Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮದುವೆಯ ಬಳಿಕ ಮೋಜು, ಮಸ್ತಿ, ಪಾರ್ಟಿ ಎಲ್ಲಾ ಬಿಟ್ಟುಬಿಡಿ...
ಮೋಜು, ಮಸ್ತಿ ಎನ್ನುವುದು ಪುರುಷರಿಗೆ ಬಳುವಲಿಯಾಗಿ ಬಂದಿರುತ್ತದೆ. ಅದರಲ್ಲೂ ಮದುವೆಗೆ ಮೊದಲು ಪುರುಷರು ಹೆಚ್ಚೆಚ್ಚು ಪಾರ್ಟಿ ಮಾಡುತ್ತಾ ಇರುತ್ತಾರೆ. ಈ ಸಮಯದಲ್ಲಿ ಅವರನ್ನು ಕೇಳುವವರು ಯಾರೂ ಇರುವುದಿಲ್ಲ. ಇಂತಹ ಪುರುಷರಿಗೆ ಮದುವೆ ಬಳಿಕ ಮೂಗುದಾರ ತೊಡಿಸಿದಂತೆ ಆಗುತ್ತದೆ. ಆದರೆ ಕೆಲವರು ಮದುವೆಯ ಬಳಿಕವೂ ಪಾರ್ಟಿ ಮಾಡುತ್ತಲೇ ಇರುತ್ತಾರೆ. ಕೆಲವೊಂದು ಸಲ ಪಾರ್ಟಿ ಮಾಡಿಕೊಂಡು ಮಧ್ಯರಾತ್ರಿ ವೇಳೆ ಮನೆಗೆ ಬರುತ್ತಾರೆ. ಆಗ ಪತ್ನಿಯ ಬೈಗುಳವನ್ನೂ ಕೇಳಿರುತ್ತಾರೆ.
ಪಾರ್ಟಿಯೊಂದಿಗೆ ವೈವಾಹಿಕ ಜೀವನವನ್ನು ಚೆನ್ನಾಗಿ ಮುಂದುವರಿಸಿಕೊಂಡು ಹೋಗುವುದು ತುಂಬಾ ಕಷ್ಟವಾಗುತ್ತದೆ. ಮದುವೆ ಬಳಿಕ ಪಾರ್ಟಿ ಮಾಡುವುದಾದರೆ ಕೆಲವರಿಗೆ ಪತ್ನಿಯ ಅನುಮತಿ ಬೇಕಾಗುತ್ತದೆ. ಇನ್ನು ಕೆಲವರು ಪಾರ್ಟಿ ಮಾಡುವುದನ್ನೇ ಬಿಟ್ಟುಬಿಟ್ಟಿರುತ್ತಾರೆ.
ಒಂದು ವೇಳೆ ನಿಮ್ಮ ಪತ್ನಿಯು ಅನಾರೋಗ್ಯಕ್ಕೊಳಗಾಗಿರುವ ಸಮಯದಲ್ಲಿ ಸ್ನೇಹಿತರು ದೊಡ್ಡ ಮಟ್ಟದ ಪಾರ್ಟಿ ಏರ್ಪಡಿಸಿದ್ದರೆ ಆಗ ನೀವು ಏನು ಮಾಡುತ್ತೀರಿ? ಪಾರ್ಟಿಗೆ ಹೋಗುತ್ತೀರಾ ಅಥವಾ ಪತ್ನಿಯ ಜತೆಗಿದ್ದು ಆಕೆಯ ಆರೈಕೆ ಮಾಡುತ್ತೀರಾ? ಇಂತಹ ಪರಿಸ್ಥಿತಿಯಲ್ಲಿ ಪಾರ್ಟಿಯಿಂದ ಯಾಕೆ ದೂರ ಉಳಿಯಬೇಕು ಎಂದು ನಿಮಗೆ ಬೋಲ್ಡ್ ಸ್ಕೈ ಹೇಳಿಕೊಡಲಿದೆ....

ಪ್ರೀತಿಯೇ ಇಲ್ಲದಿದ್ದರೆ, ಎಲ್ಲವೂ ಶೂನ್ಯ
ಸಹಾನೂಭೂತಿಯಿರುವ ವ್ಯಕ್ತಿಯೆಂದು ನಿಮ್ಮ ಬಗ್ಗೆ ಅನುಕಂಪವು ಇದ್ದರೆ ಆಗ ನಿಮಗೆ ಪ್ರೀತಿ ಎನ್ನುವುದು ಖಂಡಿತವಾಗಿಯೂ ಲಭ್ಯವಾಗುವುದಿಲ್ಲ. ಪ್ರೀತಿಸಿ ಆದ ಮದುವೆಯಿರಲಿ ಅಥವಾ ದೊಡ್ಡವರು ನೋಡಿ ಮಾಡಿದ ಮದುವೆಯಿರಲಿ, ಪ್ರೀತಿಯಿಲ್ಲದೆ ಎಲ್ಲವೂ ಶೂನ್ಯ.

ಆಕೆಗೆ ಮೋಸ ಮಾಡಿದಂತೆ
ಆಕೆ ಅನಾರೋಗ್ಯಕ್ಕೆ ಒಳಗಾದಾಗ ಹಾಸಿಗೆ ಪಕ್ಕದಲ್ಲಿ ಯಾರೂ ಇಲ್ಲದೆ ಇದ್ದಾಗ ಆಕೆ ಏಕಾಂಗಿಯೆಂಬ ಭಾವನೆ ಆಕೆಯಲ್ಲಿ ಮೂಡುತ್ತದೆ. ಆಕೆಗೆ ಇದು ಚೇತರಿಕೆಯ ಸಮಯವಾಗಿರುತ್ತದೆ. ನಕಾರಾತ್ಮಕ ಭಾವನೆಗಳು ಮನಸ್ಸಿನೊಳಗೆ ಹೋದರೆ ಆಕೆಯ ಸಂಪೂರ್ಣ ದಿನವೇ ವ್ಯರ್ಥವಾಗಬಹುದು.

ಆಕೆ ದ್ವೇಷ ಸಾಧಿಸಬಹುದು!
ಪತ್ನಿ ನಿಮ್ಮನ್ನು ಅರ್ಥ ಮಾಡಿಕೊಂಡಿದ್ದರೆ ಆಗ ನೀವು ಏನು ಮಾಡಿದ್ದೀರಾ ಅದನ್ನು ಆಕೆ ಕ್ಷಮಿಸಬಹುದು. ಇಲ್ಲವಾದಲ್ಲಿ ನೀವು ಅನಾರೋಗ್ಯಕ್ಕೆ ಒಳಗಾಗುವಾಗ ಆಕೆ ಕೂಡ ಹೀಗೆ ಮಾಡಬಹುದು. ನೀವು ಅನಾರೋಗ್ಯಕ್ಕೆ ಒಳಗಾದಾಗ ಆಕೆ ಸ್ನೇಹಿತೆಯರೊಂದಿಗೆ ಪಾರ್ಟಿಗೆ ಹೋದರೆ ನಿಮಗೆ ಹೇಗಾಗಬಹುದು?

ಆಕೆ ನೆರವು ಪಡೆಯಬಹುದು
ನೀವು ಅನಾರೋಗ್ಯ ಪೀಡಿತ ಪತ್ನಿಯನ್ನು ಬಿಟ್ಟು ಪಾರ್ಟಿ ಮಾಡಲು ಹೋದಾಗ ಆಕೆಯ ಪುರುಷ ಸ್ನೇಹಿತ, ಸಹೋದ್ಯೋಗಿ ಅಥವಾ ನೆರೆಮನೆಯಾತ ಬಂದು ಆಕೆಯ ಆರೈಕೆ ಮಾಡಬಹುದು. ನೀವು ಇದನ್ನು ಇಷ್ಟಪಡುತ್ತೀರಾ? ಇಲ್ಲ ತಾನೇ? ಹಾಗಾದರೆ ಪತ್ನಿ ಅನಾರೋಗ್ಯದಿಂದ ಇರುವಾಗ ಪಾರ್ಟಿ ಮಾಡಲು ಹೋಗಬೇಡಿ.

ಪಾರ್ಟಿಯನ್ನು ಆನಂದಿಸಲು ಆಗಲ್ಲ
ಮನೆಯಲ್ಲಿ ಪತ್ನಿ ಅನಾರೋಗ್ಯದಿಂದ ಇದ್ದಾಳೆ ಎಂದು ನಿಮ್ಮ ಮನಸ್ಸಿನಲ್ಲಿ ಇದ್ದರೆ ಆಗ ಸರಿಯಾಗಿ ಪಾರ್ಟಿಯನ್ನು ಆನಂದಿಸಲು ನಿಮ್ಮಿಂದ ಸಾಧ್ಯವಾಗಲ್ಲ.

ನೀವಿದ್ದರೆ ಔಷಧಿಗಿಂತ ದೊಡ್ಡದು
ಆಕೆಗೆ ಯಾವುದೇ ರೀತಿಯ ನೆರವನ್ನು ನೀಡದೆ ಆಕೆಯ ಜತೆಗೆ ನೀವು ಇದ್ದರೆ ಆಗ ಖಂಡಿತವಾಗಿಯೂ ಆಕೆ ಬೇಗನೆ ಚೇತರಿಸಿಕೊಳ್ಳುತ್ತಾಳೆ. ಆಕೆಯ ಆರೈಕೆ ಮಾಡಲಾಗುತ್ತಿದೆಯೆಂಬ ಭಾವನೆ ಬಂದಾಗ ಖಂಡಿತವಾಗಿಯೂ ಬೇಗನೆ ಚೇತರಿಕೆ ಕಾಣುತ್ತಾಳೆ.



Click it and Unblock the Notifications
