Latest Updates
-
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ
ಸಂಸಾರದಲ್ಲಿ ಈಗೆಲ್ಲಾ ಇದ್ದರೆ, ಇಂತಹ ಸಂಬಂಧದಿಂದ ಆದಷ್ಟು ಬೇಗ ಹೊರಬನ್ನಿ!
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಗಾದೆಯಿದೆ. ಒಂದು ಮಣ್ಣಿನ ಮಡಕೆ ಮಾಡಲು ಕುಂಬಾರನಿಗೆ ತುಂಬಾ ಸಮಯ ಬೇಕಾಗುವುದು. ಆದರೆ ಅದೇ ಮಡಕೆಯನ್ನು ಒಡೆದುಹಾಕಲು ಕೇವಲ ಒಂದು ನಿಮಿಷ ಸಾಕು. ಅದೇ ರೀತಿಯ ಸಂಬಂಧ ಕೂಡ. ಸಂಬಂಧವನ್ನು ಬೆಳೆಸಲು, ನಿಭಾಯಿಸಲು ತುಂಬಾ ಕಷ್ಟಪಡಬೇಕು. ಅದೇ ಸಂಬಂಧ ಕಡಿದುಕೊಳ್ಳಲು ಒಂದು ಮಾತು ಸಾಕು. ಒಳ್ಳೆಯ ಸಂಬಂಧದಿಂದ ದೂರವಾಗುವುದು ಹೇಗೆ ಮತ್ತು ಯಾವಾಗ ಎನ್ನುವುದು ನಮಗೆ ತಿಳಿದಿರುವುದೇ ಇಲ್ಲ.

ಸಂಬಂಧವೆನ್ನುವುದು ಅಭಿಮನ್ಯು ಪ್ರವೇಶಿಸಿದ ಚಕ್ರವ್ಯೂಹದಂತೆ. ಇದರೊಳಗೆ ಪ್ರವೇಶಿಸಲು ಆತನಿಗೆ ತಿಳಿದಿರುತ್ತದೆ. ಆದರೆ ಹೊರಬರಲು ತಿಳಿದಿರಲ್ಲ. ಅದೇ ರೀತಿ ಸಂಬಂಧದಲ್ಲೂ. ನಾವು ಒಂದು ಸಂಬಂಧದಲ್ಲಿ ಬೇಗನೆ ಬೆಸೆಯುತ್ತೇವೆ. ಆದರೆ ಇದರಿಂದ ಹೊರಬರಬೇಕಾದರೆ ತುಂಬಾ ಒದ್ದಾಡಬೇಕಾಗುತ್ತದೆ. ಅಂತಿಮವಾಗಿ ನೀವು ಸಂಬಂಧದಿಂದ ಯಾವಾಗ ಹೊರಬರಬೇಕು ಎಂದು ತಿಳಿಯಿರಿ.

ನಿಮ್ಮನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ
ಸಂಬಂಧದಲ್ಲಿ ನಿಮ್ಮನ್ನು ತುಂಬಾ ಲಘುವಾಗಿ ಪರಿಗಣಿಸಲಾಗುತ್ತಿದೆಯಾ? ನಿಮ್ಮನ್ನು ಅತಿಯಾಗಿ ಲಘುವಾಗಿ ಪರಿಗಣಿಸಿದರೆ ಆಗ ನೀವು ಗುಲಾಮರಾದಂತೆ. ಪ್ರೀತಿಯಲ್ಲಿ ಕೂಡ ಸಮಾನತೆ ಎನ್ನುವುದು ಇರಬೇಕು. ಸಮಾನತೆಯು ಕಳೆದುಹೋಗಿದ್ದರೆ ಮತ್ತು ನಿಮ್ಮನ್ನು ತುಂಬಾ ಲಘುವಾಗಿ ಪರಿಗಣಿಸಲಾಗುತ್ತಿದ್ದರೆ ಆಗ ಈ ಸಂಬಂಧದಲ್ಲಿ ಇರುವುದಕ್ಕೆ ಯಾವುದೇ ಅರ್ಥವಿರಲ್ಲ. ನೀವು ಮರು ಆಲೋಚನೆ ಮಾಡದೆ ಈ ಸಂಬಂಧದಿಂದ ಹೊರಗೆ ಬರಬಹುದು.

ಮೊದಲಿನಂತೆ ಗೌರವಿಸಲಾಗುತ್ತಿಲ್ಲ
ಸಮಯ ಕಳೆದಂತೆ ಕೆಲವೊಂದು ಬದಲಾವಣೆಗಳು ಆಗಬಹುದು ಮತ್ತು ಕೆಲವು ವಿಚಾರಗಳು ಹುಳಿಯಾಗಬಹುದು. ಆದರೆ ಪ್ರತಿಯೊಬ್ಬ ಮನುಷ್ಯನಿಗೆ ಗೌರವವೆನ್ನುವುದು ಮುಖ್ಯವಾಗಿರುವುದು. ಯಾವ ವ್ಯಕ್ತಿ ಕೂಡ ಸ್ವಾಭಿಮಾನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾರ. ಆಹಾರ, ನೀರು, ಬಟ್ಟೆಬರೆ, ಮನೆ ಇತ್ಯಾದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಸ್ವಾಭಿಮಾನದೊಂದಿಗೆ ಅಲ್ಲ. ನಿಮಗೆ ಮೊದಲಿನಂತೆ ಗೌರವ ಸಿಗದೆ ಇದ್ದರೆ ಅಥವಾ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಲಿದ್ದರೆ ಆಗ ನೀವು ಸಂಬಂಧದಿಂದ ಹೊರನಡೆಯಿರಿ.

ನೀವು ಅವಕಾಶವನ್ನು ನೀಡುತ್ತಲಿರುವುದು
ಯಾವುದೇ ಒಂದು ವಿಚಾರಕ್ಕೆ ಎರಡನೇ ಅವಕಾಶ ನೀಡುವುದಕ್ಕೂ ಒಂದು ಮಿತಿ ಎನ್ನುವುದು ಇದೆ. ನಿಮ್ಮ ಸಂಗಾತಿಯು ಮಾಡುವಂತಹ ಪ್ರತಿಯೊಂದು ತಪ್ಪುಗಳು ಸ್ವೀಕಾರ್ಹವಲ್ಲದೆ ಇದ್ದರೆ ಆಗಲೂ ನೀವು ಕ್ಷಮೆ ನೀಡಿ, ಪ್ರೀತಿಯ ಕಾರಣಕ್ಕೆ ಮತ್ತೊಂದು ಅವಕಾಶ ನೀಡುತ್ತಲಿರಬಹುದು. ಅವರನ್ನು ಕಳೆದುಕೊಳ್ಳಲು ನಿಮಗೆ ಇಷ್ಟವಿಲ್ಲದೆ ಇರಬಹುದು. ಆದರೆ ಎಷ್ಟು ಸಲ ನೀವು ಇಂತಹ ಅವಕಾಶ ನೀಡುತ್ತಲಿರುತ್ತೀರಿ? ಪ್ರತಿಯೊಂದಕ್ಕೂ ಮಿತಿ ಎನ್ನುವುದು ಇರುವುದು. ನೀವು ಹೆಚ್ಚು ಅವಕಾಶ ನೀಡಿದಷ್ಟು ನಿಮ್ಮನ್ನು ಲಘುವಾಗಿ ಪರಿಗಣಿಸುವುದು ಹೆಚ್ಚು. ಇದು ನೀವು ಸಂಬಂಧದಿಂದ ಹೊರಬರಬೇಕು ಎನ್ನುವುದರ ಸ್ಪಷ್ಟ ಸೂಚನೆಯಾಗಿದೆ.

ಯಾವುದೇ ಪ್ರೀತಿಯ ಕಿಡಿ ಇಲ್ಲದೆ ಇರುವುದು
ಸಂಬಂಧವನ್ನು ಇದ್ದಷ್ಟು ಕಾಲ ಎಳೆಯುತ್ತಿರುವ ಬದಲು ಅದರಿಂದ ಹೊರಹೋಗಿ ದೂರವಾಗುವುದು ಒಳ್ಳೆಯದು. ನೀವು ಸಂಬಂಧವನ್ನು ಎಳೆದಷ್ಟು ಅದು ಸಮಸ್ಯೆಯಾಗುತ್ತಾ ಹೋಗುವುದು. ಸಂಬಂಧ ಎಳೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ನೀವಿಬ್ಬರು ಈ ಸಂಬಂಧವನ್ನು ಎಳೆಯುತ್ತಲಿದ್ದರೆ ಅಥವಾ ನಿಮಗೆ ಈ ಸಂಬಂಧವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲವೆಂದು ಇದರರ್ಥವಾಗಿದೆ.

ಅಂತ್ಯವಿಲ್ಲದ ಜಗಳಗಳು
ಸಂಬಂಧದಲ್ಲಿ ಜಗಳಗಳು ಇದ್ದೇ ಇರುತ್ತದೆ. ಆದರೆ ಇದು ಯಾವತ್ತೂ ಅಂತ್ಯ ಕಾಣದೆ ಇದ್ದರೆ? ಜಗಳವೇ ನಿಮ್ಮ ದೈನಂದಿನ ಚಟುವಟಿಕೆಯಾದರೆ? ಸಂಬಂಧವು ಹೆಚ್ಚಿನ ಮಟ್ಟದ ಮಾತುಕತೆ ಮತ್ತು ಕಡಿಮೆ ಮಟ್ಟದ ಚರ್ಚೆ, ಜಗಳ ಒಳಗೊಂಡಿರಬೇಕು. ನೀವು ದಿನಬೆಳಗಾದಂತೆ ಜಗಳದಲ್ಲಿ ತೊಡಗಿದರೆ ಆಗ ಇದಕ್ಕೆ ಯಾವುದೇ ಅಂತ್ಯವೆನ್ನುವುದು ಇರಲ್ಲ. ನೀವು ಪರಸ್ಪರರನ್ನು ಒಪ್ಪಿಕೊಳ್ಳುವುದಿಲ್ಲವೆಂದಾದರೆ ಆಗ ಪರಸ್ಪರರೊಂದಿಗೆ ಹೊಂದಾಣಿಕೆಯಿಲ್ಲವೆಂದರ್ಥ.

ಮೋಸ ಮಾಡುತ್ತಲಿದ್ದರೆ…
ನಾವು ಮನುಷ್ಯರು. ಇದರಿಂದ ಮತ್ತೊಬ್ಬರ ಪ್ರಲೋಭನೆಗೆ ಒಳಗಾಗುವುದು ಸಾಮಾನ್ಯ ವಿಚಾರ. ಆದರೆ ಸಂಬಂಧವೆನ್ನುವುದು ನಂಬಿಕೆಯ ಮೇಲೆ ನಿಂತಿರುವುದು. ನೀವು ನಂಬಿಕೆಯಿಂದ ಇದ್ದರೆ ಆಗ ಸಂಬಂಧದಿಂದ ಹೊರಬರುವುದಿಲ್ಲ. ಆದರೆ ನೀವು ಮೋಸ ಮಾಡಬಹುದು ಎಂದು ಭಾವಿಸಿದರೆ ಆಗ ನೀವು ಪ್ರೀತಿಯಿಂದ ಹೊರಬಂದಿದ್ದೀರಿ ಎಂದು ಹೇಳಬಹುದು. ನಿಮ್ಮಲ್ಲಿ ಮೋಸ ಮಾಡಬೇಕೆಂದು ಪ್ರಚೋದನೆ ಉಂಟಾಗುತ್ತಲಿದ್ದರೆ ಆಗ ಸಂಬಂಧದಲ್ಲಿ ಮುಂದುವರಿಯುವ ಅವಕಾಶವೇ ಇಲ್ಲ. ಮೋಸ ಮಾಡಿ ಸಂಬಂಧದಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ. ನೀವು ಆದಷ್ಟು ಬೇಗನೆ ಈ ಸಂಬಂಧದಿಂದ ಹೊರಬರುವುದು ಒಳ್ಳೆಯದು. ಸಂಬಂಧದಲ್ಲಿರುವಾಗ ನಿಮಗೆ ಈ ರೀತಿಯ ಭಾವನೆಗಳು ಇದ್ದರೆ ಆಗ ನೀವು ಸಂಬಂಧದಿಂದ ಹೊರಬರುವ ಬಗ್ಗೆ ಇಂದೇ ಆಲೋಚನೆ ಮಾಡಿ. ಮತ್ತಷ್ಟು ವಿಳಂಬವಾದರೆ ಅದು ಒಳ್ಳೆಯದಲ್ಲ. ಸಂಗಾತಿ ಜತೆಗೆ ನೀವು ಮಾತನಾಡಿಕೊಂಡು ಸಂಬಂಧದಿಂದ ಹೊರಗೆ ಬನ್ನಿ.



Click it and Unblock the Notifications











