Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ಇವರ ಕಪಟ ಪ್ರೀತಿಯನ್ನು ನಂಬಿ, ಮೋಸ ಹೋದೀರಿ ಜೋಕೆ!
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ, ಎಂದು ಪ್ರೀತಿ ಮಾಡುವ ಪ್ರತಿಯೊಬ್ಬರು ಸಹ ಹಾಡುತ್ತಾರೆ. ಆದರೆ ಈ ಸುಖವು ಒಮ್ಮೊಮ್ಮೆ ಕಷ್ಟಗಳಿಗೆ ಗುರಿಮಾಡುತ್ತದೆ. ಲವ್ ಇಸ್ ಬ್ಲೈಂಡ್ ಎಂಬುದು ಲೋಕೋಕ್ತಿ, ಅದು ನಿಜ ಜನ ಪ್ರೀತಿಯಲ್ಲಿ ಇರುವಾಗ ಯಾವುದೇ ಕಷ್ಟಗಳು ಗೊತ್ತಾಗುವುದಿಲ್ಲ, ಅವರಿಗೆ ಪ್ರಪಂಚ ಒಂದು ಸ್ವರ್ಗದ ಉದ್ಯಾನವನದಂತೆ ಕಾಣುತ್ತದೆ. ಪ್ರೀತಿಯಲ್ಲಿ ಇರುವವರು ಯಾವುದೇ ಜಗಳಗಳು ಮತ್ತು ವಾದ ವಿವಾದಗಳನ್ನು ಮಾಡಿಕೊಳ್ಳುವುದಿಲ್ಲ. ಹಾಗೆಂದು ಇವರ ಜೀವನ ಪೂರ್ತಿ ಹೀಗೆಯೇ ಇರುತ್ತದೆ ಎಂದು ನಾವು ಹೇಳಲು ಆಗುವುದಿಲ್ಲ. ಆದರೆ ಒಂದು ಕಾಲ ಆದ ಮೇಲೆ ಸತ್ಯ ಹೊರಗೆ ಬರುತ್ತದೆ. ತನ್ನ ಜೀವನದ ಹೀರೋ ಎಂದು ಭಾವಿಸಿಕೊಂಡು ರಾಜಕುಮಾರನಂತೆ ಕಾಣುವ ಹುಡುಗನ ಬಗ್ಗೆ ಹುಡುಗಿಗೆ ಎಲ್ಲೋ ಸಂಶಯದ ಸುಳಿ ತೆರೆದುಕೊಳ್ಳುತ್ತದೆ.
ಆ ಸಂಶಯದ ಸುಳಿ ಸುನಾಮಿಯಂತೆ ತನ್ನ ಎದುರಿಗೆ ಬಂದದ್ದನ್ನೆಲ್ಲ ಆಪೋಶನ ತೆಗೆದುಕೊಳ್ಳಲು ಆರಂಭಿಸುತ್ತದೆ. ಆದರೆ ಕೆಲವು ಹುಡುಗಿಯರಿಗೆ ಕೆಲವೊಂದು ಸೂಚನೆಗಳು ಮತ್ತು ಸುಳಿವುಗಳು ಸಿಕ್ಕರು ಸಹ ಅವರು ಪ್ರೀತಿಯ ಮೇಲಿನ ನಂಬಿಕೆಯಿಂದ ಅದನ್ನು ಉದಾಸೀನ ಮಾಡಿ, ತಮ್ಮ ಸುಂದರ ಜೀವನಕ್ಕೆ ತಾವೇ ಕಲ್ಲು ಹಾಕಿಕೊಳ್ಳುತ್ತಾರೆ. ನೀವು ಜೀವನದಲ್ಲಿ ನಿಮ್ಮ ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೀರಿ ಎಂದಾದಲ್ಲಿ, ಮೊದಲು ನಿಮ್ಮ ಸಂಗಾತಿಯಾಗಲು ಸಿದ್ಧನಾಗಿರುವ ಹುಡುಗನ ಬಗ್ಗೆ ಜಾಗರೂಕರಾಗಿರಿ. ಈ ಅಂಕಣದಲ್ಲಿ ನಾವು ನಿಮ್ಮ ಹುಡುಗನ ಬಗೆಗೆ ಉದಾಸೀನ ಮಾಡದೆ ನೋಡಿಕೊಳ್ಳಬೇಕಾದ ಕೆಲವೊಂದು ಸೂಚನೆಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಇದನ್ನು ತಪ್ಪದೆ ಗ್ರಹಿಸಿ, ನಿಮ್ಮ ಜೀವನದ ಸುರಕ್ಷತೆಯನ್ನು ನೀವು ಮಾಡಿಕೊಳ್ಳಿ ಎಂಬುದು ನಮ್ಮ ಸಲಹೆ. ಪತಿಯ ನಡವಳಿಕೆಯಲ್ಲಿ ಬದಲಾವಣೆಯಾಗುತ್ತಿದೆಯೇ?

ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ
ಒಂದು ವೇಳೆ ನಿಮ್ಮ ಹುಡುಗ ಈಗಾಗಲೇ ಇನ್ನೊಬ್ಬ ಹುಡುಗಿಯ ಹಿಂದೆ ಸುತ್ತಾಡಿದ್ದಲ್ಲಿ, ನಿಮ್ಮನ್ನು ಒಂದು ಪ್ರಸಿದ್ಧ ರೆಸ್ಟೋರೆಂಟ್ ಅಥವಾ ಪಾರ್ಕ್, ಇಲ್ಲವೇ ಸ್ಥಳಗಳಿಗೆ ಕರೆದುಕೊಂಡು ಹೋಗುವುದಿಲ್ಲ. ಆತ ತಾನೂ ಸಹ ಇದುವರೆಗೂ ಹೋಗದ ಹೊಸ ರೆಸ್ಟೋರೆಂಟ್ ಅಥವಾ ಸ್ಥಳಗಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತಾನೆ. ಇದರರ್ಥ ಆತ ತನ್ನನ್ನು ನೋಡಿರುವ ಜನರಿಂದ ತನ್ನನ್ನು ತಾನು ಮರೆಮಾಚಿಕೊಳ್ಳಲು ಪ್ರಯತ್ನಿಸುತ್ತಾ ಇರುತ್ತಾನೆ. ಈ ಸೂಚನೆಯನ್ನು ಏಕಾಂತ ಎಂದು ಮರೆಮಾಚಬಹುದು, ಆದರೆ ಉದಾಸೀನ ಮಾಡಬೇಡಿ.
ಉತ್ತರಿಸದ ಕರೆಗಳು
ಇದು ನಿಮ್ಮ ಪ್ರೀತಿಗೆ ಕೆಂಪು ಬಾವುಟವನ್ನು ತೋರಿಸಬಹುದು. ಬಹುಶಃ ನಿಮ್ಮ ಹುಡುಗನ ಸ್ನೇಹಿತರ ಕುರಿತು ತಿಳಿದಿರಬಹುದು (ಕನಿಷ್ಠ ಹೆಸರುಗಳನ್ನಾದರು ಕೇಳಿರಬಹುದು). ಆತ ಅವರ ಜೊತೆಗೆ ಹೊರಗೆ ಹೋಗಿರಬಹುದು. ಆದರೂ ಸಹ ಆತ ನಿಮ್ಮ ಕರೆಯನ್ನು ಸ್ವೀಕರಿಸದೆ, ಸಣ್ಣ ಸಣ್ಣ ಕಾರಣಗಳೊಂದಿಗೆ ನಿಮ್ಮ ಮುಂದೆ ಬಂದು ನಿಲ್ಲುತ್ತಾನೆ. ಆದರೆ ಅದೇ ನಿಮ್ಮ ಜೊತೆ ಇದ್ದಾಗ, ಆತ ತನ್ನ ಸ್ನೇಹಿತರ ಜೊತೆಗೆ ಫೋನಿನಲ್ಲಿ ಮಾತನಾಡುತ್ತಾನೆ ಮತ್ತು ಸಂದೇಶಗಳನ್ನು ಕಳುಹಿಸುತ್ತಾನೆ.
ಆತನ ಫೋನ್ ನೀವು ಮುಟ್ಟಲು ಹೋದರೆ ಕೋಪಿಸಿಕೊಳ್ಳುತ್ತಾನೆ
ಒಂದು ವೇಳೆ ಆತನ ಫೋನ್ ನೀವು ಮುಟ್ಟಲು ಹೋದರೆ ಕೋಪಿಸಿಕೊಳ್ಳುತ್ತಾನೆ, ಯಾವುದೇ ಕಾರಣಕ್ಕು ಆತ ತನ್ನ ಫೋನ್ ಅನ್ನು ನಿಮಗೆ ನೀಡುವುದಿಲ್ಲ. ಅದರರ್ಥ ಆತನ ರಹಸ್ಯಗಳು ಆ ಫೋನಿನಲ್ಲಿ ಅಡಗಿರುತ್ತವೆ, ಅದನ್ನು ನಿಮ್ಮಿಂದ ಆತ ಮುಚ್ಚಿಡಲು ಬಯಸುತ್ತಾನೆ. ಇದು ಆತ ನಿಮಗೆ ಮೋಸ ಮಾಡಲು ಬಳಸುವ ವಿಧಾನಗಳು ಎಂಬುದನ್ನು ಮರೆಯಬೇಡಿ. ನಿಮ್ಮನ್ನು ನೋಡಿ ಹೋದ ಮೇಲೆ ಆತ ನಿಮ್ಮ ಕರೆಗಳನ್ನು ಸ್ವೀಕರಿಸುವುದಿಲ್ಲ.
ಸ್ನೇಹಿತರ ಜೊತೆಗೆ ಬೆರೆಯುವುದಿಲ್ಲ
ಒಂದು ವೇಳೆ ನಿಮಗೆ ನಿಮ್ಮ ಹುಡುಗನ ಸ್ನೇಹಿತರು ಗೊತ್ತಿದ್ದಲ್ಲಿ, ಅವರನ್ನು ಸಹ ಭೇಟಿಯಾಗುವುದನ್ನು ನಿಮ್ಮ ಹುಡುಗ ಬಿಟ್ಟು ಬಿಡುತ್ತಾನೆ. ನೀವು ನಿಮ್ಮ ಹುಡುಗನ ಜೊತೆಗೆ ಆತನ ಸ್ನೇಹಿತರನ್ನು ಭೇಟಿಯಾಗಲು ಬಯಸಿದರೆ ಆತ ತಪ್ಪದೆ ಆ ಸನ್ನಿವೇಶವನ್ನು ತಪ್ಪಿಸಿಕೊಳ್ಳುತ್ತಾನೆ. ಅಥವಾ ಒಂದು ವೇಳೆ ನೀವು ತುಂಬಾ ದಿನಗಳಿಂದ ಸಂಬಂಧದಲ್ಲಿ ಇದ್ದಾಗ ಆತನ ಸ್ನೇಹಿತರ ಕುರಿತು ನೀವು ಕೇಳಿದಾಗ, ಆತ ತನ್ನ ಸ್ನೇಹಿತರನ್ನು ತೋರಿಸಲು ಹಿಂದೇಟು ಹಾಕಿದರೆ, ಆ ಕುರಿತು ಸಂಕೋಚ ಎಂದು ಕಾರಣ ನೀಡಿ ಸುಮ್ಮನಾಗಬೇಡಿ. ಈ ಸೂಚನೆಯನ್ನು ಉದಾಸೀನ ಮಾಡಬೇಡಿ



Click it and Unblock the Notifications
