Latest Updates
-
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ವಧುವಿಗೆ ಮದುವೆಯ ನಂತರ ಲಭಿಸಲಿದೆ ತೂಕದ ಭಾಗ್ಯ!
ಮದುವೆಯ ನಂತರ ದೇಹದ ತೂಕದಲ್ಲಿ ಸ್ವಲ್ಪವಾದರೂ ವ್ಯತ್ಯಾಸ ಬಂದಿರುವುದನ್ನು ನೀವು ಗಮನಿಸಿದ್ದೀರಾ? ವಿಶೇಷವಾಗಿ ಮಹಿಳೆಯರಲ್ಲಿ ತೂಕದ ಪ್ರಮಾಣ ಮದುವೆಯ ನಂತರ ಹೆಚ್ಚಾಗುತ್ತದೆ. ಮದುವೆಯ ಮುಂಚೆ ತಮ್ಮ ತೂಕವನ್ನು ಇಳಿಸಿ ಸುಂದರಿಯಂತೆ ಕಾಣಲು ಅನೇಕ ಕಸರತ್ತುಗಳನ್ನು ಮಾಡಿರುತ್ತಾರೆ. ಆದರೆ ಮದುವೆಯ ನಂತರ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಸಮಯ ಬೇಕಾಗುವುದರಿಂದ ಮತ್ತು
ಮನೆಯವರನ್ನು ಅರ್ಥಮಾಡಿಕೊಳ್ಳುವುದರಲ್ಲೇ ಸಮಯ ಕಳೆದುಹೋಗುತ್ತದೆ. ಈ ನಿಟ್ಟಿನಲ್ಲಿ ದೇಹದ ತೂಕದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಿರುವುದಿಲ್ಲ. ತಾಳಿ ಕಟ್ಟುವ ವೇಳೆ ವಧೂ ವರರ ತೂಕವನ್ನು ಪರಿಶೀಲಿಸಿ, ಮದುವೆ ನಂತರ ಅವರುಗಳ ದೇಹಗಳು ಉಬ್ಬಿಕೊಂಡು ಅವರ ತೂಕವನ್ನು ಪರಿಶೀಲಿಸಿದರೆ, ಮುಂಚೆಗಿಂತ ಈಗ ತೂಕ ಹೆಚ್ಚಾಗಿರುವುದನ್ನು ಗಮನಿಸಿರುವುದಾಗಿ ಸಂಶೋಧನೆಯೊಂದು ಹೇಳಿಕೊಂಡಿದೆ. ಮದುವೆಯಾದ ನಂತರ ವಧುವಿನ ತೂಕ ಹೆಚ್ಚಾಗುವುದಕ್ಕೆ ಅನೇಕ ಕಾರಣಗಳಿದ್ದು, ಪ್ರಮುಖವಾದ ಕಾರಣಗಳನ್ನು ನಿಮಗಾಗಿ ನೀಡಲಾಗಿದೆ. ಮುಂದೆ ಓದಿ...

ನಿಮ್ಮ ಕ್ರಮವಾದ ಆಹಾರ ಸೇವನೆಯ ಪರಿಣಾಮ
ಮೊದಲಿಗೆ ಮದುವೆಯಲ್ಲಿ ನೀವು ನೂರು ಜನರಿಗೆ ಮಾಡಿದಂತ ಊಟವನ್ನು ಮೃಷ್ಟಾನ್ನವಾಗಿ ಸೇವಿಸುವುದು. ಇದಾದ ಕೇವಲ 3 ದಿನಗಳಲ್ಲಿ ನೀವು ಮಧುಚಂದ್ರಕ್ಕೆ ತೆರೆಳಿದ ಸ್ಥಳಗಳಲ್ಲಿ ಸಿಗುವ ಆಹಾರ ಸೇವನೆ. ಇದು ಮಾತ್ರವಲ್ಲದೆ, ನೀವು ಕಾಲಿಟ್ಟಿರುವ ಗಂಡನ ಮನೆಯು ನಿಮಗೆ ಹೊಸದಾಗಿದ್ದು, ಇಲ್ಲಿನ ಒತ್ತಡದ ಸಂದರ್ಭಕ್ಕೆ ಅನುಗುಣವಾಗಿ ಸೇವಿಸುವ ಆಹಾರ. ಈ ನಡುವೆ ನೀವು ಸೇವಿಸಿದ ಆಹಾರಗಳಲ್ಲಿನ ಪೌಷ್ಠಿಕಾಂಶದ ವ್ಯತ್ಯಾಸ. ಇದರಿಂದ ಬೊಜ್ಜು ಮಾತ್ರ ಹೊಂದಲು ಸಾಧ್ಯವಾಗಿದ್ದು, ಅವಶ್ಯಕವಿರುವ ಪೌಷ್ಠಿಕಾಂಶವನ್ನಲ್ಲ. ವಿಟಮಿನ್-ಬಿ ಮತ್ತು ಕ್ಯಾಲ್ಸಿಯಮ್ ಕೊರತೆ ಇತ್ಯಾದಿಗಳು ಕಾರಣವಾಗಿ ಬೊಜ್ಜು ಹೆಚ್ಚಾಗಿ ಸಹಜವಾಗಿ 5 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿರುತ್ತೀರಿ.
ನೀವು ಸೇವಿಸುವ ಆಹಾರ ಪದ್ಧತಿಯಲ್ಲಿನ ವ್ಯತ್ಯಾಸ
ಮದುವೆಯಾದ ನಂತರ ನಿಮ್ಮ ಮೊದಲ ಕರ್ತವ್ಯವೆಂದರೆ ಈ ಹೊಸ ಕುಟುಂಬಕ್ಕೆ ಅಡುಗೆ ಮಾಡುವುದು. ಈಗಾಗಲೇ ನಿಮ್ಮ ಪೋಷಕರ ಮನೆಯಲ್ಲಿ ನಿಮಗೆ ಹೊಂದುವ ಆಹಾರ ಪದ್ಧತಿಗೆ ಹೊಂದಿಕೊಂಡಿರುತ್ತೀರಿ. ಆದರೆ ಗಂಡನ ಮನೆಯಲ್ಲಿ ಎಲ್ಲ ಸದಸ್ಯರನ್ನು ಮೆಚ್ಚಿಸುವ ದೃಷ್ಠಿಯಿಂದ ಹೊಸ ಆಹಾರ ಶೈಲಿಗಳನ್ನು ಪ್ರಯೋಗಿಸುತ್ತೀರಿ. ಈ ಬದಲಾವಣೆಗಳಿಂದ ನಿಮ್ಮ ದೇಹದಲ್ಲಿ ವ್ಯತ್ಯಾಸಗಳುಂಟಾಗಲು ಕಾರಣಾವಾಗುತ್ತದೆ. ಅಂತರ ಶೈಲಿಯ ಮನೆತನದ ಮದುವೆಯಾದರಂತೂ ನಿಮ್ಮ ಆಹಾರ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕಾಗುತ್ತದೆ.
ಸಾಮಾನ್ಯವಾಗಿ ನೀವು ಹೆಚ್ಚುಚ್ಚು ಆಹಾರ ಸೇವಿಸುತ್ತೀರಿ
ಮದುವೆಯಾದ ಕ್ಷಣದಿಂದ ನೀವು ಸ್ವತಂತ್ರರು ಎಂಬ ಭಾವನೆ ಮೂಡಿ, ಪ್ರತಿ ವಾರಾಂತ್ಯ ವಿವಿಧ ಆಹಾರ ಶೈಲಿಗಳನ್ನು ಸೇವಿಸಲು ಇಚ್ಛಿಸುತ್ತೀರಿ. ಕೆಲವೊಂದು ಬೇರೆ ದಿನಗಳಲ್ಲಿಯೂ ಸಹ ಇದನ್ನು ಅನುಸರಿಸುತ್ತೀರಿ. ಇದರ ಹೊರತಾಗಿ ನಿಮ್ಮ ಸಂಬಂಧಿಕರ ಮನೆಗಳಲ್ಲಿ ಹಲವಾರು ಭೋಜನಕೂಟಗಳು ಹಮ್ಮಿಕೊಳ್ಳಲಿದ್ದು, ಇವುಗಳಲ್ಲಿ ಭಾಗವಹಿಸಿ ಸ್ನೇಹಿತರು, ಸಂಬಂಧಿಕರೊಂದಿಗೆ ವಿವಿಧ ಆಹಾರಗಳನ್ನು ಹೇರಳವಾಗಿ ಸೇವಿಸುತ್ತೀರಿ. ಆದರೆ ಈ ಸಂದರ್ಭದಲ್ಲಿ ನೀವು ಸೇವಿಸುವ ಆಹಾರಗಳಲ್ಲಿ ಕೇವಲ ಕ್ಯಾಲೊರೀಗಳು ಹೆಚ್ಚಿದ್ದು, ಪೌಷ್ಠಿಕಾಂಶಗಳ ಕೊರತೆ ಇರುತ್ತದೆ. ಈ ಎಲ್ಲಾ ಬೆಳವಣಿಗೆಗಳಿಂದ ಸಹಜವಾಗಿ ತೂಕ ಹೆಚ್ಚಾಗುತ್ತದೆ.
ನಿಮ್ಮನ್ನು ನೀವು ಕಾಳಜಿ ವಹಿಸುವುದಿಲ್ಲ
ಮದುವೆಯ ಮುಂಚೆ ನಿಮ್ಮ ಆಕಾರ ಮತ್ತು ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸಿರುತ್ತೀರಿ. ವ್ಯಾಯಾಮ ಮಾಡುವುದು, ದೇಹದ ಆಕಾರ ಕಾಪಾಡಿಕೊಳ್ಳುವುದು ಹೀಗೆ ಅನೇಕ ರೀತಿಯ ವಿಧಾನಗಳನ್ನು ಅನುಸರಿಸಿರುತ್ತೀರಿ. ಆದರೆ ಮದುವೆಯಾದ ಕ್ಷಣದಿಂದ ನಿಮ್ಮಗೆ ಮೇಲಿಂದ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆರೋಗ್ಯವು ಸಹಜವಾಗಿ ಹಿಂದೆ ಸರಿಯುತ್ತದೆ. ಈ ಮಧ್ಯೆ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೆ ಅಲಕ್ಷ ಮಾಡುತ್ತರೆ. ವ್ಯಾಯಾಮದ ವೇಳೆಗಳು ಅಡುಗೆ ಮಾಡುವುದರಲ್ಲೇ ಕಳೆದುಹೋಗುತ್ತದೆ ಮತ್ತು ಊಟದ ವಿಷಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಈಗಾಗಲೇ ವಿವರಿಸಲಾಗಿದೆ. ಈ ಎಲ್ಲಾ ವ್ಯತ್ಯಾಸಗಳಿಂದ ಮದುವೆಯ ನಂತರ ಸಹಜವಾಗಿ ತೂಕವು ಹೆಚ್ಚಾಗುತ್ತದೆ.



Click it and Unblock the Notifications
