Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಆತ ವಂಚಿಸುತ್ತಿರಬಹುದು, ಯಾವುದಕ್ಕೂ ಎಚ್ಚರದಿಂದಿರಿ!
ಒಡೆದ ಕನ್ನಡಿ ಮತ್ತು ಬಿರುಕುಬಿಟ್ಟ ಸಂಬಂಧವನ್ನು ಮತ್ತೆ ಜೋಡಿಸುವುದು ತುಂಬಾ ಕಷ್ಟ. ಸಂಬಂಧವು ನಿಂತಿರುವುದೇ ನಂಬಿಕೆಯ ಮೇಲೆ. ನಂಬಿಕೆ ಇಲ್ಲವೆಂದಾದರೆ ಆಗ ಸಂಬಂಧವೂ ಇರುವುದಿಲ್ಲ. ಸಂಬಂಧದಲ್ಲಿ ಏಳುಬೀಳು ಸಹಜ. ಆದರೆ ನಾವು ತುಂಬಾ ತಾಳ್ಮೆಯಿಂದ ಸಂಬಂಧವನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಮೊದ ಮೊದಲು ಎಲ್ಲರೂ ಇಂದ್ರ ಚಂದ್ರ ಎಂದು ಹೊಗಲಿ ಅಟ್ಟಕ್ಕೇರಿಸಿಬಿಡುತ್ತಾರೆ. ಇವನು ನನ್ನ ಪ್ರೀತಿಗೆ ಮೋಸ ಮಾಡಬಹುದೇ?
ಆದರೆ ಸಮಯ ಕಳೆದಂತೆ ಆಕರ್ಷಣೆ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಸಂಬಂಧವನ್ನು ಕಾಪಾಡಿಕೊಳ್ಳಲು ನಾವು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏನೇ ತಪ್ಪಾದರೂ ಅದನ್ನು ತಿದ್ದಿಕೊಂಡು ಮುಂದಕ್ಕೆ ಸಾಗಬೇಕು. ಇಲ್ಲವೆಂದಾದಲ್ಲಿ ಸಂಬಂಧದಲ್ಲಿ ಬಿರುಕು ಮೂಡದೇ ಇರುವುದಿಲ್ಲ. ಸ್ವಲ್ಪ ತಾಳಿ, ಗಂಡನ ಪ್ರೀತಿಯ ಮೇಲೆ ಸಂಶಯ ಪಡಬೇಡಿ
ಸಂಬಂಧದಲ್ಲಿ ವಂಚನೆ ಮಾಡುವವರು ಪುರುಷರೇ ಎಂದು ನಾವು ಹೇಳುತ್ತಿರುತ್ತೇವೆ. ಆದರೆ ಸಂಪೂರ್ಣವಾಗಿ ಪುರುಷರೇ ಇದಕ್ಕೆ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಕೆಲವು ಮಹಿಳೆಯರು ಕೂಡ ಪುರುಷರನ್ನು ವಂಚಿಸುವಂತೆ ಮಾಡಲು ಸಮಾನ ಜವಾಬ್ದಾರರಾಗಿರುತ್ತಾರೆ. ಪುರುಷರು ನಿಮಗೆ ಮೋಸ ಮಾಡುತ್ತಿದ್ದಾರೆಯಾ ಎನ್ನುವುದನ್ನು ತಿಳಿದುಕೊಳ್ಳಲು ಕೆಲವೊಂದು ಲಕ್ಷಣಗಳನ್ನು ಇಲ್ಲಿ ತಿಳಿಸಲಾಗಿದೆ. ಇದರಿಂದ ನೀವು ಪುರುಷರು ಮೋಸ ಮಾಡುತ್ತಲಿದ್ದಾರೆಯಾ ಎಂದು ತಿಳಿದುಕೊಳ್ಳಬಹುದು.

ಲೈಂಗಿಕ ಆಸಕ್ತಿ ಕಡಿಮೆಯಾಗುವುದು
ನಿಮಗೆ ವಂಚಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಮೊದಲ ಲಕ್ಷಣವಾಗಿದೆ. ಲೈಂಗಿಕ ಜೀವನಕ್ಕೆ ಬಂದರೆ ಕೆಲವು ಪುರುಷರು ಕಡಿಮೆ ಆಸಕ್ತಿ ತೋರಿಸುತ್ತಾರೆ. ಲೈಂಗಿಕ ಕ್ರಿಯೆಯಲ್ಲಿ ತಮ್ಮ ಪತ್ನಿಯ ಜತೆ ತೊಡಗಿಕೊಳ್ಳದೆ ಇರಲು ಅವರು ಕೆಲವೊಂದು ಕೆಟ್ಟ ಕಾರಣಗಳನ್ನು ಹುಡುಕುತ್ತಾರೆ.

ಫೋನ್ ಅಡಗಿಸಿಡುವುದು
ಆತನ ಫೋನ್ ಅನ್ನು ಮುಟ್ಟಲು ಬಿಡದೇ ಇರಬಹುದು. ಆತ ಫೋನ್ ನ ಪಾಸ್ ವರ್ಡ್ ನ್ನು ಬದಲಾಯಿಸಿರಬಹುದು ಮತ್ತು ನೀವು ಕಾರಣ ಕೇಳಿದರೆ ಆತ ನೀಡುವ ಕಾರಣವನ್ನು ನಂಬಲು ತುಂಬಾ ಕಷ್ಟವಾಗಬಹುದು.

ದೂರವಾಗುವುದು
ನೀವಿಬ್ಬರು ಪರಸ್ಪರ ದೂರವಾಗುತ್ತಾ ಇರುವಾಗ ಸಂಬಂಧವನ್ನು ಉಳಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ ಆತ ಅದರ ಬಗ್ಗೆ ಚಿಂತೆ ಮಾಡುವುದನ್ನೇ ಬಿಟ್ಟಿರಬಹುದು.

ಸ್ನೇಹಿತರ ವಿಚಿತ್ರ ವರ್ತನೆ
ಪುರುಷರ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿಯುವುದು ಮೊದಲು ಸ್ನೇಹಿತರಿಗೆ. ಆತನ ಸ್ನೇಹಿತರು ನಿಮ್ಮನ್ನು ಕಡೆಗಣಿಸುತ್ತಾ ಇದ್ದಾರೆ ಅಥವಾ ಆತನ ಪರ ವಹಿಸಿ ಮಾತನಾಡಲು ಬೇರೆಯೇ ಕಾರಣ ಹುಡುಕುತ್ತಾ ಇದ್ದಾರೆ ಎಂದರೆ ಏನೋ ತಪ್ಪಾಗಿದೆ ಎಂದರ್ಥ.



Click it and Unblock the Notifications