Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
ಜೀವನದಲ್ಲಿ ಮಧುಚಂದ್ರದ ಅನುಭವ, ಮಧುರಾತಿ ಮಧುರ!
ಮದುವೆಯಾದ ಮೇಲೆ ಹಲವಾರು ರಮ್ಯ ಚೈತ್ರ ಕಾಲಗಳು ಬರುತ್ತಾ ಇರುತ್ತವೆ ಮತ್ತು ಹೋಗುತ್ತಾ ಇರುತ್ತವೆ. ಆದರೆ ಒಂದು ಕಾಲ ಇರುತ್ತದೆ, ಅದು ಪುಳಕಗಳ ಮಳೆಗಾಲ, ಮೈಮನಗಳಲ್ಲಿ ಅದರ ರೋಮಾಂಚನಕ್ಕೆ ಪಾರವೇ ಇರುವುದಿಲ್ಲ. ಅಂತಹ ಕಾಲ ಹಿಂದೆ ಇರಲಾರದು ಮತ್ತು ಮುಂದೆ ಬರಲಾರದು ಎಂಬ ರೀತಿಯಲ್ಲಿರುತ್ತದೆ. ಆ ಕಾಲವೇ ಮಧುಚಂದ್ರದ ಮಧುರಾತೀ ಮಧುರ ಕಾಲ. ಕಣ್ಣು-ಕಣ್ಣು ಕಲೆತಾಗ ಮನದಲ್ಲಿ ಪ್ರೇಮಾಂಕುರ!
ಈ ಕಾಲ ಘಟ್ಟದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಜೊತೆಗೂಡಿ, ಈ ರೋಮಾಂಚನಕ್ಕೆ ಸಾಕ್ಷಿಯಾಗುತ್ತಾರೆ. ಜೊತೆಗೆ ಈ ಕಾಲವು ಇವರ ಜೀವನದ ಅತ್ಯುತ್ತಮವೆನ್ನುವ ಕಾಲವಾಗಿರುತ್ತದೆ. ಈ ಕಾಲದಲ್ಲಿ ಯಾವುದೇ ತಲೆನೋವುಗಳು ಮತ್ತು ಸಂಕಷ್ಟಗಳು ಇರುವುದಿಲ್ಲ. ಈ ಕಾಲವು ಕಾವ್ಯದಂತೆ, ಜಲಪಾತದಂತೆ, ತಂಗಾಳಿಯಂತೆ ಹಾದು ಹೋಗುತ್ತದೆ. ಮೊದಲ ರಾತ್ರಿ ದಾಂಪತ್ಯ ಜೀವನದ ಪ್ರಮುಖ ಘಟ್ಟ
ಡೀ ಪ್ರಪಂಚವೇ ಬಣ್ಣ ಬಣ್ಣದ ಲೋಕವಾಗಿ ಕಾಣುತ್ತಿರುತ್ತದೆ ನವ ದಂಪತಿಗಳಿಗೆ. ಮಧುಚಂದ್ರದ ನಂತರದ ಕಾಲದಲ್ಲಿ ಕಷ್ಟಗಳು ಕಾಣಿಸಿಕೊಳ್ಳುತ್ತವೆ. ಬನ್ನಿ ಹಾಗಾದರೆ ಈ ಮಧುಚಂದ್ರ ಏಕೆ ನಮ್ಮ ದಾಂಪತ್ಯ ಜೀವನದ ಅತ್ಯಂತ ಸುಂದರ ಮತ್ತು ರೋಮಾಂಚಕ ಕಾಲ ಎಂದು ತಿಳಿದುಕೊಳ್ಳೋಣ..

ಪರಿಶುದ್ಧವಾದ ವ್ಯಾಮೋಹ
ಈ ಕಾಲವು ನಿಮ್ಮನ್ನು ಆಕಾಶದಲ್ಲಿ ತೇಲಾಡುವಂತೆ ಮಾಡುತ್ತದೆ. ಮಧುಚಂದ್ರದ ಸಂದರ್ಭದಲ್ಲಿ ದಂಪತಿಗಳು ಜಿದ್ದಿಗೆ ಬಿದ್ದಂತೆ ಪರಸ್ಪರ ಪ್ರೀತಿ ಮಾಡುತ್ತಿರುತ್ತಾರೆ. "ಅವನು ಸುರ ಸುಂದರಾಂಗ", "ಈಕೆ ಅತಿಲೋಕ ಸುಂದರಿ" ಎಂಬಷ್ಟರ ಮಟ್ಟಿಗೆ ಪರಸ್ಪರ ಇಷ್ಟಪಡುತ್ತಾರೆ. ಮನಸ್ಸಿನಲ್ಲಿ ಅಂದುಕೊಂಡರೆ, ಹೃದಯವು ಕೈ ಹಿಡಿದು ನಡೆಸುತ್ತಿರುತ್ತದೆ ಈ ಕಾಲದಲ್ಲಿ.

ಕಡಲಿಗೆ ಒಂದು ಕೊನೆಯಿದೆ ಪ್ರೀತಿಗೆ ಎಲ್ಲಿದೆ?
ಈ ಹಾಡಿನಂತೆ ಇವರ ಪ್ರೀತಿ ಎಲ್ಲಾ ಎಲ್ಲೆಗಳನ್ನು ಮೀರಿ ಉಕ್ಕಿ ಹರಿಯುತ್ತಿರುತ್ತದೆ. ಹಗಲು-ರಾತ್ರಿ, ಬಿಸಿಲು-ಮಳೆ-ಚಳಿ, ಸೂರ್ಯ-ಚಂದ್ರ, ಕಾಫಿ-ಐಸ್ ಕ್ರೀಮ್ ಎಲ್ಲದರಲ್ಲೂ ರೊಮ್ಯಾಂಟಿಕ್ ಆಗಿ ಏನು ಮಾಡಬಹುದೆಂಬ ಸಂಶೋಧನೆಗಳಲ್ಲಿ ದಂಪತಿಗಳು ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.

ಎಲ್ಲವೂ ಸರಿ, ಸರಿ, ಸರಿ
ಹೌದು, ನೀವು ಓದುತ್ತಿರುವುದು ಸರಿಯಾಗಿದೆ. ಈ ಕಾಲದಲ್ಲಿ ಗಂಡ ಏನು ಹೇಳಿದರೆ ಅದಕ್ಕೆ ಹೆಂಡತಿ ಸರಿ ಎನ್ನುತ್ತಾಳೆ, ಹೆಂಡತಿ ಹೇಳಿದರೆ ಗಂಡ ಸರಿ ಎನ್ನುತ್ತಾನೆ.ಹೋಟೆಲ್‌ನಲ್ಲಿ ಮೆನುವಿನಿಂದ ಹಿಡಿದು, ಹಾಸಿಗೆಯ ಯಾವ ಮಗ್ಗುಲಿನಲ್ಲಿ ಮಲಗಬೇಕು ಎನ್ನುವವರೆಗೆ ಎಲ್ಲವೂ ಪರಸ್ಪರ ಒಪ್ಪಿಕೊಳ್ಳುವ, ಎಸ್ ಎನ್ನುವ ಮನೋಭಾವ ಈ ಕಾಲದಲ್ಲಿರುತ್ತದೆ. ಮಧುಚಂದ್ರ ಮುಗಿದ ಮೇಲೆ ಪರಸ್ಪರರ ಬಯಕೆಗಳಿಗೆ ಆಗೋಲ್ಲ, ನೋ ಎನ್ನುವ ಮಾತುಗಳು ಹುಟ್ಟಿಕೊಳ್ಳುತ್ತವೆ.

ನಿಜವಾದ ಜಗಳಗಳು ಇರುವುದಿಲ್ಲ
ಮಧುಚಂದ್ರ ಏಕೆ ಮನಮೋಹಕ ಎಂದರೆ, ಈ ಅವಧಿಯಲ್ಲಿ ನಿಮ್ಮಗಳ ನಡುವೆ ಯಾವುದೇ ರೀತಿಯ ಜಗಳಗಳು ಇರುವುದಿಲ್ಲ. ಇದ್ದರೂ ಅವುಗಳು ಮನಸ್ಸಿಗೆ ನೋವಾಗುವಷ್ಟರ ಮಟ್ಟಿಗೆ ಇರುವುದಿಲ್ಲ. ನಿಮ್ಮ ಮಧ್ಯೆ ಯಾವುದೇ ಗೊಂದಲ, ವಾದ-ವಿವಾದ ಯಾವುದೂ ಇರುವುದಿಲ್ಲ. ಹಾಗೊಂದು ವೇಳೆ ಇದ್ದರೂ ಆ ಜಗಳ ಆಡಿದ ಮೇಲೆ, ಅದೆಷ್ಟು ಕ್ಷುಲ್ಲಕ ಜಗಳವೆಂದು ನೀವು ತಿಳಿದಿಕೊಳ್ಳುತ್ತೀರಿ. ಇದೇ ಮಧುಚಂದ್ರದ ನಂತರ ನಿಮಗೆ ಜಗಳವಾಡಲು ನೂರಾರು ಕಾರಣಗಳು ದೊರೆಯುತ್ತವೆ. ಆಗ ನಿಮ್ಮ ನಡುವಿನ ಜಾಗವೇ ಯುದ್ಧಭೂಮಿಯಾಗಿರುತ್ತದೆ. ಒಮ್ಮೊಮ್ಮೆ ನಿಮ್ಮಲ್ಲಿ ಒಬ್ಬರು ಕೆಳಗೆ ಅಥವಾ ಮನೆಯ ಹೊರಗೆ ಮಲಗುವ ಸಂದರ್ಭ ಸಹ ಬರಬಹುದು.

ಮತ್ತೊಬ್ಬರನ್ನು ನೋಡುವುದಿಲ್ಲ, ಪರಸ್ಪರ ನೋಡುತ್ತಾ ಕೂರುತ್ತೀರಿ
ಈ ಅವಧಿಯಲ್ಲಿ ನಿಮ್ಮ ಗಂಡ ಇತರೆ ಹೆಂಗಸರತ್ತ ಕಣ್ಣೆತ್ತಿ ಸಹ ನೋಡುವುದಿಲ್ಲ. ಆತ ನಿಮ್ಮನ್ನು ನೋಡುವುದರಲ್ಲಿಯೇ 'ಮಗ್ನ"ನಾಗಿರುತ್ತಾನೆ. ಆಗಾಗ ಸಹ ನೆಪಕ್ಕಾದರು ಕಣ್ಣುಗಳು ಅತ್ತಿತ್ತ ಸರಿಯದೆ ನೀವು, ನಿಮ್ಮನ್ನು ನೋಡಿಕೊಳ್ಳುತ್ತಿರುತ್ತೀರಿ.

ನಿಮ್ಮ ಪ್ರೀತಿಗೆ ಕೊಂಕಿರುವುದಿಲ್ಲ
ನೀವು ನಿಮ್ಮ ಸಂಗಾತಿಯನ್ನು ನಿಮ್ಮ ಮಿತಿಗೆ ಮೀರಿ ಪ್ರೀತಿಸುತ್ತಾ ಇರುತ್ತೀರಿ. ಅವರ ಕುರಿತಾಗಿ ನಿಮ್ಮ ಪ್ರೀತಿಯು ಯಾವುದೇ ರೀತಿಯಲ್ಲಿ ಕಡಿಮೆಯಿರುವುದಿಲ್ಲ. ನಿಮ್ಮ ಸಂಗಾತಿಯ ಕುರಿತಾಗಿ ನಿಮಗೆ ಯಾವುದೇ ಸಂದೇಹ, ಇತ್ಯಾದಿಗಳು ಇರುವುದಿಲ್ಲ. ಇಬ್ಬರೂ ತುಂಬಾ ಒಳ್ಳೆಯವರಾಗಿರುತ್ತೀರಿ. ನಿಮ್ಮ ಕನಸುಗಳು ಅಸ್ಪಷ್ಟವಾಗಿರುತ್ತವೆ. ಏಕೆಂದರೆ ನೀವಿಬ್ಬರೂ ಈಗ ತಾನೇ ಒಂದಾಗಿರುತ್ತೀರಿ.

ಅವರ ಕುರಿತಾಗಿ ನಿಮಗೆ ಯಾವುದೇ ಕೋಪ ಇರುವುದಿಲ್ಲ
ಅವರ ಬೆವರಿನಿಂದ ಹಿಡಿದು, ಕೆಟ್ಟ ಧ್ವನಿ ಎಲ್ಲವನ್ನೂ ನೀವು ಇಷ್ಟಪಡುತ್ತೀರಿ. ಅವರ ತಲೆದಿಂಬಿನೊಳಗೆ ಮೂಸಿ ನೋಡಿದರು, ನಿಮಗೆ ಯಾವುದೇ ಕೆಟ್ಟ ವಾಸನೆ ಕಂಡು ಬರುವುದಿಲ್ಲ. ಈ ಕಾಲ ಮುಗಿದ ಮೇಲೆ, ಅವೆಲ್ಲವೂ ನಿಮಗೆ ಲೋಪ ದೋಷಗಳಾಗಿ ಕಂಡ ಬರುತ್ತವೆ. ಅವುಗಳ ಕುರಿತು ನಿಮಗೆ ಕೋಪ ಬರುತ್ತದೆ.

ನಿಮ್ಮ ಗಮನ ಪರಸ್ಪರರ ಮೇಲೆ ಇರುತ್ತದೆ
ಈ ಅವಧಿಯಲ್ಲಿ ನಿಮ್ಮ ಸಂಪೂರ್ಣ ಗಮನ ಪರಸ್ಪರರ ಮೇಲೆ ಕೇಂದ್ರೀಕೃತವಾಗಿರುತ್ತದೆ. ನೀವು ಆಟವಾಡಲು ಹೋಗುವುದಿಲ್ಲ, ಫೇಸ್ ಬುಕ್ ಅಥವಾ ಸ್ನೇಹಿತರಿಗೆ ಕರೆ ಮಾಡುವುದು ಇನ್ನೂ ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಯಾವುದನ್ನೂ ಮಾಡುವುದಿಲ್ಲ. ಈ ಮಧುಚಂದ್ರದ ಅವಧಿ ಮುಗಿದ ಮೇಲೆ, ನಿಮಗೆ ಎಲ್ಲವೂ ನೆನಪಿಗೆ ಬಂದು ನಿಮ್ಮ ಗಮನ ಬೇರೆ ಕಡೆಗೆ ಸಾಗುತ್ತದೆ.

ನೀವು ಪರಸ್ಪರರನ್ನು ಗೌರವಿಸುತ್ತೀರಿ
ನಿಮ್ಮ ಸಂಗಾತಿಯು ನಿಮಗೆ ಅತ್ಯಂತ ಗೌರವಾರ್ಹ ವ್ಯಕ್ತಿಯಾಗಿರುತ್ತಾರೆ. ಅದರಲ್ಲೂ ಮಧುಚಂದ್ರದ ಅವಧಿಯಲ್ಲಿ ಅವರಿಗೆ ನಿಮ್ಮ ಕಡೆಯಿಂದ ರಾಜ ಮರ್ಯಾದೆ ದೊರೆಯುತ್ತಿರುತ್ತದೆ. ಆನಂತರ ಅವರನ್ನು ನೀವು ರೇಗಿಸುವುದು, ಚುಡಾಯಿಸುವುದರ ಜೊತೆಗೆ ಹೀಯಾಳಿಸುವುದು ಸಹ ಆರಂಭಗೊಳ್ಳುತ್ತದೆ.

"ನಿಮ್ಮದು ಏಳೇಳು ಜನ್ಮದ ಸಂಬಂಧ" ಎಂಬ ಭಾವನೆ
ನಿಮಗೆ ಈ ಅವಧಿಯಲ್ಲಿ ಮೇಡ್ ಫಾರ್ ಈಚ್ ಅದರ್ ಎಂಬ ಭಾವನೆ ಬರುತ್ತದೆ. ನಿಮ್ಮದು ಏಳೇಳು ಜನ್ಮದ ಸಂಬಂಧ, ನೀವಿಬ್ಬರೂ ಹುಟ್ಟಿರುವುದು ಕೂಡಿ ಬಾಳಲು ಎಂಬ ಭಾವನೆ ಇರುತ್ತದೆ. ಹೀಗೆ ನೀವು ಏಕಾಂತದಲ್ಲಿ ಕಳೆಯುತ್ತೀರಿ. ನಂತರ ತಪ್ಪಿಸಿಕೊಂಡು ಓಡಲು ನೋಡುತ್ತೀರಿ.



Click it and Unblock the Notifications











