ಪುರುಷರ ಉದ್ರೇಕವು ನಿಜಕ್ಕೂ ನಾಟಕವೇ?

By Manju

ದಾಂಪತ್ಯದಲ್ಲಿ ಸಾಮರಸ್ಯ ಮೂಡಬೇಕಾದರೆ ಕೇವಲ ಪ್ರೀತಿ ನಂಬಿಕೆ ಮಾತ್ರವಲ್ಲದೆ ಆನಂದದಾಯಕ ಮತ್ತು ತೃಪ್ತಿದಾಯಕ ಪ್ರಣಯವೂ ಸಹ ಒಂದು. ಇದರಲ್ಲಿ ತೃಪ್ತಿ ಕಾಣದವರು ದಾಂಪತ್ಯದಲ್ಲಿ ದೀರ್ಘಕಾಲದಲ್ಲಿ ಬಾಂಧವ್ಯ ಬೆಳೆಸಿಕೊಳ್ಳಲು ವಿಫಲರಾಗುತ್ತಾರೆ. ಪ್ರಣಯದ ಸನ್ನಿವೇಶಗಳು ನಿಜಕ್ಕೂ ಒಬ್ಬರನ್ನೊಬ್ಬರು ಇನ್ನೂ ಹತ್ತಿರವಾಗಲು ಮಧುರವಾದ ಕ್ಷಣಗಳು. ಈ ಕ್ಷಣಗಳಿಗೆ ಇಬ್ಬರೂ ಹಾತೊರೆಯುತ್ತಿರುತ್ತಾರೆ. ಇದು ಪರಸ್ಪರ ಹಂಚಿಕೆಯಾಗಬೇಕಾದ ಕಾರ್ಯಕ್ರಮ.

ಇದರಲ್ಲಿ ಇಬ್ಬರೂ ಪೂರ್ಣಪ್ರಮಾಣದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಣಯದ ಮಹತ್ವಕ್ಕೆ ಹೆಚ್ಚಿನವರು ಪ್ರಾಮುಖ್ಯತೆ ನೀಡುತ್ತಿಲ್ಲ. ವಿಶೇಷವಾಗಿ ಪುರುಷರ ಉದ್ರೇಕವು ನಿಜಕ್ಕೂ ನಾಟಕವೇ ಅಥವಾ ಕಪಟವೇ? ಇತ್ತೀಚಿನ ಅಧ್ಯಯನವೊಂದು ಹೇಳುವ ಪ್ರಕಾರ ಶೇಖಡಾ 28ರಷ್ಟು ಪುರುಷರ ಕೂಡುವಿಕೆಯ ಉದ್ರೇಕವು ನಾಟಕ ಅಥವಾ ಸುಳ್ಳೆಂದು ಸಾಬೀತುಪಟ್ಟಿದೆ. ಇದಕ್ಕೆ ಸದರಿ ಪುರುಷರು ಬಗೆಬಗೆಯ ಕಾರಣಗಳನ್ನು ನೀಡಿದ್ದಾರೆ.

ಶತಮಾನಗಳಿಂದ ತಿಳಿದು ಬಂದ ಹಾಗೆ, ಕೇವಲ ಮಹಿಳೆಯರ ಉದ್ರೇಕವು ಸುಳ್ಳೆಂದು ಭಾವಿಸಲಾಗಿತ್ತು. ಇದಕ್ಕೆ ಸಾಕ್ಷಿಯೆಂಬಂತೆ, ಶೇಖಡಾ 28ರಷ್ಟು ಮಹಿಳೆಯರ ಉದ್ರೇಕವು ಸುಳ್ಳೆಂದು ಸಂಶೋಧಕರು ಸಾಬೀತು ಮಾಡಿದ್ದಾರೆ. ಈಗ ಪುರುಷರೂ ಸಹ ತಮ್ಮ ಉದ್ರೇಕವು ಸುಳ್ಳೆಂದು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಅವರ ಪ್ರೀತಿ, ಆತ್ಮವಿಶ್ವಾಸ ಮಾತ್ರ ನಿಜವೆಂದು ಹೇಳಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಂತೂ ಸಂಬಂಧಗಳ ಅರ್ಥ ಹಿಂದಿನ ಕಾಲಗಳಿಗಿಂತ ಭಿನ್ನವಾಗಿದ್ದು, ಅದಕ್ಕೆ ಜೀವನಶೈಲಿಯೂ ಸಹ ಅವಲಂಬಿತವಾಗಿದ್ದು, ಪ್ರಣಯದ ರೀತಿರಿವಾಜುಗಳೂ ಸಹ ಬದಲಾಗಿದೆ. ಆದ್ದರಿಂದ, ಈ ಕಾರಣಕ್ಕಾಗಿ ಪುರುಷರೂ ಸಹ ಇದರಿಂದ ತಪ್ಪಿಸಿಕೊಳ್ಳಲು ಉದ್ರೇಕವಾಗಿದ ನಾಟಕವಾಡುವ ಅನಿವಾರ್ಯತೆ ಎದುರಾಗಿದೆ.

ಆರೋಗ್ಯ ತಜ್ಞರು ಹೇಳುವ ಪ್ರಕಾರ ಮೊದಲಿಗೆ ನಿಮ್ಮ ಸಂಗಾತಿಯ ಬಯಕೆಯನ್ನು ಅರಿಯಲು ಪ್ರಯತ್ನಿಸಿ ಅದರಂತೆ ಅನುಸರಿಸಲು ಪ್ರಾರಂಭಿಸಿ. ನಿಮ್ಮ ಉದ್ರೇಕದ ನಾಟಕವು ತಾತ್ಕಾಲಿಕವಾಗಿ ಮಾತ್ರ ನಿಮಗೆ ನೆಮ್ಮದಿ ನೀಡಲಿದ್ದು, ಶಾಶ್ವತವಾಗಿ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಪುರುಷರು ಈ ರೀತಿಯ ನಾಟಕದ ಕಾರ್ಯಕ್ಕೆ ಕಾರಣವಾಗುವ ಕೆಲವು ಸಾಮಾನ್ಯ ಕಾರಣಗಳನ್ನು ನಿಮಗಾಗಿ ಈ ಲೇಖನವು ಪ್ರಸ್ತುತಪಡಿಸುತ್ತಿದೆ. ವಿವರಗಳಿಗೆ ಮುಂದೆ ಓದಿ...

ಅಂತಿಮ ಹಂತಕ್ಕೆ ತಲುಪಲು ಅಸಮರ್ಥತೆ

ಅಂತಿಮ ಹಂತಕ್ಕೆ ತಲುಪಲು ಅಸಮರ್ಥತೆ

ಇತ್ತೀಚಿನ ಬಿಡುವಿಲ್ಲದ ಕೆಲಸಗಳ ಒತ್ತಡಗಳಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಹೋಗಿರುವ ಕೆಲವು ಪುರುಷರು ಪ್ರಣಯವನ್ನು ಸಕಾಲದಲ್ಲಿ ಅಂತಿಮ ಹಂತಕ್ಕೆ ತಲುಪಿಸಲು ಕಷ್ಟಪಡುತ್ತಿದ್ದಾರೆ. ಇದಕ್ಕೆ ತಾತ್ಕಾಲಿಕ ತೊಂದರೆಗಳು, ಒತ್ತಡ ಮತ್ತು ಅವರ ವಯಸ್ಸೂ ಸಹ ಕಾರಣವಾಗುತ್ತಿದೆ. ಈ ಪುರುಷರು ಕೇವಲ ಈ ಪ್ರಕ್ರಿಯೆಯ ಆನಂದವನ್ನು ಪಡೆಯುತ್ತಾರೆಯೇ ವಿನಹ: ನಿಜ ಆನಂದದಿಂದ ವಂಚಿತರಾಗುತ್ತಿದ್ದಾರೆ.

ಔಷಧಗಳ ಬಳಕೆ

ಔಷಧಗಳ ಬಳಕೆ

ಕೆಲವರು ಔಷಧಗಳನ್ನು ಹೆಚ್ಚು ಬಳಸುತ್ತಿರುವುದರಿಂದ ಅಂತಿಮ ಹಂತಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಖಿನ್ನತೆಗೆ ಔಷಧಗಳನ್ನು ಬಳಸುತ್ತಿರುವವರು ಮತ್ತು ಇತರೆ ಔಷಧಗಳನ್ನು ಬಳಸುತ್ತಿರುವವರು ತಮ್ಮ ಸಂಗಾತಿಯನ್ನು ತೃಪ್ತಿಗೊಳಿಸಲು ಉದ್ರೇಕದ ನಾಟಕವಾಡುತ್ತಿದ್ದಾರೆ.

ಅವರಿಗೆ ಸಂಗಾತಿಯನ್ನು ನಿರಾಸೆಗೊಳಿಸಲು ಇಷ್ಟವಿಲ್ಲ

ಅವರಿಗೆ ಸಂಗಾತಿಯನ್ನು ನಿರಾಸೆಗೊಳಿಸಲು ಇಷ್ಟವಿಲ್ಲ

ಪುರುಷರು ತಮ್ಮ ಸಂಗಾತಿಯನ್ನು ಇಷ್ಟಪಡದಿದ್ದರೂ, ಮದುವೆ ಮತ್ತು ಮಕ್ಕಳು ಎಂಬ ವ್ಯವಸ್ಥೆಯಲ್ಲಿ ಸಿಲುಕಿದ ಮೇಲೆ ಒತ್ತಡಪೂರ್ವಕವಾಗಿ ಪ್ರಣಯದ ಸಂದರ್ಭದಲ್ಲಿ ಉದ್ರೇಕದ ನಾಟಕವಾಡುತ್ತಿದ್ದಾರೆ.

ಸ್ವಸಹಾಯ ಪದ್ಧತಿ

ಸ್ವಸಹಾಯ ಪದ್ಧತಿ

ಕೆಲವು ಪ್ರುರುಷರು ತಮ್ಮ ಪ್ರಣಯತೆಯನ್ನು ನೀಗಿಸಲು ತಮ್ಮ ಕೈಗಳ ಸಹಾಯ ಪಡೆಯುತ್ತಾರೆ. ಇದನ್ನು ತಮ್ಮ ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಾಗಿ ಅಭ್ಯಾಸ ಮಾಡಿಕೊಂಡು, ಈ ಪ್ರಕ್ರಿಯೆಯನ್ನು ತಮ್ಮ ಸಂಗಾತಿಯೊಂದಿಗೆ ಸಕಾಲದಲ್ಲಿ ನಿರ್ವಹಿಸಲು ವಿಫಲರಾಗುತ್ತಾರೆ. ತಮ್ಮ ಸಂಗಾತಿಯನ್ನು ಅನಂದಪಡಿಸಲು ಕೆಲವೊಂದು ಬಾರಿ ಉದ್ರೇಕದ ನಾಟಕವಾಡುತ್ತಾರೆ.

ಕಾಮದ ಮಟ್ಟವನ್ನು ತಗ್ಗಿಸುವುದು

ಕಾಮದ ಮಟ್ಟವನ್ನು ತಗ್ಗಿಸುವುದು

ಕಾಮದ ಮಟ್ಟದಲ್ಲಿ ವ್ಯತ್ಯಾಸಗಳು ಉಂಟಾದರೆ, ಹೆಚ್ಚಿನ ಪರಿಣಾಮಗಳು ಉಂಟಾಗುತ್ತದೆ. ನಿಮಿರುವಿಕೆಯ ತೊಂದರೆ, ಪ್ರಣಯದ ಬಯಕೆ ಕಮ್ಮಿಯಾಗುವುದು ಮತ್ತು ಇತರೆ ತೊಂದರೆಗಳಿಗೆ ಕಾರಣವಾಗುತ್ತವೆ. ಇನ್ನು ಕೆಲವರಲ್ಲಿ, ನಿಮಿರುವಿಕೆಯು ಸಹಜ ಸ್ಥಿತಿಯಲ್ಲಿದ್ದರೂ ಸಹ ಅಂತಿಮ ಹಂತ ತಲುಪಲು ದೊಡ್ಡ ಸವಾಲಾಗಿರುತ್ತದೆ.

X
Desktop Bottom Promotion