ ಪುರುಷರಲ್ಲಿ ಕಂಡು ಬರುವ ಲೈಂಗಿಕ ದೌರ್ಬಲ್ಯದ ಬಗ್ಗೆ ವೈದ್ಯಕೀಯ ಲೋಕದಲ್ಲಿ ಪರಿಹಾರವಿದೆ. ಆದ್ದರಿಂದ ಲೈಂಗಿಕ ಸಮಸ್ಯೆ ಕಂಡು ಬಂದಾಗ ಹಿಂಜರಿಕೆ ಮಾಡದೆ ತಜ್ಞರಲ್ಲಿ ಹೇಳಿಕೊಂಡರೆ ಸಮಸ್ಯೆಗೆ ಬೇಗ ಪರಿಹಾರ ಸಿಗಬಹುದು.
ಅಲ್ಲದೆ ಲೈಂಗಿಕ ಸಮಸ್ಯೆ ಇತರ ಆರೋಗ್ಯ ಸಮಸ್ಯೆಗಳು ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಕೂಡ ಉಂಟಾಗುವುದು.

ಲೈಂಗಿಕ ಸಮಸ್ಯೆ ಹೃದಯ ಸಮಸ್ಯೆ ಅಥವಾ ಇತರ ಸಮಸ್ಯೆಯ
ಲಕ್ಷಣವಿರಬಹುದು
ಯಾವುದಾದರೂ ಲೈಂಗಿಕ ತೊಂದರೆ ಕಾಣಿಸಿದರೆ ಕೂಡಲೇ ನಿಮ್ಮ ವೈದ್ಯರನ್ನು ಕಂಡು ಅವರ ಸಲಹೆ ಪಡೆಯಿರಿ. ಶೀಘ್ರ ಸ್ಖಲನಕ್ಕೆ ಇವುಗಳೂ ಒಂದು ಕಾರಣವಾಗಿರಬಹುದು
- ನರಗಳ ತೊಂದರೆ ಅಥವಾ ಮೂತ್ರ ಸೋಂಕು
- ಶಿಶ್ನದಲ್ಲಿ ಬದಲಾವಣೆ ಮಧುಮೇಹದ ಮೊದಲ ಲಕ್ಷಣವಾಗಿರಬಹುದು
- ಹಾರ್ಮೋನ್‌ಗಳ ಅಸಮತೋಲನ
- ಹೃದಯ ಸಂಬಂಧಿ ಸಮಸ್ಯೆ ಅಥವಾ ಪ್ರೊಸ್ಟೇಟ್ ಕ್ಯಾನ್ಸರ್

ಲೈಂಗಿಕ ಕ್ರಿಯೆ ಹಾಗೂ ಮಾನಸಿಕ ಆರೋಗ್ಯದ ನಡುವಿನ ಸಂಬಂಧ
ಖಿನ್ನತೆ, ಒತ್ತಡ ಅಥವಾ ಇತರ ಮಾನಸಿಕ ತೊಂದರೆಗಳು ಕೂಡ ಲೈಂಗಿಕ ಸಮಸ್ಯೆಗೆ ಒಂದು ಕಾರಣವಾಗಿದೆ. ಖಿನ್ನತೆ ಮುಂತಾದ ಮಾನಸಿಕ ತೊಂದರೆಗಳು ಕಾಣಿಸಿದಾಗ ಲೈಂಗಿಕ ಆಸಕ್ತಿ ಕುಂದುವುದು ಅಥವಾ ಲೈಂಗಿಕ ಕ್ರಿಯೆಯ ವೇಳೆ ತೊಂದರೆಗಳು ಕಾಣಿಸಿಕೊಳ್ಳುವುದು. ಇಂಥ ಸಮಸ್ಯೆ ಹೋಗಲಾಡಿಸಲು ಥೆರಪಿಗಳಿವೆ. ವೈದ್ಯರ ಸಲಹೆ ಮೇರೆಗೆ ನೀವು ಆ ಥೆರಪಿ ತೆಗೆದುಕೊಂಡರೆ ಸಮಸ್ಯೆ ಇಲ್ಲವಾಗುವುದು.

ಮಾನಸಿಕ ಕಾಯಿಲೆಗೆ ತೆಗೆದುಕೊಳ್ಳುವ ಔಷಧಗಳು ಲೈಂಗಿಕ ತೊಂದರೆ ಉಂಟು ಮಾಡುವುದಿಲ್ಲ
ಮಾನಸಿಕ ಚಿಕಿತ್ಸೆಗೆ ತೆಗೆದುಕೊಳ್ಳುವ ಔಷಧಿಗಳಿಂದ ಲೈಂಗಿಕ ತೊಂದರೆ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆಗಳಿವೆ. ಆದರೆ ತಜ್ಞರ ಪ್ರಕಾರ ಇಂಥ ಚಿಕಿತ್ಸೆಗಳು ಲೈಂಗಿಕ ಕ್ರಿಯೆಗೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಮಾನಸಿಕ ಚಿಕಿತ್ಸೆ ಪಡೆಯುತ್ತಿರುವ ಶೇ.70ರಷ್ಟು ಜನರಿಗೆ ಲೈಂಗಿಕವಾಗಿ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ, ಒಂದು ವೇಳೆ ಯಾವುದಾದರೂ ಅಡ್ಡ ಪರಿಣಾಮ ಕಂಡು ಬಂದರೆ ವೈದ್ಯರ ಬಳಿ ಹೇಳಿದರೆ ಸೂಕ್ತ ಪರಿಹಾರ ಸಿಗುವುದಾಗಿ ತಜ್ಞರು ಹೇಳುತ್ತಾರೆ.

ವಯಸ್ಸಾದಂತೆ ಲೈಂಗಿಕ ಕ್ರಿಯೆ ವೇಳೆ ಕೆಲವೊಂದು ಬದಲಾವಣೆ ಸಹಜ
ವಯಸ್ಸಾದಂತೆ ಲೈಂಗಿಕ ಸಾಮಾರ್ಥ್ಯ ಕೆಲವರಲ್ಲಿ ಕುಂದುವುದು, ಇದು ಸಹಜ. ಇಂಥವರು ಸೆಕ್ಸ್ ಥೆರಪಿ ತೆಗೆದುಕೊಂಡರೆ ಸೆಕ್ಸ್ ವೇಳೆ ಹೆಚ್ಚಿನ ತೊಂದರೆಗಳು ಕಾಣಿಸುವುದಿಲ್ಲ. ವಯಸ್ಸಾದಂತೆ ಆರೋಗ್ಯ ಸಮಸ್ಯೆಯೂ ಕಾಡುವುದು ಇವು ಕೂಡ ಲೈಂಗಿಕ ತೊಂದರೆಗಳು ಕಾಣಿಸಿಕೊಳ್ಳಲು ಒಂದು ಕಾರಣವಾಗಿದೆ.

ಆರೋಗ್ಯ ಚೆನ್ನಾಗಿದ್ದರೆ ಲೈಂಗಿಕ ಸಮಸ್ಯೆ ಕಾಡುವುದಿಲ್ಲ
ನಿಮ್ಮ ಆರೋಗ್ಯಕ್ಕೂ ಲೈಂಗಿಕ ಸಮಸ್ಯೆಗೂ ಒಂದಕ್ಕೊಂದು ಸಂಬಂಧವಿದೆ. ಸದೃಢ ಮೈಕಟ್ಟು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ಲೈಂಗಿಕ ಕ್ರಿಯೆ ವೇಳೆ ಸಮಸ್ಯೆ ಕಾಣಿಸುವುದಿಲ್ಲ.
ಒಟ್ಟು ಮೊತ್ತ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಬೇಕು, ಆರೋಗ್ಯಕರ ಆಹಾರ ಸೇವನೆ ಮಾಡಬೇಕು ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಧ್ಯಾನ ಮಾಡಬೇಕು.
ಸಲಹೆ: ಲೈಂಗಿಕ ತೊಂದರೆ ಕಾಣಿಸಿದರೆ ಮಾನಸಿಕವಾಗಿ ಕುಗ್ಗಬೇಡಿ, ತಜ್ಞರಲ್ಲಿ ಹೇಳಿಕೊಂಡರೆ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುವುದು.



Click it and Unblock the Notifications