Latest Updates
-
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ! -
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ -
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ?
ಇದೇ ಕಾರಣಕ್ಕೆ ಕೆಲವು ಮಹಿಳೆಯರು ಮದುವೆಯ ನಂತರ ಮೋಸಮಾಡುವುದು
ಕೆಲವು ಮಹಿಳೆಯರು ವಿವಾಹೇತರ ಸಂಬಂಧಗಳಲ್ಲಿ ತೊಡಗಿಕೊಳ್ಳುವುದನ್ನು ನಾವು ಕಾಣುತ್ತೇವೆ. ಕೆಲವೊಂದು ಸಲ ಇಂತಹ ಸಂಬಂಧಗಳು ದೊಡ್ಡ ಮಟ್ಟದ ದುರಂತಕ್ಕೆ ಕೂಡ ಕಾರಣವಾಗುವುದು ಇದೆ. ಆದರೆ ಮಹಿಳೆಯು ವಿವಾಹೇತರ ಸಂಬಂಧದಲ್ಲಿ ತೊಡಗಲು ಕಾರಣವೇನು? ಇದಕ್ಕೆ ಮಹಿಳೆಯನ್ನು ದೂಷಿಸುವ ಮೊದಲು ಅಥವಾ ಆಕೆಯ ವಿರುದ್ಧವಾಗಿ ತೀರ್ಪು ನೀಡುವ ಮೊದಲು ನೀವು ಎಲ್ಲಿ ತಪ್ಪು ಮಾಡಿದ್ದೀರಿ ಎಂದು ಮೊದಲು ಅರಿತುಕೊಳ್ಳಬೇಕು. ಸಂಬಂಧ ಮತ್ತು ಮದುವೆಯಲ್ಲಿ ಮೋಸ ಅಕ್ಷಮ್ಯ ಅಪರಾಧ. ಕೆಲವೊಂದು ಸಲ ಇದು ನಡೆದೇ ಹೋಗುತ್ತದೆ.
ಆದರೆ ಮೋಸ ಯಾಕೆ ಮಾಡಿದರು ಎಂದು ಯೋಚಿಸಬೇಕಾಗುತ್ತದೆ. ಸಂಬಂಧಕ್ಕೆ ಬದ್ಧರಾಗುವಂತಹ ಮಹಿಳೆಯರು ಸಮಯ ಸಾಗಿದಂತೆ ಬದಲಾಗುವರು ಮತ್ತು ತಮಗೋಸ್ಕರ ಆರ್ಥಿಕವಾಗಿ ಸ್ವತಂತ್ರವಾಗಿ ಉಳಿಯಲು ಬಯಸುವರು. ಬಾಲ್ಯದಿಂದಲೂ ತಮಗೆ ಹೇಳಿಕೊಟ್ಟಿರುವ ಮೌಲ್ಯಗಳು ಮತ್ತು ನಂಬಿಕೆಗಳಿಗೆ ಬದ್ಧರಾಗಿರುವರು. ಮದುವೆಯಾದ ಬಳಿಕ ಮಹಿಳೆಯು ತನ್ನ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುವಳು.
ಆದರೆ ನೀವು ಹೊರಗಡೆ ಹೋಗಿ ಸುಖ ಪಡೆಯುತ್ತಿದ್ದರೆ, ಆಗ ಮಹಿಳೆಯು ಸಾಕಷ್ಟು ಸಹಿಸಿಕೊಂಡ ಬಳಿಕ ಅಂತಿಮವಾಗಿ ತಾನು ಕೂಡ ಅದೇ ದಾರಿ ಹಿಡಿಯುವಳು. ಮದುವೆ ಬಳಿಕ ಸಂಬಂಧವನ್ನಿಟ್ಟುಕೊಳ್ಳುವುದು ಮಹಿಳೆಗೆ ಸಂತೋಷ ನೀಡುವುದಿಲ್ಲ. ಆದರೆ ತನ್ನ ಆಕಾಂಕ್ಷೆ ಈಡೇರಿಸಲು ನೀವು ಸಮರ್ಥರಾಗಿಲ್ಲವೆನ್ನುವುದನ್ನು ಆಕೆ ಅರ್ಥ ಮಾಡಿಕೊಂಡಿರುವಳು....

ಆಕೆಗೆ ತನ್ನ ಹಿಂದಿನ ಪ್ರೇಮ ಮರೆಯಲಾಗುತ್ತಿಲ್ಲ
ಮದುವೆ ಬಳಿಕ ಸಂಬಂಧವನ್ನಿಟ್ಟುಕೊಳ್ಳಲು ದೊಡ್ಡ ಕಾರಣ ಇದಾಗಿದೆ. ಮಹಿಳೆಯು ಮದುವೆಯಾದ ಬಳಿಕ ತನಗೆ ಸಿಗುತ್ತಿರುವಂತಹ ಪ್ರೀತಿಗೆ ಸಮಾನವಾದ ಪ್ರೀತಿ ನೀಡಲು ಮತ್ತು ಆ ಪ್ರೀತಿ ಸ್ವೀಕರಿಸಲು ವಿಫಲವಾಗುವುದು. ಹಿಂದಿನ ಅನುಭವಗಳು ಆಕೆಯನ್ನು ಕಾಡುತ್ತಿರುವುದು ಮತ್ತು ಇದನ್ನು ಆಕೆಗೆ ಮರೆಯಲು ಆಗುತ್ತಿಲ್ಲ. ಇದರಿಂದ ಆಕೆಗೆ ಮದುವೆಯ ಸಂಬಂಧವನ್ನು ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ.

ಆಕೆಗೆ ಮದುವೆ ಬೇಸರ ಮೂಡಿಸಿರಬಹುದು
ಮದುವೆಯು ಮಹಿಳೆಗೆ ಬೇಸರ ಮೂಡಿಸಿದಾಗ ಆಕೆ ಹೊರಗೆ ಹುಡುಕಲು ಆರಂಭಿಸುವಳು. ಇದರಿಂದಾಗಿ ವಿವಾಹೇತರ ಸಂಬಂಧ ಉಂಟಾಗುವುದು. ನೀವು ಮತ್ತು ನಿಮ್ಮ ಪತ್ನಿ ಸರಿಯಾಗಿ ಮಾತುಕತೆ ನಡೆಸದೆ ಮತ್ತು ಸಂಬಂಧವನ್ನು ಉತ್ತಮಪಡಿಸುವ ವಿಚಾರಗಳಲ್ಲಿ ತೊಡಗದೆ ಇದ್ದರೆ ಆಗ ಹೀಗೆ ಆಗುವುದು. ಇದನ್ನು ತಪ್ಪಿಸಲು ನೀವು ಪತ್ನಿಯ ಜತೆಗೆ ಸರಿಯಾಗಿ ಮಾತುಕತೆ ನಡೆಸಿ, ಆಕೆಯನ್ನು ಸಂತೋಷವಾಗಿಡಿ. ಇದಕ್ಕೆಲ್ಲಾ ಕಾರಣ ಸಂವಹನದ ಕೊರತೆ..

ಭಾವನಾತ್ಮಕ ಪರಿತ್ಯಾಗ
ಸಂಬಂಧಲ್ಲಿ ಭಾವನಾತ್ಮಕ ಬಾಂಧವ್ಯ ಬೇಕಾಗುವುದು ಮತ್ತು ಇದು ಭಾವನಾತ್ಮಕವಾಗಿ ನೀವು ಪತ್ನಿಯ ಜತೆಗೆ ಒಳ್ಳೆಯ ಸಂಬಂಧ ಬೆಳೆಸಿದ್ದರೆ ಆಗ ಆಕೆ ಮೋಸ ಮಾಡುವುದಿಲ್ಲ. ನೀವು ಭಾವನಾತ್ಮಕವಾಗಿ ಆಕೆ ಜತೆಗಿದ್ದರೆ ಆಗ ಬೇರೆಯವರು ಆಕೆಯ ಭಾವನೆಗಳನ್ನು ಕದಿಯಲು ಆಗಲ್ಲ.

ಹಗೆ
ಕೆಲವೊಂದು ಸಲ ಮಹಿಳೆಯು ವಿವಾಹೇತರ ಸಂಬಂಧದಲ್ಲಿ ತೊಡಗಿಕೊಳ್ಳುವುದು ಆಕೆ ಹಗೆ ಸಾಧಿಸುವ ಸಲುವಾಗಿ. ತನ್ನ ಸಂಗಾತಿಯು ಮಾಡಿರುವಂತಹ ಮೋಸ ಮತ್ತು ಅಗೌರವದಿಂದಾಗಿ ಆಕೆ ಹಗೆ ಸಾಧಿಸಬಹುದು. ತಾವು ಪುರುಷರಷ್ಟೇ ಎಂದು ತೋರಿಸಲು ಬಯಸುವರು. ಯಾವಾಗಲೂ ಒತ್ತಡದಲ್ಲಿ ಇರುವುದರಿಂದ ಹೇಗೆ ಆಗುವುದು ಎಂದು ತಮ್ಮ ಪತಿಗೆ ತೋರಿಸಲು ಹೀಗೆ ಮಾಡುವುದು ಇದೆ. ಇನ್ನು ಕೆಲವೊಮ್ಮೆ ಕೆಲವೊಂದು ಸಲ ಸಂಬಂಧಲ್ಲಿ ಪರಸ್ಪರ ವೈರತ್ವ ಇಟ್ಟುಕೊಳ್ಳುವುದು. ಹಿಂದಿನ ವಿಷಯಗಳನ್ನು ಜಗಳ ಮಾಡುವುದು ಸಾಮಾನ್ಯ. ಆದರೆ ಸಂಬಂಧದಲ್ಲಿ ಇದು ನಿಷಿದ್ಧ. ವೈರತ್ವ ಇಟ್ಟುಕೊಂಡರೆ ಆಗ ನಿಮ್ಮ ಸಂಗಾತಿ ಬಗ್ಗೆ ಅಸಹಿಷ್ಣುತೆ ಭಾವನೆ ಉಂಟಾಗುವುದು. ಇಲ್ಲಿ ಪ್ರೀತಿ ಒಳಗೊಳಗೆ ಉಸಿರುಗಟ್ಟಿ ಸಾಯುವುದು ಮತ್ತು ಕ್ರೋಧ ಹೆಚ್ಚಾಗುವುದು. ಕ್ರೀಡೆಯಲ್ಲಿ ಸೋಲಿಗೆ ಪ್ರತೀಕಾರ ಸರಿ. ಆದರೆ ಜೀವನದಲ್ಲಿ ಅಲ್ಲ. ಕ್ಷಮಿಸಿ ಹಾಗೂ ಮರೆತುಬಿಡಿ. ಇದು ಜೀವನದಲ್ಲಿ ಪಾಲಿಸಬೇಕಾದ ನಿಯಮ.

ಲೈಂಗಿಕ ಅತೃಪ್ತಿ
ಮಹಿಳೆಯು ತನಗೆ ಲೈಂಗಿಕ ಸುಖವು ಕಡಿಮೆಯಾದ ಸಮಯದಲ್ಲಿ ಹೀಗೆ ಮಾಡುವುದಿದೆ. ಸಂಬಂಧಲ್ಲಿ ಆಕೆ ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಆಕೆಗೆ ಪರಾಕಾಷ್ಠೆ ತಲುಪಲು ಸಾಧ್ಯವಾಗದೆ ಇರುವುದು. ಇದನ್ನು ಆಕೆ ಪಡೆಯಲು ಸಲುವಾಗಿ ಬೇರೆ ಸಂಬಂಧದಲ್ಲಿ ತೊಡಗುವಳು.

ಸ್ವಾಭಿಮಾನ ಕಡಿಮೆಯಾಗಿರುವುದು
ಮಹಿಳೆಯರು ವಿವಾಹೇತರ ಸಂಬಂಧದಲ್ಲಿ ತೊಡಗಿಕೊಳ್ಳಲು ಕಾರಣವೆಂದರೆ ಅವರ ಸ್ವಾಭಿಮಾನವು ಕಡಿಮೆಯಾಗಿರುವುದು ಮತ್ತು ಇದನ್ನು ಪಡೆಯಲು ಅವರು ಬೇರೆಯವರ ಜತೆಗೆ ಸಂಬಂಧ ಬೆಳೆಸುವರು. ಇಂತಹ ಸಂಬಂಧಗಳು ಪತಿ-ಪತ್ನಿ ಮಧ್ಯೆ ಜಗಳವಿದ್ದಾಗ ಸಂಭವಿಸುವುದು. ಪ್ರತೀ ಸಲವು ನೀವು ಪತ್ನಿಯನ್ನು ಕಡೆಗಣಿಸಿದಾಗ ಸ್ವಾಭಿಮಾನವು ಆಕೆಯಲ್ಲಿ ಕಡಿಮೆಯಾಗುವುದು ಮತ್ತು ತಮಗೆ ಗೌರವ ನೀಡುವಂತಹ ಪುರುಷನೊಂದಿಗೆ ಆಕೆ ಸಂಬಂಧ ಬೆಳೆಸಿಕೊಳ್ಳುವಳು. ಮಹಿಳೆಯು ವಿವಾಹೇತರ ಸಂಬಂಧದಲ್ಲಿ ತೊಡಗಿದ್ದರೆ ಈ ಮೇಲಿನ ಕಾರಣಗಳು ಇರಬಹುದು. ಪತಿಗೆ ಮೋಸ ಮಾಡಿ ಬೇರೆ ಸಂಬಂಧ ಬೆಳೆಸಲು ಇವು ಕಾರಣಗಳು. ನೀವು ತುಂಬಾ ಆಳವಾಗಿ ಇದರ ಬಗ್ಗೆ ಪರಾಮರ್ಶೆ ನಡೆಸಿದಾಗ ನಿಮಗೆ ಇದನ್ನು ತಿಳಿಯಲು ನೆರವಾಗುವುದು. ಮಹಿಳೆ ಅಥವಾ ಪುರುಷರು ಏನು ಮಾಡಿದ್ದಾರೆ ಎನ್ನುವ ಮೇಲೆ ತೀರ್ಪು ನೀಡಬೇಡಿ. ಅವರಿಗೆ ಏನು ಸಿಕ್ಕಿಲ್ಲವೆನ್ನುವ ಬಗ್ಗೆ ಆಳವಾಗಿ ಚಿಂತಿಸಿ. ನಾವು ತೀರ್ಪು ನೀಡುವ ಬದಲು ಅದರ ಹಿಂದೆ ಇರುವಂತಹ ಕಾರಣಗಳನ್ನು ಹುಡುಕಿ ಅದಕ್ಕೆ ಸರಿಯಾದ ಪರಿಹಾರ ಕೊಡಬೇಕು ಮತ್ತು ತಪ್ಪು ಯಾರಿಂದ ಆಗಿದೆ ಎಂದು ತಿಳಿಯಬೇಕು. ನಿಮಗೆ ಈ ಲೇಖನವು ಇಷ್ಟವಾಗಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ನಮಗೆ ಬರೆಯಿರಿ.



Click it and Unblock the Notifications











