Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಂತಹ ಮುತ್ತಿನಂತಹ ಗಂಡ ಸಿಕ್ಕರೆ, ನೀವೇ ಪುಣ್ಯವಂತರು
ಮಹಿಳೆಯರೇಕೆ ಈ ಪತಿಯನ್ನೇ ಮುಂದಿನ ಏಳು ಜನ್ಮಕ್ಕೂ ನೀಡು ಎಂದು ದೇವರಲ್ಲಿ ಏಕೆ ಪಾರ್ಥಿಸುತ್ತಾರೆ ಎಂಬ ಪ್ರಶ್ನೆಗೆ ಕುಹಕವಾದ ಉತ್ತರವೊಂದಿದೆ. ಓರ್ವ ಪತಿಯನ್ನೇ ತಿದ್ದಿ ತಮಗೆ ಬೇಕಾದಂತೆ ಸರಿಪಡಿಸಿಕೊಳ್ಳಲು ಒಂದು ಜನ್ಮ ವ್ಯರ್ಥವಾಗಿದೆ, ಮುಂದಿನ ಜನ್ಮದಲ್ಲಿ ಬೇರೆ ಪತಿ ಸಿಕ್ಕರೆ ಅವನನ್ನೂ ಮೊದಲಿನಿಂದ ತಯಾರು ಮಾಡಬೇಕಾಗಿ ಬರುವ ಕಾರಣ ಹಿಂದಿನ ಜನ್ಮದ ಪಳಗಿದ ಪತಿಯೇ ಇರಲಿ ಎಂಬುದು ಇದರ ಸ್ವಾರಸ್ಯ.
ಇಂದಿನ ದಿನಗಳಲ್ಲಿ ಪತಿಯನ್ನು ತಿದ್ದುವುದು ಕೊಂಚ ಕಷ್ಟವಾದ ಕೆಲಸ. ಅದರಲ್ಲೂ ಉತ್ತಮ ಗುಣಗಳಿರುವ ಪುರುಷರು ಸಿಗುವುದೇ ಅಪರೂಪ. ಒಂದು ವೇಳೆ ಸಿಕ್ಕರೂ ಅವರಲ್ಲಿರುವ ಉತ್ತಮ ಗುಣಗಳನ್ನು ಕಂಡುಕೊಳ್ಳಲು ಸೂಕ್ತ ಪ್ರಸಂಗ ಎದುರಾಗದೇ ಇದರ ಬಗ್ಗೆ ಅರಿಯಲಾರದೇ ಹೋಗುವ ಸಂಭವವೇ ಹೆಚ್ಚು.
ಯಾವುದೇ ವ್ಯಕ್ತಿಯ ಉತ್ತಮ ಗುಣಗಳನ್ನು ಅರಿಯುವುದು ಅಷ್ಟು ಸುಲಭವಲ್ಲ. ಸೋನಾ ಘಸ್ ಕೇ ದೇಖೋ, ಆದ್ಮೀ ಕೇ ಸಾಥ್ ಬಸ್ ಕೇ ದೇಖೋ ಎಂಬುದು ಖ್ಯಾತ ಹಿಂದಿ ಸುಭಾಷಿತ. ಯಾವುದೇ ವ್ಯಕ್ತಿಯೊಡನೆ ಕೆಲದಿನಗಳ ಒಡನಾಟದಲ್ಲಿ ಆ ವ್ಯಕ್ತಿಯ ಬಗ್ಗೆ ಅರಿಯಲು ಸಾಧ್ಯವೇ ಇಲ್ಲ. ಅದರಲ್ಲೂ ಕಪಟಿಗಳು ಸಭ್ಯರ ಸೋಗಿನಲ್ಲಿಯೇ ಇದ್ದು ಯಾವುದೋ ಸೂಕ್ಷ್ಮ ಘಳಿಗೆಯಲ್ಲಿ ಮೋಸ ಮಾಡಿ ಓಡಿ ಹೋಗುವುದರಿಂದ ಮೋಸ ಹೋದ ಬಳಿಕವೇ ಇವರ ಇಂತಹವರು ಎಂದು ಅರಿಯುವಷ್ಟರಲ್ಲಿ ತುಂಬಾ ತಡವಾಗಿರುತ್ತದೆ. ನಿಮ್ಮ ಹಣವನ್ನು ಬ್ಯಾಂಕಿಗಿಂತಲೂ ಶೀಘ್ರವಾಗಿ ಡಬ್ಬಲ್ ಮಾಡಿ ಕೊಡುತ್ತೇವೆ ಎಂದು ಬಣ್ಣಬಣ್ಣದ ಆಸೆ ತೋರಿಸಿ ಹಣ ಕಬಳಿಸಿ ಓಡಿಹೋಗುವವರೆಲ್ಲಾ ಇಂತಹ ಕಪಟಿಗಳೇ.
ಆದರೆ ನೀವು ಈಗ ಬಯಸುತ್ತಿರುವ ವ್ಯಕ್ತಿಗಳಲ್ಲಿ ಪ್ರತಿಯೊಬ್ಬರಲ್ಲಿಯೂ ಭಿನ್ನವಾದ ಗುಣಗಳಿದ್ದು ಇವರಲ್ಲಿ ಉತ್ತಮರು ಯಾರು ಕಂಡು ಕಂಡುಕೊಳ್ಳುವುದು ಕಷ್ಟಕರವಾಗಿರಬಹುದು. ಅದರಲ್ಲೂ ಇವರಲ್ಲಿ ಅಡಗಿರುವ ಒಳ್ಳೆಯ ಗುಣಗಳ ಬಗ್ಗೆ ಕಂಡುಕೊಂಡರೆ ನಿಮ್ಮ ಜೀವನಸಂಗಾತಿಯನ್ನು ಆರಿಸಿಕೊಳ್ಳಲು ನಿಮಗೆ ಸುಲಭವಾಗಬಹುದು. ಈ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದ್ದು ಇವನ್ನು ಪಾಲಿಸುವ ಮೂಲಕ ನಿಮ್ಮ ಆಯ್ಕೆಯನ್ನು ಸುಲಭಗೊಳಿಸಲಿದೆ.

ನಿಮ್ಮೊಂದಿಗೆ ಇಡಿಯ ದಿನ ಕಳೆದ ಬಳಿಕವೂ ನಿಮಗೆ ಕರೆ ಮಾಡುತ್ತಾನೆ
ದಿನವಿಡೀ ಜೊತೆಯಾಗಿ ಕಳೆದ ಬಳಿಕ ವಿದಾಯ ಹೇಳಿ ಮನೆಗೆ ತಲುಪಿದ ಬಳಿಕ ಆತನ ಕರೆ ಬಂದು ನೀವು ಕ್ಷೇಮವಾಗಿ ಮನೆ ತಲುಪಿರುವ ಬಗ್ಗೆ ವಿಚಾರಿಸಿಕೊಂಡ ಪರಿ ನಿಜವಾದ ಕಾಳಜಿಯ ರೂಪವಾಗಿದ್ದು ಈ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಸ್ಥಾನ ಪಡೆಯುವ ಅರ್ಹತೆ ಹೊಂದಿದ್ದಾರೆ.

ನಿಮ್ಮನ್ನು ಮನೆಯವರೆಗೂ ಬಿಡುತ್ತಾನೆ
ದಿನದ ಯಾವುದೇ ಹೊತ್ತಿನಲ್ಲಿರಲಿ, ನೀವು ಯಾವಾಗ ಮನೆಗೆ ಹೋಗಬೇಕೆಂದು ಬಯಸುತ್ತೀರೋ ಆಗ ಆತ ಯಾವುದೇ ಸಬೂಬು ಹೇಳದೇ, ನಿಮ್ಮನ್ನು ಬೇರೆ ಕಾರ್ಯಕ್ರಮಕ್ಕೆ ಅಥವಾ ಇನ್ನೂ ಹೆಚ್ಚು ಹೊತ್ತು ಕಳೆಯಲು ಒತ್ತಾಯಿಸದೇ ನಿಮ್ಮನ್ನು ಮನೆಯವರೆಗೂ ಬಿಡುತ್ತಾನೆ. ನಿಮ್ಮ ಸುರಕ್ಷತೆಯೇ ಆತನಿಗೆ ಮುಖ್ಯವಾಗಿದ್ದು ನೀವು ಮನೆ ಸೇರಿದುದನ್ನು ಕಂಡ ಬಳಿಕವೇ ಅಲ್ಲಿಂದ ಹೊರಡುತ್ತಾನೆ. ಇದು ಆತ ನಿಮ್ಮ ಬಗ್ಗೆ ತೋರುವ ಕಾಳಜಿಯ ಸ್ಪಷ್ಟ ದರ್ಶನವಾಗಿದೆ.

ನಿಮ್ಮ ತಡೆರಹಿತ ಮಾತುಗಳನ್ನು ಕೇಳುತ್ತಾನೆ
ಮಹಿಳೆಯರೇ ನೋಡಿ ಇದು ಜೋಗದ ಜಲಪಾತ, ನೀವು ಮಾತನಾಡುವುದನ್ನು ನಿಲ್ಲಿಸಿದರೆ ಇದರ ಸದ್ದನ್ನೂ ಕೇಳಬಹುದು ಎಂಬುದೊಂದು ಕುಹಕನುಡಿ. ಹುಡುಗಿಯರಲ್ಲಿ ಮಾತು ಹೆಚ್ಚು. ಇದಕ್ಕೆ ಇದೇ ವಿಷಯ ಬೇಕೆಂದಿಲ್ಲ. ತಾವು ನೋಡಿದ ಸಿನೆಮಾ, ಧಾರಾವಾಹಿಯಿಂದ ಹಿಡಿದು ಅಕ್ಕಪಕ್ಕದ ಹುಡುಗರ, ಹುಡುಗಿಯರ, ಚಾಳಿಗಳ ಇನ್ನೂ ಹತ್ತು ಹಲವಾರು ವಿಷಯಗಳ ಬಗ್ಗೆ ಹೇಳುತ್ತಲೇ ಹೋಗುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ತಡೆರಹಿತ ಮಾತುಗಳನ್ನು ಕೇಳುತ್ತಾನೆ
ಒಂದು ವೇಳೆ ಇದೇ ಪರಿಯನ್ನು ನಿಮ್ಮ ಮನದನ್ನನ ಬಳಿ ಹೇಳುತ್ತಾ ಹೋದರೆ ಯಾವಾಗ ವಿಷಯ ಪಲ್ಲಟವಾಗಿ ಆತನಿಗೆ ಸಂಬಂಧವೇ ಇಲ್ಲದ ಮಾತುಗಳಿಗೆ ಹೊರಳಿತು ಎಂದು ನಿಮಗೆ ಗೊತ್ತೇ ಆಗುವುದಿಲ್ಲ. ಆದರೆ ಆತ ಇದನ್ನು ತೋರ್ಪಡಿಸದೇ ನೀವು ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳುತ್ತಾ ಹೋಗುತ್ತಾನೆ. ನಿಮ್ಮ ಮಾತುಗಳಿಗೆ ತಡೆಯೊಡ್ಡುವುದಿಲ್ಲ. ಇದು ಆತ ನಿಮಗೆ ಮಾತನಾಡಲು ಕೊಡುವ ಅವಕಾಶವಾಗಿದ್ದು ಜೀವನಪರ್ಯಂತ ನಿಮಗೆ ದಕ್ಕುವ ವ್ಯಕ್ತಿಸ್ವಾತಂತ್ರ್ಯದ ಸಂಕೇತವಾಗಿದೆ.

ನಿಮ್ಮ ಆಣೆ ಭಾಷೆಗಳಿಗೆ ಆತ ಒಪ್ಪುತ್ತಾನೆ
ಒಂದು ಬಂಧನಕ್ಕೆ ಒಳಗಾಗುವವರೆಗೂ ಯಾವುದೇ ಪುರುಷರು ಮಹಿಳೆಯರ ಆಣೆ ಭಾಷೆಗಳಿಗೆ ಒಮ್ಮೆಲೇ ಒಪ್ಪುವುದಿಲ್ಲ. ಏಕೆಂದರೆ ಮುಂದಿರುವ ಯುವತಿ ತನ್ನ ಜೀವನಸಂಗಾತಿಯಾಗಲು ಅರ್ಹಳೋ ಅಲ್ಲವೋ ಎಂದು ಅವರೂ ಕೊಂಚ ಲೆಕ್ಕಾಚಾರ ಹಾಕುತ್ತಾರೆ. ಒಂದು ವೇಳೆ ಈ ವ್ಯಕ್ತಿ ನಿಮ್ಮ ಆಣೆ ಭಾಷೆಗಳಿಗೆ ಎದುರು ಮಾತನಾಡದೇ ತನ್ನ ಒಪ್ಪಿಗೆ ಸೂಚಿಸಿ ಅದರಂತೆಯೇ ನಡೆದಿದ್ದಲ್ಲಿ ಈ ಯುವಕನನ್ನು ಬಿಡುವುದು ನಿಮಗೆ ಬಹಳ ನಿರಾಶಾದಾಯಕವಾಗಿ ಪರಿಣಮಿಸಲಿದೆ.

ಮಹಿಳೆಯರ ಅಧಿಕಾರ ನಿಮಗೆ ನೀಡಲು ಬದ್ದನಾಗಿರುತ್ತಾನೆ
ಒಂದು ಕಾಲದಲ್ಲಿ ಪತ್ನಿ ಎಂದರೆ ಅಡಿಯಾಳು ಎಂದೇ ನಡೆಸಿಕೊಳ್ಳುತ್ತಿದ್ದರು. ಇಂದಿಗೂ ಎಷ್ಟೋ ದಂಪತಿಗಳಲ್ಲಿ ಈ ಪ್ರಕ್ರಿಯೆ ನಡೆದುಬಂದಿದೆ. ಪತ್ನಿಯನ್ನು ತನಗಿಂತಲೂ ಕೆಳಗಿನವಳು ಎಂದು ಭಾವಿಸಿ ಅದೇ ಪ್ರಕಾರ ನಡೆದುಕೊಳ್ಳುವ ಪತಿಯರಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಹಿಳೆಯರ ಅಧಿಕಾರ ನಿಮಗೆ ನೀಡಲು ಬದ್ದನಾಗಿರುತ್ತಾನೆ
ಆದರೆ ನಿಮ್ಮ ಆಯ್ಕೆಯ ವ್ಯಕ್ತಿ ನಿಮಗೆ ಸಂಪೂರ್ಣ ಸ್ವಾತ್ಯಂತ್ಯ ಮತ್ತು ಅಧಿಕಾರವನ್ನು ನೀಡಲು ಬದ್ದನಾಗಿದ್ದು ನಿಮಗೆ ಸಂಪೂರ್ಣವಾದ ಸಹಕಾರ ನೀಡುತ್ತಾನೆ. ಆತನಿಗೆ ಮಹಿಳೆಗೆ ಹೇಗೆ ಗೌರವ ನೀಡಬೇಕೆಂದು ಗೊತ್ತಿದೆ. ಇಂತಹ ವ್ಯಕ್ತಿ ಸಿಕ್ಕರೆ ನಿಮ್ಮ ನಿರ್ಧಾರವನ್ನು ತಡಮಾಡಲೂ ಬೇಡಿ, ವಕ್ತಪಡಿಸಲು ಹಿಂದೇಟು ಹಾಕಲೂ ಬೇಡಿ.



Click it and Unblock the Notifications
