Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮದುವೆ ಮಾಡುವಾಗ ಕುಂಡಲಿಯ 18 ಗುಣ ಹೊಂದಾಣಿಕೆಯಾಗಲೇ ಬೇಕಾ?
ನೀವು ಮಾಡುವೆ ಮಾಡಿಕೊಳ್ಳಲು ನಿರ್ಧರಿಸಿದರೆ, ಜಾತಕ ಹೊಂದಾಣಿಕೆಯು ಮುಖ್ಯವಾಗಿ ನೋಡಲಾಗುವುದು. ಜಾತಕ ಹೊಂದಾಣಿಕೆಯಾಗಬೇಕೆಂದರೆ ಗುಣಗಳ ಹೊಂದಾಣಿಕೆ ಅತ್ಯವಶ್ಯಕ.
ಒಟ್ಟು 36 ಗುಣಗಳಿದ್ದು ಅವುಗಳಲ್ಲಿ ಕನಿಷ್ಠ 18 ಗುಣಗಳು ಹೊಂದಾಣಿಕೆ ಆಗಲೇಬೇಕು. ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಈ ಗುಣಗಳು ಹೊಂದಾಣಿಕೆಯಾಗುವುದು ಮುಖ್ಯ ಎಂಬ ನಂಬಿಕೆ ಹಿಂದೂಗಳ ಮದುವೆಯಲ್ಲಿದೆ.

ಈ ಜಾತಕ ಹೊಂದಾಣಿಕೆಯಾಗದಿದ್ದರೆ ಇಬ್ಬರ ನಡುವೆ ಹಲವಾರು ಸಮಸ್ಯೆಗಳು ಬರಬಹುದು, ಆದ್ದರಿಂದ ಜಾತಕದಲ್ಲಿ ಹೊಂದಾಣಿಕೆ ಮುಖ್ಯ ಎಂದು ಹೇಳಲಾಗುವುದು.
ವಿವಾಹಕ್ಕೆ 18 ಗುಣಗಳು ಹೊಂದಾಣಿಕೆಯಾಗಬೇಕು
ಜ್ಯೋತಿಷ್ಯದ ಪ್ರಕಾರ ಜಾತಕ ಹೊಂದಾಣಿಕೆಯಲ್ಲಿ ಮುಖ್ಯವಾಗಿ ಒಟ್ಟು ಗುಣಕೂಟ ಎಂಟು. ಪ್ರತಿ ಗುಣಕ್ಕೂ ಅಂಕಗಳನ್ನಿಟ್ಟು ಹೊಂದಾಣಿಕೆಯನ್ನು ಮಾಡಲಾಗುವುದು.ವಿವಾಹಕ್ಕೆ ಕನಿಷ್ಠ 18 ಗುಣಗಳು ಹೊಂದಾಣಿಕೆಯಾಗುವುದು ಅವಶ್ಯಕ. ಯಾವ ಜೋಡಿಗೆ 32 ರಿಂದ 36ಗುಣಗಳು ಹೊಂದಾಣಿಕೆಗುವುದೋ ಆ ಜೋಡಿಯನ್ನು ಅತ್ಯುತ್ತಮ ಹೊಂದಾಣಿಕೆಯ ಜೋಡಿ ಎಂದು ಪರಿಗಣಿಸಲಾಗಿದೆ. ಇವರಿಬ್ಬರ ನಡುವೆ ಎಲ್ಲಾ ವಿಷಯದಲ್ಲಿ ತುಂಬಾನೇ ಹೊಂದಾಣಿಕೆ ಇರುತ್ತದೆ ಎಂದು ಹೇಳಲಾಗುವುದು.
ಜಾತಕದಲ್ಲಿ ನೋಡಲಾಗುವ ಗುಣಗಳು
ಮುಖ್ಯವಾದ ಎಂಟುಗುಣಗಳು
ಗಣಕೂಟಕ್ಕೆ 6 ಅಂಕಗಳು, ಗ್ರಹಮೈತ್ರಿ ಕೂಟಕ್ಕೆ 5, ನಾಡಿಕೂಟಕ್ಕೆ 8, ವೈಶ್ಯ ಕೂಟಕ್ಕೆ 2, ವರ್ಣಕೂಟಕ್ಕೆ 1, ಯೋನಿಕೂಟಕ್ಕೆ 4, ತಾರಾ ಕೂಟಕ್ಕೆ 3 ಮತ್ತು ರಾಶಿಕೂಟ/ಭಾಕೂಟಕ್ಕೆ 7 ಅಂಕಗಳು ಇವೆ, ಇವುಗಳಲ್ಲಿ ಮದುವೆಯಾಗುವಾಗ ಒಟ್ಟು 36 ಗುಣಗಳಲ್ಲಿ ಹೊಂದಾಣಿಕೆಯನ್ನು ನೋಡಲಾಗುವುದು,ಅಷ್ಟು ಆದರೆ ತುಂಬಾ ಒಳ್ಳೆಯದು. ಇಲ್ಲದಿದ್ದರೆ ಕನಿಷ್ಠ 18 ಗುಣಗಳು ಹೊಂದಾಣಿಕೆಯಾಗಬೇಕು, ಇಲ್ಲದಿದ್ದರೆ ಆ ಜೋಡಿ ಒಂದಾಗಬಾರದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ಎಷ್ಟು ಗುಣಗಳು ಹೊಂದಾಣಿಕೆಯಾದರೆ ತುಂಬಾನೇ ಶ್ರೇಷ್ಠ
25 ರಿಂದ 32 ಗುಣಗಳು ಹೊಂದಾಣಿಕೆಯಾದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು. ಈ ಜೋಡಿಯ ವೈವಾಹಿಕ ಜೀವನ ಉತ್ತಮವಾಗಿರುತ್ತದೆ, ಅವರು ಸಂತೋಷವಾಗಿ ಬಾಳುತ್ತಾರೆ ಎಂದು ಹೇಳಲಾಗುವುದು. ಅದೇ 32ರಿಂದ 36 ಗುಣಗಳು ಹೊಂದಾಣಿಕೆಯಾದರೆ ಆ ಜೋಡಿ ತುಂಬಾ ಶ್ರೇಷ್ಠ ಜೋಡಿ ಎಂದು ಹೇಳಲಾಗುವುದು, ಏಕೆಂದರೆ ಜ್ಯೋತಿಷ್ಯ ಪ್ರಕಾರ ಇಂಥ ಜೋಡಿ ಒಂದಾದರೆ ಅವರಿಬ್ಬರ ಸಂಬಂಧ, ಬಾಂಧವ್ಯ ಅದ್ಭುತವಾಗಿರುತ್ತದೆ.
ಗುಣಗಳನ್ನು ಹೊಂದಿಸುವ ಮೂಲಕ ಹುಡುಗ -ಹುಡುಗಿಯ ಸ್ವಭಾವಗಳನ್ನು ಹೊಂದಾಣಿಕೆಯನ್ನು ನೋಡಲಾಗುತ್ತದೆ. ಜಾತಕ ನೋಡಿ ಈ ಜೋಡಿ ಮದುವೆಯಾಗಬಹುದೇ, ಬೇಡ್ವೆ ಎಂದು ಹೇಳಲಾಗುವುದು. ಜಾತಕದ ಹೊಂದಾಣಿಕೆಗಿಂತ ಇಬ್ಬರಲ್ಲಿ ಸ್ವಭಾವದ ಹೊಂದಾಣಿಕೆ ತುಂಬಾನೇ ಮುಖ್ಯ, ಆದರೆ ಮಾತ್ರ ಸುಂದರ ದಾಂಪತ್ಯ ನಡೆಸಲು ಸಾಧ್ಯ.



Click it and Unblock the Notifications

