ಆತ ಹೆಂಡತಿ ಬಳಿ ಮಾತ್ರ ಈ ವಿಷಯಗಳನ್ನು ಸೀಕ್ರೆಟ್ ಆಗಿ ಇಟ್ಟುಕೊಳ್ಳುತ್ತಾನೆ!

Posted By: Lekhaka
Subscribe to Boldsky

ನೀರಿನಲ್ಲಿ ಮೀನಿನ ಹೆಜ್ಜೆ ಮತ್ತು ಹೆಣ್ಣಿನ ಮನಸ್ಸು ಇವೆರಡನ್ನು ತಿಳಿಯಲು ಸಾಧ್ಯವಿಲ್ಲವೆಂದು ಹಿರಿಯರು ಹೇಳುತ್ತಾರೆ. ಮಹಿಳೆಯರು ಹೆಚ್ಚಿನ ಗೌಪ್ಯತೆ ಕಾಪಾಡಿಕೊಳ್ಳುವುದೇ ಇದಕ್ಕೆ ಕಾರಣ. ಆದರೆ ಪುರುಷರು ಕೂಡ ಕೆಲವೊಂದು ವಿಷಯಗಳ ಬಗ್ಗೆ ತುಂಬಾ ರಹಸ್ಯ ಕಾಪಾಡಿಕೊಳ್ಳುವರು. ಪುರುಷರು ಜೀವನದ ಕೆಲವೊಂದು ವಿಷಯಗಳನ್ನು ಮುಚ್ಚಲು ಪ್ರಯತ್ನಿಸುತ್ತಾರೆ.

Secrets That Men Don't Tell Women

ತಮ್ಮಲ್ಲಿರುವ ಕೆಲವೊಂದು ಗುಣಗಳು ಮಹಿಳೆಯರು ಭಿನ್ನವಾಗಿ ಪರಿಗಣಿಸಬಹುದು ಎನ್ನುವ ಕಾರಣಕ್ಕಾಗಿ ಹೀಗೆ ಮಾಡುವುದು ಪುರುಷರ ಗುಣ. ಮಹಿಳೆಯರಿಗೆ ಪುರುಷರು ಹೇಳದೆ ಇರುವ ಕೆಲವೊಂದು ಗೌಪ್ಯ ವಿಚಾರಗಳ ಬಗ್ಗೆ ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಪುರುಷರ ಕೆಲವೊಂದು ರಹಸ್ಯಗಳು ಇಲ್ಲಿವೆ.

Secrets That Men Don't Tell Women

ನೀವು ಜಗತ್ತಿನ ಅತ್ಯಂತ ಸುಂದರ ಮಹಿಳೆಯೆಂದು ಆತ ಹೇಳಿದ್ದಾನೆಯಾ?

ಶೇ.90ರಷ್ಟು ಪುರುಷರು ತಮಗೆ ಇಷ್ಟವಾದ ಪ್ರತಿಯೊಬ್ಬ ಮಹಿಳೆಗೂ ಇದೇ ರೀತಿಯ ಪ್ರಶಂಸೆ ನೀಡುವರು. ಜೀವನದಲ್ಲಿ ತಾವು ಭೇಟಿಯಾಗುವ ಹಲವಾರು ಮಹಿಳೆಯರಿಗೆ ನೀನು ತುಂಬಾ ಸುಂದರವಾಗಿದ್ದೀಯಾ ಎನ್ನುವ ಪ್ರಶಂಸೆ ಮಾಡಿರುವುದಾಗಿ ಪುರುಷರು ಸಮೀಕ್ಷೆಯೊಂದರಲ್ಲಿ ಒಪ್ಪಿಕೊಂಡಿದ್ದಾರೆ.

ಉದಾಸೀನ ಇಷ್ಟಪಡುವರು

ಏನು ಮಾಡದೆ ಸುಮ್ಮನೆ ಕುಳಿತುಕೊಳ್ಳಲು ಪುರುಷರು ಬಯಸುವರು. ಕೆಲವು ಪುರುಷರು ತುಂಬಾ ಶಾಂತಿಯಿಂದ ಸಮಯ ಕಳೆಯಲು ಬಯಸಿದರೆ, ಇನ್ನು ಕೆಲವು ಪುರುಷರು ನಿದ್ರೆ ಮಾಡುತ್ತಾ, ತಿನ್ನುತ್ತಾ, ಕುಡಿಯುತ್ತಾ ಕಾಲ ಕಳೆಯಲು ಬಯಸುವರು. ಇಂತಹ ಸಮಯದಲ್ಲಿ ನೀವು ಅವರಿಗೆ ಕರೆ ಮಾಡಿದರೂ ತಾನು ತುಂಬಾ ಬ್ಯೂಸಿಯಾಗಿದ್ದೇವೆಂದು ತೋರಿಸಿಕೊಳ್ಳುವರು. ಅವರಿಗೆ ಇಡೀ ದಿನ ನಿದ್ರೆ ಮಾಡಬೇಕಾಗಿರುತ್ತದೆ.

Secrets That Men Don't Tell Women

ಎಲ್ಲಾ ಪ್ರೇಮ ನಿರಾಕರಣೆಗೆ ಪರದೆ ಹಾಕುವರು

ನಿಮ್ಮ ಸಂಗಾತಿಯು ಹಿಂದೆ ಹಲವಾರು ಮಂದಿಗೆ ಪ್ರೇಮ ನಿವೇದನೆ ಮಾಡಿರಬಹುದು ಮತ್ತು ಎಲ್ಲರೂ ತಿರಸ್ಕರಿಸಿರಬಹುದು. ಆದರೆ ಇದರ ಬಗ್ಗೆ ಯಾವುತ್ತೂ ಮಾತನಾಡಲ್ಲ. ತನ್ನ ಬಗ್ಗೆ ಆಸಕ್ತಿ ತೋರಿಸಿದ ಮಹಿಳೆಯರ ಬಗ್ಗೆ ಕೊಚ್ಚಿಕೊಳ್ಳುವರು.

Secrets That Men Don't Tell Women

ವಿವರ ಕಳಕೊಳ್ಳುವರು

ಪುರುಷರು ಕೆಲವು ಸಲ ವಿವರಗಳನ್ನು ಕಳಕೊಳ್ಳುವರು. ಅವರಿಗೆ ದೊಡ್ಡ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸುವ ಸಾಮರ್ಥ್ಯವಿರುವುದು. ಆದರೆ ಸಣ್ಣ ವಿಚಾರಗಳಲ್ಲಿ ಗೊಂದಲಕ್ಕೊಳಗಾಗುವರು. ಇದರಿಂದಾಗಿ ಸುಲಭ ಕೆಲಸಗಳಲ್ಲಿ ಹಿಂದೆ ಬೀಳುವರು.

Secrets That Men Don't Tell Women

ಅವಿವೇಕದ ಬಗ್ಗೆ ಯೋಚಿಸಿ ಆರಾಮವಾಗುವರು

ಭುಜದ ಮೇಲೆ ಹಲವಾರು ರೀತಿಯ ಸಮಸ್ಯೆಗಳು ಇರುವಾಗ ಪುರುಷರು ಇದರ ಬಗ್ಗೆ ಗಂಭೀರವಾಗಿ ಯೋಚಿಸುವರು. ಆದರೆ ಕೆಲವು ಸಲ ಇಂತಹ ವಿಚಾರಗಳಿಂದ ಮುಕ್ತಿ ಪಡೆಯಲು ಅವಿವೇಕದ ವಿಷಯದ ಬಗ್ಗೆ ಯೋಚಿಸುವರು. ಕೆಲವು ಪುರುಷರು ನೀಲಿ ಚಿತ್ರಗಳ ಬಗ್ಗೆ ಯೋಚಿಸುವರು.

Secrets That Men Don't Tell Women

ಪ್ರತಿಯೊಂದನ್ನೂ ಸ್ಕ್ಯಾನ್ ಮಾಡಬಲ್ಲರು!

ಪುರುಷರು ಪ್ರತಿಯೊಂದು ಮಹಿಳೆಯನ್ನು ಸ್ಕ್ಯಾನ್ ಮಾಡಬಲ್ಲರು. ಸುಂದರ ಮಹಿಳೆಯರನ್ನು ಪುರುಷರು ಕದ್ದುಮುಚ್ಚಿ ನೋಡುವರು.

ಪುರುಷರಿಗೂ ಭಯವಿರುವುದು

ಕೆಲವು ಪುರುಷರು ತಾವು ತುಂಬಾ ಧೈರ್ಯಶಾಲಿಗಳೆಂದು ತೋರಿಸಿಕೊಳ್ಳುವರು. ಆದರೆ ಒಳಗಿನಿಂದ ಅವರು ತುಂಬಾ ಪುಕ್ಕಲರು. ಕೆಲವು ಪುರುಷರು ಯಾವುದೇ ಕಾರಣವಿಲ್ಲದೆ ಭವಿಷ್ಯದ ಬಗ್ಗೆ ಚಿಂತೆ ಮಾಡುವರು.

Secrets That Men Don't Tell Women

ಪುರುಷರಿಗೂ ಬೆಂಬಲ ಬೇಕು

ಪುರುಷರಿಗೂ ಭಾವನಾತ್ಮಕ ಬೆಂಬಲ ಬೇಕಿರುವುದು. ಆದರೆ ನೆರವು ಪಡೆಯಲು ಹಿಂಜರಿಯುವರು. ಒಳಗಿನಿಂದ ನೋವು ಅನುಭವಿಸಿದರೂ ಮುಖದಲ್ಲಿ ಅದನ್ನು ತೋರಿಸಿಕೊಡಲ್ಲ.

English summary

Secrets That Men Don't Tell Women!

If you talk about mystery, women are mysterious. Men are plain and simple. But even men do have some things which they want to hide but they generally fail to. Men try to cover up certain areas of their lives or certain common qualities because they fear that women might perceive such qualities in a different light. So, what are the secrets that men never tell women? Curious? Well, here are some secrets of men.
Subscribe Newsletter