Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇರೆ ಮಹಿಳೆಯ ಕಡೆ ದೃಷ್ಟಿ ನೆಟ್ಟರೆ, ಹುಷಾರ್!
ಸುಂದರವಾಗಿರುವ ಯಾವುದೇ ವಸ್ತುಗಳು ಇದ್ದರೂ ಅದರತ್ತ ನಮ್ಮ ದೃಷ್ಟಿ ಹೋಗದೆ ಇರುವುದಿಲ್ಲ. ಮಹಿಳೆಯರ ವಿಷಯದಲ್ಲೂ ಹಾಗೆಯೇ. ಪುರುಷರು ಒಂದು ಸೆಕೆಂಡ್ ಆದರೂ ಸುಂದರ ಮಹಿಳೆಯರನ್ನು ನೋಡದೆ ಇರುವುದಿಲ್ಲ. ಪ್ರತಿಯೊಬ್ಬರಲ್ಲೂ ಇದು ಸಾಮಾನ್ಯವಾಗಿರುತ್ತದೆ. ಆದರೆ ಬದಿಯಲ್ಲಿ ನಿಮ್ಮ ಹುಡುಗಿಯನ್ನು ಕುಳ್ಳಿರಿಸಿಕೊಂಡು ಬೇರೆ ಮಹಿಳೆಯ ಕಡೆ ದೃಷ್ಟಿ ನೆಟ್ಟರೆ ಏನಾಗಬಹುದು ಹೇಳಿ? ವ್ಯಕ್ತಿ ಅನೈತಿಕ ಸಂಬಂಧದಲ್ಲಿ ಬೀಳಲು ಕಾರಣವೇನು?
ಖಂಡಿತವಾಗಿಯೂ ನಿಮಗೆ ಗ್ರಹಚಾರ ಕಾದಿದೆ ಎಂದರ್ಥ. ಯಾಕೆಂದರೆ ನಿಮ್ಮ ಕಣ್ಣುಗಳು ಎಷ್ಟೇ ವೇಗವಾಗಿ ಸುಂದರ ಮಹಿಳೆಯನ್ನು ನೋಡಿದ್ದರೂ ಅದನ್ನು ನಿಮ್ಮ ಹುಡುಗಿ ಗಮನಿಸಿಯೇ ಇರುತ್ತಾಳೆ. ಅದನ್ನು ಕಂಡು ಆಕೆಗೆ ನಿಮ್ಮ ಕುತ್ತಿಗೆ ಹಿಡಿದು ಹಿಸುಕಬೇಕೆಂದು ಅನಿಸಬಹುದು. ಆದರೂ ಸಹಿಸಿಕೊಳ್ಳುತ್ತಾಳೆ. ಹುಡುಗಿಯರನ್ನು ಹೆಚ್ಚು ನಂಬಬೇಡಿ, ಮೋಸ ಮಾಡಿ ಬಿಡುತ್ತಾರೆ!
ಅದೇ ಆಕೆ ಬೇರೆ ಹುಡುಗನನ್ನು ನೋಡಿದರೆ ಆಗ ನೀವು ಸಂಶಯ ಪಡಬಹುದು. ನೀವು ಯಾವ ಹುಡುಗಿಯನ್ನು ಬೇಕಿದ್ದರೂ ನೋಡಬಹುದು. ಆದರೆ ಹುಡುಗಿಯರು ಮಾತ್ರ ನೋಡಬಾರದು. ಇದು ಯಾವ ಸೀಮೆ ನ್ಯಾಯ? ನೀವು ಬೇರೆ ಹುಡುಗಿಯನ್ನು ನೋಡುವಾಗ ಏನೆಲ್ಲಾ ಆಗಬಹುದು ಎಂದು ತಿಳಿದುಕೊಳ್ಳಿ.

ಆಕೆಗೆ ತೀವ್ರ ನೋವಾಗಬಹುದು
ಆಕೆಯ ಮೂಗಿನ ನೇರಕ್ಕೆ ನೀವು ಬೇರೆಯವರನ್ನು ನೋಡುವಾಗ ಹುಡುಗಿಯರಿಗೆ ತುಂಬಾ ನೋವಾಗುತ್ತದೆ. ಹುಡುಗಿಯರಿಗೆ ನೋವಾದಾಗ ನಿಮ್ಮ ಮೇಲೆ ಅವರ ಪ್ರೀತಿ ಕಡಿಮೆಯಾಗುತ್ತದೆ.

ಆಕೆಯ ನಿರ್ಧಾರ, ಸಡನ್ ಆಗಿ ಚೇಂಜ್ ಆಗಬಹುದು!
ನಿಮ್ಮ ಪ್ರಾಮಾಣಿಕತೆ ಬಗ್ಗೆ ಹುಡುಗಿಗೆ ಸಂಶಯ ಬಂದಾಗ ಆಕೆ ತನ್ನ ನಿರ್ಧಾರ ಪ್ರಕಟಿಸಲು ಸ್ವಲ್ಪ ಸಮಯದ ವಿರಾಮ ಪಡೆಯಬಹುದು. ಆಕೆ ಸಂಬಂಧದಿಂದ ದೂರ ಹೋಗಬಹುದು.

ಸೇಡು ತೀರಿಸಿಕೊಳ್ಳಬಹುದು
ಆಕೆ ತುಂಬಾ ಬುದ್ಧಿವಂತೆಯಾಗಿದ್ದರೆ ಇದಕ್ಕೆ ಸೇಡು ತೀರಿಸಿಕೊಳ್ಳಲು ಮತ್ತೊಂದು ದಿನಕ್ಕಾಗಿ ಕಾಯಬಹುದು. ಆಕೆ ಬೇರೆ ಯಾವುದೇ ಕ್ಷುಲ್ಲಕ ವಿಷಯಕ್ಕೆ ನಿಮಗೆ ಕಪಾಲಮೋಕ್ಷ ಮಾಡಬಹುದು. ಇದು ಬೇರೆ ಹುಡುಗಿಯನ್ನು ನೋಡಿದ ನಿಮ್ಮ ಮೇಲೆ ಆಕೆಯ ಸೇಡು!

ಆಕೆಗೆ ಅಸುರಕ್ಷಿತ ಭಾವನೆಯಾಗಬಹುದು
ಮಹಿಳೆಗೆ ತನ್ನನ್ನು ಕಡೆಗಣಿಸಲಾಗುತ್ತಿದೆ ಅಥವಾ ಮೋಸ ಮಾಡಲಾಗುತ್ತಿದೆ ಎನ್ನುವ ಭಾವನೆಯಾದಾಗ ಸಂಬಂಧದಲ್ಲಿ ಆಕೆಗೆ ಅಸುರಕ್ಷತೆಯ ಭಾವನೆಯಾಗುತ್ತದೆ. ಸಂಬಂಧ ಮುರಿಯಲು ಇಲ್ಲಿಂದಲೇ ಕ್ಷಣಗಣನೆ ಆರಂಭವಾಗುತ್ತದೆ.

ಸಂಬಂಧ ಮುರಿಯಬಹುದು
ನಿಮಗೆ ಹುಡುಗಿಯರನ್ನು ನೋಡುವ ಹುಚ್ಚಿದೆ ಎಂದು ಆಕೆಗೆ ಅನಿಸಿದರೆ ಸಂಬಂಧ ಮುರಿದುಕೊಳ್ಳುತ್ತಾಳೆ. ಭೂಮಿ ಮೇಲೆ ನಂಬಿಕೆಗೆ ಅರ್ಹ ಬೇರೆ ಪುರುಷರು ಕೂಡ ಇದ್ದಾರೆ, ಈ ರೀತಿ ಹೆಣ್ಣಿನ ಚಪಲ ಹೊಂದಿರುವ ಪುರುಷನೊಂದಿಗೆ ಬದುಕುವುದಕ್ಕಿಂತ ಬ್ರೇಕ್ ಅಪ್ ಆಗುವುದೇ ವಾಸಿ ಎಂಬ ನಿರ್ಧಾರಕ್ಕೆ ಆಕೆ ಬಂದುಬಿಡಬಹುದು!



Click it and Unblock the Notifications
