Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಹೆಚ್ಚಿನ ಸೆಕ್ಸ್‌ಗಾಗಿ ನಿಮ್ಮ ಸಂಗಾತಿಯನ್ನು ಕೇಳಲು ಉತ್ತಮ ಮಾರ್ಗಗಳು
ವೈವಾಹಿಕ ಜೀವನ ಎಂದ ಮೇಲೆ ಅಲ್ಲಿ ಏಳುಬೀಳುಗಳು ಇದ್ದೇ ಇರುತ್ತದೆ. ಇದು ಪತಿ-ಪತ್ನಿ ನಡುವಿನ ಸಂಬಂಧ ಮಾತ್ರವಲ್ಲ, ಹೆಚ್ಚಾಗಿ ಪ್ರತಿಯೊಂದು ಸಂಬಂಧದಲ್ಲಿ ಕೂಡ ಇಂತಹ ಏಳುಬೀಳುಗಳು ಇದ್ದೇ ಇರುತ್ತದೆ. ಅದರಲ್ಲೂ ವೈವಾಹಿಕ ಜೀವನದಲ್ಲಿ ಲೈಂಗಿಕ ಜೀವನ ಕೂಡ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸರಿಯಾಗಿದ್ದರೆ ಆಗ ಸಂಬಂಧವು ಸುಗಮವಾಗಿ ಸಾಗುವುದು. ಕೇವಲ ದಂಪತಿಗಳ ಲೈಂಗಿಕ ಜೀವನವು ಸರಿಯಾಗಿಲ್ಲದೆ ಇದ್ದರೆ ಅದು ಇಡೀ ಜೀವನದ ಮೇಲೆ ಪರಿಣಾಮ ಬೀರುವುದು.

ಅದರಲ್ಲೂ ಮುಖ್ಯವಾಗಿ ಕೆಲವೊಂದು ಸಲ ಲೈಂಗಿಕ ಜೀವನದಲ್ಲಿ ನಮ್ಮ ಅಗತ್ಯತೆ ಬಗ್ಗೆ ಸಂಗಾತಿಗೆ ಹೇಳುವುದು ಹೇಗೆ ಎನ್ನುವ ಪ್ರಶ್ನೆಯು ಸಹ ಮನಸ್ಸಿನಲ್ಲಿ ಕಾಡುತ್ತಲಿರುತ್ತದೆ. ಕೆಲವು ಬಾರಿ ನಿಮಗೆ ನಿಮಗೆ ಲೈಂಗಿಕ ಕ್ರಿಯೆಗೆ ಆಸಕ್ತಿ ಇದ್ದರೂ ನಿಮ್ಮ ಸಂಗಾತಿಯಲ್ಲಿ ಹೇಳಿಕೊಳ್ಳಲು ಹಿಂಜರಿಯಬಹುದು ಅಥವಾ ಅವರಲ್ಲೂ ಅದೇ ಭಾವನೆ ಇದೆಯೇ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಆಸಕ್ತಿಯನ್ನು ನಿಮ್ಮ ಸಂಗಾತಿಗೆ ತಿಳಿಸುವುದು ಹೇಗೆ?. ನಿಮ್ಮಲ್ಲಿ ಅಂತಹ ಯಾವುದೇ ರೀತಿಯ ಪ್ರಶ್ನೆಗಳು ಇದ್ದರೆ ನೀವು ಈ ಲೇಖನವನ್ನು ಓದಿಕೊಂಡು ಗೊಂದಲ ಬಗೆಹರಿಸಿಕೊಳ್ಳಿ.

1. ಮಾತಿನ ಮೂಲಕ ಬಾಂಧವ್ಯ ಬೆಸೆಯಿರಿ
ನೀವು ಸಂಗಾತಿ ಜತೆಗೆ ತುಂಬಾ ಪರಿಣಾಮಕಾರಿಯಾಗಿ ಮಾತುಕತೆ ನಡೆಸಿದರೆ, ಆಗ ಲೈಂಗಿಕ ಕ್ರಿಯೆಯ ಆವರ್ತನವನ್ನು ಹೆಚ್ಚಿಸಬಹುದು. ಮನಸ್ಸಿನಲ್ಲಿ ಯಾವುದೇ ಚಿಂತೆಯಿಲ್ಲದೆ ಇದ್ದರೆ ಆಗ ಸಂಬಂಧವು ಸರಿಯಾಗಿ ಇರುವುದು ಮತ್ತು ಲೈಂಗಿಕ ಕ್ರಿಯೆಯನ್ನು ಆನಂದಿಸಲು ಸಾಧ್ಯವಾಗುವುದು. ನೀವು ಲೈಂಗಿಕವಾಗಿ ಸಂಗಾತಿ ಜತೆಗೆ ಒಂದು ಬಾಂಧವ್ಯವನ್ನು ಬೆಸೆಯಬೇಕು. ನಿಮ್ಮ ಆಕಾಂಕ್ಷೆ ಮತ್ತು ಕನಸಿನ ಬಗ್ಗೆ ಸಂಗಾತಿ ಜತೆಗೆ ಹಂಚಿಕೊಳ್ಳಿ ಮತ್ತು ಮನಸ್ಥಿತಿ ನಿಧಾನವಾಗಿ ಬೆಳೆಸಿ.

2. ಒತ್ತಡ ಹಾಕುವುದು ಬೇಡ
ಹೆಚ್ಚು ಸೆಕ್ಸ್ ಬೇಕೆಂದು ನೀವು ಸಂಗಾತಿ ಮೇಲೆ ಒತ್ತಡ ಹೇರುವುದು ಸರಿಯಾದ ಕ್ರಮವಲ್ಲ. ಆಕೆ/ಆತ ನಿಮ್ಮ ಸಂಗಾತಿ ಎಂಬ ಕಾರಣಕ್ಕಾಗಿ ನೀವು ಅವರ ಮೇಲೆ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ. ಇದು ನಿಮ್ಮ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ಅವರಿಗೆ ಸೆಕ್ಸ್ ಯಾಕೆ ಹಿತಕರವಾಗಿಲ್ಲ ಎಂದು ನೀವು ಕೇಳಿ.

3. ಹತ್ತಿರವಾಗಲು ಪ್ರಯತ್ನಿಸಿ
ಲೈಂಗಿಕ ಕ್ರಿಯೆ ವೇಳೆ ಹೊರತಾಗಿಯೂ ನೀವು ಸಂಗಾತಿ ಜತೆಗೆ ಅನ್ಯೋನ್ಯತೆ ಹೆಚ್ಚಿಸಿಕೊಂಡರೆ ಇದು ಸಹ ನೆರವಾಗುವುದು. ಅಪ್ಪಿಕೊಳ್ಳುವಿಕೆಯು ಯಾವಾಗಲೂ ಹೆಚ್ಚು ನೆರವಾಗುವುದು. ನಿಮ್ಮ ಸಂಗಾತಿಯು ಪ್ರೀತಿಯ ಭಾವನೆ ಅನುಭವಿಸಲು ಇದು ಅಗತ್ಯವಾಗಿರುವುದು. ಸಂಗಾತಿಯ ಕೆನ್ನೆ ಎಳೆಯಹುದು, ಆಕೆ/ಆತ ಯಾವುದೇ ಕೆಲಸದಲ್ಲಿ ವ್ಯಸ್ತವಾಗಿರುವ ವೇಳೆ ನೀವು ಬೆರಳುಗಳನ್ನು ಕೂದಲಿನಲ್ಲಿ ಆಡಿಸಬಹುದು ಮತ್ತು ಎಷ್ಟು ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದು ಹೇಳಿ.

4. ಪ್ರಶಂಸಿಸಿ
ನಿಮ್ಮ ಸಂಗಾತಿ ಬಗ್ಗೆ ಮಾಡುವಂತಹ ಒಂದು ಪ್ರಶಂಸೆಯು ದಿನವಿಡೀ ಅವರನ್ನು ಅತ್ಯುತ್ಸಾಹದಲ್ಲಿ ಇಡುವುದು. ಯಾವಾಗಲು ಅವರ ದೇಹದ ಬಗ್ಗೆ ನೀವು ಪ್ರಶಂಸೆ ಮಾಡುತ್ತಲಿರಿ. ಸಂಗಾತಿಯ ದೇಹದ ಬಗ್ಗೆ ನಿಮಗೆ ತುಂಬಾ ಹೆಮ್ಮೆಯೆನಿಸಬೇಕು. ಆಕೆ/ಆತ ವಿಶ್ವದ ಅತೀ ಸುಂದರ ವ್ಯಕ್ತಿ ಎಂದು ಭಾವಿಸುವಂತೆ ನೀವು ಮಾಡಬೇಕು.

5. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ
ಲೈಂಗಿಕ ಕ್ರಿಯೆಗೆ ಮೊದಲು ನೀವು ಆಡುವಂತಹ ಆಟವು ಸಂಗಾತಿಯು ಸೆಕ್ಸ್ ಗಾಗಿ ಹೆಚ್ಚು ಬಯಸುವಂತೆ ಮಾಡುವುದು. ನೀವು ಚುಂಬನ, ಸ್ಪರ್ಶ ಇತ್ಯಾದಿಗಳು ಪ್ರಮುಖ ಪಾತ್ರ ವಹಿಸುವುದು. ಇದರ ಬಳಿಕ ನೀವು ಸೆಕ್ಸ್ ಮಾಡಿದರೆ ಆಗ ಬಯಕೆ ಕೂಡ ಹೆಚ್ಚಿರುವುದು. ಈ ಆಟಗಳಿಂದ ಸಂಗಾತಿಯನ್ನು ನೀವು ತುಂಬಾ ಪ್ರೀತಿಸುತ್ತೀರಿ ಎಂದು ಮನವರಿಕೆ ಮಾಡಿಕೊಡಬಹುದು. ಸೆಕ್ಸ್ ಗಿಂತಲೂ ಮಿಗಿಲಾಗಿ ನಿಮ್ಮ ಸಂಬಂಧವಿದೆ ಎಂದು ಅರ್ಥ ಮಾಡಿಸಿಕೊಡಬೇಕು ಮತ್ತು ಇದರಿಂದ ಸಂಗಾತಿಯು ಇನ್ನಷ್ಟು ಹತ್ತಿರವಾಗುವರು.

6. ಉತ್ಸಾಹ ಮತ್ತು ವಿನೋದ ಇರಲಿ
ಹೆಚ್ಚು ಸೆಕ್ಸ್ ಪಡೆಯಲು ನೀವು ಲೈಂಗಿಕ ಜೀವನದಲ್ಲಿ ಇನ್ನೂ ಹೆಚ್ಚಿನ ಉತ್ಸಾಹ ಹಾಗೂ ವಿನೋದವನ್ನು ಸೇರಿಸಿಕೊಳ್ಳಬೇಕು. ಏನಾದರೂ ಮೋಜಿನ ಬಗ್ಗೆ ಆಲೋಚಿಸಿ ಅಥವಾ ಲೈಂಗಿಕ ಆಟದಲ್ಲಿ ತೊಡಗಿಸಿಕೊಳ್ಳಿ. ಇದರಿಂದಾಗಿ ಪರಸ್ಪರದ ದೇಹವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೆರವಾಗುವುದು. ನಿಮ್ಮ ಹಾಗೂ ಸಂಗಾತಿ ನಡುವಿನ ಅನ್ಯೋನ್ಯತೆಯನ್ನು ಇದು ಹೆಚ್ಚಿಸುವುದು. ನಿಮ್ಮ ಹಾಗೂ ಸಂಗಾತಿ ಜತೆಗಿನ ನಿರಂತರ ಸೆಕ್ಸ್ ಗೆ ಇದು ಕಾರಣವಾಗುವುದು. ಕೆಲವೊಂದು ತುಂಟ ಮೆಸೇಜ್ ಗಳನ್ನು ಕಳುಹಿಸುವ ಮೂಲಕ ನೀವು ಸಂಗಾತಿಗೆ ಸೆಕ್ಸ್ ನ ಬಗ್ಗೆ ಮುನ್ಸೂಚನೆ ನೀಡಬಹುದು. ಸಂಬಂಧದಲ್ಲಿ ಯಾವುದೇ ರೀತಿಯ ಕಟ್ಟುಪಾಡುಗಳು ಇರುವುದಿಲ್ಲ. ನಿಮ್ಮ ಮನಸ್ಸಿನ ಮಾತು ಕೇಳಿ ಮತ್ತು ಸಂಗಾತಿಗೆ ಏನು ಬೇಕು ಎಂದು ಸರಿಯಾಗಿ ತಿಳಿಯಿರಿ.



Click it and Unblock the Notifications
