Latest Updates
-
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ?
ನೀವು ಇಂದೇ ಸಂಗಾತಿಯಲ್ಲಿ ಕೇಳಬೇಕಾದ ಅನ್ಯೋನ್ಯತೆಯ ಪ್ರಶ್ನೆಗಳು
ಸಂಬಂಧಲ್ಲಿರುವ ಸಂಗಾತಿಗಳಿಬ್ಬರು ಹೆಚ್ಚೆಚ್ಚು ಮುಕ್ತವಾಗಿ ಮಾತನಾಡಲು ಆರಂಭಿಸಿದರೆ ಆಗ ಅವರಿಬ್ಬರ ನಡುವಿನ ಅನ್ಯೋನ್ಯತೆಯು ವೃದ್ಧಿಸುವುದು. ಅನ್ಯೋನ್ಯತೆ ಬೆಳೆಯಲು ನೀವು ಸಂಗಾತಿ ಜತೆಗೆ ಹೆಚ್ಚು ಮಾತನಾಡಬೇಕು, ಇಷ್ಟು ಮಾತ್ರವಲ್ಲದೆ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಅವರ ಉತ್ತರವನ್ನು ಪಡೆಯಬೇಕು. ಇದರಿಂದ ನೀವಿಬ್ಬರು ತುಂಬಾ ಹತ್ತಿರವಾಗುವಿರಿ ಮತ್ತು ಪ್ರೀತಿಯು ಹೆಚ್ಚುವುದು. ಕೆಲವು ಸಲುಗೆಯ ಪ್ರಶ್ನೆಗಳಿಂದ ಸಂಗಾತಿಗೆ ನಿಮಗೆ ಏನು ಬೇಕಿದೆ ಎನ್ನುವುದು ಅರ್ಥವಾಗುವುದು. ನೀವು ಮತ್ತು ಸಂಗಾತಿಯು ಅನ್ಯೋನ್ಯತೆ ಬಗ್ಗೆ ಚರ್ಚೆ ಮಾಡಿದಾಗ ಪ್ರಾಮಾಣಿಕ ಉತ್ತರವು ನಿಮ್ಮದಾಗಿರಲಿ. ಇಬ್ಬರಲ್ಲಿ ಅನ್ಯೋನ್ಯತೆಯು ಹೆಚ್ಚಾಗುತ್ತಾ ಹೋದಾಗ ಅಲ್ಲಿ ಪ್ರೀತಿಯ ಬೆಸುಗೆ ಭದ್ರವಾಗುವುದು ಮತ್ತು ಸಂಬಂಧವು ಸುಭದ್ರವಾಗುವುದು. ಸಂಬಂಧದಲ್ಲಿ ಅನ್ಯೋನ್ಯತೆ ಎನ್ನುವುದು ಬೇಕೇಬೇಕು. ಇದು ಇಲ್ಲದೇ ಇರುವಾಗ ನಿಮ್ಮಿಬ್ಬರ ಕೆಲವೊಂದು ಗುರಿಗಳು ಮುಟ್ಟದೆ ಇರುವಂತಾಗಬಹುದು. ಪ್ರತಿಯೊಂದು ಸಂಬಂಧದಲ್ಲೂ ಅನ್ಯೋನ್ಯತೆ ಎನ್ನುವುದು ಸಾಮಾನ್ಯ.
ನೀವು ಅನ್ಯೋನ್ಯತೆಯ ಈ ಪ್ರಶ್ನೆಗಳನ್ನು ಯಾಕೆ ಕೇಳಬೇಕು?
ಅನ್ಯೋನ್ಯತೆಯ ಈ ಕೆಲವು ಪ್ರಶ್ನೆಗಳನ್ನು ಕೇಳುವುದರಿಂದ ನಿಮಗೆ ಸಂಗಾತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮತ್ತು ಆಳವಾಗಿ ಅರಿಯಲು ನೆರವಾಗುವುದು. ಇದು ನಿಮಗೆ ಹಾಗೂ ಸಂಗಾತಿಗೆ ನೆರವಾಗುವುದು ಮಾತ್ರವಲ್ಲದೆ, ಸಂಬಂಧವನ್ನು ಮೇಲ್ದರ್ಜೆಗೇರಿಸುವುದು. ಅನ್ಯೋನ್ಯತೆಯ ಪ್ರಶ್ನೆಗಳು ತುಂಬಾ ಕೊಳಕು, ಸಂವೇದನಶೀಲ, ಸ್ವಲ್ಪ ಮಟ್ಟಿಗೆ ಅಶ್ಲೀಲವಾಗಿರಬಹುದು. ಇಂತಹ ಪ್ರಶ್ನೆಗಳಿಂದ ನಿಮ್ಮ ಸಂಗಾತಿಯು ಉತ್ತರವನ್ನು ನೀಡುವುದರಿಂದ ಅನ್ಯೋನ್ಯತೆಯು ಹೇಗಿದೆ ಎಂದು ತಿಳಿಯುವುದು.

ಅನ್ಯೋನ್ಯತೆಯ ಪ್ರಶ್ನೆಗಳು ವ್ಯಕ್ತಿಯನ್ನು ಆಳವಾಗಿ ಅರಿಯಲು ನೆರವಾಗುವುದು. ಅನ್ಯೋನ್ಯತೆಯು ಪ್ರತಿಯೊಂದು ಗಂಭೀರ ಸಂಬಂಧದಲ್ಲಿ ಅತೀ ಅಗತ್ಯ. ಬೆಡ್ ರೂಮ್ ನಲ್ಲಿ ಏನು ನಡೆಯುತ್ತಿದೆ ಎನ್ನುವುದು ಮಾತ್ರವಲ್ಲದೆ ಸಂಬಂಧದಲ್ಲೂ ಇದು ಪಾತ್ರ ವಹಿಸುವುದು. ಬೆಡ್ ರೂಮ್ ನ ಹೊರಗಡೆ ಅಥವಾ ರಾತ್ರಿ ವೇಳೆ ನೀವು ಈ ಬಗ್ಗೆ ಕೆಲವೊಂದು ಆಲೋಚನೆಗಳನ್ನು ಮಾಡಿರಬಹುದು. ನೀವು ಯಾವುದೇ ಹಿಂಜರಿಕೆಯಿಲ್ಲದೆ ಪ್ರಶ್ನೆಗಳನ್ನು ಕೇಳಿ. ಸಂಗಾತಿಯಿಂದ ನೀವು ಏನು ಬಯಸುತ್ತಿದ್ದೀರಿ ಎನ್ನುವುದನ್ನು ನೇರವಾಗಿ ಹೇಳಿ.
ಸಾಮಾನ್ಯವಾಗಿ ಹೆಚ್ಚಿನವರು, ಮದುವೆಯ ಬಳಿಕ ಕೇವಲ ಶಾರೀರಿಕ ಸಂಸರ್ಗದಿಂದ ಅನ್ಯೋನ್ಯತೆ ಹೆಚ್ಚುತ್ತದೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಇದು ಪೂರ್ಣವಾಗಿ ನಿಜವಲ್ಲ. ಶಾರೀರಿಕ ಸಂಸರ್ಗ ಪ್ರಣಯದ ಒಂದು ಅಂಗ ಮಾತ್ರ. ಇನ್ನುಳಿದಂತೆ ಪತಿ ಪತ್ನಿಯರ ನಡುವೆ ಭಾವನಾತ್ಮಕ ಸಂಬಂಧ, ಆತ್ಮೀಯ ಮಾತುಕತೆ, ಜೊತೆಯಾಗಿ ನಿರ್ಧಾರಗಳನ್ನು ಕೈಗೊಳ್ಳುವುದು, ಭವಿಷ್ಯದ ಬಗ್ಗೆ ಚಿಂತಿಸುವುದು, ಮನೆಯವರ ಸಮಸ್ಯೆಗಳ ನಿವಾರಣೆಗೆ ಸಮಾಲೋಚಿಸುವುದು, ಒಬ್ಬರ ಕಷ್ಟಗಳನ್ನು ಹೇಳಿಕೊಂಡು ಇದರ ಪರಿಹಾರಕ್ಕಾಗಿ ಜೊತೆಯಾಗಿ ಚರ್ಚಿಸುವುದು, ನಿಮ್ಮ ಪತಿ/ಪತ್ನಿಯ ಬಗ್ಗೆ ಕಾಳಜಿ ವಹಿಸುವುದು ಮೊದಲಾದವು ಸಹಾ ಪ್ರಣಯದ ಭಾಗಗಳೇ ಆಗಿವೆ. ಪ್ರಣಯದ ಮೂಲಕ ನಿಮ್ಮಿಬ್ಬರ ನಡುವಣ ಸಂಬಂಧ ಇನ್ನಷ್ಟು ಹೆಚ್ಚುತ್ತದೆ. ಇದೇ ಅನ್ಯೋನ್ಯತೆಗೆ ಮೂಲವಾಗಿದೆ. ಅನ್ಯೋನ್ಯ ದಂಪತಿಗಳು ಸುಖ ಸಂಸಾರದ ಕಣ್ಣುಗಳಾಗಿದ್ದಾರೆ.
ಅನ್ಯೋನ್ಯತೆಯ ಪ್ರಶ್ನೆಗಳ ವಿಧಗಳು
ಅನ್ಯೋನ್ಯತೆಯಲ್ಲಿ ಸಾಮಾನ್ಯ ಪ್ರಶ್ನೆಗಳಿಂದ ಹಿಡಿದು ಹವ್ಯಾಸ, ಆಕಾಂಕ್ಷೆ ಮತ್ತು ನಿಮ್ಮ ಸಂಗಾತಿಯು ಪ್ರೀತಿ ಮಾಡಬೇಕೆಂದು ಬಯಸುತ್ತೀರಾ ಎನ್ನುವ ಪ್ರಶ್ನೆಗಳು ಇರುವುದು. ಇಂತಹ ಪ್ರಶ್ನೆಗಳಿಂದ ಸಂಗಾತಿ ಮನದಲ್ಲಿ ಯಾವ ರೀತಿಯ ಭಾವನೆಗಳು ಇದೆ ಎಂದು ತಿಳಿಯಲು ಸುಲಭವಾಗುವುದು.
ಸಂಗಾತಿಗೆ ಕೇಳಬಹುದಾದ ಅನ್ಯೋನ್ಯತೆಯ ಪ್ರಶ್ನೆಗಳು
1. ನಿನಗೆ ಎಲ್ಲಿ ಮತ್ತು ಹೇಗೆ ಸ್ಪರ್ಶಿಸಿದರೆ ಇಷ್ಟ?
2. ಪ್ರೀತಿ ವ್ಯಕ್ತಪಡಿಸುವ ಅತ್ಯುತ್ತಮ ಮಾರ್ಗ ಯಾವುದೆಂದು ನಿನ್ನ ಅನಿಸಿಕೆ?
3. ಭಾವನಾತ್ಮಕ ಉಡುಗೊರೆಗಳು ಇಷ್ಟವೇ ಅಥವಾ ಪ್ರಾಯೋಗಿಕ ಉಪಯೋಗಕ್ಕೆ ಬರುವ ಉಡುಗೊರೆಗಳು ಇಷ್ಟವೇ?
4. ನಾನು ಒಳ್ಳೆಯ ಲವರ್ ಮತ್ತು ನಾನು ಹಾಗೆ ಇರಲು ಬಯಸುತ್ತೇನೆ. ನಾನು ಹಾಗೆ ಇರುವ ಮಹಿಳೆ ಅಥವಾ ಪುರುಷನಾಗಲು ಏನು ಮಾಡಬೇಕು?
5. ಮದುವೆ ಮತ್ತು ಮಕ್ಕಳ ಬಗ್ಗೆ ನಿನ್ನ ಅಭಿಪ್ರಾಯವೇನು?
6. ಮುಂದಿನ ವರ್ಷ ಸಂಬಂಧವು ಎಲ್ಲಿ ಸಾಗಬಹುದು? ಮುಂದಿನ ಐದು ವರ್ಷ ಹೇಗಿರಬಹುದು?
7. ನನ್ನ ಮೇಲೆ ಪ್ರೀತಿ ಹುಟ್ಟಿದೆ ಎಂದು ತಿಳಿದದ್ದು ಯಾವಾಗ?
8. ನಿನಗೆ ಇಷ್ಟವಾಗಿರುವುದನ್ನು ನಾವು ಇದುವರೆಗೆ ಪ್ರಯೋಗಿಸಿಲ್ಲವೇ?
9. ಆಟಿಕೆಗಳ ಬಗ್ಗೆ ನಿನ್ನ ಅಭಿಪ್ರಾಯ?
10. ನಿನ್ನಲ್ಲಿನ ಅನ್ಯೋನ್ಯತೆಯು ದಿನವಿಡಿ ಇರುವಂತಾಗಲು ಹಾಸಿಗೆಯಿಂದ ಹೊರಗಡೆ ನಾನು ಏನು ಮಾಡಬೇಕು?
11. ನಮ್ಮ ಪ್ರೀತಿ ಸಾಗುತ್ತಲಿದೆಯಾ? ನಿನಗೆ ಯಾವುದೇ ಸಂಶಯಗಳು ಇದೆಯಾ?
12. ಆತ್ಮಸಂಗಾತಿ ಬಗ್ಗೆ ನಂಬಿಕೆಯಿದೆಯಾ? ಮೊದಲ ನೋಟದಲ್ಲೇ ಪ್ರೀತಿಯ ಬಗ್ಗೆ ಅಭಿಪ್ರಾಯವೇನು?
13. ಹಿಂದೆ ನಿನಗೆ ಯಾವಾಗಲಾದರೂ ನೋವಾಗಿದೆಯಾ ಮತ್ತು ಪ್ರೀತಿಯ ಸಾಧ್ಯತೆಯನ್ನು ಪ್ರಶ್ನಿಸಿದ್ದೀಯಾ?
14. ಮದುವೆಯಾಗಿ ಮಕ್ಕಳೊಂದಿಗೆ ಜೀವನದ ಒಂದು ದಿನವನ್ನು ಹೇಗೆ ಕಲ್ಪಿಸಿಕೊಳ್ಳುತ್ತಿಯಾ? ಒಂದು ವಾರದ ಬಗ್ಗೆ?
15. ನಿನಗೆ ಚುಂಬಿಸಲು ಬಿಡುತ್ತೀಯಾ?
16. ಸಾರ್ವಜನಿಕವಾಗಿ ಚುಂಬಿಸುವ ಬಗ್ಗೆ ನಿನ್ನ ಅಭಿಪ್ರಾಯ?
17. ನನ್ನ ಬಗ್ಗೆ ನಿನಗೆ ಇರುವ ಭಾವನೆ ಬಗ್ಗೆ ಮೂರೇ ಪದಗಳಲ್ಲಿ ವಿವರಿಸು.
18. ಬಿಸಿ ನೀರಿನ ಸ್ನಾನ ಅಥವಾ ಸೋಪಿನ ನೊರೆಯ ಬಾತ್ ಟಬ್?
19. ನಿನಗೆ ಫೇವರಿಟ್ ಆಗಿರುವ ನನ್ನಲ್ಲಿರುವುದು?
20. ಯಾವತ್ತಾದರೂ ಬಂಧನ ಬಳಸಿದ್ದೀಯಾ?
21. ನಿನಗೆ ಪಾತ್ರ ಮಾಡಬೇಕೆಂದು ಬಯಕೆ ಆಗಿದೆಯಾ?
22. ಹಾಸಿಗೆಯಲ್ಲಿ ಯಾವ ರೀತಿಯ ಆಟಗಳು ನಿನಗೆ ಇಷ್ಟ?
23. ಮನೆಯಿಂದ ಹೊರಗೆ ನಿನಗೆ ಇಷ್ಟವಾಗಿರುವ ಮೂರು ಸ್ಥಳಗಳು?
24. ನೀನು ತುಂಬಾ ಕೃತಜ್ಞರಾಗಿರಲು ನಾನು ಏನು ತರಬೇಕೆಂದು ಬಯಸುತ್ತಿಯಾ?
25. ಅಂಗಿ ಧರಿಸದೆ ನನ್ನನ್ನು ನೋಡಲು ಬಯಸುತ್ತೀಯಾ?
26. 20 ನಿಮಿಷ ಮಾತ್ರ ಜತೆಯಾಗಿ ಕಳೆಯಲು ಇದ್ದರೆ ಏನು ಮಾಡಬಹುದು?
27. ನಾವಿಬ್ಬರು ಈಗ ಜತೆಯಾಗಿದ್ದರೆ ಎಲ್ಲಿರುತ್ತಿದ್ದೆವು?
28. ನಿನ್ನ ಮನೆಯ ಕಿಟಕಿ ಬಳಿ ನಾನಿದ್ದರೆ ನನ್ನನ್ನು ಆಹ್ವಾನಿಸುತ್ತಿಯಾ?
29. ಒತ್ತಡದಲ್ಲಿ ಮನೆಗೆ ಬಂದರೆ ಆಗ ನಾನು ಏನು ಮಾಡಬೇಕೆಂದು ಬಯಸುತ್ತಿಯಾ?
30. ನಿನ್ನ ಬೆನ್ನ ಮೇಲೆ ನನ್ನ ಕೈಗಳು ನರ್ತಿಸಲು ಆರಂಭಿಸಿದರೆ ನಿನ್ನ ಪ್ರತಿಕ್ರಿಯೆ?
ಸಂಗಾತಿಗೆ ನೀವು ಕೇಳಬಹುದಾದ ಅನ್ಯೋನ್ಯತೆಯ ಪ್ರಶ್ನೆಗಳು ಇಲ್ಲಿವೆ. ಸಂಗಾತಿಯ ಉತ್ತರಗಳು ಹೇಗಿರುತ್ತದೆ ಎಂದು ನೋಡಿ ಮತ್ತು ನಿಮಗೆ ವಾಸ್ತವತೆ ತಿಳಿದುಬರಲಿದೆ. ನೀವು ಈ ಲೇಖನವನ್ನು ಇಷ್ಟಪಟ್ಟಿದ್ದರೆ ಖಂಡಿತವಾಗಿಯೂ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ. ಇದಕ್ಕೆ ನಿಮ್ಮ ಅನಿಸಿಕೆ ಖಂಡಿತವಾಗಿಯೂ ಬರೆಯಿರಿ.



Click it and Unblock the Notifications











