Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಸಂಗಾತಿಯ ಓಲೈಕೆಯಲ್ಲಿ ನಿಮ್ಮತನ ಕಳೆದುಕೊಳ್ಳುತ್ತಿದ್ದೀರಿ ಎಂದು ಸೂಚಿಸುವ ಲಕ್ಷಣಗಳಿವು
ಪ್ರೀತಿ ಎಂಬುದು ದಿವ್ಯ ಅನುಭೂತಿ. ಪ್ರೀತಿ ಇಲ್ಲದ ಜಗತ್ತಿಲ್ಲ, ಜೀವನವೂ ಇಲ್ಲ. ಮಗು ಹುಟ್ಟಿದಾಗ ತಾಯಿ ಪ್ರೀತಿಯಿಂದ ಹಿಡಿದು, ಪತ್ನಿ, ಮಕ್ಕಳು, ಸ್ನೇಹಿತರು ಹೀಗೆ ಎಲ್ಲರೊಂದಿಗೂ ಪ್ರೀತಿಯನ್ನು ಹಂಚಿಕೊಳ್ಳುತ್ತ ಬಾಳುವುದರಲ್ಲಿ ಸಾರ್ಥಕತೆಯಿದೆ.
ಇನ್ನು ಪ್ರೌಢಾವಸ್ಥೆಗೆ ಬಂದಾಗ ಹೆಣ್ಣು ಅಥವಾ ಗಂಡು ಯಾರೇ ಆದರೂ ಪ್ರೀತಿಯಲ್ಲಿ ಬೀಳುವುದು ಸಹಜ. ತನಗಾಗಿ ಒಂದು ಜೀವ ಇದೆ ಎಂದು ಆ ಜೀವದಲ್ಲಿ ಅನುರಕ್ತವಾಗುವುದು, ಆ ಜೀವಕ್ಕಾಗಿ ಜೀವ ಕೊಡಲು ತಯಾರಾಗುವುದು ಪ್ರೀತಿಯ ಮಹಾನ್ ಶಕ್ತಿಯೇ ಆಗಿದೆ.

ತ್ಯಾಗ, ಹೊಂದಾಣಿಕೆ ಮೂಲಾಧಾರ..
ಪ್ರೀತಿ ಮಾಡಲಾರಂಭಿಸುವುದು ದೊಡ್ಡದಲ್ಲ, ಆದರೆ ಒಂದು ಬಾರಿ ಪ್ರೀತಿ ಮಾಡಿ, ಸಂಬಂಧವೊಂದು ಬೆಳೆದ ನಂತರ ಆ ಸಂಬಂಧವನ್ನು ಮೊದಲಿನಿಂದ ಕೊನೆಯವರೆಗೂ ಗಟ್ಟಿಯಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರೀತಿಯ ಸಂಬಂಧವನ್ನು ಜೋಪಾನವಾಗಿ, ಗಟ್ಟಿಯಾಗಿ ಕಾಪಿಟ್ಟುಕೊಳ್ಳಬೇಕಾದರೆ ಸಂಗಾತಿಗಳಿಬ್ಬರೂ ಒಂದಿಷ್ಟು ಹೊಂದಾಣಿಕೆ, ತ್ಯಾಗಗಳನ್ನೂ ಮಾಡಬೇಕಾಗುತ್ತದೆ.
ಆದರೆ ಇಂಥ ತ್ಯಾಗ ಮತ್ತು ಹೊಂದಾಣಿಕೆಗಳು ಕೇವಲ ಒಬ್ಬರ ಕಡೆಯಿಂದ ಮಾತ್ರ ಆದರೆ ಏನಾಗುತ್ತದೆ ಎಂಬುದನ್ನು ಸಹ ಗಮನಿಸಬೇಕಾಗುತ್ತದೆ. ಸಂಗಾತಿಗಳ ಪೈಕಿ ಕೇವಲ ಓರ್ವ ಮಾತ್ರ ಎಲ್ಲ ತ್ಯಾಗ ಹೊಂದಾಣಿಕೆಗಳನ್ನು ಮಾಡುತ್ತ ಸಂಬಂಧವನ್ನು ಗಟ್ಟಿಯಾಗಿಟ್ಟುಕೊಳ್ಳಲು ಪ್ರಯತ್ನಿಸಬಹುದು. ಇಂಥ ಸಂಬಂಧ ಹೊರಗಿನಿಂದ ಚೆನ್ನಾಗಿಯೇ ಕಂಡರೂ ಅದಕ್ಕೆ ಅರ್ಥವಿರುವುದಿಲ್ಲ. ಸಂಬಂಧವನ್ನು ಉಳಿಸಿಕೊಳ್ಳುವ ಕಾರಣಕ್ಕಾಗಿ ಒಬ್ಬ ಸಂಗಾತಿಯು ತನ್ನ ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳುವುದಾದರೆ ಅದರಲ್ಲಿ ನಿಜವಾದ ಪ್ರೀತಿ ಇರಲಾರದು.

’ನಮ್ಮತನ ಕಳೆದುಕೊಳ್ಳುವುದು’ .. ಎಷ್ಟು ಸರಿ?
ನಮ್ಮೆಲ್ಲ ಉತ್ತಮ ಗುಣಗಳು ಹಾಗೂ ಓರೆಕೋರೆಗಳನ್ನು ಒಪ್ಪಿಕೊಂಡು ನಾವಿದ್ದ ಹಾಗೆಯೇ ನಮ್ಮನ್ನು ಪ್ರೀತಿಸುವ ಸಂಗಾತಿ ಸಿಗಲಿ ಎಂಬುದು ಎಲ್ಲರ ಅಭಿಲಾಷೆಯಾಗಿರುತ್ತದೆ. ಆದರೆ ಆಳವಾದ ಪ್ರೀತಿಯ ಭಾವದಲ್ಲಿರುವಾಗ ಸಂಗಾತಿಗಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂಬುದು ಕೂಡ ಸತ್ಯ. ಆದಾಗ್ಯೂ ಹೀಗೆ ನಮ್ಮ ವ್ಯಕ್ತಿತ್ವವನ್ನೇ ನಾವು ಬದಲಾಯಿಸಿಕೊಳ್ಳುವುದನ್ನು 'ನಮ್ಮತನವನ್ನು ಕಳೆದುಕೊಳ್ಳುವುದು' ಎಂದು ಕರೆಯಲಾಗುತ್ತದೆ. ಇಂಗ್ಲೀಷ್‌ನಲ್ಲಿ ಇದನ್ನು ಡಿ-ಸೆಲ್ಫಿಂಗ್ ಎನ್ನುತ್ತಾರೆ. ನಮ್ಮ ಹವ್ಯಾಸಗಳು, ನಮ್ಮ ಮೆಚ್ಚಿನ ಚಲನಚಿತ್ರ ಹೀಗೆ ಎಲ್ಲವನ್ನೂ ದೂರ ಮಾಡಿ ಸಂಬಂಧವನ್ನು ಉಳಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ. ಆದರೆ ಈ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುವಂತಾಗುವುದು ದುರ್ದೈವ.
ಈ ಕೆಳಗೆ ನೀಡಲಾದ ನಾಲ್ಕು ಲಕ್ಷಣಗಳು ನಿಮ್ಮ ಜೀವನದಲ್ಲಿ ಕಂಡು ಬರುತ್ತಿದ್ದಲ್ಲಿ ನೀವು ನಿಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಿರುವಿರಿ ಎಂದರ್ಥ. ಈ ನಾಲ್ಕು ಲಕ್ಷಣಗಳು ನಿಮ್ಮ ಜೀವನದಲ್ಲಿಯೂ ಕಂಡು ಬರುತ್ತಿವೆಯಾ ಎಂದು ನೋಡಿ..

1. ಸಂಗಾತಿಯ ಓಲೈಕೆಗಾಗಿ ಹವ್ಯಾಸಗಳನ್ನು ಬಿಟ್ಟು ಬಿಡುವುದು
ನಮ್ಮ ಹವ್ಯಾಸಗಳು ನಮ್ಮ ವ್ಯಕ್ತಿತ್ವದ ಬಹುಮುಖ್ಯ ಅಂಗವಾಗಿರುತ್ತವೆ. ಕೆಲವರಿಗೆ ಕಟ್ಟು ಮಸ್ತಾದ ಮೈ ಬೆಳೆಸುವುದು, ಇನ್ನು ಕೆಲವರಿಗೆ ಹಾಡುವುದು, ಮತ್ತಾರಿಗೋ ಸಿನಿಮಾ ನೋಡುವುದು ಹೀಗೆ ಯಾವ್ಯಾವುದೋ ಹವ್ಯಾಸಗಳಿರಬಹುದು. ಹವ್ಯಾಸಗಳು ನಮ್ಮ ಮನಸ್ಸಿಗೆ ಖುಷಿ ನೀಡುವ ಕ್ರಿಯೆಗಳಾಗಿದ್ದು, ಇವುಗಳಲ್ಲಿ ತೊಡಗುವುದರಿಂದ ಏನೋ ಒಂದು ರೀತಿಯ ಹೆಮ್ಮೆಯ ಭಾವನೆ ಮೂಡಿ ಆತ್ಮವಿಶ್ವಾಸ ವೃದ್ಧಿಸುತ್ತದೆ.
ಇನ್ನು, ನಮ್ಮದೇ ರೀತಿಯ ಹವ್ಯಾಸಗಳನ್ನು ಹೊಂದಿರುವ ವ್ಯಕ್ತಿಗಳನ್ನು ನಾವು ಹೆಚ್ಚಾಗಿ ಭೇಟಿಯಾಗುತ್ತೇವೆ. ಜೊತೆಗೆ ಒಂದೇ ರೀತಿಯ ಹವ್ಯಾಸವುಳ್ಳ ಜನರ ಗುಂಪುಗಳನ್ನು ಸಹ ನಾವು ಕಟ್ಟಿಕೊಳ್ಳುತ್ತೇವೆ. ಆದರೆ ನಿಮ್ಮ ಯಾವುದೇ ಹವ್ಯಾಸದಲ್ಲಿಯೂ ನಿಮ್ಮ ಸಂಗಾತಿಗೆ ಕಿಂಚಿತ್ತೂ ಆಸಕ್ತಿ ಇರದೇ ಇದ್ದಲ್ಲಿ, ಅದರ ಬಗ್ಗೆ ತಿರಸ್ಕಾರ ಭಾವನೆ ಇದ್ದಲ್ಲಿ ಆಗ ಸಂಬಂಧದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆಗ ನಿಮ್ಮ ಹವ್ಯಾಸಗಳನ್ನು ಮುಂದುವರಿಸಲು ಸಾಧ್ಯವಾಗದೆ ಏನು ಮಾಡಬೇಕೆಂದು ತೋಚದಂತಾಗುತ್ತದೆ.
ಇಂಥ ಸಂದರ್ಭಗಳಲ್ಲಿ ಅನಿವಾರ್ಯವಾಗಿ ನೀವು ನಿಮ್ಮ ಹವ್ಯಾಸಗಳನ್ನು ಕಡಿಮೆ ಮಾಡಿಕೊಳ್ಳುವಿರಿ ಅಥವಾ ಸಂಪೂರ್ಣ ಬಿಟ್ಟು ಬಿಡುವಿರಿ. ಇದು ಮೇಲ್ನೋಟಕ್ಕೆ ಗಂಭೀರ ವಿಷಯವೆನ್ನಿಸದಿದ್ದರೂ ನಿಮ್ಮ ವ್ಯಕ್ತಿತ್ವವನ್ನೇ ನಿಧಾನವಾಗಿ ಕಳೆದುಕೊಳ್ಳುತ್ತ ಹೋಗುವುದು ಎಷ್ಟು ಸರಿ ಎಂದು ನೀವೇ ಚಿಂತಿಸಿ.

2. ಕುಟುಂಬ ಹಾಗೂ ಗೆಳೆಯರಿಂದ ದೂರವಾಗುವುದು
ಎಲ್ಲರ ಜೀವನದಲ್ಲಿ ಸಮಯ ಹಾಗೂ ಚೈತನ್ಯ ಇವೆರಡೂ ತುಂಬಾ ಕಡಿಮೆ ಇರುತ್ತವೆ. ಹಾಗಾಗಿ ಇವೆರಡನ್ನೂ ನಾವು ಕುಟುಂಬ ಸದಸ್ಯರು, ಗೆಳೆಯರು ಹಾಗೂ ಸಂಗಾತಿಯ ಮಧ್ಯೆ ಸಮಾನವಾಗಿ ಹಂಚುತ್ತೇವೆ. ಆದರೆ ಹೀಗೆ ಮಾಡದೆ ಇರುವ ಎಲ್ಲ ಸಮಯವನ್ನು ಸಂಗಾತಿಗಾಗಿಯೇ ಮೀಸಲಿಡುವ ಅನಿವಾರ್ಯತೆ ಎದುರಾದಲ್ಲಿ ಬೇರೆಯವರಿಂದ ಅನಿವಾರ್ಯವಾಗಿ ದೂರವಿರಬೇಕಾಗುತ್ತದೆ. ನಿಮ್ಮ ಸಂಗಾತಿಯು ತನ್ನನ್ನು ತಾನು ನಿಮ್ಮ ಜೀವನದೊಂದಿಗೆ ಸಮೀಕರಿಸಲು ನಿರಾಕರಿಸುವುದರಿಂದಲೇ ಇಂಥ ಸಮಸ್ಯೆಗಳು ಉದ್ಭವಿಸುತ್ತವೆ.
ಹೀಗಾಗಿ ಸಂಬಂಧವನ್ನು ಉಳಿಸಿಕೊಳ್ಳಲು ಸಂಗಾತಿಯ ಇಷ್ಟದಂತೆ ನಡೆದುಕೊಳ್ಳಲಾರಂಭಿಸುವಿರಿ. ಸಂಗಾತಿಯ ಇಷ್ಟದ ಜನರೊಂದಿಗೆ ಮಾತ್ರ ಕಾಲ ಕಳೆಯುವುದು ಅಥವಾ ಅವಳ/ ಆತನ ಇಷ್ಟದ ಹವ್ಯಾಸಗಳನ್ನೇ ನೀವು ಮಾಡುವುದು ಹೀಗೆ ಎಲ್ಲದರಲ್ಲೂ ಹೊಂದಾಣಿಕೆ ಮಾಡಿಕೊಳ್ಳಲಾರಂಭಿಸುವಿರಿ. ಆದರೆ ಹೀಗೆ ಮಾಡುತ್ತ ಹೋದಲ್ಲಿ ನಿಮ್ಮನ್ನು ಬೆಂಬಲಿಸುವ, ನಿಮಗಾಗಿ ಯಾವುದೇ ಕ್ಷಣದಲ್ಲಿಯೂ ಓಡಿ ಬರುವ ಎಲ್ಲರನ್ನೂ ನಿಧಾನವಾಗಿ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಗೊತ್ತಿರಲಿ.

3. ಸಂಗಾತಿಯ ಎಲ್ಲ ಕೆಲಸಗಳನ್ನು ನೀವೇ ಮಾಡುವುದು
ಸಂಗಾತಿಗಳಿಬ್ಬರು ಪ್ರೀತಿಯಲ್ಲಿ ಬಿದ್ದಾಗ ಅವರಿಬ್ಬರೂ ಒಂದೇ ಜೀವವಾಗುತ್ತಾರೆ ಎಂಬುದು ಸತ್ಯವಲ್ಲ. ಅವಳು/ ಅವನು ತನ್ನ ಸಂಗಾತಿಗೆ ಯಾವಾಗಲೂ ಬೆಂಬಲವಾಗಿ ನಿಲ್ಲಬಹುದು, ಆದರೆ ಸಂಗಾತಿಯ ಎಲ್ಲ ಕೆಲಸಗಳಿಗೂ ತಾನೇ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಸಮರ್ಥನೀಯವಲ್ಲ. ಸಂಗಾತಿಯ ಕೆಲಸದಲ್ಲಿ ಯಾವಾಗಲಾದರೂ ಸಹಾಯ ಮಾಡುವುದು ಓಕೆ. ಆದರೆ ಹಾಗಂತ ಅವರ ಎಲ್ಲ ಕೆಲಸಗಳನ್ನೂ ನೀವೇ ಮಾಡುವುದು ಎಂದಿಗೂ ಸರಿಯಲ್ಲ. ಸಂಗಾತಿಯ ಬಟ್ಟೆ ಇಸ್ತ್ರಿ ಮಾಡುವುದರಿಂದ ಹಿಡಿದು ಮೊಬೈಲ್ ರಿಚಾರ್ಜ್ ಮಾಡುವುದರವರೆಗೆ ಯಾವುದೇ ಕೆಲಸವಾದರೂ ಅದನ್ನು ಯಾವಾಗಲಾದರೊಮ್ಮೆ ಮಾಡಿದರೆ ಮಾತ್ರ ಚೆನ್ನ.

4. ಹತಾಶೆಯ ಭಾವನೆ ಕಾಡುವುದು
ಸಂಬಂಧದಲ್ಲಿ ಕೆಲವೊಮ್ಮೆ ವಿಪರೀತ ಹತಾಶೆಯ ಭಾವ ಕಾಡಲಾರಂಭಿಸುತ್ತದೆ. ವೃತ್ತಿ ಜೀವನದಲ್ಲಿನ ವಿಪರೀತ ಒತ್ತಡದಿಂದ ಯಾವ ರೀತಿಯ ಹತಾಶೆ ಕಾಡುತ್ತದೆಯೋ ಅದೇ ರೀತಿ ಸಂಬಂಧದಲ್ಲಿಯೂ ಹತಾಶೆ ಕಾಡಲಾರಂಭಿಸಬಹುದು. ಸಂಬಂಧವೊಂದನ್ನು ಉಳಿಸಿಕೊಳ್ಳಲು ನಿಮ್ಮ ಕೈಲಾಗುವುದಕ್ಕಿಂತಲೂ ಹೆಚ್ಚಿನ ಪ್ರಯತ್ನ ಮಾಡುವ ಸಂದರ್ಭ ಬಂದಲ್ಲಿ ಇಂಥದೊಂದು ಭಾವನೆ ಮೂಡಬಹುದು. ಪ್ರೀತಿ ಹಾಗೂ ಸಂಬಂಧವನ್ನು ಉಳಿಸಿಕೊಳ್ಳಲು ಇಂಥದೊಂದು ಭಾವನೆಯನ್ನು ನೀವು ಒಳಗಡೆಯೇ ಅದುಮಿಟ್ಟುಕೊಳ್ಳಬಹುದು. ಆದರೆ ಒಳಗಿಂದೊಳಗೆಯೇ ನೀವು ಭಾವನಾತ್ಮಕವಾಗಿ ಖಾಲಿಯಾಗುತ್ತ ಹೋಗುವಿರಿ.

ನಿಜವಾದ ಪ್ರೀತಿ ಇದ್ದರೆ..
ಏನೇ ಆದರೂ ಸಂಗಾತಿಗಾಗಿ ನಿಮ್ಮನ್ನು ನೀವು ಕಳೆದುಕೊಳ್ಳುವುದು ಸರ್ವಥಾ ಸಮರ್ಥನೀಯವಲ್ಲ. ನಿಜವಾಗಿಯೂ ನಿಮ್ಮ ಸಂಗಾತಿಯು ನಿಮ್ಮನ್ನು ಪ್ರೀತಿಸುತ್ತಿದ್ದರೆ ಅವರು ನಿಮ್ಮ ವ್ಯಕ್ತಿತ್ವ ಹಾಳಾಗಲು ಎಂದೂ ಬಯಸಲಾರರು.



Click it and Unblock the Notifications











