Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಕೆ ಕಠೋರ ಆಗಿರಬಹುದು, ಆದರೆ ಮನಸ್ಸು ತುಂಬಾ ಮೃದು!
ಕೆಲವು ವ್ಯಕ್ತಿಗಳು ಬಾಹ್ಯ ನೋಟಕ್ಕೆ ಅತಿ ಕಠಿಣರೂ, ಒರಟಾಗಿ ನಡೆದುಕೊಳ್ಳುವವರೂ, ಹಠಮಾರಿಗಳೂ ಅಥವಾ ತಾವು ಹೇಳಿದ್ದೇ ಸರಿ ಎಂದು ವಾದಿಸುವ ಮೇಲರಿಮೆ ಅಥವಾ ಅಹಂಭಾವವುಳ್ಳವರೂ ಎಂದು ಕಂಡುಬರುತ್ತಾರೆ. ಆದರೆ ಇವರ ಅಂತರಾಳವನ್ನು ಕಂಡಬಳಿಕ ಇವರೊಂದು ಅಪ್ಪಟ ತೆಂಗಿನಕಾಯಿಯಂತೆ ಅಂದರೆ ಗಟ್ಟಿಯಾದ ಕವಚದೊಳಗೆ ಮೃದುವಾದ ಹೃದಯವುಳ್ಳವರಾಗಿರುತ್ತಾರೆ.
ಈ ವ್ಯಕ್ತಿಗಳು ಸಾಮಾನ್ಯ ಹೆಚ್ಚಿನವರ ಗ್ರಹಿಕೆಗೆ ಒರಟರಾಗಿಯೇ ಕಂಡುಬರುತ್ತಾರೆ. ಒಂದು ವೇಳೆ ನಿಮ್ಮ ಸುತ್ತಮುತ್ತಲ ಹಾಗೂ ಪರಿಚಯದ ವ್ಯಕ್ತಿಗಳಲ್ಲಿ ಇಂಥ ವ್ಯಕ್ತಿಗಳಿದ್ದರೆ ಈ ಲೇಖನ ಓದಿ ಅವರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿಕೊಳ್ಳಲು ಸುಸಂದರ್ಭ ಒದಗಿದೆ. ಒಂದು ವೇಳೆ ನೀವು ಇಷ್ಟಪಡುತ್ತಿರುವ ಮಹಿಳೆ ಹೊರಗಿನಿಂದ ಕಠಿಣಳಾಗಿ ಕಂಡುಬಂದರೂ ಒಳಗಿನಿಂದ ಅತ್ಯಂತ ಮೃದುಹೃದಯಿಯಾಗಿರಬಹುದು, ಹೇಗೆ? ಮುಂದೆ ಓದಿ...

ಆಕೆ ಹೊರಗಿನಿಂದ ಸರಳವಾಗಿ ನಕ್ಕರೂ ಒಳಗಿನಿಂದ ಪುಳಕಿತಗೊಳ್ಳುತ್ತಿರಬಹುದು
ಈ ಮಹಿಳೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದ ಬಳಿಕ ಇದಕ್ಕೆ ಆಕೆ ನಕ್ಕು ತನ್ನ ಸಮ್ಮತಿಯನ್ನು ನಗುವಿನ ಮೂಲಕ ನೀಡಬಹುದು ಎಂದು ನೀವು ನಿರೀಕ್ಷಿಸಿದ್ದರೆ ನಿಮ್ಮ ಊಹೆಗೆ ವ್ಯತಿರಿಕ್ತವಾಗಿ ಈ ಮೆಚ್ಚುಗೆಯ ಮಾತುಗಳು ತನಗೆ ಅನ್ವಯಿಸಿಯೇ ಇಲ್ಲವೆಂಬಂತೆ ಆಕೆ ಪ್ರತಿಕ್ರಿಯಿಸಬಹುದು. ಸಹಜವಾಗಿ ನೀವು ಈ ಪ್ರತಿಕ್ರಿಯೆಯನ್ನು ನಿಮ್ಮ ಮೆಚ್ಚುಗೆಯನ್ನು ಆಕೆ ಇಷ್ಟಪಡಲಿಲ್ಲ ಎಂದೇ ಊಹಿಸುತ್ತೀರಿ. ಆದರೆ ವಾಸ್ತವವಾಗಿ ಆಕೆ ನಿಮ್ಮ ಮೆಚ್ಚುಗೆಯ ಮಾತುಗಳನ್ನು ಖಂಡಿತಾ ಮೆಚ್ಚಿಕೊಂಡಿದ್ದು ಮನೆ ತಲುಪಿದ ಬಳಿಕ ಈ ಮಾತುಗಳನ್ನೇ ನೆನೆಸಿಕೊಂಡು ಪುಳಕಿತಳಾಗುತ್ತಾಳೆ. ಈ ವ್ಯಕ್ತಿಗಳು ಕಠಿಣ ವ್ಯಕ್ತಿತ್ವದವರು ಎಂದು ನೀವು ಭಾವಿಸಬಹುದು. ಆದರೆ ಈ ವ್ಯಕ್ತಿಗಳು ತಮ್ಮ ಭಾವನೆಯನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸಲು ಇಷ್ಟಪಡುವುದಿಲ್ಲ.

ಆಕೆಯ ಮಾತುಗಳು ಭಾವನಾರಹಿತವಾಗಿದ್ದರೂ ಆಕೆಯ ಚರ್ಯೆ ಭಾವನಾತ್ಮಕವಾಗಿರುತ್ತದೆ
ಒಳಗಿನಿಂದ ಮೃದು, ಹೊರಗಿನಿಂದ ಕಠಿಣರಾಗಿರುವ ಈ ವ್ಯಕ್ತಿಗಳ ಲಕ್ಷಣ ಈ ಪರಿಯದ್ದಾಗಿರುತ್ತದೆ. ಆದ್ದರಿಂದ ಈ ವ್ಯಕ್ತಿಗಳ ಮಾತುಗಳನ್ನು ತಲೆಗೆ ಹಚ್ಚಿಕೊಳ್ಳದೇ ಇವರ ಕಾರ್ಯ ಮತ್ತು ಚರ್ಯೆಗಳನ್ನು ಮಾತ್ರವೇ ಪರಿಗಣಿಸಿದರೆ ಇವರೆಂತಹ ವ್ಯಕ್ತಿಗಳು ಎಂಬ ಅರಿವಾಗುತ್ತದೆ.

ಆಕೆಗೆ ನಿಮ್ಮ ಮೇಲೆ ಭರವಸೆ ಮೂಡಲು ಸಮಯಾವಕಾಶ ಬೇಕಾಗಿದೆ
ಆಕೆಯ ಕಠಿಣ ಸ್ವಭಾವ ಆಕೆಯ ಮೃದುಹೃದಯದ ಮೇಲಿರುವ ಒಂದು ಕವಚ ಅಷ್ಟೇ. ಈಕೆ ತನ್ನ ಹೃದಯ ಒಡೆಯುವ ಸಂಭವದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದು ಸುಲಭವಾಗಿ ನಿಮ್ಮನ್ನು ಒಪಿಕೊಳ್ಳಲಾರಳು. ನೀವು ನಂಬಿಕೆಗೆ ಅರ್ಹರು ಎಂದು ಖಾತರಿಪಡಿಸಿಕೊಳ್ಳಲು ಆಕೆಗೆ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ.

ಈಕೆ ತನ್ನ ಸುತ್ತ ಒಂದು ಕೋಟೆ ಕಟ್ಟಿಕೊಂಡಿರಬಹುದು
ನಿಮ್ಮನ್ನು ದೂರವಿಡಲು ಆಕೆ ತನ್ನ ಸುತ್ತ ಒಂದು ಕೋಟೆ ಕಟ್ಟಿಕೊಂಡಿರುವಂತೆ ಅನ್ನಿಸುತ್ತದೆ. ಆದರೆ ಇದರ ಅರ್ಥ ಆಕೆ ಭಾವನಾರಹಿತಳು ಅಥವಾ ಭಿನ್ನವ್ಯಕ್ತಿತ್ವದವಳು ಎಂದರ್ಥವಲ್ಲ. ಆಕೆ ಹಿಂದಿನ ವಿಫಲ ಪ್ರೇಮದಿಂದ ಹೊರಬರಲು ಯತ್ನಿಸುತ್ತಿದ್ದು ಇದಕ್ಕಾಗಿ ತನ್ನದೇ ಆದ ಸಮಯವನ್ನು ಬಳಸುತ್ತಿದ್ದಿರಬಹುದು.

ಒಮ್ಮೆ ಆಕೆ ಪ್ರೇಮಜಾಲದಲ್ಲಿ ಬಿದ್ದರೆ, ನಂತರ ಆಕೆ 100% ನಿಮ್ಮವಳು
ಯಾವಾಗ ನೀವು ಆಕೆಯ ಪ್ರೀತಿ ಪಡೆಯಲು ಅರ್ಹರು ಎಂದು ಆಕೆಗೆ ಮನವರಿಕೆಯಾಯಿತೋ, ಆಗ ಆಕೆ ತನ್ನ ಸುತ್ತ ಕಟ್ಟಿಕೊಂಡಿದ್ದ ಕೋಟೆಯನ್ನು ಒಡೆದು ತಾನೇ ತಾನಾಗಿ ನಿಮ್ಮ ಬಳಿ ಬರುವಳು ಹಾಗೂ 100% ವಿಶ್ವಾಸ ಹಾಗೂ ಬದ್ಧತೆಯನ್ನು ಪ್ರಕಟಿಸುತ್ತಾಳೆ

ಆಕೆ ಜಗಳ ಮಾಡಬೇಕಾಗಿ ಬಂದರೂ ಇದು ವಿವೇಕಯುತವಾಗಿರುತ್ತದೆ
ಜಗಳ ಮಾಡಬೇಕಾಗಿ ಬಂದ ಯಾವುದೇ ಸಂದರ್ಭವನ್ನು ಆಕೆ ಪೂರ್ಣವಾಗಿ ಬಳಸಿಕೊಳ್ಳುತ್ತಾಳೆ ಹಾಗೂ ತನ್ನ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಾಳೆ. ಈ ವ್ಯಕ್ತಿಗಳು ಹೊರಗಿನಿಂದ ಕಠಿಣರೆಂದು ಕಂಡುಬರಲು ಇದೂ ಒಂದು ಕಾರಣವಾಗಿದೆ. ಈ ಜಗಳದ ಮೂಲ ಕೆದಕಿದರೆ ಆಕೆಯ ಜಗಳಕ್ಕೆ ವಿವೇಕಯುತ ಕಾರಣವಿರುತ್ತದೆ ಎಂದು ಗೊತ್ತಾಗುತ್ತದೆ. ಈ ವ್ಯಕ್ತಿಗಳು ತಾವು ಸರಿ ಎಂದಿದ್ದಾಗ ಮಾತ್ರವೇ ಜಗಳಕ್ಕಿಳಿದು ವಾದಿಸುತ್ತಾರೆಯೇ ವಿನಃ ಚಿಕ್ಕ ಪುಟ್ಟ ಕೋಳಿ ಜಗಳಗಳಿಗಲ್ಲ.

ಆಕೆ ನಿಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತಾಳೆ
ಎಷ್ಟೋ ಬಾರಿ ಆಕೆಯ ಕಟುಮಾತುಗಳು ನಿಮ್ಮನ್ನು ಅಧೀರರಾಗಿಸಬಹುದು. ಆದರೆ ಈ ಮಾತುಗಳ ಹಿಂದೆ ಅಪಾರವಾದ ಪ್ರೇಮ ಹಾಗೂ ನಿಮ್ಮ ಬಗ್ಗೆ ಅತೀವವಾದ ಕಾಳಜಿ ಇರುತ್ತದೆ. ಒಂದು ವೇಳೆ ಆಕೆ ಹೇಳಿದ ಯಾವುದೋ ಮಾತುಗಳು ನಿಮಗೆ ಇಷ್ಟವಾಗಲಿಲ್ಲ ಎಂದರೆ ಮಾತು ಮುಂದುವರೆಸುವ ಬದಲು ಕೊಂಚ ಹೊತ್ತು ಸುಮ್ಮನಿದ್ದು ಈ ಜಗಳ ಮುಂದುವರೆಸದೇ ಹಾಗೇ ಇದ್ದು ಬಿಡಿ. ಕೆಲವೇ ಕ್ಷಣಗಳಲ್ಲಿ ಆಕೆಯ ಕೋಪ ಇಳಿದು ತಾನು ಕಟುಮಾತುಗಳನ್ನು ಹೇಳಿದ್ದಕ್ಕೆ ಕಾರಣವೇನೆಂದು ವಿವರಿಸಬಹುದು. ತಣ್ಣನೆಯ ಮನಸ್ಸಿನಲ್ಲಿ ಯೋಚಿಸಿದರೆ ಈ ವಿವರಣೆ ಸರಿಯಾಗಿದ್ದುದೇ ಎಂದು ನಿಮಗೆ ಅರಿವಾಗುತ್ತದೆ.



Click it and Unblock the Notifications









