Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಪತಿ-ಪತ್ನಿ ಹಣಕಾಸು ವಿಚಾರದಲ್ಲಿ ಮಾಡುವ ತಪ್ಪುಗಳು!
ಪ್ರೀತಿ ಒಂದಿದ್ದರೆ ನಾನು ಹೇಗೋ ಬದುಕಬಲ್ಲೇ ಎಂದು ಪ್ರೇಮದ ಅಮಲಿನಲ್ಲಿ ಹೇಳಬಹುದಾದರೂ ಕೇವಲ ಪ್ರೀತಿಯಿಂದ ಮಾತ್ರ ಸಂಬಂಧಗಳು ಮುಂದುವರಿಯಲು ಸಾಧ್ಯವೇ ಇಲ್ಲ. ಯಾಕೆಂದರೆ ಕೇವಲ ಪ್ರೀತಿಯಿಂದ ಹೊಟ್ಟೆ ತುಂಬುವುದಿಲ್ಲವೆನ್ನುವುದು ಸಿನಿಮಾ ಡೈಲಾಗ್ ಆದರೂ ಇದು ನಿಜ. ಆರ್ಥಿಕವಾಗಿ ಸಲಬಲರಾಗಿದ್ದಾಗ ಮಾತ್ರ ಪ್ರೀತಿ ಹಾಗೂ ಸಂಬಂಧ ದೀರ್ಘಕಾಲ ಬಾಳುವುದು. ಕೈಯಲ್ಲಿ ಹಣವಿಲ್ಲದೆ ಹೊಟ್ಟೆ ಹಸಿದಾಗ ಎಂತಹ ಪ್ರೀತಿ ಕೂಡ ತಾನಾಗಿಯೇ ಕಡಿಮೆಯಾಗುವುದು.
ಆದರೆ ನಾವಿಲ್ಲಿ ಹೇಳಲು ಹೊರಟಿರುವುದು ಸಂಬಂಧದಲ್ಲಿ ದಂಪತಿ ಆರ್ಥಿಕ ವಿಚಾರದ ಬಗ್ಗೆ. ಸಂಗಾತಿಗಳಿಬ್ಬರ ಹಣಕಾಸಿನ ವಿಚಾರಗಳು ಜತೆಯಾಗಿರಬೇಕೇ ಅಥವಾ ಬೇರೆಬೇರೆಯಾಗಿರಬೇಕೇ? ದಂಪತಿ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿ ಮಾಡುತ್ತಿರುವ ತಪ್ಪುಗಳು ಏನು? ಇಂತಹ ಪ್ರಶ್ನೆಗಳು ಸಂಬಂಧದಲ್ಲಿ ದಂಪತಿಗಳ ತಲೆಯಲ್ಲಿ ಇರುವುದು. ಹಣವನ್ನು ಹಂಚಿಕೊಳ್ಳುವುದು ಅಥವಾ ಬಿಡುವದು ಇದು ಕೇವಲ ಸಂಗಾತಿಗಳಿಗೆ ಸಂಬಂಧಪಟ್ಟಿರುವಂತಹ ವಿಚಾರವಾಗಿದೆ.

ಹಣಕಾಸು ಜತೆಯಾಗಿದ್ದರೆ ಅಥವಾ ಬೇರೆಬೇರೆಯಾಗಿದ್ದರೆ ಏನು ಆಗಬಹುದು ಎಂದು ನಾವು ತಿಳಿದುಕೊಳ್ಳಬೇಕು. ಹಣವು ದಂಪತಿ ಮಾಡಬೇಕಾದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇದು ಸಂಬಂಧವನ್ನು ನಿರ್ಮಿಸುವುದು ಮತ್ತು ಸಂಬಂಧದಲ್ಲಿ ಬಿರುಕು ಉಂಟು ಮಾಡಬಹುದು. ಹಣದ ವಿಚಾರವನ್ನು ಯಾವ ರೀತಿಯಲ್ಲಿ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ. ಹಣಕಾಸಿನ ವಿಚಾರದಲ್ಲಿ ದಂಪತಿ ಮಾಡುವ ಕೆಲವು ತಪ್ಪುಗಳ ಬಗ್ಗೆ ಇಲ್ಲಿ ತಿಳಿಯುವ. ಹಣದ ವಿಚಾರದಲ್ಲಿ ಮಾಡುವ ತಪ್ಪುಗಳು.
1. ತಮ್ಮ ಖಾತೆಯನ್ನು ಪ್ರತ್ಯೇಕವಾಗಿಡುವುದು
ಪ್ರತ್ಯೇಕ ಬ್ಯಾಂಕ್ ಖಾತೆ ಮಾಡಿಕೊಂಡಿದ್ದರೆ ಆಗ ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ವಾಗ್ವಾದ ಉಂಟಾಗುವುದಿಲ್ಲವೆಂದು ಹೆಚ್ಚಿನ ದಂಪತಿ ಭಾವಿಸಿರಬಹುದು. ತಿಂಗಳ ಸಂಬಳವು ಅವರವರ ಖಾತೆಗೆ ಜಮೆಯಾಗುವುದು. ಇವರು ಪ್ರತ್ಯೇಕವಾಗಿ ಬಿಲ್ ಗಳನ್ನು ಕಟ್ಟುವರು ಮತ್ತು ಅದರಂತೆ ಯೋಜನೆ ಹಾಕಿಕೊಳ್ಳುವರು. ಆದರೆ ಇದು ತಪ್ಪು. ಇದು ನಿಮಗೆ ನೆರವಾಗಲ್ಲ. ಬದಲಿಗೆ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುವುದು.
2. ಜೀವನಶೈಲಿ ಬಗ್ಗೆ ಅತೃಪ್ತಿ
ಜೀವನಶೈಲಿಯು ಭಿನ್ನವಾಗಿರುವ ಕಾರಣದಿಂದಾಗಿ ಹೆಚ್ಚಿನ ದಂಪತಿಯು ಹಣದ ವಿಚಾರವಾಗಿ ಜಗಳವಾಡುವರು. ನಿಮ್ಮಲ್ಲಿರುವ ಬಟ್ಟೆಗಳು ಹಳೆಯದಾದರೆ ಮಾತ್ರ ನೀವು ಹೊಸ ಬಟ್ಟೆ ಖರೀದಿಸಲು ಹೋಗುವಿರಿ. ಆದರೆ ನಿಮ್ಮ ಪತ್ನಿ ಮಾತ್ರ ಬ್ರಾಂಡೆಡ್ ಮತ್ತು ದುಬಾರಿ ಬೆಲೆಯದನ್ನು ಖರೀದಿಸುವಳು. ಇದು ಆರ್ಥಿಕ ಸಮಸ್ಯೆ ಉಂಟುಮಾಡುವುದು ಮತ್ತು ನಿಮ್ಮಿಬ್ಬರ ಮಧ್ಯೆ ಜಗಳ ತರಬಹುದು. ನಿಮ್ಮ ಖರ್ಚುಗಳಿಗೆ ಸರಿಹೊಂದುವಂತಹ ಆದಾಯವು ನಿಮ್ಮಲ್ಲಿ ಇಲ್ಲವೆಂದಾದರೆ ಆಗ ಆರ್ಥಿಕ ಸಮಸ್ಯೆ ಕಾಡುವುದು.
3. ವ್ಯಕ್ತಿತ್ವ ಮತ್ತು ತತ್ವಗಳು ಭಿನ್ನ
ಭಿನ್ನ ವ್ಯಕ್ತಿತ್ವ ಹಾಗೂ ತತ್ವಗಳನ್ನು ಹೊಂದಿರುವಂತಹ ದಂಪತಿಯು ಆರ್ಥಿಕ ಸಮಸ್ಯೆಗೆ ಸಿಲುಕುವರು. ಪ್ರತಿಯೊಬ್ಬ ವ್ಯಕ್ತಿಯು ಪ್ರತ್ಯೇಕವಾದ ವ್ಯಕ್ತಿತ್ವ ಹೊಂದಿರುವನು ಮತ್ತು ಇದರ ವಿರುದ್ಧವಾಗಿರುವುದು ಆತನನ್ನು ಆಕರ್ಷಿಸುವುದು. ಒಬ್ಬರು ಹೆಚ್ಚು ಹೆಚ್ಚು ದುಡಿದು ಅದನ್ನು ಕೂಡಿಡುವತ್ತ ಗಮನಹರಿಸುತ್ತಿರಬಹುದು. ಆದರೆ ಇನ್ನೊಬ್ಬರು ಅದನ್ನು ಹೇಗೆ, ಯಾವಾಗ ಖರ್ಚು ಮಾಡುವುದು ಎನ್ನುವ ಬಗ್ಗೆಯೇ ಚಿಂತೆ ಮಾಡುತ್ತಿರಬಹುದು. ಇದು ನಿಜವಾಗಿಯೂ ಸಮಸ್ಯೆಯಲ್ಲದೆ ಇದ್ದರೂ ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರಬಹುದು. ಸಣ್ಣ ಹಣಕಾಸಿನ ವಿಚಾರದಲ್ಲಿ ಒಬ್ಬರು ಮತ್ತೊಬ್ಬರ ಸಲಹೆಯನ್ನು ಕಡೆಗಣಿಸುವುದು ದೊಡ್ಡ ಸಮಸ್ಯೆಯನ್ನುಂಟು ಮಾಡುವುದು. ಒಬ್ಬರು ಕಡಿಮೆ ಖರ್ಚು ಮಾಡಿ ಭವಿಷ್ಯಕ್ಕಾಗಿ ಕೂಡಿಡಲು ಬಯಸಿದರೆ, ಇನ್ನೊಬ್ಬರು ಇದರ ಬಗ್ಗೆ ಚಿಂತೆ ಮಾಡದಿದ್ದರೆ ಇಬ್ಬರ ಮಧ್ಯೆ ವಾಗ್ವಾದ ಉಂಟಾಗುವುದು.
4. ಸಂಬಳದ ವ್ಯತ್ಯಾಸ ಅಂತರವನ್ನುಂಟು ಮಾಡುವುದು
ನಿಮ್ಮ ಹಾಗೂ ನಿಮ್ಮ ಸಂಗಾತಿಯ ಸಂಬಳದಲ್ಲಿ ತುಂಬಾ ವ್ಯತ್ಯಾಸವಿದ್ದರೆ ಆಗ ಸಮಸ್ಯೆ ಬರುವುದು. ಅಸೂಹೆ ಮತ್ತು ನಡವಳಿಕೆ ಹಣಕಾಸಿನ ವಿಚಾರದಲ್ಲಿ ಕಂಡುಬರುವುದು. ಇದು ಮನಸ್ಸಿನಲ್ಲಿ ಭಿನ್ನಾಭಿಪ್ರಾಯ ಉಂಟು ಮಾಡುವುದು ಮತ್ತು ಸಂಬಂಧದಲ್ಲಿ ಬಿರುಕು ಮೂಡಿಸಬಹುದು.
5. ಆರ್ಥಿಕವಾಗಿ ನಿಷ್ಠವಾಗಿರದೇ ಇರುವುದು
ಆರ್ಥಿಕವಾಗಿ ಸಂಗಾತಿಗೆ ನೀವು ಮೋಸ ಮಾಡುತ್ತಲಿದ್ದರೆ ಆಗ ಹೆಚ್ಚಿನ ಒತ್ತಡ ಉಂಟಾಗುವುದು. ಸಂಗಾತಿಗೆ ನಿಷ್ಠರಾಗಿರದೆ ಇರುವುದೆಂದರೆ ನಿಮಗೆ ಬೇರೆ ಯಾವುದೇ ಸಂಬಂಧವಿದೆಯೆಂದಲ್ಲ, ಆರ್ಥಿಕ ವಿಚಾರದಲ್ಲೂ ಇದು ಮೋಸವೆಂದು ಪರಿಗಣಿಸಬಹುದು. ನೀವು ಪ್ರತ್ಯೇಕವಾಗಿ ಬ್ಯಾಂಕ್ ಖಾತೆ ತೆರೆದು ಅದರಲ್ಲಿ ಹಣ ಹೂಡಿಕೆ ಮಾಡುತ್ತಿರಬಹುದು. ಇದು ಮೋಸ ಮತ್ತು ನಂಬಿಕೆದ್ರೋಹ. ಉದಾಹರಣೆಗೆ ನಿಮ್ಮಲ್ಲಿ ಕ್ರೆಡಿಟ್ ಕಾರ್ಡ್ ಇದ್ದರೂ ಇದರ ಬಗ್ಗೆ ಸಂಗಾತಿಗೆ ತಿಳಿಯದೇ ಇರುವುದು.
6. ನಿರೀಕ್ಷೆಗಳು ಅವುಗಳನ್ನು ಹಾಳು ಮಾಡುವುದು
ದಂಪತಿ ಮತ್ತು ಹಣಕಾಸಿನ್ನು ವಿಭಜಿಸುವುದು ದೊಡ್ಡ ಮಟ್ಟದ ನಿರೀಕ್ಷೆಗಳು. ನಿಮ್ಮ ನಿರೀಕ್ಷೆಗಳು ಈಡೇರದೆ ಇರುವಾಗ ನೀವು ತುಂಬಾ ಸುಲಭವಾಗಿ ತೃಪ್ತಿ ಹೊಂದದೆ ಇರಬಹುದು. ನೀವು ಸಂಗಾತಿ ಜತೆಯಾಗಿ ಹಾಕಿಕೊಂಡಿರುವ ಆರ್ಥಿಕ ಗುರಿಗಳು ಒಂದು ಮಾರ್ಗದಲ್ಲಿ ಸಾಗುತ್ತದೆ ಎಂದು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರೂ ಅದು ಹಾಗೆ ಸಾಗುತ್ತಿಲ್ಲ. ಮದುವೆಯಾದ ಕೂಡಲೇ ಒಂದು ಹೊಸ ಮನೆ ಖರೀದಿಸಬೇಕೆಂದು ನಿಮ್ಮ ನಿರೀಕ್ಷೆಯಾಗಿರಬಹುದು. ಆದರೆ ಮೊದಲು ವಿವಾಹ ವಾರ್ಷಿಕೋತ್ಸವವನ್ನು ವೇಳೆ ಕೂಡ ನೀವು ಬಾಡಿಗೆ ಮನೆಯಲ್ಲಿ ಆಚರಿಸುವಿರಿ.ನಿರೀಕ್ಷೆಗಳು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಇದು ದಂಪತಿಗಳ ಬಗ್ಗೆ ಹಣಕಾಸಿನ ಬಗ್ಗೆ ಹೇಳುವಂತಹ ಆರು ವಿಚಾರಗಳು ಮತ್ತು ಅವರು ಮಾಡುವಂತಹ ತಪ್ಪುಗಳು. ಈ ಲೇಖನವು ನಿಮಿಗಿಷ್ಟವಾಗಿದ್ದರೆ ತಕ್ಷಣವೇ ತಪ್ಪದೆ ಶೇರ್ ಮಾಡಿ.
7. ನಿಮ್ಮಬ್ಬರ ಸಂಬಂಧವೇ ಹಾಳಾಗುತ್ತದೆ
ಯಾವಾಗ ಹಣದ ವಿಚಾರದಲ್ಲಿ ಏರುಪೇರುಗಳು ಉಂಟಾಗುತ್ತವೆಯೋ, ಆಗ ಸಂಬಂಧದಲ್ಲಿ ಹತಾಶೆಯುಂಟಾಗುತ್ತದೆ. ಯಾವಾಗ ಹಣಕಾಸಿನ ಸಮಸ್ಯೆಗಳು ದೀರ್ಘಕಾಲದವರೆಗೆ ಎಳೆದುಕೊಂಡು ಹೋಗುತ್ತವೆಯೋ, ಆಗ ಸಂಗಾತಿಯರಲ್ಲಿ ಒಬ್ಬರು ತೀವ್ರತರನಾದ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬಹುದು. ಉದಾಹರಣೆಗೆ: ಗಂಡನಾದವನು ಹೆಂಡತಿಯ ಹಣದಲ್ಲಿ ಜೀವಿಸುವ ಪರಿಸ್ಥಿತಿಗೆ ಬಂದಾಗ, ಹೆಂಡತಿಗೆ ಇದರಿಂದ ಹತಾಶೆಯುಂಟಾಗಿ ಅವರ ಸಂಬಂಧ ಮುರಿದುಬೀಳುವ ಹಂತಕ್ಕೆ ಹೋಗಬಹುದು. ಇದರಿಂದ ಪಾರಾಗಲು ಈ ಸಂಬಂಧಕ್ಕೆ ಕಡಿಮೆ ಅವಕಾಶಗಳು ದೊರೆಯುತ್ತವೆ. ದಾಂಪತ್ಯದಲ್ಲಿ ಲೈಂಗಿಕತೆ, ಹಣ, ಸಂವಹನದ ಪಾತ್ರ
ನಾವೆಲ್ಲರು ಐಷಾರಾಮಿತನವನ್ನು ಬಯಸುತ್ತೇವೆ ಎಂಬುದು ಸತ್ಯ. ಪ್ರೀತಿಯು ನಮ್ಮ ಹಸಿವನ್ನು ನೀಗುವುದಿಲ್ಲ. ಮನೆ-ಮಠ ಇಲ್ಲದೆ ಪ್ರೀತಿ ಮಾಡಲು ಹೋಗಬಾರದು. ಕನಿಷ್ಠ ಭದ್ರತೆ ಮತ್ತು ಕನಿಷ್ಠ ಸುಖ ಇದ್ದಲ್ಲಿ ನಿಮ್ಮ ಪ್ರೀತಿ ಸ್ವಲ್ಪ ದಿನ ಜೀವ ಹಿಡಿದುಕೊಂಡಿರುತ್ತದೆ. ಹಣವು ಸಂಬಂಧಗಳನ್ನು ಮುರಿಯುವುದು ನಿಜವಾದರು, ಹಣವೇ ಮುಖ್ಯವೆಂದು ನಂಬಬಾರದು. ಹಣದಿಂದ ಪ್ರೀತಿಯನ್ನು ಕೊಳ್ಳಲಾಗುವುದಿಲ್ಲ. ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಹಣ ಮುಖ್ಯ. ಹಣಕಾಸಿನ ಭದ್ರತೆ ಜೀವನದಲ್ಲಿ ತುಂಬಾ ಮುಖ್ಯ. ಭದ್ರತೆ ಇಲ್ಲವಾದಲ್ಲಿ ಸಂಬಂಧಗಳು ಉಳಿಯುವುದು ಕಷ್ಟವಾಗುತ್ತದೆ.



Click it and Unblock the Notifications











