Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಲೈಂಗಿಕ ಜೀವನ, ಇನ್ನಷ್ಟು ಉತ್ತಮಗೊಳಿಸಲು ಈ ರಹಸ್ಯಗಳು ತಿಳಿದಿರಲಿ!
ಹಸಿವು, ನೀರಡಿಕೆಯಂತೆಯೇ ಲೈಂಗಿಕ ಬಯಕೆಯೂ ಪ್ರತಿ ಜೀವಿಗೆ ಈ ನಿಸರ್ಗ ನೀಡಿರುವ ಕೊಡುಗೆಯಾಗಿದೆ. ಎರಡು ಜೀವಗಳು ಪರಸ್ಪರ ಮನದಾಳದಿಂದ ಒಬ್ಬರನ್ನೊಬ್ಬರು ಬಯಸುವ ನಿಸರ್ಗದ ನಿಯಮವೂ ಆಗಿದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಈ ಸಂಬಂಧವನ್ನು ಕೇವಲ ಲೈಂಗಿಕ ಉತ್ಪ್ರೇಕ್ಷೆಯ ಮಿತಿಯಲ್ಲಿಯೇ ಅವಲೋಕಿಸುವ ಕಾರಣ ಇವರಿಗೆ ಲೈಂಗಿಕ ಕ್ರಿಯೆಯೂ ಯಾಂತ್ರಿಕವೇ ಆಗಿರುತ್ತದೆ ವಿನಃ ಇದರಿಂದ ಸಂವೇದನೆಯನ್ನು ಪಡೆಯಲು ಅಸಮರ್ಥರಾಗಿರುತ್ತಾರೆ.
ದಾಂಪತ್ಯ ಜೀವನದಲ್ಲಿ ಲೈಂಗಿಕ ಕ್ರಿಯೆಯ ಪಾಲು ಕೇವಲ ಹನ್ನೊಂದು ಶೇಖಡಾ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ದಂಪತಿಗಳ ನಡುವಣ ಅನ್ಯೋನ್ಯತೆಗೆ ಲೈಂಗಿಕ ಕ್ರಿಯೆ ಪೂರಕವೇ ಹೊರತು ಇದೇ ಎಲ್ಲವೂ ಅಲ್ಲ! ಆದ್ದರಿಂದ ಇಬ್ಬರ ಮನಸ್ಸುಗಳೂ ಒಂದಾಗಬೇಕಾದರೆ ಲೈಂಗಿಕ ಕ್ರಿಯೆಗೂ ಹೊರತಾದ ಕೆಲವು ಸಂಗತಿಗಳ ಬಗ್ಗೆ ಅರಿತಿರುವುದು ಹಾಗೂ ಈ ಸಂಗತಿಗಳಿಗೆ ಹೆಚ್ಚಿನ ಮಹತ್ವ ನೀಡುವುದು ಇಬ್ಬರಿಗೂ ಅಗತ್ಯವಾಗಿದೆ.

ಈ ಮಾಹಿತಿಗಳಲ್ಲಿ ಲೈಂಗಿಕ ಜೀವನ ಹೇಗಿರಬೇಕು ಎಂಬ ಬಗ್ಗೆ ವಿಮರ್ಶಿಸುವ ಜೊತೆಗೇ ಲೈಂಗಿಕ ಜೀವನವನ್ನು ಇನ್ನೂ ಹೇಗೆ ಉತ್ತಮಗೊಳಿಸಬಹುದು ಎಂಬ ಬಗ್ಗೆಯೂ ವಿಮರ್ಶಿಸಬೇಕಾಗುತ್ತದೆ. ಇಂದಿನ ಲೇಖನದಲ್ಲಿ ಈ ವಿಚಾರದ ಕುರಿತು ಹಲವಾರು ಅಮೂಲ್ಯ ಸಂಗತಿಗಳನ್ನು ವಿವರಿಸಲಾಗಿದ್ದು ದಂಪತಿಗಳ ನಡುವಣ ಅನ್ಯೋನ್ಯತೆಯನ್ನು ಹೆಚ್ಚಿಸಲು ಖಂಡಿತವಾಗಿಯೂ ನೆರವಾಗಲಿವೆ. ನೆನಪಿಡಿ, ಲೈಂಗಿಕ ಕ್ರಿಯೆ ಎಂದರೆ ತಮ್ಮ ಸಂಗಾತಿಯ ಪ್ರತಿ ನೀವು ತೋರಲಿರುವ ಕಾಳಜಿ, ಆಕರ್ಷಣೆಯೇ ಆಗಿದ್ದು ಈ ಕಾಳಜಿಯನ್ನು ದೈಹಿಕರೂಪದಲ್ಲಿ ನಿರ್ವಹಿಸುವುದೇ ಆಗಿದೆ. ಒಂದು ವೇಳೆ ನಿಮ್ಮಲ್ಲಿರುವ ಸಾಮರ್ಥಕ್ಕೂ ಮೀರಿದ ಏನಾದರೂ ಇದೆ ಎಂದು ನಿಮ್ಮ ಸಂಗಾತಿಗೆ ನೀವು ಮನವರಿಕೆ ಮಾಡಿಕೊಟ್ಟರೆ ಈ ಮೂಲಕ ಸಂಗಾತಿಯ ಮನಸ್ಸನ್ನು ಅಪಾರವಾಗಿ ಆವರಿಸಿ ಲೈಂಗಿಕ ಜೀವನ ಹೂವಿನಂತೆ ಅರಳುತ್ತದೆ. ಬನ್ನಿ, ಇದನ್ನು ಹೇಗೆ ಸಾಧಿಸಬಹುದು ಎಂಬುದನ್ನು ನೋಡೋಣ ಹಾಗೂ ಇದುವರೆಗೆ ನೀವು ವಂಚಿತರಾಗಿದ್ದ ಈ ವಿಷಯಗಳನ್ನು ಅರಿಯೋಣ...
ನಿಮ್ಮ ಸಂಗಾತಿಗೆ ಮಸಾಜ್ ಸೇವೆ ಒದಗಿಸಿ
ಸಂಗಾತಿಯೊಂದಿಗಿನ ಲೈಂಗಿಕ ಕ್ರೀಡೆಗೆ ಮನ ಹಾತೊರೆಯುತ್ತಿದೆಯೇ? ಈ ಬಾರಿ ಇದಕ್ಕೂ ಮುನ್ನ ದೇಹವನ್ನು ನಿರಾಳವಾಗಿಸುವ ಮಸಾಜ್ ಸೇವೆಯೊಂದಿಗೆ ಏಕೆ ಪ್ರಾರಂಭಿಸಬಾರದು? ಲೈಂಗಿಕ ಕ್ರಿಯೆಗೆ ಅಗತ್ಯವಿರುವ ಶಕ್ತಿಯನ್ನು ಮಸಾಜ್ ಮೂಲಕ ಹೆಚ್ಚಿಸಲು ನೆರವಾಗುತ್ತದೆ ಹಾಗೂ ಮಿಲನಕ್ಕೆ ಮನ ಇನ್ನಷ್ಟು ಹಾತೊರೆಯಲು ಮಸಾಜ್ ನೆರವಾಗುತ್ತದೆ. ಆದರೆ ಲೈಂಗಿಕ ಕ್ರಿಯೆಯ ಬಳಿಕ ಒದಗಿಸುವ ಮಸಾಜ್ ನಿಂದಲೂ ದೇಹದ ಪ್ರತಿ ಅಂಗಾಂಶವೂ ನಿರಾಳವಾಗತೊಡಗುತ್ತದೆ ಹಾಗೂ ತಲೆಯೊಳಗೆ ಲೋಲಕವೊಂದು ಅಲುಗಾಡುತ್ತಿರುವ ಅನುಭವವೂ ಆಗುತ್ತದೆ.
ಲೈಂಗಿಕ ಕ್ರಿಯೆಯ ಬಳಿಕ ನೀಡುವ ಮಸಾಜ್ ನಿಂದ ಸಂಗಾತಿಯ ಆತ್ಮದಲ್ಲಿ ಲೀನವಾದ ಭಾಸವೂ ಆಗುತ್ತದೆ. ಈ ಬಗ್ಗೆ ಯೋಚಿಸಿದ್ದೀರಾ? ಮಸಾಜ್ ಲೈಂಗಿಕ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಲೈಂಗಿಕ ಕ್ರಿಯೆಗೂ ಮುನ್ನ ಪಡೆಯುವ ಮಸಾಜ್ ಗಿಂತಲೂ ಲೈಂಗಿಕ ಕ್ರಿಯೆಯ ಬಳಿಕ ಪಡೆಯುವ ಮಸಾಜ್ ಅನ್ನೇ ಹೆಚ್ಚಿನವರು ಇಷ್ಟಪಡುತ್ತಾರೆ. ಲೈಂಗಿಕ ಕ್ರಿಯೆಯ ಬಳಿಕ ಒದಗಿಸುವ ಮಸಾಜ್ ನಿಂದ ಸೆರೋಟೋನಿನ್ ಮತ್ತು ಓಪಿಯಾಯ್ಡ್ ಎಂಬ ರಸದೂತಗಳ ಸ್ರಾವ ಹೆಚ್ಚುತ್ತದೆ ಹಾಗೂ ಇವು ಹೆಚ್ಚಿನ ನಿರಾಳತೆಯ ಭಾವನೆಯನ್ನು ಒದಗಿಸುತ್ತವೆ. ಲೈಂಗಿಕ ಕ್ರಿಯೆಯ ಬಳಿಕ ಸಂಗಾತಿಗಳು ಪರಸ್ಪರರಿಗೆ ನೀಡುವ ಮಸಾಜ್ ಮೂಲಕ ಮುಂದಿನ ಲೈಂಗಿಕ ಕ್ರಿಯೆಯನ್ನು ಇನ್ನೂ ಉತ್ತಮಗೊಳಿಸಲು ನೆರವಾಗುತ್ತದೆ.
ಲೈಂಗಿಕ ಕ್ರಿಯೆಯ ಸಮಯದಲ್ಲಿ ಮಾತನಾಡುತ್ತಿರಿ
ಒಂದು ವೇಳೆ ಈ ಸಮಯದಲ್ಲಿ ಮೌನವಾಗಿದ್ದರೆ ಸಂಗಾತಿಯೊಡನೆ ಇನ್ನಷ್ಟು ಬೆರೆಯುವ ಹಾಗೂ ಆತ್ಮಗಳ ಮಿಲನದ ಅವಕಾಶದಿಂದ ವಂಚಿತರಾಗುತ್ತಿದ್ದೀರಿ ಎಂದೇ ಅರ್ಥ! ಈ ಸಮಯದಲ್ಲಿ ನಿಮಗೆ ಏನು ಇಷ್ಟವಾಗುತ್ತಿದೆ ಅಥವಾ ಏನು ಇಷ್ಟವಾಗುತ್ತಿಲ್ಲ ಎಂದು ಮಾತನಾಡಿ, ಇಬ್ಬರೂ ತಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸಿ. ಈ ಸಮಯದಲ್ಲಿ ನಿಮ್ಮ ಮನಸ್ಸಿನಾಳದ ಭಾವನೆಗಳನ್ನು ವ್ಯಕ್ತಪಡಿಸಬಯಸಿದರೆ ಈ ಒತ್ತಡವನ್ನು ಈ ಸಮಯದಲ್ಲಿ ನಿಮ್ಮ ಸಂಗಾತಿ ಈ ಭಾವನೆಗಳನ್ನು ತಿಳಿದುಕೊಳ್ಳುವಂತೆ ಮಾಡಿ. ಈ ಮೂಲಕ ಲೈಂಗಿಕ ಜೀವನ ಇನ್ನಷ್ಟು ಉತ್ತಮ ಹಾಗೂ ವೈವಿಧ್ಯಮಯವೂ ಆಗಿರುತ್ತದೆ.
ಇಬ್ಬರೂ ಜೊತೆಯಾಗಿ, ಆಳವಾಗಿ ಉಸಿರಾಡಿ
ಇಬ್ಬರೂ ಒಂದೇ ಲಯದಲ್ಲಿ ದೀರ್ಘವಾಗಿ ಉಸಿರಾಡುವ ಮೂಲಕ ಒಂದೂ ಶಬ್ದ ಮಾತನಾಡದೇ ಪರಸ್ಪರ ಸಂವಹನೆ ನಡೆಸಬಹುದು ಹಾಗೂ ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೀಗೆ ಮಾಡುವ ಮೂಲಕ ಲೈಂಗಿಕ ಉದ್ದೀಪನೆ ಗರಿಷ್ಟ ಮಟ್ಟಕ್ಕೇರುತ್ತದೆ. ದೀರ್ಘ ಉಸಿರಾಟದ ಹಾಗೂ ಇಬ್ಬರ ಉಸಿರಿನ ಲಯಬದ್ದವಾದ ಸದ್ದು ಪರಸ್ಪರರಿಗೇ ಮೀಸಲಾಗಿರುವ ಅನುಭವ ನೀಡುತ್ತದೆ. ಇದು ಇಂದ್ರಿಯಗಳ ಆಕರ್ಷಣೆಗೆ ನೆರವಾಗುತ್ತದೆ ಹಾಗೂ ಸಂಗಾತಿಗಳ ಆತ್ಮಗಳ ಮಿಲನಕ್ಕೆ ನೆರವಾಗುತ್ತದೆ.
ಲೈಂಗಿಕ ಕ್ರಿಯೆಯ ಬಳಿಕ ಸಂಗಾತಿಗಾಗಿ ಪುಸ್ತಕದ ಕೊಂಚ ಭಾಗವನ್ನು ಗಟ್ಟಿಯಾಗಿ ಓದಿ!
ಲೈಂಗಿಕ ಕ್ರಿಯೆಯ ಬಳಿಕ ನಿಮ್ಮ ಸಂಗಾತಿಯ ನೆಚ್ಚಿನ ಪುಸ್ತಕ ಅಥವಾ ಪಠ್ಯದ ಭಾಗವೊಂದನ್ನು ಗಟ್ಟಿಯಾಗಿ ಓದಿ ಹೇಳುವ ಮೂಲಕವೂ ಲೈಂಗಿಕ ಜೀವನ ಸುಖಮಯವಾಗುತ್ತದೆ. ಈ ಬಗ್ಗೆ ಅರಿವೇ ಇಲ್ಲದಿದ್ದ ಸಂಗಾತಿಗಳು ಹೀಗೆ ಪರಸ್ಪರ ಕೊಂಚ ಪಠ್ಯವನ್ನು ಓದಿ ಹೇಳುವ ಮೂಲಕ ಹೆಚ್ಚು ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ ಹಾಗೂ ಅನ್ಯೋನ್ಯತೆ ಹೆಚ್ಚುತ್ತದೆ ಎಂದು ಕಂಡುಕೊಂಡಿದ್ದಾರೆ.
ಜೊತೆಯಾಗಿ ಸ್ನಾನ ಮಾಡಿ
ಲೈಂಗಿಕ ಕ್ರಿಯೆಯ ಬಳಿಕ ಹೆಚ್ಚಿನವರು ಸ್ನಾನ ಮಾಡುತ್ತಾರೆ. ಆದರೆ ಒಂಟಿಯಾಗಿ! ಈ ಬಾಗಿ ಹಾಗೆ ಮಾಡಬೇಡಿ, ಸಂಗಾತಿಗಳಿಬ್ಬರೂ ಜೊತೆಯಾಗಿಯೇ ಸ್ನಾನ ಮಾಡಿ, ಇದರಿಂದ ಲೈಂಗಿಕ ಜೀವನ ಇನ್ನಷ್ಟು ಬಲಗೊಳ್ಳುತ್ತದೆ ಹಾಗೂ ಅನ್ಯೋನ್ಯತೆ ಇನ್ನಷ್ಟು ಉತ್ತಮಗೊಳ್ಳುತ್ತದೆ. ದಂಪತಿಗಳ ಆತ್ಮೀಯತೆ ಹೆಚ್ಚಲು ಇದೊಂದು ಅತ್ಯುತ್ತಮವಾದ ವಿಧಾನವೂ ಆಗಿದೆ.
ಲೈಂಗಿಕ ಕ್ರಿಯೆಯನ್ನು ಕೆಲವಾರು ಹಂತಗಳಲ್ಲಿ ಪೂರೈಸಿ
ಕೇವಲ ಒಂದು ಬಾರಿಯ ಲೈಂಗಿಕ ಕ್ರಿಯೆಯ ಬಳಿಕ ಹೆಚ್ಚಿನ ದಂಪತಿಗಳು ನಿದ್ದೆಗೆ ಶರಣಾಗಿ ಬಿಡುತ್ತಾರೆ. ಆದರೆ, ಇದು ಸಾಕಾಗದು. ಕೊಂಚ ಹೊತ್ತಿನ ಬಳಿಕ ಇನ್ನೊಂದು ಬಾರಿ ಲೈಂಗಿಕ ಕ್ರಿಯೆಗೆ ಮುಂದಾಗುವುದು ಒಂದು ಉತ್ತಮವಾದ ಆಯ್ಕೆಯಗಿದೆ. ಇದರಿಂದ ನಿಮ್ಮಲ್ಲಿರುವ ಸಾಮರ್ಥ್ಯವನ್ನು ಸಂಗಾತಿಗೆ ತಿಳಿಯಪಡುಸುವುದು ಹಾಗೂ ಲೈಂಗಿಕ ಕ್ರಿಯೆಯನ್ನು ನೀವೆಷ್ಟು ಇಷ್ಟಪಡುತ್ತೀರಿ ಎಂದು ಸಂಗಾತಿಗೆ ಮನವರಿಕೆ ಮಾಡಿಕೊಡಲೂ ಸಾಧ್ಯವಾಗುತ್ತದೆ. ಈ ಮೂಲಕ ನಿಮ್ಮ ಸಂಗಾತಿ ನಿಮ್ಮ ಸಾಂಗತ್ಯವನ್ನು ಹೆಚ್ಚು ಹೆಚ್ಚಾಗಿ ಇಷ್ಟಪಡಲು ಸಾಧ್ಯವಾಗುತ್ತದೆ ಹಾಗೂ ಲೈಂಗಿಕ ಜೀವನವನ್ನು ಇನ್ನಷ್ಟು ತೃಪ್ತಿಕರವಾಗಿಸಲು ನೆರವಾಗುತ್ತದೆ. ಒಂದು ವೇಳೆ ಮೇಲಿನ ಈ ಆರು ವಿಷಯಗಳನ್ನು ನೀವು ಇದುವರೆಗೆ ಅನುಸರಿಸದೇ ಇದ್ದಲ್ಲಿ, ಈಗಲಾದರೂ ಇವುಗಳನ್ನು ಅನುಸರಿಸಿ ನಿಮ್ಮ ದಾಂಪತ್ಯಜೀವನವನ್ನು ಇನ್ನಷ್ಟು ರಸಮಯ ಹಾಗೂ ಅನ್ಯೋನ್ಯತೆಯಿಂದ ತುಂಬಿರುವಂತೆ ಮಾಡಲು ಖಂಡಿತಾ ಸಾಧ್ಯವಾಗುತ್ತದೆ.



Click it and Unblock the Notifications













