Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಹೆಚ್ಚು-ಹೆಚ್ಚು ಸೆಕ್ಸ್‌ನಿಂದ ಗಂಡ-ಹೆಂಡತಿಯ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುತ್ತದೆ...
ಹೌದು, ನೀವು ಸರಿಯಾಗಿಯೇ ಓದಿದಿರಿ, ಸಂಬಂಧ ಗಟ್ಟಿಗೊಳ್ಳಲು ಹೆಚ್ಚು ಹೆಚ್ಚು ಲೈಂಗಿಕ ಸಂಪರ್ಕ ನೆರವಾಗುತ್ತದೆ ಹಾಗೂ ಅನ್ಯೋನ್ಯತೆಗೆ ಅಗತ್ಯವಾದ ಎಲ್ಲವೂ ಉತ್ತಮಗೊಳ್ಳುತ್ತದೆ. ಆದರೆ ಇದೊಂದೇ ಸಂಬಂಧದ ಎಲ್ಲವನ್ನೂ ಹೇಗೆ ಉತ್ತಮಗೊಳಿಸುತ್ತದೆ? ವಾಸ್ತವದಲ್ಲಿ ಸಂಗಾತಿಗಳು ಪಡೆಯಬಹುದಾದ ಆತ್ಮೀಯ ಸಂಬಂಧದಲ್ಲಿ ಪರಸ್ಪರರ ನಡುವಣ ದೈಹಿಕ ಸಂಪರ್ಕವೇ ಅತಿ ಮುಖ್ಯವಾಗಿದೆ ಹಾಗೂ ಇದಕ್ಕೆ ಸಾಟಿಯೇ ಇಲ್ಲ!
ಮನುಷ್ಯನನ್ನು ಪೂರ್ಣಗೊಳಿಸುವ ಈ ನಿಸರ್ಗದತ್ತ ಕೊಡುಗೆಯ ಮೂಲಕ ತನಗೊಬ್ಬ ಸಂಗಾತಿ ಇದ್ದು ತನ್ನ ದೇಹ, ಆತ್ಮ ಹಾಗೂ ಮನಗಳು ಪರಸ್ಪರ ಒಂದಾದಲು, ಈ ಮೂಲಕ ನಿಸರ್ಗದ ನಿಯಮವನ್ನು ಪೂರೈಸಲು ಲೈಂಗಿಕ ಸಂಪರ್ಕ ಅತಿ ಸೂಕ್ತವಾಗಿದೆ. ಹೆಚ್ಚು ಹೆಚ್ಚು ಸಂಪರ್ಕದಿಂದ ಸಂಬಂಧದಲ್ಲಿ ಹೆಚ್ಚಿನದನ್ನು ಪಡೆಯಲು ಸಾಧ್ಯವಾಗುತ್ತದೆ ಹಾಗೂ ಈ ನಿಟ್ಟಿನಲ್ಲಿ ಸಂಗಾತಿಗಳು ಪರಸ್ಪರ ಪ್ರೀತಿ ಎಂಬ ಅದ್ಭುತವಾದ ಬಂಧನಕ್ಕೆ ಒಳಗಾಗಿರುವ ಮೂಲಕ ಜೀವನದ ಸಾರ್ಥಕ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.
ಆದರೆ ಸದಾಶಿವನಿಗೆ ಸದಾ ಅದೇ ಧ್ಯಾನ ಎಂಬಂತಾಗಬಾರದಲ್ಲ, ಹಾಗಾಗಿ ಸಂಬಂಧದಲ್ಲಿ ಕಾಮವೇ ಎಲ್ಲವೂ ಅಲ್ಲ, ಆದರೆ ಕಾಮವಿಲ್ಲದಿದ್ದರೆ ಏನೂ ಇಲ್ಲ ಎಂಬ ಸತ್ಯವನ್ನೂ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಈ ವಿಷಯವನ್ನು ಸ್ಪಷ್ಟಪಡಿಸಲು ನಾವು ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿದ್ದು ಈ ವಿಷಯವನ್ನು ಇನ್ನಷ್ಟು ವಿಸ್ತಾರವಾಗಿ ಅರಿಯಲು ಸಾಧ್ಯವಾಗಲಿದೆ...

ಹೆಚ್ಚಿನ ಲೈಂಗಿಕ ಸಂಪರ್ಕ ಅಂದರೆ ಹೆಚ್ಚಿನ ಧನಾತ್ಮಕ ಧೋರಣೆ
ಮನಸ್ಸಿನ ಒತ್ತಡವನ್ನು ನಿವಾರಿಸಲು ಕಾಮೋತ್ತೇಜತೆ ನೈಸರ್ಗಿಕ ವರದಾನವಾಗಿದೆ ಹಾಗೂ ಈ ಕ್ರಿಯೆಯಲ್ಲಿ ನಡೆಯುವ ದೈಹಿಕ ವ್ಯಾಯಾಮವೂ ಸಂಬಂಧದಲ್ಲಿ ಹೆಚ್ಚಿನ ದನಾತ್ಮಕ ಧೋರಣೆಯನ್ನು ತಳೆಯಲು ಸಾಧ್ಯವಾಗುತ್ತದೆ. ಯಾವುದೇ ಸಂಬಂಧದಲ್ಲಿ ಧನಾತ್ಮಕ ಧೋರಣೆ ತೀರಾ ಅಗತ್ಯವಾಗಿದ್ದು ಹೆಚ್ಚು ಹೆಚ್ಚು ಲೈಂಗಿಕ ಸಂಪರ್ಕದಿಂದ ಪರಸ್ಪರರ ಪ್ರತಿ ಧನಾತ್ಮಕ ಧೋರಣೆ ಹೆಚ್ಚು ಹೆಚ್ಚು ತಳೆಯಲು ಸಾಧ್ಯವಾಗುತ್ತದೆ. ಪರಸ್ಪರ ಧನಾತ್ಮಕ ಧೋರಣೆ ತಳೆಯುವ ಮೂಲಕ ಸಂಗಾತಿಗಳು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆತ್ಮೀಯವಾದ ಸಂಬಂಧದಲ್ಲಿ ಒಳಗೊಳ್ಳುತ್ತಾರೆ ಹಾಗೂ ಪರಸ್ಪರ ದೂರಾಗುವುದನ್ನು ಊಹಿಸಲೂ ಅಸಮರ್ಥರಾಗುತ್ತಾರೆ. ಧನಾತ್ಮಕ ಧೋರಣೆಯಿಂದ ಜೀವನದಲ್ಲಿ ಮುಂದೆ ಸಾಗಲು ಹಾಗೂ ಜೀವನದಲ್ಲಿ ಮುಂದೇನಾಗಬೇಕು ಎಂಬುದನ್ನು ನಿರ್ಧರಿಸಲು ಹಾಗೂ ಇದಕ್ಕಾಗಿ ಏನು ಮಾಡಬೇಕು ಎಂಬುದು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ. ಧನಾತ್ಮಕ ಧೋರಣೆಯಿಂದ ಸಂಗಾತಿಯೊಡನೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಹೆಚ್ಚು ಹೆಚ್ಚು ಲೈಂಗಿಕ ಸಂಪರ್ಕ ಪಡೆದಷ್ಟೂ ಸಂಗಾತಿಗಳ ನಡುವಣ ಬಂಧವೂ ಗಟ್ಟಿಯಾಗುತ್ತಾ ಸಾಗುತ್ತದೆ. ಸಮಯ ಸಾಗಿದಂತೆ ಪರಸ್ಪರರಲ್ಲಿ ಹೆಚ್ಚು ಹೆಚ್ಚು ಧನಾತ್ಮಕ ಧೋರಣೆ ಹಾಗೂ ಗೌರವ, ಆತ್ಮೀಯತೆ ಹೆಚ್ಚುತ್ತದೆ ಹಾಗೂ ಜೀವನ ಸ್ವರ್ಗಸಮಾನವಾಗುತ್ತದೆ.

ಹೆಚ್ಚು ಲೈಂಗಿಕ ಸಂಪರ್ಕ ಅಂದರೆ ಕನಿಷ್ಟ ಮಾನಸಿಕ ಒತ್ತಡ
ಲೈಂಗಿಕ ಸಂಪರ್ಕ ಸಂಗಾತಿಗಳ ನಡುವಣ ಅತ್ಯಂತ ಖಾಸಗಿಯಾದ ವಿಷಯವಾಗಿದೆ. ಇಂದಿನ ಜನಾಂಗ ಹಿಂದಿನವರಿಗಿಂತಲೂ ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಒತ್ತಡವನ್ನು ನಿವಾರಿಸಲು ಸಂಗಾತಿಗಳು ಸಾಧ್ಯವಾದಷ್ಟೂ ಹೆಚ್ಚು ಲೈಂಗಿಕ ಸಂಪರ್ಕಕ್ಕೆ ಒಳಗಾಗುವುದು ಅಗತ್ಯ. ಇದರಿಂದ ಮಾನಸಿಕವಾಗಿ ನಿರಾಳತೆ ಅನುಭವಿಸುವುದು ಮಾತ್ರವಲ್ಲ ಪರಸ್ಪರ ಹತ್ತಿರಾಗಲೂ ನೆರವಾಗುತ್ತದೆ. ಮಾನಸಿಕ ಒತ್ತಡ ಆರೋಗ್ಯದ ಮೇಲೆ ಹಲವಾರು ಪ್ರತಿಕೂಲ ಪರಿಣಾಮಗಳನ್ನುಂಟುಮಾಡುತ್ತದೆ ಹಾಗೂ ಕೆಲವಾರು ಆರೋಗ್ಯದ ತೊಂದರೆಗಳಿಗೆ ಮೂಲವಾಗುತ್ತದೆ. ಲೈಂಗಿಕವಾಗಿ ಚಟುವಟಿಕೆಯಿಂದಿರುವುದು ಈ ಒತ್ತಡವನ್ನು ನಿವಾರಿಸಿ ಆರೋಗ್ಯವನ್ನು ವೃದ್ದಿಸುತ್ತದೆ ಹಾಗೂ ಕೆಲವಾರು ಕಾಯಿಲೆಗಳಿಂದ ದೂರವಿರಿಸುತ್ತದೆ.

ಹೆಚ್ಚು ಲೈಂಗಿಕ ಸಂಪರ್ಕ ಅಂದರೆ ಹೆಚ್ಚು ಆನ್ಯೋನ್ಯತೆ
ಸಂಬಂಧದಲ್ಲಿ ಲೈಂಗಿಕ ಸಂಪರ್ಕ ಹೆಚ್ಚಿದಷ್ಟೂ ಸಂಗಾತಿಗಳ ನಡುವಣ ಅನ್ಯೋನ್ಯತೆ ಹತ್ತು ಹಲವಾರು ಪಟ್ಟು ಹೆಚ್ಚುತ್ತದೆ. ಸಂಬಂಧದಲ್ಲಿರುವರು ತಮ್ಮ ಸಂಗಾತಿಯ ಸಂಪರ್ಕ ಬಯಸುತ್ತಾರೆ ಹಾಗೂ ಈ ಬಯಕೆ ಸಂಬಂಧ ಗಟ್ಟಿಗೊಳ್ಳಲು ಅಗತ್ಯವೂ ಆಗಿದೆ. ದಂಪತಿಗಳ ನಡುವೆ ಈ ಬಯಕೆ ಅನ್ಯೋನ್ಯತೆ ಹೆಚ್ಚಲು ನೆರವಾಗುತ್ತದೆ. ದಾಂಪತ್ಯದಲ್ಲಿರುವವರು ಅನ್ಯೋನ್ಯತೆಯ ಅಗತ್ಯದ ದೃಷ್ಟಿಯಿಂದಲಾದರೂ ಹೆಚ್ಚು ಹೆಚ್ಚು ದೈಹಿಕ ಸಂಪರ್ಕ ಹೊಂದುವುದು ಅಗತ್ಯವಾಗಿದೆ. ದಂಪತಿಗಳ ನಡುವಣ ಪ್ರೇಮ ಅನ್ಯೋನ್ಯತೆಯ ತಳಹದಿಯ ಮೇಲೆ ನಿಂತಿದ್ದು ಹೆಚ್ಚು ಹೆಚ್ಚು ಲೈಂಗಿಕ ಕ್ರಿಯೆ ಈ ತಳಹದಿಯನ್ನು ಹೆಚ್ಚು ಹೆಚ್ಚು ಬಲಗೊಳಿಸುತ್ತಾ ಹೋಗುತ್ತದೆ. ಈ ಸಂಪರ್ಕ ಸತತವಾಗಿದ್ದಷ್ಟೂ ಸಂಬಂಧವೂ ಹೊಸತನದಿಂದಲೇ ಕೂಡಿರುತ್ತದೆ.

ಹೆಚ್ಚು ಲೈಂಗಿಕ ಸಂಪರ್ಕ ಅಂದರೆ ಇನ್ನೂ ಉತ್ತಮ ಸಂವಹನ
ಪರಸ್ಪರ ಪ್ರೀತಿಸುವ ಇಬ್ಬರು ವ್ಯಕ್ತಿಗಳ ನಡುವೆ ಕೇವಲ ಪದಗಳು ಮಾತ್ರವೇ ಮಾತನಾಡುವುದಿಲ್ಲ, ಬದಲಿಗೆ ಹೃದಯಗಳು ನೇರವಾಗಿ ಮಾತನಾಡುತ್ತವೆ ಹಾಗೂ ಈ ಸಂವಹನಕ್ಕೆ ಲೈಂಗಿಕ ಸಂಪರ್ಕ ಒಂದು ಸೇತುವೆಯಾಗಿದೆ. ದೈಹಿಕ ಹಾಗೂ ಭಾವನಾತ್ಮಕ ಸಂಬಂಧವನ್ನು ಪ್ರಚೋದಿಸುವ ಮೂಲಕ ಪರಸ್ಪರ ಒಂದೇ ಆತ್ಮವಾಗಲು ಸಾಧ್ಯವಾಗುತ್ತದೆ. ಇಬ್ಬರ ಆತ್ಮಗಳು ಒಂದಾಗಿ ದೇಹವೆರಡು ಆತ್ಮವೊಂದೇ ಎನ್ನುವಷ್ಟು ಆತ್ಮೀಯತೆ ಬೆಳೆಯಲು ಲೈಂಗಿಕ ಸಂಪರ್ಕವೇ ಮೂಲವಾಗಿದೆ. ಲೈಂಗಿಕ ಸಂಪರ್ಕದ ಸಮಯದಲ್ಲಿ ಪರಸ್ಪರರ ದೇಹಗಳು ಬೆರೆತಾಗ ಕೇವಲ ಮಾತುಗಳು ಮಾತ್ರವಲ್ಲ, ಆತ್ಮಗಳೂ ಪರಸ್ಪರ ಸಂವಹನ ನಡೆಸುತ್ತವೆ. ಹೆಚ್ಚು ಹೆಚ್ಚು ಲೈಂಗಿಕ ಸಂಪರ್ಕದಿಂದ ಹೆಚ್ಚು ಬೆವರು ಹರಿದಷ್ಟೂ ಭಾವನಾತ್ಮಕ ಮತ್ತು ದೈಹಿಕ ಸಂಹವನವೂ ಉತ್ತಮಗೊಳ್ಳುತ್ತದೆ.

ಹೆಚ್ಚು ಲೈಂಗಿಕ ಸಂಪರ್ಕ ಅಂದರೆ ಹೆಚ್ಚು ಪ್ರೀತಿ
ಹೆಚ್ಚು ಹೆಚ್ಚು ಲೈಂಗಿಕ ಸಂಪರ್ಕದಿಂದ ಸಂಬಂಧ ಇನ್ನೂ ಹೆಚ್ಚು ತೃಪ್ತಿಕರವಾಗುತ್ತದೆ. ದಂಪತಿಗಳ ನಡುವೆ ಅತಿ ಹೆಚ್ಚಿನ ಪ್ರೀತಿ ಹೊಂದಲು ಹೆಚ್ಚು ಹೆಚ್ಚು ಲೈಂಗಿಕ ಸಂಪರ್ಕ ಅಗತ್ಯವಾಗಿದೆ. ಈ ವಾಸ್ತವವನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರೀತಿ ಬೆಳೆಯಲು ಪರಸ್ಪರರ ನಡುವೆ ಭಾವನಾತ್ಮಕ ಸಂಪರ್ಕದ ಜೊತೆಗೇ ದೈಹಿಕ ಸಂಪರ್ಕವೂ ಅಗತ್ಯವಾಗಿದೆ. ಭಾವನಾತ್ಮಕ ಸಂಪರ್ಕ ಪದಗಳ ಮೂಲಕ ನಡೆದರೆ ಲೈಂಗಿಕ ಸಂಪರ್ಕ ದಂಪತಿಗಳು ಪರಸ್ಪರರಿಗಾಗಿ ನೀಡುವ ಅರ್ಪಣಾಭಾವವೂ ಆಗಿದೆ. ಲೈಂಗಿಕ ಸಂಪರ್ಕದ ಮೂಲಕ ಪರಸ್ಪರರು ಇನ್ನೊಬ್ಬರ ಪ್ರತಿ ಗೌರವಭಾವನೆ, ಆದರಗಳನ್ನು ವೃದ್ದಿಸಿಕೊಳ್ಳಲು ದೇಹದಲ್ಲಿ ಸ್ರವಿಸುವ ಕೆಲವಾರು ರಾಸಾಯನಿಕ ರಸದೂತಗಳೂ ಕಾರಣವಾಗಿವೆ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಹೆಚ್ಚು ಗೌರವಭಾವನೆ ಹಾಗೂ ಪ್ರೀತಿ ಹೆಚ್ಚಬೇಕಾದರೆ ಹೆಚ್ಚು ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ದೇಹಕ್ಕೆ ಅಗತ್ಯವಾದ ರಸದೂತಗಳು ಸ್ರವಿಸುತ್ತವೆ ಹಾಗೂ ಪ್ರೀತಿ ಹೆಚ್ಚಲು ನೆರವಾಗುತ್ತವೆ.

ಸಂಬಂಧ ಹೆಚ್ಚು ಪ್ರಕಾಶಮಾನವಾಗಲು ಲೈಂಗಿಕ ಸಂಪರ್ಕ ನೆರವಾಗುತ್ತದೆ
ದಂಪತಿಗಳ ನಡುವಣ ಸಂಬಂಧ ಹೆಚ್ಚು ಹೆಚ್ಚು ಪ್ರಕಾಶಿಸಲು ಹೆಚ್ಚು ಹೆಚ್ಚು ಲೈಂಗಿಕ ಚಟುವಟಿಕೆಯಲ್ಲಿ ಒಳಗೊಳ್ಳುವುದು ಅಗತ್ಯವಾಗಿದೆ. ಯಾವುದೇ ಸಂಬಂಧ ಬಲಗೊಳ್ಳಲು ಪ್ರಕಾಶಿಸುವುದು ಅಗತ್ಯವಾಗಿದೆ, ಈ ಮೂಲಕ ಪರಸ್ಪರರ ನಡುವೆ ಪ್ರೀತಿ ಹೆಚ್ಚಲು ನೆರವಾಗುತ್ತದೆ. ಏಕೆಂದರೆ ಸಂಗಾತಿಯ ಮುಖ ನೋಡಿದಾಕ್ಷಣ ಪರಸ್ಪರರಲ್ಲಿ ಆನಂದದ ಭಾವನೆ ಮೂಡುತ್ತದೆ ಹಾಗೂ ಹಿಂದಿನ ರಾತ್ರಿ ಕಳೆದ ಅತ್ಯಂತ ಸುಖಕರ ಕ್ಷಣಗಳು ಕಣ್ಣ ಮುಂದೆ ಸುಳಿಯುತ್ತವೆ. ಸಂಬಂಧ ಶಾಶ್ವತವಾಗಲು ಈ ಪ್ರಕಾಶ ನೆರವಾಗುತ್ತದೆ ಹಾಗೂ ಸಂಬಂಧ ಮುಂದುವರೆಯಲು ಎಲ್ಲಾ ರೀತಿಯ ಅಗತ್ಯತೆಗಳನ್ನೂ ಈ ಪ್ರಕಾಶ ಒದಗಿಸುತ್ತದೆ. ಅಂದರೆ, ಪ್ರೀತಿ, ಬಂಧನ, ಸಂವಹನ, ಆತ್ಮೀಯತೆ, ನಂಬಿಕೆ ಹಾಗೂ ಮುಖ್ಯವಾಗಿ ಪರಸ್ಪರರು ತಮ್ಮ ಸಂಗಾತಿಯ ಕಣ್ಣುಗಳಲ್ಲಿ ಕಾಣುವ ಸಂತೋಷ, ಎಲ್ಲವೂ ಈ ಪ್ರಕಾಶವನ್ನೇ ಬಲುವಾಗಿ ಅವಲಂಬಿಸಿವೆ.

ಸಂಬಂಧ ಹೆಚ್ಚು ಪ್ರಕಾಶಮಾನವಾಗಲು ಲೈಂಗಿಕ ಸಂಪರ್ಕ ನೆರವಾಗುತ್ತದೆ
ದಂಪತಿಗಳ ನಡುವೆ ಆನ್ಯೋನ್ಯತೆ ಹೆಚ್ಚಲು ಈ ಆರು ಮುಖ್ಯವಾದ ಕಾರಣಗಳು ಅಗತ್ಯವಾಗಿವೆ. ನೀವು ಈಗ ಇರುವ ಸಂಬಂಧವನ್ನು ಇನ್ನಷ್ಟು ಉತ್ತಮಗೊಳಿಸಲು ಇನ್ನಷ್ಟು ಹೆಚ್ಚು ಲೈಂಗಿಕ ಸಂಪರ್ಕದಲ್ಲಿ ತೊಡಗಿಕೊಳ್ಳುವುದು ಅಗತ್ಯವಾಗಿದೆ. ಹೆಚ್ಚು ಹೆಚ್ಚು ಲೈಂಗಿಕ ಚಟುವಟಿಕೆ ಎಂದರೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಇನ್ನೂ ಉತ್ತಮ ಸಂಬಂಧ ಹಾಗೂ ನಿಮ್ಮ ನಡುವೆ ಎಲ್ಲವೂ ಸರಿಯಾಗಿಯೇ ಮುಂದುವರೆಯಲು ಹಾಗೂ ಮುಂದಿನ ಜೀವನ ಸುಖಕರ ಹಾಗೂ ದೀರ್ಘಾವಧಿಯಿಂದ ಕೂಡಿರಲು ಇದು ಅಗತ್ಯವಾಗಿದೆ.



Click it and Unblock the Notifications











