Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಿಳೆಯರೇಕೆ ಶ್ರೀಮಂತ ಗಂಡಂದಿರನ್ನು ಬಯಸುತ್ತಾರೆ?
ಹೆಂಗಸರ ಮನದಲ್ಲಿ ಏನಿರುತ್ತದೆ ಎಂದು ಆಕೆಯನ್ನು ಸೃಷ್ಟಿಸಿದ ಭಗವಂತನಿಗು ಸಹ ಗೊತ್ತಿರುವುದಿಲ್ಲ. ಆದರೂ ಹೆಂಗಸರು ಏನು ಇಷ್ಟಪಡುತ್ತಾರೆ ಎಂದು ಹಲವರಿಗೆ ಒಂದು ಅಂದಾಜು ಇರುತ್ತದೆ. ಹಾಗಾದರೆ ತಮಗೆ ಗಂಡನಾಗಿ ಬರುವವವನ ಬಗ್ಗೆ ಹೆಂಗಸರಿಗೆ ಯಾವ ಕಲ್ಪನೆ ಇರುತ್ತದೆ ಮತ್ತು ಅವರು ಅವನಲ್ಲಿ ಏನು ಬಯಸುತ್ತಾರೆ? ಎಂದರೆ ಪ್ರೀತಿ, ಕಾಳಜಿ ಎಂಬ ಉತ್ತರ ನಿಮ್ಮಿಂದ ಬರಬಹುದು. ಆದರೆ ಈಗ ಇರುವ ಶೇ.90 ರಷ್ಟು ಮಹಿಳೆಯರು ತಮ್ಮ ಗಂಡನಾಗುವವನು ಶ್ರೀಮಂತನಾಗಿರಬೇಕು ಎಂದು ಬಯಸುತ್ತಾರೆ. ಹಣ ಹೆಚ್ಚಾಗಿ ಇರುವವನ ಕೈಯಲ್ಲಿ ತಾಳಿ ಕಟ್ಟಿಸಿಕೊಳ್ಳಬೇಕು ಎಂಬ ಆಸೆ ಬಹುತೇಕ ಮಹಿಳೆಯರಿಗೆ ಇರುತ್ತದೆ.
ಸಂಬಂಧದ ಕುರಿತು ಅಧ್ಯಯನ ಮಾಡಿರುವ ತಜ್ಞರ ಪ್ರಕಾರ ಮತ್ತು ಸಾಮಾನ್ಯ ಅಭಿಪ್ರಾಯದ ಪ್ರಕಾರ ಹಣವು ಸಂಬಂಧಕ್ಕೆ ಭದ್ರತೆಯನ್ನು, ಸಂತೋಷವನ್ನು ಒದಗಿಸುತ್ತದೆ. ತಮಗೆ ಬೇಕಾದ ಹಾಗೆ ಬದುಕುವ ಮತ್ತು ಅಂದುಕೊಂಡ ಸಂತೋಷವನ್ನು ಪಡೆಯುವ ಸೌಕರ್ಯವನ್ನು ಒದಗಿಸುತ್ತದೆ. ಆದರೆ ಅದನ್ನು ಮೀರಿ ಕೆಲವೊಂದು ಅಂಶಗಳು ಇದರ ಹಿಂದೆ ಕೆಲಸ ಮಾಡುವ ಹಲವಾರು ಅಂಶಗಳು ಇವೆ. ಬನ್ನಿ ಶ್ರೀಮಂತ ಗಂಡನನ್ನು ಬಯಸುವ ಮಹಿಳೆಯರು, ಅದಕ್ಕೆ ನೀಡುವ ಕಾರಣಗಳೇನು ಎಂದು ನೀವು ತಿಳಿದರೆ ಅಚ್ಚರಿಗೊಳಗಾಗುತ್ತೀರಿ.
ಬನ್ನಿ ಆ ಅಂಶಗಳನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ. ನಾನು ಬಡವ ನೀನು ಬಡವಿ ಒಲವೆ ನಮ್ಮ ಬದುಕು, ಅದನ್ನೆ ಹಂಚಿಕೊಂಡೆವು ಅದಕೂ ಇದಕೂ ಎದಕು ಎಂಬ ಕವಿವಾಣಿಗೆ ವಿರುದ್ಧವಾಗಿ, ನಾನು ಬಡವಳಾದರೂ ಪರವಾಗಿಲ್ಲ, ನೀನು ಶ್ರೀಮಂತನಾಗಿರಬೇಕು ನನ್ನ ಗಂಡ ಎಂದು ಬಯಸುವ ಹೆಂಗಸರ ಮನಸ್ಸಿನ ಅಂದಾಜುಗಳನ್ನು ತಿಳಿಸುವ ಪ್ರಯತ್ನ ಇಲ್ಲಿ ಮಾಡಿದ್ದೇವೆ. ಮುಂದೆ ಓದಿ...

ಸಾಮಾಜಿಕ ಸ್ಥಾನಮಾನ
ಹಣ ಇರುವವರಿಗೆ ಮಾತ್ರ ಸಾಮಾಜಿಕ ಸ್ಥಾನಮಾನ ಸಿಗುತ್ತದೆ ಎಂಬ ನಂಬಿಕೆಯಿಂದಾಗಿ ಹೆಂಗಸರು ಶ್ರೀಮಂತನನ್ನು ಬಯಸುತ್ತಾರೆ. ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಕ್ಕಬೇಕು ಎಂಬ ಆಸೆಯು ಮಹಿಳೆಯರಿಗೆ ಅಧಿಕವಾಗಿ ಇರುತ್ತದೆ. ಅದಕ್ಕಾಗಿಯೇ ಹೆಂಗಸರು ಅವರು ಚೆನ್ನಾಗಿದ್ದಾರೆ, ಇವರು ಚೆನ್ನಾಗಿದ್ದಾರೆ ಎಂದು ಮಾತನಾಡುವುದು.

ಆ ಅಧಿಕ ಸಮಯವನ್ನು ಪಡೆಯಲು
ಮಧ್ಯಮ ವರ್ಗದ ಜನರಿಗೆ ಹೋಲಿಸಿದರೆ ಶ್ರೀಮಂತರಿಗೆ ಬಿಡುವಿನ ಸಮಯವು ಸ್ವಲ್ಪ ಹೆಚ್ಚಿಗೆ ದೊರೆಯುತ್ತದೆ. ಹೆಂಗಸರಿಗೆ ತಮ್ಮ ಜೊತೆಗೆ ಹೆಚ್ಚಿನ ಸಮಯ ಕಳೆಯುವ ಗಂಡನ ಮೇಲೆ ಅಧಿಕ ಪ್ರೀತಿ ಇರುತ್ತದೆ. ಅದಕ್ಕಾಗಿ ಅವರು ಬಿಡುವಿನ ಸಮಯವನ್ನು ಕಳೆಯಲು ಆರಾಮವಾಗಿ ದೊರೆಯುವ ಶ್ರೀಮಂತ ಗಂಡನನ್ನು ಬಯಸುತ್ತಾರೆ.

ಉತ್ತಮ ಭವಿಷ್ಯಕ್ಕಾಗಿ
ಯಾವಾಗ ಹೆಂಗಸರು ಮದುವೆಯಾಗುತ್ತಾರೋ, ಆಗ ಅವರು ತಮ್ಮ ಜೀವನದ ಭವಿಷ್ಯವನ್ನು ಹೆಚ್ಚಾಗಿ ಚಿಂತಿಸುತ್ತಾರೆ. ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಶ್ರೀಮಂತನನ್ನು ಮದುವೆಯಾದರೆ, ಆಕೆ ಮತ್ತು ಆಕೆಯ ಮಕ್ಕಳು ಸುರಕ್ಷಿತವಾಗಿ ಬದುಕಬಹುದು ಎಂಬ ಭಾವನೆ ಅವರಲ್ಲಿ ಮನೆ ಮಾಡಿರುತ್ತದೆ.

ಹಿಂದಿನ ಕಹಿ ನೆನಪು
ಹಿಂದೆ ಹೆಂಗಸು ಯಾವುದಾದರು ಒಬ್ಬ ಮಧ್ಯಮ ವರ್ಗದ ಹುಡುಗನ ಜೊತೆಯಲ್ಲಿ ಪ್ರೀತಿಯಲ್ಲಿದ್ದಲ್ಲಿ, ಆಕೆಗೆ ಆತನ ಹಣಕಾಸಿನ ಪರಿಸ್ಥಿತಿ ಮತ್ತು ಸಮಸ್ಯೆಗಳ ಅರಿವು ಇರುತ್ತದೆ. ಹಾಗಾಗಿ ಆಕೆ ಮುಂಜಾಗರೂಕತೆ ಕ್ರಮವಾಗಿ, ಒಬ್ಬ ಶ್ರೀಮಂತನನ್ನು ಮದುವೆಯಾಗುತ್ತಾಳೆ.

ಆತ ಬುದ್ಧಿವಂತನಾಗಿರುತ್ತಾನೆ
ಕೇವಲ ಹಣವು ಮಾತ್ರ ಹೆಂಗಸರನ್ನು ಆಕರ್ಷಿಸುವುದಿಲ್ಲ. ಬದಲಿಗೆ ಆತನ ಬುದ್ಧಿವಂತಿಕೆಯು ಸಹ ಮಹಿಳೆಯರನ್ನು ಆಕರ್ಷಿಸುತ್ತದೆ. ಆದ್ದರಿಂದ ಅವರು ಬುದ್ಧಿವಂತನಾಗಿರುವ ಶ್ರೀಮಂತನನ್ನು ವರಿಸಲು ಇಷ್ಟಪಡುತ್ತಾರೆ.



Click it and Unblock the Notifications
