Latest Updates
-
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ
ನಿಮ್ಮ ಪತ್ನಿಗೂ ಆಸೆ ಆಕಾಂಕ್ಷೆಗಳಿರುತ್ತದೆ, ಅರ್ಥಮಾಡಿಕೊಳ್ಳಿ...
ಪತಿ ಪತ್ನಿಯರ ಸಂಬಂಧ ವಿಶ್ವದಲ್ಲಿಯೇ ಅತ್ಯಂತ ಪವಿತ್ರ ಮತ್ತು ಪ್ರಮುಖವಾಗಿದ್ದು ಸಂಸಾರದ ಹೊರೆ ಸಮಾನವಾಗಿ ಹೊರುವ ಸ್ಥಂಭಗಳಾಗಿದ್ದಾರೆ. ಸುಖ ದುಃಖಗಳಲ್ಲಿ ಸಮಾನವಾಗಿ ಭಾಗಿಯಾಗುವ ಮೂಲಕ ಜೀವನವನ್ನು ಸುಖವಾಗಿ ನಡೆಸಲು ಸಾಧ್ಯವಾಗುತ್ತದೆ. ಆದರೆ ಕೆಲವರು ತಮ್ಮ ಪತ್ನಿಯ ಬಗ್ಗೆ ಇದಕ್ಕೂ ಭಿನ್ನವಾದ ಅಭಿಪ್ರಾಯಗಳನ್ನು ಹೊಂದಿದ್ದು ಈ ತರಹವೇ ನಡೆದುಕೊಳ್ಳಲು ಪ್ರಾರಂಭಿಸಿದೊಡನೇ ಇಬ್ಬರ ಸಂಬಂಧದ ಸಂಕೋಲೆ ಸಡಿಲಗೊಳ್ಳತೊಡಗುತ್ತದೆ.
ಉದಾಹರಣೆಗೆ ಪತ್ನಿಗೆ ತಾನು ತಂದುಕೊಟ್ಟ ಸೀರೆಯನ್ನೇ ಉಡಬೇಕು, ಆಕೆ ತನ್ನ ಆಯ್ಕೆಯ ಸೀರೆ ಉಟ್ಟುಕೊಳ್ಳುವಂತಿಲ್ಲ ಎಂಬ ಕರಾರು ಇಟ್ಟರೆ ಪತ್ನಿಗೆ ತನ್ನ ಸ್ವಾತಂತ್ರ್ಯದ ಹರಣವಾದಂತನ್ನಿಸುತ್ತದೆ. ಎಷ್ಟೋ ಶ್ರೀಮಂತ ಮನೆತನದ ಸೊಸೆಯರು ಮೌನವಾಗಿ ಅನುಭವಿಸುವ ರೋದನವಿದು. ಅದೇ ಬಡಮನೆಯಲ್ಲಿದ್ದರೂ ತನಗೆ ಇಷ್ಟವಾದ ಸೀರೆಯನ್ನುಟ್ಟುಕೊಳ್ಳುವ ಮೂಲಕ ಸುಖಿಯಾಗಿದ್ದು ಪತಿ ಪತ್ನಿಯರು ಸಂತೋಷದ ಜೀವನವನ್ನು ಅನುಭವಿಸುತ್ತಾರೆ. ಅಂತೆಯೇ ಯಶಸ್ವೀ ಪುರುಷನ ಯಶಸ್ಸಿನ ಹಿಂದೆ ಮನೆಯ ಸುಖವೂ ಅಡಗಿದೆ ಎಂದು ಹೇಳಲಾಗುತ್ತದೆ.
ಒಂದು ವೇಳೆ ನಿಮಗೆ ಅರಿವಿಲ್ಲದೇ ನಿಮ್ಮ ಪತ್ನಿಯೂ ಸುಖಿಯಾಗಿಲ್ಲ ಎಂದು ಅನ್ನಿಸಿದರೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು ಕೆಳಗಿನ ಸ್ಲೈಡ್ ಷೋ ನೆರವಾಗಲಿದೆ. ಹೆಚ್ಚಿನ ಸಂದರ್ಭಗಳಲ್ಲಿ ಪತ್ನಿಯರು ತಮ್ಮ ಬೇಗುದಿಗೆ ಆಗುವ ಕಾರಣಗಳನ್ನು ತಮ್ಮ ಗಂಡನ ಮನೆಯ ಮರ್ಯಾದೆ ಮತ್ತು ತೌರುಮನೆಯಲ್ಲಿ ಅಳಿಯನ ಮೇಲೆ ಇರುವ ಅಭಿಮಾನಕ್ಕೆ ಧಕ್ಕೆಯಾಗಬಹುದು ಎಂಬ ಕಾರಣದಿಂದ ಹೊರಗೆ ತೋರ್ಪಡಿಸದೇ ಹಾಗೇ ಇರುತ್ತಾರೆ. ಇದನ್ನು ಕೊಂಚ ಗಮನಿಸಿ ನಿಮ್ಮಲ್ಲಿ ಕೊಂಚವೇ ಮಾರ್ಪಾಡು ಮಾಡಿಕೊಂಡರೆ ನಿಮ್ಮ ಜೀವನ ಸುಖಸಂಸಾರದಲ್ಲಿ ಪರಿವರ್ತಿತವಾಗುವುದರಲ್ಲಿ ಸಂಶಯವಿಲ್ಲ...

ನೀವು ಆಕೆಗೆ ಅಗತ್ಯವಿದ್ದಷ್ಟು ಗಮನ ನೀಡುತ್ತಿಲ್ಲದಿರಬಹುದು
ಮದುವೆಯ ಪ್ರಾರಂಭದ ದಿನಗಳಲ್ಲಿ ಪ್ರತಿ ಪತಿಯೂ ಪತ್ನಿಗೆ ಅತಿ ಹೆಚ್ಚಿನ ಸಮಯ ವ್ಯಯಿಸುತ್ತಾನೆ. ಆದರೆ ದಿನಗಳೆದಂತೆ ತಮ್ಮ ವ್ಯವಹಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪತ್ನಿಯರಿಗೆ ನೀಡುವ ಸಮಯ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಒಂದು ಮಿತಿಯ ಒಳಗಿದ್ದರೆ ಎಲ್ಲವೂ ಕ್ಷೇಮ. ಆದರೆ ಸಾಮಾನ್ಯವಾಗಿ ಪುರುಷರು ಈ ಮಿತಿಯನ್ನು ದಾಟಿ ವ್ಯವಹಾರಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಿ ತಮ್ಮ ಪತ್ನಿಗೆ ಗಮನ ನೀಡುವುದನ್ನೇ ಕಡಿಮೆ ಮಾಡಿಬಿಡುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೀವು ಆಕೆಗೆ ಅಗತ್ಯವಿದ್ದಷ್ಟು ಗಮನ ನೀಡುತ್ತಿಲ್ಲದಿರಬಹುದು
ಒಂದು ವೇಳೆ ನಿಮಗರಿವಿಲ್ಲದೇ ಈ ಪರಿಯ ವ್ಯವಹಾರ ನಿಮ್ಮಿಂದ ಆಗುತ್ತಿದ್ದಲ್ಲಿ ತಕ್ಷಣವೇ ದಿನಕ್ಕೆ ಕೊಂಚಕಾಲವಾದರೂ ನಿಮ್ಮ ವ್ಯವಹಾರ, ಮೊಬೈಲು ಲ್ಯಾಪ್ ಟಾಪ್ ಗಳನ್ನು ಬದಿಗಿಟ್ಟು ಪತ್ನಿಗಾಗಿ ಸಮಯ ಮೀಸಲಿಡುವ ಮೂಲಕ ಸಂಸಾರದಲ್ಲಿ ಮತ್ತೊಮ್ಮೆ ಕಳೆಬರುತ್ತದೆ.

ನೀವು ಆಕೆಯ ನಿರೀಕ್ಷೆಗೆ ತಕ್ಕಷ್ಟು ಆದಾಯ ಗಳಿಸುತ್ತಿಲ್ಲದಿರಬಹುದು
ಸಾಮಾನ್ಯವಾಗಿ ಪ್ರತಿ ಮಹಿಳೆಯೂ ತನ್ನ ಪತಿ ಸಾಕಷ್ಟು ಆದಾಯ ತರಬೇಕೆಂದು ಇಚ್ಛಿಸುತ್ತಾಳೆ. ಒಂದು ವೇಳೆ ಆಕೆಯ ಅಗತ್ಯಕ್ಕೂ ಕಡಿಮೆ ನಿಮ್ಮ ಆದಾಯವಿದ್ದರೆ ಇದು ಖಂಡಿತಾ ಆಕೆ ಅಸುಖಿಯಾಗಲು ಕಾರಣವಾಗಿದೆ. ಆದರೆ ಇದಕ್ಕೆ ಸೂಕ್ತವಾದ ಮಾಪನದಂಡವಿಲ್ಲ. ಕೆಲವು ಮಹಿಳೆಯರಿಗೆ ಎಷ್ಟಿದ್ದರೂ ಸಾಲದು, ಕೆಲವರಿಗೆ ಗಂಡ ತರುವ ಅಲ್ಪ ಆದಾಯವಾದರೂ ಉಣ್ಣಲು ಉಡಲು ಮತ್ತು ಮಕ್ಕಳ ಖರ್ಚಿಗೆ ಸಾಕಾಗುವಷ್ಟಿದ್ದರೆ ತೃಪ್ತರಾಗುತ್ತಾರೆ. ಆದರೆ ಗಳಿಸಿದ ಆದಾಯವನ್ನು ವ್ಯಸನಗಳಿಗೆ ಅಥವಾ ಪುಂಡುಪೋಕರಿಗಳಿಗೆ ವ್ಯರ್ಥವಾಗಿ ವ್ಯಯಿಸುವುದನ್ನು ಯಾವುದೇ ಪತ್ನಿ ಸಹಿಸುವುದಿಲ್ಲ. ಆದ್ದರಿಂದ ನಿಮ್ಮ ಗಳಿಕೆ ಎಷ್ಟೇ ಇರಲಿ, ಹಂಚಿಕೊಂಡು ಪ್ರಾಮಾಣಿಕತೆಯಿಂದ ಸ್ಪಷ್ಟ ವಿವರಗಳನ್ನು ನೀಡಿ ಖರ್ಚುವೆಚ್ಚಗಳನ್ನು ತೂಗಿಸಿಕೊಂಡು ಹೋಗುವ ಪತಿಯನ್ನು ಪ್ರತಿ ಪತ್ನಿಯೂ ಇಷ್ಟಪಡುತ್ತಾಳೆ.

ನಿಮ್ಮ ಮಹಿಳಾ ಸಹೋದ್ಯೋಗಿಗಳಲ್ಲಿ ಸಲುಗೆ ಹೆಚ್ಚಾದಾಗ
ಯಾವುದೇ ಪತ್ನಿ ತನ್ನ ಪತಿಯನ್ನು ಇನ್ನೊಂದು ಹೆಣ್ಣಿನೊಂದಿಗೆ ಸಲುಗೆಯಿಂದಿರುವಂತೆ ನೋಡಲು ಇಚ್ಛಿಸುವುದಿಲ್ಲ. ಅವರು ಸಹೋದ್ಯೋಗಿಗಳೇ ಆಗಿರಲಿ. ಒಂದು ವೇಳೆ ನಿಮ್ಮ ಒಡನಾಟ ತೀರಾ ಹೆಚ್ಚಾಗಿದ್ದರೆ ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಿ ಕೊಂಚ ಅಂತರ ಇರಿಸಿಕೊಳ್ಳುವುದು ಅಗತ್ಯ. ನಿಮ್ಮ ಸಹೋದ್ಯೋಗಿ ಮಹಿಳೆಯರು ಕೇವಲ ಸಹೋದ್ಯೋಗಿಗಳೇ ಹೊರತು ಬೇರೇನೂ ಅಲ್ಲ ಎಂದು ಸ್ಪಷ್ಟಪಡಿಸುವುದು ಮತ್ತು ಅದರಂತೆ ನಡೆದುಕೊಳ್ಳುವುದೂ ಅಗತ್ಯ.

ನೀವು ಆಕೆಯೊಂದಿಗೆ ಸಾಕಷ್ಟು ಸಮಯ ಕಳೆಯದಿದ್ದಲ್ಲಿ
ಪತಿ ಎಷ್ಟೇ ವ್ಯಸ್ತನಿರಲಿ, ಪತ್ನಿಗಾಗಿ ಕೆಲಸಮಯವನ್ನಾದರೂ ಮೀಸಲಿಡಲೇಬೇಕು. ಇಲ್ಲದಿದ್ದರೆ ಆಕೆಯೇ ನಿಮ್ಮಿಂದ ದೂರ ಹೋಗಬಹುದು. ಆದ್ದರಿಂದ ಕಾರ್ಯ ಮಿಂಚುವ ಮುನ್ನವೇ ಆಕೆಗೆ ಸಾಕಷ್ಟು ಸಮಯವನ್ನು ಮೀಸಲಿಡುವುದು ಅಗತ್ಯ.

ಮನೆಯನ್ನು ನೀವು ನಿರ್ಲಕ್ಷಿಸುತ್ತಿದ್ದಿರಬಹುದು
ಸಾಮಾನ್ಯವಾಗಿ ಮನೆಯ ಖರ್ಚುವೆಚ್ಚ ಮತ್ತು ಆಗುಹೋಗುಗಳನ್ನು ಗೃಹಿಣಿಯೇ ನಿಭಾಯಿಸುತ್ತಾಳೆ. ಒಂದು ವೇಳೆ ನಿಮ್ಮ ವ್ಯವಹಾರದ ನಿಮಿತ್ತ ನಿಮಗೆ ಮನೆಯ ಕಡೆ ಕೊಂಚವೂ ಗಮನ ನೀಡಲಾಗದಿದ್ದರೆ ಈ ಪರಿಯನ್ನು ಗೃಹಿಣಿಯರು ಇಷ್ಟಪಡುವುದಿಲ್ಲ. ಏಕೆಂದರೆ ನಿಮಗೆ ವ್ಯವಹಾರ ಎಷ್ಟು ಮುಖ್ಯವೋ ಅದಕ್ಕಿಂತಲೂ ಅವರಿಗೆ ನೀವು ಮುಖ್ಯ. ಮನೆಯ ಬಗ್ಗೆ ಗಮನ ಹರಿಸುವುದು, ಅಗತ್ಯವಿರುವ ಕರ್ತವ್ಯಗಳನ್ನು ನಿಭಾಯಿಸುವುದು ಮೊದಲಾದವುಗಳ ಮೂಲಕ ಗೃಹಿಣಿಯ ಮನ ಗೆಲ್ಲಬಹುದು.

ನೀವು ಮನೆಗೆ ತಡವಾಗಿ ಬರುತ್ತಿರಬಹುದು
ಸಾಮಾನ್ಯವಾಗಿ ಸಂಜೆಯಾಗುತ್ತಿದ್ದಂತೆಯೇ ಮನೆಯೊಡತಿ ಬಾಗಿಲ ಕಡೆಗೆ ನೋಡುತ್ತಾ ಪತಿಯ ನಿರೀಕ್ಷೆಯಲ್ಲಿರುತ್ತಾಳೆ. ಈ ನಿರೀಕ್ಷೆ ಆಕೆಯ ಪಾಲಿಗೊಂದು ನಿಧಿ ಇದ್ದಂತೆ. ನೀವು ಮನೆಗೆ ಆಗಮಿಸಿದ ಕ್ಷಣ ಆ ನಿಧಿಯ ಕೊಡ ತುಂಬಿ ಮನತುಂಬಿದಂತೆ. ಈ ಪರಿಯನ್ನೇ "ಕಾಯುವುದರಲ್ಲಿ ಇರುವ ಸುಖ ಕೂಡುವುದರಲ್ಲಿ ಇಲ್ಲ" ಎಂಬ ಸುಭಾಷಿತದ ರೂಪ ಪಡೆದಿದೆ. ಆದರೆ ನಿಮ್ಮ ಕೆಲಸ, ಪಾರ್ಟಿ, ಅಥವಾ ಇನ್ನಾವುದೋ ನೆವದಿಂದ ಸಂಜೆ ಕಳೆದು ತಡರಾತ್ರಿಯಾದರೂ ನೀವು ಮನೆಗೆ ಬರದೇ ಇದ್ದರೆ ಮನೆಯಾಕೆಯ ನಿರೀಕ್ಷೆಯ ಸಹನೆ ಕಟ್ಟೆಯೊಡೆದು ನಿಧಿಯೆಲ್ಲಾ ನೀರುಪಾಲಾಗುತ್ತದೆ. ಪ್ರಫುಲ್ಲವಾಗಬೇಕಾಗಿದ್ದ ಮನ ದುಗುಡ ದುಃಖದ ಗೂಡಾಗುತ್ತದೆ.

ನೀವು ಮನೆಗೆ ತಡವಾಗಿ ಬರುತ್ತಿರಬಹುದು
ನಿಮ್ಮ ನೆವಗಳು ಸಕಾರಣವಾಗಿದ್ದರೂ ಈ ಒಡೆದ ಕಟ್ಟೆಯನ್ನು ಮರುನಿರ್ಮಿಸಲಾರದು. ಆದ್ದರಿಂದ ಇಂದಿನಿಂದಲೇ ನಿಮ್ಮ ಪಾರ್ಟಿಗಿಂತಲೂ ನಿಮ್ಮ ಲೈಫ್ ಪಾರ್ಟ್ನರ್ ಮುಖ್ಯ ಎಂದು ಸಂಬಂಧಪಟ್ಟವರಿಗೆ ತಿಳಿಸಿ ಸಂಜೆಯಾಗುತ್ತಿದ್ದಂತೆಯೇ ಮನೆ ಸೇರಲು ಪ್ರಯತ್ನಿಸಿ. ನಿಮ್ಮ ಆಗಮನದ ಸಮಯವನ್ನು ದೂರವಾಣಿ ಮೂಲಕ ಸ್ಪಷ್ಟಪಡಿಸಿ. ಆಗ ಆಕೆಯ ಮನ ಹೇಗೆ ಉಲ್ಲಸಿತವಾಗಿ ಹಾರಾಡುತ್ತದೆ ಎಂದು ಗಮನಿಸಿ.



Click it and Unblock the Notifications











