Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ಗಂಡನ ಲೇಟ್ ನೈಟ್ ಡ್ಯೂಟಿಯ ವಿಚಾರದಲ್ಲಿ ಎಚ್ಚರ ತಪ್ಪದಿರಿ
ಕೆಲವರು ತಮ್ಮ ವೃತ್ತಿಯ ಕುರಿತಾಗಿ ಅತೀವ ಮಹತ್ವಾಕಾಂಕ್ಷೆಗಳನ್ನು ಇರಿಸಿಕೊಂಡಿರುತ್ತಾರೆ. ಅದಕ್ಕಾಗಿ ಅವರು ಕಚೇರಿಯಲ್ಲಿ ತುಂಬಾ ಹೊತ್ತು ಕೆಲಸ ಮಾಡುತ್ತಾ, ತಡವಾಗಿ ಮನೆಗೆ ಬರುತ್ತಾರೆ. ಅವರು ಹಾಗೆ ತಡವಾಗಿ ಮನೆಗೆ ಬಂದಾಗ ಹೆಂಡತಿ ಎಂದೆನಿಸಿದ ನೀವು ಏನು ಮಾಡುತ್ತೀರಿ? ನೂರಾರು ಪ್ರಶ್ನೆ ಅವರ ಮುಂದಿಡಲು ಪ್ರಯತ್ನಿಸುತ್ತೀರಿ ಅಲ್ಲವೇ?
ಸಾಮಾನ್ಯವಾಗಿ ಮನೆಗೆ ತಡವಾಗಿ ಬರುವುದಕ್ಕೆ ನಿಮ್ಮ ಯಜಮಾನರಲ್ಲಿ ಸಾಕಷ್ಟು ಕಾರಣಗಳಿರಬಹುದು. ಕೆಲವರು ಸ್ನೇಹಿತರು ಮತ್ತು ಪಾರ್ಟಿ ಎಂದುಕೊಂಡು ತಡವಾಗಿ ಬರಬಹುದು ಇನ್ನೂ ಕೆಲವರು ನೇರವಾಗಿ ಬಾರ್‌ಗೆ ಹೋಗಿ ಕುಡಿದು ಮನೆಗೆ ಬರಬಹುದು!
ಇನ್ನೂ ಕೆಲವರು ತಮ್ಮ ಮನೋರಂಜನೆಗಾಗಿ ಬೇರೆ ಕಡೆ ಸಹ ಹೋಗುವ ಅಭ್ಯಾಸವನ್ನು ಇರಿಸಿಕೊಂಡಿರುತ್ತಾರೆ. ಅವರಿಗೆ ವಿವಾಹೇತರ ಸಂಬಂಧಗಳು ಇರಬಹುದು, ಇಂತಹ ವಿಚಾರಗಳು ಅವರ ಸಂಜೆಯ ಸಮಯಗಳನ್ನು ಕಸಿದುಕೊಳ್ಳುತ್ತವೆ. ಇನ್ನು ಬಹುತೇಕ ಮಂದಿ, ತಮ್ಮ ಹೆಂಡತಿಯನ್ನು ನೋಡಿದರೆ ಹಿಡಿಸದವರು, ಬೇಕೆಂದು ತಡವಾಗಿ ಮನೆಗೆ ಆಗಮಿಸುತ್ತಾರೆ. ಇಂತಹವರು ಹೆಂಡತಿಯಿಂದ ಹಲವಾರು ಕರೆ ಮತ್ತು ಸಂದೇಶಗಳು ಬಂದ ಮೇಲೆಯೇ ಮನೆ ಕಡೆ ಸಾಗುತ್ತಾರೆ.

ಹಾಗಾಗಿ ಇನ್ನು ಮುಂದೆ ನಿಮ್ಮ ಗಂಡ ತಡವಾಗಿ ಮನೆಗೆ ಆಗಮಿಸಲು ಶುರು ಮಾಡಿದರೆ ಮೊದಲು ಅದರ ಹಿಂದಿನ ಕಾರಣವನ್ನು ಕಂಡು ಹಿಡಿಯಲು ಪ್ರಯತ್ನಿಸಿ. ಆಗ ಏನು ಮಾಡಬಹುದು ಎಂಬುದಕ್ಕೆ ಈ ಕೆಳಗಿನ ಅಂಶಗಳನ್ನು ಒಮ್ಮೆ ಗಮನಿಸಿ: ಅಯ್ಯೋ ದೇವರೆ ನನಗೆ ಎಂತಹ ಗಂಡ ಸಿಕ್ಕಿ ಬಿಟ್ಟ!
ಒಂದು ವೇಳೆ ಆತನ ವೃತ್ತಿಗೆ ಸಂಬಂಧಿಸಿದ್ದರೆ
ಮೊದಲಿಗೆ ಆತನಿಗೆ ಇರುವ ಆಸಕ್ತಿಗಳನ್ನು ಗಮನಿಸಿ,ಅದನ್ನು ಬೆಂಬಲಿಸಿ. ನಿಮ್ಮ ಗಂಡ ವೃತ್ತಿಯಲ್ಲಿ ಏಳಿಗೆ ಹೊಂದುವ ಸಲುವಾಗಿ ತಡವಾಗಿ ಆಗಮಿಸಿದರೆ, ಆತನಿಗೆ ಬೆಂಬಲವನ್ನು ನೀಡಿ. ಜೊತೆಗೆ ಆತನ ಆರೋಗ್ಯ ಮತ್ತು ಕುಟುಂಬದ ಕುರಿತಾದ ಕಾಳಜಿಯನ್ನು ಮನವರಿಕೆ ಮಾಡಿಕೊಡಿ. ಮನೆಯಲ್ಲಿ ಕುಳಿತು ಕೆಲಸ ಮಾಡುವಂತೆ ಪ್ರೋತ್ಸಾಹಿಸಿ. ಕೆಲಸದ ಒತ್ತಡದಲ್ಲಿ ಮನೆಯನ್ನು ಮರೆಯದಂತೆ ತಿಳಿಹೇಳಿ. ಇದರಿಂದ ನಿಮ್ಮ ಸಂಬಂಧದ ಮೇಲೆ ಸಹ ಪರಿಣಾಮ ಬೀರುತ್ತದೆ ಎಂದು ಸಹ ತಿಳಿಸಿ.
ಒಂದು ವೇಳೆ ಆತನ ಸ್ನೇಹಿತರಾಗಿದ್ದಲ್ಲಿ
ಆತನಿಗೆ ಹೇಳಿ ಸ್ನೇಹಿತರ ಜೊತೆ ಒಡನಾಡುವುದು ತಪ್ಪಲ್ಲ, ಆದರೆ ಅವರ ಜೊತೆ ಸುತ್ತಡುವುದಕ್ಕಾಗಿ ದಿನಾಲೂ ಮನೆಗೆ ತಡವಾಗಿ ಬರುವುದು ತಪ್ಪು ಎಂದು ಹೇಳಿ. ಅವರಿಗೆ ನೀಡುವ ಸಮಯವನ್ನು ಸ್ವಲ್ಪ ಕಡಿತ ಮಾಡಲು ತಿಳಿಸಿ. ಜೊತೆಗೆ ಆತನಿಗೆ ಹೇಳಿ, ಕುಟುಂಬಕ್ಕೆ ಮೊದಲ ಆಧ್ಯತೆಯನ್ನು ನೀಡಿ, ಸ್ನೇಹಿತರಿಗೆ ಎರಡನೆ ಆಧ್ಯತೆ ನೀಡುವಂತೆ ತಿಳಿಸಿ.
ಒಂದು ವೇಳೆ ಆತನಿಗೆ ಚಟಗಳಿದ್ದಲ್ಲಿ
ಚಟಗಳ ಸಲುವಾಗಿ ಆತ ತಡವಾಗಿ ಮನೆಗೆ ಬರುತ್ತಿದಲ್ಲಿ, ಮೊದಲು ಆತನಿಗೆ ಹೇಳಿ ಚಟವನ್ನು ತ್ಯಜಿಸುವಂತೆ. ಚಟಗಳನ್ನು ಜಾಗರೂಕತೆಯಿಂದ ನಿಭಾಯಿಸಬೇಕು ಏಕೆಂದರೆ ಚಟಗಳು, ಆರೋಗ್ಯ ಮತ್ತು ಸಂಬಂಧ ಎರಡನ್ನೂ ಹಾಳು ಮಾಡುತ್ತವೆ. ಗಂಡನ ಪ್ರೀತಿ ಇತ್ತೀಚೆಗೆ ಮರೀಚಿಕೆಯಾಗುತ್ತಿದೆಯೇ?
ಮತ್ತೊಬ್ಬಳ ಸಲುವಾಗಿ
ಒಂದು ವೇಳೆ ನಿಮ್ಮ ಗಂಡ ಮತ್ತೊಬ್ಬಾಕೆಯ ಸಲುವಾಗಿ ಮನೆಗೆ ತಡವಾಗಿ ಬಂದರೆ, ಅದು ಆತನ ಹೆಂಡತಿಗೆ ಸೇರಿದ ವಿಚಾರ. ಆಕೆ ಆತನನ್ನು ಕ್ಷಮಿಸುತ್ತಾಳೋ ಅಥವಾ ಸಂಬಂಧವನ್ನು ಕಡಿದುಕೊಂಡು ಮುಂದೆ ಸಾಗುತ್ತಾಳೋ, ಅದನ್ನು ಆಕೆಯೇ ನಿರ್ಧರಿಸಬೇಕು.



Click it and Unblock the Notifications











