Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಮದುವೆಗೆ ಈ 4 ರಾಶಿಗಳಲ್ಲಿ ಜನಿಸಿದ ಹುಡುಗ ಸಿಕ್ಕಿದರೆ ಅವರೇ ಪುಣ್ಯವಂತರು!!
ಪ್ರತಿಯೊಬ್ಬರೂ ಪ್ರಾಯಕ್ಕೆ ಬಂದು, ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಜೀವನ ನಡೆಸುವಾಗ ವಿವಾಹ ಆಗುವುದು ಸಮಾಜದಲ್ಲಿರುವ ಪದ್ಧತಿ. ವಿವಾಹ ಎಂದರೆ ಎಲ್ಲರಿಗೂ ಒಂದು ರೀತಿಯ ಸಂತೋಷ ಹಾಗೂ ಖುಷಿಯಿರುತ್ತದೆ. ಆ ಆನಂದದ ಹಿಂದೆ ವಿವಾಹದ ಜೊತೆಗೆ ಒಂದಿಷ್ಟು ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬುದನ್ನು ಅನೇಕರು ಅರಿತಿರುವುದಿಲ್ಲ. ಕೇವಲ ಸಂಗಾತಿಯ ಜವಾಬ್ದಾರಿಯಷ್ಟೇ ಅಲ್ಲಾ, ಸಂಗಾತಿಯ ಜವಾಬ್ದಾರಿಯೊಂದಿಗೆ ಅವರ ಮನೆಯವರನ್ನು ಸೂಕ್ತರೀತಿಯಲ್ಲಿ ನಿಭಾಯಿಸುವ ಸ್ವಭಾವ ಇರಬೇಕು.
ವಿವಾಹ ಬಂಧನ ಎನ್ನುವ ಈ ಸುಮಧುರ ಬಂಧನವು ಸುಖಕರವಾಗಿರಬೇಕು ಎಂದಾದರೆ ಮೊದಲು ಸಂಗಾತಿಯಾಗುವವರು ನಮ್ಮೊಂದಿಗೆ ಒಳ್ಳೆಯ ಸ್ನೇಹ, ಹೊಂದಾಣಿಕೆ ಹಾಗೂ ಪ್ರೀತಿ-ವಿಶ್ವಾಸದಿಂದ ಇರಬೇಕಾಗುತ್ತದೆ. ಇಂತಹ ಎಲ್ಲಾ ಗುಣಗಳು ಒಬ್ಬರಲ್ಲಿಯೇ ಇರುವುದು ಅಪರೂಪ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಅಂದರೆ 12 ರಾಶಿ ಚಕ್ರದವರಲ್ಲಿ ನಾಲ್ಕು ರಾಶಿ ಚಕ್ರದ ಪುರುಷರು ವಿವಾಹದ ಜವಾಬ್ದಾರಿ ನಿರ್ವಹಿಸುವಲ್ಲಿ ಪರಿಪೂರ್ಣತೆ ಹೊಂದಿರುತ್ತಾರೆ ಎನ್ನಲಾಗುತ್ತದೆ.
ನಿಮಗೂ ಮದುವೆಯ ವಯಸ್ಸಾಗಿದೆ ಸೂಕ್ತ ಹುಡುಗನನ್ನು ಹುಡುಕುತ್ತಿದ್ದೀರಿ, ಅಥವಾ ನಿಮ್ಮ ಆತ್ಮೀಯರಿಗಾಗಿ ಹುಡುಗನ ಹುಡುಕಾಟ ಪ್ರಾರಂಭವಾಗಿದೆ ಎಂದಾದರೆ ಮೊದಲು ಈ ನಾಲ್ಕು ರಾಶಿಚಕ್ರದವರನ್ನು ಆಯ್ಕೆ ಮಾಡಿಕೊಳ್ಳಿ... ಆ ನಾಲ್ಕು ರಾಶಿ ಚಕ್ರಗಳು ಯಾವವು? ಅವರ ಮಾನಸಿಕ ಗುಣಗಳು ಯಾವವು? ಹವ್ಯಾಸವೇನು? ಇತರರಿಗಿಂತ ಹೇಗೆ ಭಿನ್ನವಾಗಿದ್ದಾರೆ? ಎನ್ನುವುದನ್ನು ನೀವು ತಿಳಿಯಬೇಕೆಂದಾದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.....

ಸೂಕ್ತ ವ್ಯಕ್ತಿಯನ್ನು ಆರಿಸುವ ಪರಿ
ಸಾಮಾನ್ಯವಾಗಿ ಹುಡುಗನನ್ನು ಆರಿಸುವಾಗ ಸುಂದರವಾದ ಹುಡುಗ, ಕಾಳಜಿ ಹಾಗೂ ಜವಾಬ್ದಾರಿ ಇರುವ ವ್ಯಕ್ತಿ, ಪುರುಷತ್ವ ಹೊಂದಿರುವ ವ್ಯಕ್ತಿ, ಸಮಾಜದಲ್ಲಿ ಸನ್ನಡತೆ, ಕೆಟ್ಟ ಹವ್ಯಾಸಗಳಿಂದ ದೂರ ಇರುವ ವ್ಯಕ್ತಿ ಹಾಗೂ ಉತ್ತಮ ಸಂಪಾದನೆ, ಸಂಸ್ಕಾರಯುತವಾದ ಕುಟುಂಬದಿಂದ ಬಂದಿರಬೇಕೆಂದು ಬಯಸುತ್ತಾರೆ.

ಮಿಥುನ
ನಿಮ್ಮೊಂದಿಗೆ ತಮಾಷೆಯಿಂದ ನಗು ನಗುತ್ತಾ ಇರುವಂತಹ ಹುಡುಗನನ್ನು ನೀವು ಹುಡುಕುತ್ತಿದ್ದೀರಿ ಎಂದಾದರೆ ನಿಮಗೆ ಹೊಂದಾಣಿಕೆಯಾಗುವ ಸೂಕ್ತ ವ್ಯಕ್ತಿ ಮಿಥುನ ರಾಶಿಯ ಹುಡುಗ. ಈ ರಾಶಿಯ ಹುಡುಗರು ತಮ್ಮದೇ ಆದ ವಿಶೇಷ ವಿನೋದಗಳನ್ನು ಮಾಡುತ್ತಿರುತ್ತಾರೆ. ಸದಾ ಹಾಸ್ಯವನ್ನು ಮಾಡುತ್ತಾ ನಗಿಸುತ್ತಿರುತ್ತಾರೆ. ಇವರು ಎಲ್ಲರಿಗೂ ಗೌರವವನ್ನು ನೀಡುತ್ತಾರೆ. ಎಲ್ಲರೊಂದಿಗೂ ಸ್ನೇಹದಿಂದ ವರ್ತಿಸುತ್ತಾರೆ. ಜೊತೆಗೆ ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಾರೆ.

ಇವರೊಟ್ಟಿಗೆ ವಿವಾಹವಾದರೆ ಜೀವನದಲ್ಲಿ ಸದಾ ಸಂತೋಷವಾಗಿರುವಿರಿ..
ಹೆಚ್ಚು ಮಾತನಾಡುವ ಪ್ರವೃತ್ತಿ ಹೊಂದಿರುವ ಇವರು ಎಲ್ಲರೊಂದಿಗೂ ಬೆರೆಯುತ್ತಾರೆ. ಇವರು ವಿಶ್ವಾಸಾರ್ಹವಾಗಿರುವ ವ್ಯಕ್ತಿಯಾಗಿರುತ್ತಾರೆ. ಸಾಮಾಜಿಕವಾಗಿಯೂ ಉತ್ತಮ ನಡತೆಯನ್ನು ಹೊಂದಿರುತ್ತಾರೆ. ಉತ್ತಮ ಉದ್ಯೋಗ ಹಾಗೂ ಹಣವನ್ನು ಸಂಪಾದಿಸುವ ಗುಣವಿರುತ್ತದೆ. ಮನೆಯವರ ಬಗ್ಗೆ ಹೆಚ್ಚು ಕಾಳಜಿಯನ್ನು ನಿಭಾಯಿಸುವ ಸಾಮರ್ಥ್ಯ ಇವರಿಗೆ ಇರುತ್ತದೆ. ಅಲ್ಲದೆ ಇವರು ಉತ್ತಮ ವಾಗ್ಮಿಗಳು ಹಾಗೂ ಮಾತುಗಾರಿಕೆಯಲ್ಲಿ ನಿಷ್ಣಾತರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಇನ್ನೊಬ್ಬರ ಆಧಾರದ ಮೇಲೆ ನಿಲ್ಲುವವರಾದರೂ ಸಾಮಾಜಿಕವಾಗಿ ಬೆರೆಯುವವರೂ ಉಲ್ಲಸಿತ ವ್ಯಕ್ತಿಗಳೂ ಆಗಿರುತ್ತಾರೆ. ಈ ವ್ಯಕ್ತಿಯೊಂದಿಗೆ ವಿವಾಹವಾದರೆ ನಿಮ್ಮ ಜೀವನದಲ್ಲಿ ಸದಾ ಸಂತೋಷ, ವಿನೋದ ಹಾಗೂ ನೆಮ್ಮದಿ ನೆಲೆಸಿರುತ್ತದೆ ಹಾಗೂ ನಿಮ್ಮ ದಾಂಪತ್ಯ ಆದರ್ಶ ಮಯವಾಗಿರುತ್ತದೆ.

ಕರ್ಕ
ಇವರೊಬ್ಬರು ಪರಿಪೂರ್ಣವಾದ ಕೌಟುಂಬಿಕ ವ್ಯಕ್ತಿಯಾಗಿರುತ್ತಾರೆ. ಪರಿಪೂರ್ಣ ಗಂಡ ಅಥವಾ ಪರಿಪೂರ್ಣ ತಂದೆ ಹೇಗಿರಬೇಕು ಎನ್ನುವುದನ್ನು ಅರಿತಿರುತ್ತಾರೆ. ಜೊತೆಗೆ ಅವೆರಡರ ಸ್ಥಾನಕ್ಕೆ ಯಾವುದೇ ಚ್ಯುತಿ ಬರದಂತೆ ನೋಡಿಕೊಳ್ಳುತ್ತಾರೆ. ಅಲ್ಲದೆ ಮಕ್ಕಳಿಗೆ ನೈತಿಕ ಗುಣವನ್ನು ಕಲಿಸುವ ಆದರ್ಶ ವ್ಯಕ್ತಿಯಾಗಬಲ್ಲರು. ಸುತ್ತಲ ಜನರೊಂದಿಗೆ ಸೂಕ್ತ ವರ್ತನೆ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಿ ವರ್ತಿಸುತ್ತಾರೆ.

ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ...
ಸಂಸಾರದ ಜವಾಬ್ದಾರಿ ಹಾಗೂ ಸುಮಧುರ ಸಮಯವನ್ನು ಹೇಗೆ ಕಳೆಯಬೇಕು ಎನ್ನುವುದನ್ನು ಅರಿತಿರುತ್ತಾರೆ. ಸಂಗಾತಿಯನ್ನು ಬಹಳ ಖುಷಿಯಿಂದ ಹಾಗೂ ಬೇಕು ಬೇಡಗಳನ್ನು ಅರಿತು ಸೂಕ್ತ ರೀತಿಯಲ್ಲಿ ನೋಡಿಕೊಳ್ಳುವ ಗುಣವನ್ನು ಇವರು ಹೊಂದಿರುತ್ತಾರೆ. ಈ ವ್ಯಕ್ತಿಗಳನ್ನು ವಿವಾಹವಾದರೆ ಅವರ ಕುಟುಂಬದವರನ್ನೇ ಹತ್ತಿರ ಮಾಡಿಕೊಂಡಂತೆ. ದಿನಗಳೆದಂತೆ ಈ ಜೋಡಿ ಎಷ್ಟು ಆತ್ಮೀಯ ವಾಗುತ್ತದೆಯೋ ಅಷ್ಟೇ ಆತ್ಮೀಯತೆ ಎರಡು ಕುಟುಂಬಗಳ ನಡುವೆಯೂ ಪಡೆಯುತ್ತದೆ. ಅಲ್ಲದೆ ಈ ವ್ಯಕ್ತಿ ನಿಮ್ಮನ್ನು ಕೇವಲ ತಮ್ಮ ಧರ್ಮಪತ್ನಿಯಾಗಿ ಬರ ಮಾಡಿಕೊಳ್ಳುವುದಿಲ್ಲ, ಬದಲಿಗೆ ತನ್ನ ಜೀವನದ ಪ್ರಮುಖ ವ್ಯಕ್ತಿಯಾಗಿ ಹಾಗೂ ಮುಂಬರುವ ಸಂತತಿಯನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸಲು ಶ್ರಮವಹಿಸುತ್ತಾರೆ.

ತುಲಾ
ಇವರು ಅತ್ಯುತ್ತಮ ರೀತಿಯಲ್ಲಿ ಮಹಿಳೆಯರಿಗೆ ಪೋಷಕರಾಗಿ ಕಾರ್ಯ ನಿರ್ವಹಿಸುತ್ತಾರೆ. ತುಲಾ ರಾಶಿಯವರನ್ನು ನೀವು ವಿವಾಹವಾಗುತ್ತಿದ್ದೀರಿ ಎಂದಾದರೆ ಯಾವುದೇ ವಿಚಾರದಲ್ಲೂ ನೀವು ಚಿಂತಿಸುವ ಅಗತ್ಯ ಇರುವುದಿಲ್ಲ. ವಿಶ್ವಾಸಾರ್ಹ ವ್ಯಕ್ತಿಯಾಗಿ ಸಂಗಾತಿಯ ಎಲ್ಲಾ ಆಸೆ ಆಕಾಂಕ್ಷೆಗಳನ್ನು ನೆರವೇರಿಸುತ್ತಾರೆ ಎನ್ನಲಾಗುತ್ತದೆ.

ಈ ವ್ಯಕ್ತಿಗೆ ನಿಮ್ಮ ಸಂತೋಷವೇ ಪ್ರಥಮ ಆದ್ಯತೆ
ಇವರು ಸ್ವಭಾವತಹ ಸಂತೋಷದಿಂದ ಇರುತ್ತಾರೆ. ಹಾಗಾಗಿ ತಮ್ಮ ಸಂಗಾತಿಯನ್ನು ಸಹ ಅತ್ಯಂತ ಸಂತೋಷದಿಂದ ಕಾಪಾಡಿಕೊಳ್ಳುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಹಾಗೂ ಕೆಲಸಗಳಲ್ಲಿ ಸಹಕಾರಿಯಾಗಿ ಜವಬ್ದಾರಿಯನ್ನು ನಿಭಾಯಿಸುತ್ತಾರೆ. ಸಂಗಾತಿಯನ್ನು ತೃಪ್ತಿಪಡಿಸುವುದು ಇವರಿಗೆ ಅತ್ಯಂತ ಪ್ರಮುಖ ವಿಚಾರವಾಗಿರುತ್ತದೆ. ಇವರು ಉತ್ತಮ ಗುಣದ ವ್ಯಕ್ತಿಗಳು ಹಾಗೂ ನಿಮ್ಮ ಸಂತೋಷಕ್ಕಾಗಿ ಏನನ್ನೂ ಮಾಡುವ ವ್ಯಕ್ತಿಗಳಾಗಿರುವ ಕಾರಣ ನಿಮ್ಮೊಂದಿಗೆ ಪತಿಗಿಂತಲೂ ಹೆಚ್ಚಾಗಿ ಓರ್ವ ಪ್ರಾಣಸ್ನೇಹಿತನಾಗಿರುತ್ತಾರೆ. ಈ ರಾಶಿಯ ವ್ಯಕ್ತಿಯೊಂದಿಗೆ ವಿವಾಹವಾಗಲು ಕೊಂಚ ಹೆಣಗಾಡಬೇಕಾದರೂ ವಿವಾಹದ ಬಳಿಕ ಈ ವ್ಯಕ್ತಿಗೆ ನಿಮ್ಮ ಸಂತೋಷವೇ ಪ್ರಥಮ ಆದ್ಯತೆಯಾದ ಕಾರಣ ಜೀವನವಿಡೀ ಸುಖಮಯವಾಗಿರುತ್ತದೆ.

ವೃಶ್ಚಿಕ
ಇವರು ಸೃಜನ ಶೀಲ ವ್ಯಕ್ತಿಯಾಗಿರುತ್ತಾರೆ. ಈ ರಾಶಿಯವರನ್ನು ನೀವು ಒಲಿಸಿಕೊಳ್ಳುವುದಾದರೆ ಇದೊಂದು ಉತ್ತಮ ಆಯ್ಕೆ ಎನ್ನಬಹುದು. ಇವರು ತನ್ನ ಸಂಗಾತಿಯನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಾರೆ. ಸದಾ ಪ್ರೀತಿ, ಸ್ನೇಹದ ಒಡನಾಟದಲ್ಲಿ ಇರಲು ಬಯಸುತ್ತಾರೆ. ಇವರ ತೋಳು ಸದಾ ನಿಮ್ಮನ್ನು ಅಪೇಕ್ಷಿಸುತ್ತಿರುತ್ತದೆ. ನಿಮಗೆ ಬೇಕೆನಿಸಿದ ಎಲ್ಲಾ ಬಗೆಯ ಸವಲತ್ತುಗಳನ್ನು ನಿಮಗೆ ಒದಗಿಸಿ ಕೊಡುತ್ತಾರೆ. ನಿಮ್ಮೊಂದಿಗೆ ಪ್ರೀತಿಯ ಒಡನಾಟದಲ್ಲಿಯೇ ಇರುತ್ತಾರೆ.

ಈ ವ್ಯಕ್ತಿಗಳೊಂದಿಗೆ ವಿವಾಹವಾದರೆ ಜೀವನ ಸುಖಕರವಾಗಿರುತ್ತದೆ
ನಿಜವಾಗಿ ಹೇಳಬೇಕೆಂದರೆ ಈ ರಾಶಿಯ ಜನರ ಒಂದು ದೌರ್ಬಲ್ಯವೆಂದರೆ ಸುಳ್ಳು ಹೇಳುವುದು. ಇವರ ಮಾತುಗಳು ಸದಾ ಸತ್ಯವೇ ಆಗಿರುವುದಿಲ್ಲ ಇದೊಂದು ಕಾರಣದಿಂದ ನಿಮ್ಮ ಮನೋಭಾವ ಕುಗ್ಗಬಹುದು. ಆದರೆ ಇವರ ಮೇಲೆ ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳದೇ ಇದ್ದಲ್ಲಿ ಮಾತ್ರ ನಿಮ್ಮ ಜೀವನವನ್ನು ಅವರು ಸುಂದರವಾಗಿಸಬಲ್ಲರು. ಇವರು ನಿಮಗೆ ಸುಂದರವಾದ ಹಾಗೂ ಸಿಹಿಯಾದ ಅಚ್ಚರಿಯ ಉಡುಗೊರೆಗಳನ್ನು ನೀಡುತ್ತಾ ನಿಮ್ಮ ಮನಸ್ಸು ಉಲ್ಲಸಿತವಾಗಿರುವಂತೆ ನೋಡಿಕೊಳ್ಳುತ್ತಾರೆ. ಇವರು ನಿಮ್ಮ ವೈಯಕ್ತಿಯ ಸಮಯಕ್ಕೆ ಹಾಗೂ ಖಾಸಗಿತನಕ್ಕೆ ಹೆಚ್ಚಿನ ಬೆಲೆ ನೀಡುವವರಾಗಿದ್ದು ಈ ಬಗ್ಗೆ ಚಕಾರವೆತ್ತುವುದಿಲ್ಲ. ಈ ಗುಣದ ಕಾರಣದಿಂದಲೇ ಈ ವ್ಯಕ್ತಿಗಳೊಂದಿಗೆ ವಿವಾಹವಾಗುವ ಮೂಲಕ ಜೀವನ ಸುಖಕರವಾಗಿರುತ್ತದೆ.

ಜೀವನವಿಡೀ ಸುಖ, ಸರಸ ಹಾಗೂ ಉಲ್ಲಾಸದಿಂದಿರುತ್ತದೆ
ಇವರು ಜೀವನದಲ್ಲಿ ಅತಿ ಹೆಚ್ಚು ಆಸೆ, ಆಕಾಂಕ್ಷೆಯನ್ನು ಪಡೆದುಕೊಂಡಿರುತ್ತಾರೆ. ಇವರು ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುವ ವ್ಯಕ್ತಿಯಾಗಿರುತ್ತಾರೆ. ಇವರನ್ನು ನೀವು ಸಹಯೋಗಿಯಾಗಿ ಆಯ್ಕೆ ಮಾಡಿಕೊಂಡರೆ ನೀವು ಸದಾ ಉತ್ಸಾಹದಲ್ಲಿ ಇರುತ್ತೀರಿ ಎಂದು ಹೇಳಬಹುದು. ನೀವು ಅವರನ್ನು ಯಾವುದೇ ಆತಂಕವಿಲ್ಲದೆ ವಿವಾಹವಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.



Click it and Unblock the Notifications











