Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ದಾಂಪತ್ಯದಲ್ಲಿ ನಂಬಿಕೆ-ಭದ್ರತೆ ಎಂದಿಗೂ ಸ್ಥಿರವಾಗಿರಲಿ
ಸಂಬಂಧ ಎಂದರೆ ಒಂದು ಭದ್ರತೆಯ ಭಾವನೆಯನ್ನು ಒದಗಿಸುವ ಅವಿನಾಭಾವ ಬಂಧವಾಗಿರುತ್ತದೆ. ನಾವು ಸಂಬಂಧದಲ್ಲಿರುವುದೇ ಸುರಕ್ಷತೆಯನ್ನು ನೀಡುವೆವು ಮತ್ತು ಪಡೆಯುವೆವು ಎಂಬ ಭರವಸೆಯಿಂದಾಗಿ. ಆ ಭಾವನೆಯೇ ನಿಮ್ಮನ್ನು ಸಂಬಂಧದಲ್ಲಿ ಮುಂದುವರಿಯುವಂತೆ ಮಾಡುತ್ತದೆ. ಹೀಗೆ ಸುರಕ್ಷತೆಯ ಭಾವನೆ ಮತ್ತು ಆ ಭಾವನೆಯನ್ನು ಹೊಂದಿರುವ ಹೃದಯವು ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಆದರೆ ಇದು ಭಗ್ನಗೊಂಡಾಗ ಸಂಬಂಧವು ಅರ್ಥವನ್ನು ಕಳೆದುಕೊಳ್ಳುತ್ತದೆ. ಏಕೆಂದರೆ ಸಂಬಂಧವು ಮೊದಲು ನಂಬಿಕೆ ಮತ್ತು ಅರ್ಥ ಮಾಡಿಕೊಳ್ಳುವಿಕೆಯನ್ನು ಬಯಸುತ್ತದೆ. ಇಂತಹ ಗುಣಗಳು ಭದ್ರತೆಯಿಂದ ಬರುತ್ತವೆ.
ಯಾವಾಗ ನೀವು ನಂಬಿಕೆಯನ್ನು ಮುರಿಯುತ್ತೀರೋ ಆಗ ಸಂಬಂಧದಲ್ಲಿ ಭದ್ರತೆಯ ಭಾವವು ಕಳೆದು ಹೋಗುತ್ತದೆ. ನಂಬಿಕೆಯನ್ನು ಕಾಪಾಡಿಕೊಂಡು ಬಂದರೆ ಮಾತ್ರ ಸಂಬಂಧದಲ್ಲಿ ಭದ್ರತೆಯ ಭಾವ ಇರುತ್ತದೆ, ಭದ್ರತೆಯ ಭಾವ ಇದ್ದರೆ ಮಾತ್ರ ಸಂಬಂಧದಲ್ಲಿ ಸಂತೋಷ ಇರುತ್ತದೆ. ಹೌದು, ಸಂಬಂಧದಲ್ಲಿ 'ಕೊಡು' ಮತ್ತು 'ಕೊಳ್ಳುವಿಕೆ' ಎರಡೂ ಇರಬೇಕು. ಅವು ಇದ್ದರೆ ಮಾತ್ರ ಸಂಬಂಧ ಗಟ್ಟಿಯಾಗಿರುತ್ತವೆ. ಬನ್ನಿ ಸಂಬಂಧದಲ್ಲಿ ಭದ್ರತೆ ಏಕೆ ಬೇಕು ಮತ್ತು ಹೇಗೆ ಬರುತ್ತದೆ ಎಂದು ತಿಳಿಯೋಣ...

ನಿಮ್ಮ ಭದ್ರತೆಯು ಎದೆಯಾಳದಿಂದ ಬರುತ್ತದೆ
ಸಂತೋಷ, ದುಃಖ, ನೆಮ್ಮದಿ ಮತ್ತು ಪ್ರೀತಿ ಎಲ್ಲವು ಎದೆಯಾಳದಿಂದ ಬರುತ್ತವೆ. ನೀವು ಈ ಗುಣಗಳನ್ನು ಹೊಂದಿರುವಾಗ ನಿಮ್ಮ ಸಂಗಾತಿಯು ಸಹ ಸುರಕ್ಷಿತ ಭಾವನೆಯನ್ನು ಹೊಂದುವುದಿಲ್ಲವೇನು?

ನಿಮ್ಮ ಸಂಗಾತಿ ಸುರಕ್ಷಿತವಾದ ಭಾವನೆಯನ್ನು ಹೊಂದುತ್ತಾರೆ
ನೀವು ಸಂಬಂಧದಲ್ಲಿ ಆರೋಗ್ಯಕರ ಭಾವನೆಯನ್ನು ಹುಟ್ಟು ಹಾಕಿದರೆ ನಿಮ್ಮ ಸಂಗಾತಿಯು ಸಂಬಂಧದಲ್ಲಿ ಸುರಕ್ಷಿತವಾದ ಭಾವನೆಯನ್ನು ಹೊಂದುತ್ತಾರೆ. ನಿಮ್ಮ ಸಂಗಾತಿಯನ್ನು ಅವರು ಇರುವಂತೆ ನೀವು ಸ್ವೀಕರಿಸಿ, ಅವರಲ್ಲಿ ಯಾವುದೇ ಬದಲಾವಣೆಗಳನ್ನು ತರಲು ಪ್ರಯತ್ನಿಸದೆ ಇರುವುದು ಸಹ ಇಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಆಗ ಅವರು ಸುರಕ್ಷಿತವಾದ ಭಾವನೆಯನ್ನು ಹೊಂದುತ್ತಾರೆ.

ಅಸುರಕ್ಷತೆಯು ಹತಾಶೆ ಭಾವನೆಯನ್ನು ಹುಟ್ಟು ಹಾಕುತ್ತದೆ
ಯಾವಾಗ ನೀವು ವಿಶ್ರಾಂತಿ ರಹಿತರಾಗಿರುತ್ತೀರೋ, ಮತ್ತು ಅನುಮಾನ ಪೀಡಿತರಾಗಿರುತ್ತೀರೋ, ಆಗ ನಿಮ್ಮ ಸಂಬಂಧದಲ್ಲಿ ಉಸಿರುಗಟ್ಟುವ ಭಾವನೆಯು ಮನೆ ಮಾಡುತ್ತದೆ. ಆಗ ನೀವು ಹತಾಶರಾಗುತ್ತೀರಿ ಮತ್ತು ಸಂಬಂಧವನ್ನು ಕಡಿದುಕೊಳ್ಳುವ ಹಂತದವರೆಗೆ ತೆಗೆದುಕೊಂಡು ಹೋಗುತ್ತೀರಿ.

ಆಂತರಿಕ ಸುರಕ್ಷತೆಯು ಆಕರ್ಷಕವಾಗಿರುತ್ತದೆ
ನೀವು ನಿಮ್ಮಷ್ಟಕ್ಕೆ ನೀವು ಶಾಂತವಾಗಿದ್ದಾಗ, ನೀವು ನೋಡಲು ಆಕರ್ಷಕವಾಗಿರುತ್ತೀರಿ. ಇದು ಹೃದಯಗಳನ್ನು ಗೆಲ್ಲಲು ಸಹಕರಿಸುತ್ತದೆ.

ಸುರಕ್ಷತೆಯು ಸ್ಥಿರತೆಯನ್ನು ತರುತ್ತದೆ
ಒಂದು ವೇಳೆ ನೀವು ಸಂಬಂಧದಲ್ಲಿ ಸ್ಥಿರತೆಯನ್ನು ತರಲು ಬಯಸಿದಲ್ಲಿ, ಮೊದಲು ನಿಮ್ಮ ಸಂಬಂಧವನ್ನು ಯಾವುದೇ ತೊಂದರೆಗಳಿಂದ ದೂರವಿಡಿ. ಜಗಳಗಳು, ವಾದ-ವಿವಾದಗಳು ಇಲ್ಲದೆ ಇದ್ದರೆ ಪ್ರತಿಯೊಬ್ಬರ ಸಂಬಂಧವು ಸುಂದರವಾಗಿರುತ್ತದೆ. ಆಗ ಸಂಬಂಧದಲ್ಲಿ ಅರ್ಧಕ್ಕೆ ಅರ್ಧ ಭಾಗ ಸಮಸ್ಯೆಗಳು ಇರುವುದಿಲ್ಲ. ಜಗಳಗಳು ಇದ್ದಲ್ಲಿ, ನಿಮ್ಮಿಬ್ಬರಲ್ಲಿ ಒಬ್ಬರ ತೊಂದರೆ ಇದ್ದೇ ಇರುತ್ತದೆ. ಆಗ ಆ ಸಂಬಂಧದಿಂದ ಹೊರನಡೆಯುವುದು ಉತ್ತಮ.

ಸುರಕ್ಷತೆಯು ಪ್ರಬುದ್ಧತೆಯನ್ನು ಹೊಂದಿರುತ್ತದೆ
ನಿಮಗೆ ವಯಸ್ಸಾದಂತೆಲ್ಲಾ ಬರುವ ಪ್ರಬುದ್ಧತೆಯು ನಿಮ್ಮ ಸಂಬಂಧದಲ್ಲಿ ಶಾಂತಿ ಮತ್ತು ಸಂತೋಷವನ್ನು ತರುತ್ತದೆ. ಆಗ ನೀವು ಗುರಿಯ ಬಗ್ಗೆ ಹೆಚ್ಚು ಚಿಂತಿಸುತ್ತೀರೇ ಹೊರತು, ಸಂಬಂಧದಲ್ಲಿ ಕಾಣಿಸುವ ಸಣ್ಣ ಪುಟ್ಟ ತಪ್ಪುಗಳನ್ನಲ್ಲ. ಏಕೆಂದರೆ ಸುರಕ್ಷತೆಯು ಪ್ರಬುದ್ಧತೆಯನ್ನು ಹೊಂದಿರುತ್ತದೆ.

ಅಸುರಕ್ಷತೆಯು ನಿಂದನೆಯನ್ನು ಹೊಂದಿರುತ್ತದೆ
ಯಾವಾಗ ನೀವು ಅಸುರಕ್ಷತೆಯ ಭಾವವನ್ನು ಹೊಂದುತ್ತೀರೋ, ಆಗ ನಿಮ್ಮಲ್ಲಿ ನಿಂದನೆಯ ಪ್ರವೃತ್ತಿ ಕಾಣಿಸಿಕೊಳ್ಳುತ್ತದೆ. ಸಣ್ಣ ಸಣ್ಣ ತಪ್ಪುಗಳನ್ನು ಸಹ ಎತ್ತಿ ತೋರಿಸುವ ಮಟ್ಟಕ್ಕೆ ಇದು ಕರೆದುಕೊಂಡು ಹೋಗುತ್ತದೆ. ಇದು ನಿಜಕ್ಕೂ ಸಂಬಂಧದಲ್ಲಿ ಆರೋಗ್ಯಕಾರಿ ಬೆಳವಣಿಗೆಯಲ್ಲ. ಆಗಾಗಿ ನಿಮ್ಮ ಹೃದಯಾಂತರಾಳದಿಂದ ಸುರಕ್ಷತೆಯ ಭಾವವನ್ನು ಹೊಂದಿ.



Click it and Unblock the Notifications