Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಹೆಣ್ಣನ್ನು ಅರ್ಥೈಸಿಕೊಳ್ಳಲು ಸೃಷ್ಟಿಸಿದ ಬ್ರಹ್ಮನಿಂದಲೂ ಸಾಧ್ಯವಿಲ್ಲ!
ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಜೀವನದಲ್ಲಿ ಓರ್ವ ಸಂಗಾತಿಯ ಅವಶ್ಯಕತೆ ಇರುವುದು ನಿಸರ್ಗದ ನಿಯಮವಾಗಿದೆ. ಇಂದಿನ ದಿನಗಳಲ್ಲಿ ಸೂಕ್ತ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಪ್ರತಿಯೊಬ್ಬರ ಮನಃಸ್ಥಿತಿಯೂ ಬೇರೆಬೇರೆ ತರಹದ್ದಾಗಿದ್ದು ಒಬ್ಬರನ್ನೊಬ್ಬರಿಗೆ ಪೂರಕವಾಗಿದ್ದರೆ ಮಾತ್ರ ಸಂಸಾರ ಅಪ್ಯಾಯಮಾನವಾಗಿರುತ್ತದೆ. ಒಂದು ವೇಳೆ ವಿರುದ್ದವಾಗಿದ್ದರೆ? ಸಂಸಾರ ಡೋಲಾಯಮಾನ!
ಹಾಗಾಗಿ ಯಾವುದೇ ಸಂಬಂಧ ಗಟ್ಟಿಗೊಳ್ಳಲು ಅತ್ಯಂತ ಅಗತ್ಯವಿರುವುದು ಪರಸ್ಪರ ವಿಶ್ವಾಸ. ಯಾವುದೇ ಕಟ್ಟಡ ಸ್ಥಿರವಾಗಿ ನಿಲ್ಲಲು ಗಟ್ಟಿ ಮುಟ್ಟಾದ ಅಡಿಪಾಯ ಅಗತ್ಯವಿರುವಂತೆಯೇ ಒಂದು ಸಂಬಂಧ ಗಟ್ಟಿಗೊಳ್ಳಲು ಪರಸ್ಪರ ವಿಶ್ವಾಸ, ಪ್ರೀತಿ, ಒಲುಮೆ ಮುಖ್ಯ. ಇದರಲ್ಲಿ ವಿಶ್ವಾಸವೇ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಚಂಚಲವಾಗಿರುವ ಹೆಣ್ಣಿನ ಮನಸ್ಸನ್ನು ಅರಿಯುವುದು ಅಷ್ಟು ಸುಲಭವಲ್ಲ. ಹೌದು ಕೆಲವೊಂದು ವಿಷಯದಲ್ಲಿ ಮಹಿಳೆಯರನ್ನು ಸಮಾಧಾನ ಪಡಿಸುವುದೇ ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ.
ಆದರೆ ಒಂದು ಮಾತು ಅಂತೂ ಸತ್ಯ ಹೆಂಗಸನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಿಮ್ಮ ಜೀವಿತಾವಧಿಯೇ ಬೇಕಾಗುವುದು. ಆಕೆಯ ಮನಸ್ಸನ್ನು ಗೆಲ್ಲಲು ಮತ್ತು ಆಕೆಯನ್ನು ಅರ್ಥಮಾಡಿಕೊಳ್ಳಲು ನೀವು ಎಷ್ಟು ಬಾರಿ ಪ್ರಯತ್ನಿಸಿದಿರಿ ಮತ್ತು ಎಷ್ಟು ಬಾರಿ ಸೋತಿರಿ ಎಂಬುದು ಮುಖ್ಯವಲ್ಲ, ನಿಮಗೆ ಎಷ್ಟು ತಾಳ್ಮೆ ಇದೆಯೆಂಬುದೆ ಮುಖ್ಯ. ಹೆಣ್ಣನ್ನು ರಾತ್ರೋ ರಾತ್ರಿ ಅಥವಾ ಒಂದೇ ವರ್ಷದಲ್ಲಿ ಅರ್ಥಮಾಡಿಕೊಳ್ಳಲು ಅಸಾಧ್ಯ ಎಂಬುದನ್ನು ಅರಿಯಿರಿ. ಸುಖಾಸುಮ್ಮನೆ ಗಂಡನ ಪ್ರೀತಿಯ ಮೇಲೆ ಸಂಶಯ ಪಡಬೇಡಿ!

ಐಶ್ವರ್ಯದ ಮೋಹ
ಕೆಲವೊಂದು ಮಹಿಳೆಯರಿಗೆ ಕುಬೇರನಿಗಿಂತಲೂ ಹೆಚ್ಚು ಐಶ್ವರ್ಯವಿದ್ದರೂ ಸಾಲದು. ನಿಮ್ಮ ಸ್ನೇಹಿತವಲಯದಲ್ಲಿ ನಿಮಗಿಂತ ಹೆಚ್ಚು ಸಂಪಾದಿಸುವ ಇತರರೊಂದಿಗೆ ನಿಮ್ಮನ್ನು ಹೋಲಿಸಿ ನಿಮ್ಮ ಜೀವನವನ್ನು ನರಕ ಮಾಡಲೂ ಇವರು ಹಿಂಜರಿಯರು. ಹೌದು ಜೀವನದಲ್ಲಿ ಎಷ್ಟೇ ಐಶ್ವರ್ಯ, ಸಮೃದ್ಧಿಯಿದ್ದರೂ ಅವರಿಗಿಂತ ಹೆಚ್ಚು ಶ್ರೀಮಂತರೊಂದಿಗೆ ಹೋಲಿಸಿಕೊಂಡು ತಾವಿನ್ನೂ ಎಷ್ಟು ಅಲ್ಪರು ಎಂದು ಬಿಕ್ಕುವ ಹೆಂಗಸರನ್ನು ಸರಿದಾರಿಗೆ ತರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಬಹುದು, ಅದಲ್ಲದೆ ಇಂತಹ ಕ್ಷುಲ್ಲಕ ವಿಷಯಗಳಿಂದಾಗಿ ಸಂಸಾರದಲ್ಲಿ ಬಿರುಕು ಮೂಡುತ್ತದೆ.
ಹಣ ಮತ್ತು ಚಿನ್ನದಾಸೆಯುಳ್ಳ ಮಹಿಳೆಯರು
ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ನಾಣ್ಣುಡಿಯಂತೆ ಮಹಿಳೆಯರು ಕೂಡ ಕೆಲವೊಮ್ಮೆ ಇಂತಹ ಕೀಲುಮಟ್ಟಕ್ಕೆ ಇಳಿದು ಬಿಡುತ್ತಾರೆ. ನಿಮಗೆ ತಿಳಿದಿರದ ಸಂಗತಿ ಎಂದರೆ ನಿಮ್ಮ ಬಳಿ ಬರುವ ಮುನ್ನ ಆಕೆ ನಿಮ್ಮ ಸ್ಥಾನಮಾನ, ನಿಮ್ಮ ಗಳಿಕೆ, ಭವಿಷ್ಯದಲ್ಲಿ ನೀವು ಏರಲಿರುವ ಎತ್ತರ, ಅದರಿಂದ ತನಗಾಗುವ ಲಾಭವನ್ನು ಲೆಕ್ಕಾಚಾರ ಹಾಕಿಕೊಂಡು ನಿಮಗೆ ಗಾಳ ಹಾಕಿರುತ್ತಾರೆ. ಯಾವುದೇ ಕೆಟ್ಟ ಘಳಿಗೆಯಲ್ಲಿ ನಿಮ್ಮ ವರಮಾನ ಕಡಿಮೆಯಾಯಿತೋ ಆಕೆಯ ಗಾಳ ಬೇರೆ ಮೀನಿನೆಡೆ ತಿರುಗುತ್ತದೆ! ಇಷ್ಟೇ ಸಾಕು ಸಂಬಂಧದಲ್ಲಿ ಬಿರುಕು ಮೂಡಲು ಹುಡುಗರಿಗೆ ಮದುವೆ ಎಂದರೆ ಇಷ್ಟವಿಲ್ಲವಂತೆ ನಂಬುತ್ತೀರಾ?
ಗೂಢಾಚಾರಿ ಕೆಲಸ
ಗಂಡ ಮನೆಗೆ ಬರುವುದು ಸ್ವಲ್ಪ ಲೇಟ್ ಆದರೆ ಸಾಕು, ಪದೇ ಪದೇ ಫೋನ್ ಕಾಲ್, ಒಂದು ವೇಳೆ ಯಾವುದೋ ತ್ವರಿತ ಕಾರಣದಿಂದ ಅವರ ಫೋನ್ ತೆಗೆದುಕೊಳ್ಳದೇ ಇದ್ದ ಪಕ್ಷ, ಅವರ ಸ್ನೇಹಿತರಿಗೆ ಫೋನ್ ಮಾಡಿ ಗಂಡನ ಬಗ್ಗೆ ವಿಚಾರಿಸುವುದು, ಹೀಗೆ ಕ್ಷುಲ್ಲಕ ವಿಷಯಗಳು, ಹಾಲು ಜೀನಿನಂತಹ ಸಂಸಾರಕ್ಕೆ ಮುಳುವಾಗಬಹುದು
ಅತ್ತೆಯ ವಿಷಯ ಬಂದಾಗ
ನಿಮ್ಮ ತಾಯಿಯ ಬಗ್ಗೆ ಆಕೆಗೆ ಮುನಿಸಿರುತ್ತದೆ ಹೆಣ್ಣಿಗೆ ಗೊತ್ತು ಒಬ್ಬ ಗಂಡಸು ಆತನನ್ನು ಸಾಕಿ ಬೆಳೆಸಿದ ತಾಯಿಯಂತೆಯೇ ಇರುತ್ತಾನೆ ಎಂದು. ನಿಮ್ಮ ತಾಯಿಯ ಜೊತೆಗೆ ಆಕೆ ಮುನಿಸಿದ್ದರೆ, ಅದನ್ನು ಆಕೆ ಅದನ್ನು ನೇರವಾಗಿ ತೀರಿಸಿಕೊಳ್ಳಲು ನೋಡುತ್ತಾಳೆ. ಇದು ಸಾಧ್ಯವಾಗದಿದ್ದಾಗ ಅದಕ್ಕೆ ನೀವೇ ಬಲಿಪಶುವಾಗುತ್ತೀರಿ



Click it and Unblock the Notifications
