ಅತ್ತೆ-ಸೊಸೆ ಬಾಂಧವ್ಯ ಹಾವು-ಏಣಿ ಆಟದ ಹಾಗೆ....

By Manu

ಮದುವೆಯ ಮಜಾ ಮುಗಿದು, ಸಂಸಾರದ ಮೊದಲ ಮೆಟ್ಟಿಲು ಏರುವಷ್ಟರಲ್ಲಿ ಸಾಕಷ್ಟು ಮನೆಗಳಲ್ಲಿ ಅಪಸ್ವರದ ರಾಗ ಪ್ರಾರಂಭವಾಗುತ್ತದೆ. ಹೌದು! ಮದುವೆಯ ಸಂದರ್ಭದಲ್ಲಿ ಎಲ್ಲರೂ ಎಲ್ಲರನ್ನೂ ಮನಸಾರೆ ಒಪ್ಪಿ ಸಕಲ ವಿಶ್ವಾಸದಿಂದ ವಧು-ವರರ ಮದುವೆಯನ್ನು ನೆರವೇರಿಸಿರುತ್ತಾರೆ. ಆದರೆ ಮದುವೆಯಲ್ಲಿನ ಸಹಕಾರ ಪ್ರವೃತ್ತಿ ಮದುವೆ ನಂತರ ಎಷ್ಟೋ ಮನೆಗಳಲ್ಲಿ ಅಳಿಸಿಹೋಗಿರುತ್ತದೆ. ಮದುವೆ ನಂತರ ವಧುವು ವರನ ಮನೆಗೆ ಕಾಲಿರಿಸಿದ ದಿನವೇ ಸಾಕಷ್ಟು ಮನಸ್ತಾಪ ಗೊಂದಲಗಳಿಗೆ ಈಡು ಮಾಡುವ ಸಂದರ್ಭಗಳು ಎದುರಾಗುತ್ತಿವೆ.

ಮದುವೆಯಾದ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿಯೇ ಇರುತ್ತದೆ. ಮನೆಮಂದಿಯಲ್ಲಿ ಸಂತಸದ ವಾತಾವರಣ ಮನೆಮಾಡಿರುತ್ತದೆ. ಆದರೆ ಮನೆಮಂದಿಯಲ್ಲಿ ಮನಸ್ತಾಪಗಳು ಉಂಟಾಗಲು ಹೆಚ್ಚಿನ ಸಮಯ ಬೇಕಿರುವುದಿಲ್ಲ. ಎಲ್ಲರ ನಿಜಬಣ್ಣ ತನ್ ತಾನೇ ಹೊರಹೊಮ್ಮಲು ಪ್ರಾರಂಭಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿ ಜರುಗುವ ಖಾಸಗಿ ಜಗಳಗಳು ಮನಸ್ತಾಪಗಳ ಬಗ್ಗೆ ವಿವಿಧ ರೀತಿಯ ಕಾರ್ಯಕ್ರಮಗಳು ಕಿರುತೆರೆಯಲ್ಲಿ ರಾರಾಜಿಸುತ್ತಿವೆ. ಪತಿಯ ತಾಯಿ ಅಥವಾ ಅತ್ತೆಯಂದಿರ ಕಿರುಕುಳದ ಪ್ರಕರಣಗಳು ಹೆಚ್ಚಿನದ್ದಾಗುತ್ತಿದೆ. ಅತ್ತೆ-ಸೊಸೆ ಜಗಳ ನಿಮ್ಮಿಂದಲೇ ಕೊನೆಯಾಗಲಿ!

ನಿಮಗಾಗಿ ಮನೆಯಲ್ಲಿರುವ ಪತಿಯೂ ಸಹ ತನ್ನ ತಾಯಿಗಾಗಿ ನಿಮ್ಮ ವಿರುದ್ಧ ಮಾತನಾಡುವ ಸಂದರ್ಭ ಎದುರಾದಾಗಲಂತೂ ನಿಮಗೆ ಕಣ್ಣೀರೇ ಗತಿ ಎನಿಸುತ್ತದೆ. ನಿಮ್ಮ ಅಸಹಾಯಕತೆಯನ್ನು ಹೋಗಲಾಡಿಸಲು ಇಂದಿನ ನಿಮ್ಮಂತಹ ಆಧುನಿಕ ಮಹಿಳೆಯರು ಒರಟಾದ ಅತ್ತೆಯಂದಿರನ್ನು ಮೃದುವಾಗಿ ನಿರ್ವಹಿಸುವ ಕಲೆಗಳನ್ನು ಕಂಡುಕೊಳ್ಳಬೇಕು. ಆದರೂ ಎಲ್ಲಾ ವಿಷಯಗಳನ್ನು ನಿಮ್ಮ ತಲೆಯ ಮೇಲೆ ಎಳೆದುಕೊಳ್ಳುವುದನ್ನು ಬಿಟ್ಟು ನಿಮ್ಮ ಅತ್ತೆಯಂದಿರ ಒರಟುತನಕ್ಕೆ ಪ್ರತಿಯಾಗಿ ಸೌಮ್ಯವಾಗಿ ಪ್ರತಿಕ್ರಯಿಸಲು ಅನುವಾಗುವ ಕೆಲ ವಿಧಾನವನ್ನು ಕಂಡುಕೊಳ್ಳಿ. ನಿಮ್ಮ ಪ್ರೀತಿಯ ಅತ್ತೆಗೆ ವಿಶ್ ಮಾಡಿದಿರಾ?

ಮೊದಲಿಗೆ ಪತಿರಾಯನೊಂದಿಗೆ ಕೆಲವು ನಿಯಮಗಳನ್ನು ಇಟ್ಟುಕೊಳ್ಳಿ

ಮೊದಲಿಗೆ ಪತಿರಾಯನೊಂದಿಗೆ ಕೆಲವು ನಿಯಮಗಳನ್ನು ಇಟ್ಟುಕೊಳ್ಳಿ

ಮೊದಲಿಗೆ ನೀವು ಯೋಚಿಸುತ್ತಿರುವ ರೀತಿಯು ಆತನ ತಾಯಿಯ ಯೋಚನೆಗಿಂತ ಭಿನ್ನವಾಗಿದೆಯೆಂದು ಆತನಿಗೆ ಅರ್ಥೈಸಿ. ಮದುವೆಯ ನಂತರ ನಿಮ್ಮ ಒರಟಾದ ಅತ್ತೆಯಂದಿರ ಕಿರುಕುಳವನ್ನು ಎದುರಿಸಲು ನೀವು ಅನುಸರಿಸಬಹುದಾದ ಕೆಲವು ಅನುಕೂಲಕರ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಮುಂದೆ ಓದಿ. .

 ಮಾನಸಿಕ ರೇಖೆಯನ್ನು ಅಳವಡಿಸಿಕೊಳ್ಳಿ

ಮಾನಸಿಕ ರೇಖೆಯನ್ನು ಅಳವಡಿಸಿಕೊಳ್ಳಿ

ಉತ್ತಮ ಗಡಿರೇಖೆಗಳು ಅಕ್ಕಪಕ್ಕದವರ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಮೊದಲಿಗೆ ನಿಮ್ಮ ಅತ್ತೆಯಂದಿರ ಜೀವನ ಶೈಲಿಯನ್ನು ಅರ್ಥಿಸಿಕೊಳ್ಳಿ. ಅವರು ನಿಮ್ಮ ತಂಟೆಗೆ ಬರದಂತೆ ಅನ್ಯ ಕಾರ್ಯಗಳಲ್ಲಿ ತೊಡಗುವಂತೆ ನಿರ್ವಹಣೆ ಮಾಡಿಕೊಳ್ಳಿ.

ಮಾನಸಿಕ ರೇಖೆಯನ್ನು ಅಳವಡಿಸಿಕೊಳ್ಳಿ

ಮಾನಸಿಕ ರೇಖೆಯನ್ನು ಅಳವಡಿಸಿಕೊಳ್ಳಿ

ಹೆಚ್ಚು ಕುದಿಯುವ ವಿಚಾರಗಳನ್ನು ಆಕೆಯ ಮುಂದೆ ಪ್ರಸ್ತಾಪಿಸದಿರಿ ಹಾಗೂ ಆಕೆಗೂ ಪ್ರಸ್ತಾಪಿಸದೇ ಇರುವ ಹಾಗೆ ನೋಡಿಕೊಳ್ಳಿ. ನಿಮ್ಮಿಬ್ಬರ ನಡುವೆ ಹೆಚ್ಚಿನ ವ್ಯತ್ಯಾಸಗಳು ಇದ್ದಲ್ಲಿ, ನಿಮ್ಮ ಪತಿ ಹಾಗೂ ನಿಮ್ಮ ಮಗುವಿಗೋಸ್ಕರ ಆಕೆಯನ್ನು ನಯವಾಗಿ ಸಹಿಸಿಕೊಳ್ಳುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಿ.

ಅಂತರವನ್ನು ಕಾಪಾಡಿಕೊಳ್ಳಿ

ಅಂತರವನ್ನು ಕಾಪಾಡಿಕೊಳ್ಳಿ

ಒಂದು ವೇಳೆ ನಿಮ್ಮ ಅತ್ತೆಯಂದಿರು ಹೆಚ್ಚು ಒರಟು ಮತ್ತು ಕಿರುಕುಳ ನೀಡುವ ಸ್ವಭಾವದವರಾಗಿದ್ದರೆ ಅವರೊಂದಿಗೆ ಅಂತರವನ್ನು ಇರಿಸಿಕೊಳ್ಳಿ. ಅವರ ಮಾತಿಗೆ ಮಾತ್ರ ಪ್ರತಿ ಮಾತನಾಡಿ. ವಯಸ್ಸಾದವರೊಂದಿಗೆ ಹೆಚ್ಚು ದೂರವಿರಲು ಪ್ರಯತ್ನಿಸಿ. ಒಂದು ವೇಳೆ ನೀವು ತುಂಬು ಕುಟುಂಬವಿರುವ ಮನೆಗೆ ಮದುವೆಯಾಗಿದ್ದರೆ ಕೂಡಲೇ ಆ ಮನೆಯಿಂದ ಹೊರ ಬರಲು ಪ್ರಯತ್ನಿಸಿ. ಏಕೆಂದರೆ ಈಗಿನ ಜನಾಂಗದ ಭಾವನೆಗಳು ಹಿಂದಿನ ಪೀಳಿಗೆಯವರಿಗೆ ಕಿರಿಕಿರಿಯಾಗುವ ಅಪಾಯವಿರುತ್ತದೆ.

ಕೆಲವೊಂದು ಬಾರಿ ನೀವು ನಟಿಸಬೇಕಾಗುತ್ತದೆ

ಕೆಲವೊಂದು ಬಾರಿ ನೀವು ನಟಿಸಬೇಕಾಗುತ್ತದೆ

ಒರಟು ಸ್ವಭಾವದ ಅತ್ತೆಯರಿದ್ದರೆ, ಅವರನ್ನು ಎದುರಿಸಲು ಇರುವ ಸುಲಭವಾದ ಉಪಾಯವೆಂದರೆ ಈ ಕುಟುಂಬದೊಡನೆ ತೊಡಗೆ ಅವರನ್ನು ಹೊಗಳುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಅವರು ಏನೇ ಹೇಳಿದರೂ ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟುಬಿಡಿ. ಇದು ಆರೋಗ್ಯವಂತ ಕುಟುಂಬವಾಗಲು ಸಾಕಷ್ಟು ನೆರವಾಗುತ್ತದೆ.

Story first published: Friday, January 8, 2016, 13:15 [IST]
X
Desktop Bottom Promotion