Latest Updates
-
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ
ಮಹಿಳೆಯರಲ್ಲಿ ಕೋಪತರಿಸುವ ವಿಚಾರಗಳೇನು?
ಹೊಸತಾಗಿ ಮದುವೆಯ ಬಂಧನಕ್ಕೆ ಒಳಗಾದಾಗ ತಮ್ಮ ತಮ್ಮ ಸಂಗಾತಿಗಳ ಉತ್ತಮ ಗುಣಗಳೇ ಕಣ್ಣಿಗೆ ಕಾಣುತ್ತದೆ. ಆದರೆ ಪ್ರತಿ ಮನುಷ್ಯರಲ್ಲಿಯೂ ಹಲವು ದೌರ್ಬಲ್ಯಗಳಿರುತ್ತವೆ. ಕಾಲ ಕಳೆದಂತೆ ಈ ದೌರ್ಬಲ್ಯಗಳು ಸಂಗಾತಿಯನ್ನು ತಿರಸ್ಕರಿಸಲೂ ಕಾರಣವಾಗಬಹುದು. ನಿಮ್ಮ ಸಂಗಾತಿಯನ್ನು ಅರಿತುಕೊಳ್ಳುವುದು ಮುಖ್ಯವಾದರೆ ಸಂಗಾತಿಗಾಗಿ ತಮ್ಮ ಕೆಲ ಗುಣಗಳನ್ನು ಬದಲಿಸಿಕೊಳ್ಳಬೇಕಾಗಿ ಬರಬಹುದು. ಆದರೆ ಈ ಬದಲಾವಣೆ ಕೇವಲ ನಾಟಕ ಎಂದು ಅರಿತ ಬಳಿಕ ಸಂಗಾತಿಯ ಮನ ಮುದುಡಬಹುದು.
ಸಂಬಂಧಗಳಲ್ಲಿ ಹಲವಾರು ವಿಭಿನ್ನತೆಗಳಿವೆ. ವೈಶಿಷ್ಟ್ಯತೆಗಳಿವೆ. ಅದರಲ್ಲೂ ಗಂಡ ಹೆಂಡತೆ ಸಂಬಂಧ ಅತ್ಯಂತ ಮಾರ್ಮಿಕವಾದುದು. ಮದುವೆಯಾದಾಗಿನಿಂದ ಜೀವನದ ಕೊನೆಯವರೆಗೂ ಒಬ್ಬರಿಗೊಬ್ಬರು ಕಷ್ಟ ಸುಖಗಳನ್ನು ಹಂಚಿಕೊಂಡು ಬದುಕು ನಡೆಸುವವರೆಂದರೆ ಪತಿ - ಪತ್ನಿ ಮಾತ್ರ. ದಂಪತಿಗಳಾದಾಗಿನಿಂದ ಒಬ್ಬರನ್ನೊಬ್ಬರು ಅರಿತು ಬಾಳ್ವೆ ನಡೆಸುವುದು ಅತ್ಯಂತ ಮುಖ್ಯ. ಹೀಗೆ ಒಟ್ಟಾಗಿ ಬದುಕಬೇಕಾದರೆ ಅವರ ನಡುವೆ ಪ್ರಾಮಾಣಿಕತೆ, ಪರಸ್ಪರ ನಂಬಿಕೆ ಇರಬೇಕಾದುದು ಅತ್ಯಗತ್ಯ. ಮದುವೆಯ ಬಳಿಕ ಹುಡುಗಿಯರು ಏಕೆ ಇಷ್ಟೊಂದು ಬದಲಾಗಿ ಬಿಡುತ್ತಾರೆ?
ಸಂಬಂಧಗಳು ಎರಡು ವ್ಯಕ್ತಿಗಳ ಸಾಮರಸ್ಯ ಮಿಶ್ರಣದ ಬಗ್ಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಎರಡು ವ್ಯಕ್ತಿಗಳು ಒಗ್ಗೂಡಿದಾಗ, ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯ ಬಗ್ಗೆ ಕೀಳುಭಾವನೆಯಿಂದ ಕಾಣಬಾರದು ಅಥವ ಯಾವ ತೊಂದರೆಯನ್ನೂ ಕೊಡಬಾರದು. ಆದರೆ ಕೆಲವು ಪುರುಷರು ತಮ್ಮ ಗುಣಗಳಿಂದ ಮತ್ತು ಕಾರ್ಯಗಳಿಂದ ಅಡ್ಡಪರಿಣಾಮವುಂಟಾಗುವುದೆಂದು ತಿಳಿದಿರುವುದಿಲ್ಲ. ತಾಔಉ ಹೋದದೇ ದಾರಿ ಎನ್ನುವ ರೀತಿಯಲ್ಲಿ ವರ್ತಿಸ ತೊಡಗುತ್ತಾರೆ. ಬನ್ನಿ ನಾವು ಪುರುಷರಲ್ಲಿರುವ ಯಾವ ಗುಣಗಳಿಂದ ಮಹಿಳೆಯರಿಗೆ ಕೋಪಬರುತ್ತದೆ ಎಂಬುದನ್ನು ವಿಮರ್ಶಿಸೋಣ. ...

ಸುಳ್ಳು ಹೇಳುವುದು
ಪ್ರತಿಯೊಂದು ಸಂಬಂಧದಲ್ಲಿ ಏರು-ಪೇರುಗಳು ಇರುವುದು ಸಹಜ. ಪರಿಸ್ಥಿತಿಯನ್ನು ನಿಭಾಯಿಸಲು ನೀವು ಸುಳ್ಳು ಹೇಳುತ್ತೀರಿ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ತಮ್ಮ ಕುತ್ತಿಗೆಗೆ ಬಂದಾಗ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಹಲವರು ತಮ್ಮ ಸಂಗಾತಿಗೆ ಸುಳ್ಳು ಹೇಳಿ ಇದನ್ನು ನಿಭಾಯಿಸುತ್ತಾರೆ. ಆದರೆ ನಿಮ್ಮ ಪ್ರೀತಿ ಸದೃಢವಾಗಿ ಬೆಳೆಯಬೇಕು ಎಂದಾದಲ್ಲಿ, ನಿಮ್ಮ ಸಂಗಾತಿಗೆ ಇದರಿಂದ ನೋವುಂಟಾಗುತ್ತದೆ ಎಂದು ಗೊತ್ತಿದ್ದರು ಸಹ ಸುಳ್ಳನ್ನು ಹೇಳಲು ಹೋಗಬೇಡಿ. ಆ ಅಭ್ಯಾಸವನ್ನು ಅಪ್ಪಿ ತಪ್ಪಿ ಸಹ ಬಳಸಿಕೊಳ್ಳಲು ಹೋಗಬೇಡಿ. ಸಾಮಾನ್ಯವಾಗಿ ಪ್ರಾಮಾಣಿಕತೆಯನ್ನು ಮಹಿಳೆಯರು ಇಷ್ಟಪಡುವ ಲಕ್ಷಣಗಳಲ್ಲಿ ಒಂದಾಗಿದೆ. ಒಬ್ಬ ಪುರುಷನು ಸುಳ್ಳುಹೇಳುತ್ತಿದ್ದಾನೆಂದು ಗೊತ್ತಾದಾಗ ಅವನ ಬಗ್ಗೆ ಗೌರವಿಸುವ ಭಾವ ಇರುವುದಿಲ್ಲ. ನಿಮ್ಮ ಜೀವನದ ಸಂಬಂಧದಲ್ಲಿ ಎಂದೂ ಅಪ್ರಾಮಾಣಿಕತೆಯಿಂದ ನಡೆದುಕೊಳ್ಳದೆ ಇರುವುದನ್ನು ಖಚಿತಪಡಿಸಿಕೊಳ್ಳಿ.
ಮದ್ಯಪಾನದ ಚಟ
ಮದ್ಯಪಾನದ ಚಟವಿದ್ದರೆ ನಿಮ್ಮ ಜೀವನ ಒಂದು ನರಕವಾಗಬಹುದು. ಕೆಲವು ಪುರುಷರಿಗೆ ಮಹಿಳೆಯು ಥಟಕ್ಕನೇ ಏಕೆ ದೂರ ನಡೆದು ಹೋಗುತ್ತಾಳೆ ಎಂದು ಆಶ್ಚರ್ಯಪಡುತ್ತಾರೆ. ನಿಜ ಹೇಳಬೇಕೆಂದರೆ ಮದ್ಯಪಾನದ ಚಟದಿಂದ ವೈವಾಹಿಕ ಸಂಬಂಧವೇ ಇದ್ದಕಿದ್ದಂತೆ ಮುರಿದುಹೋಗುತ್ತದೆ. ಯಾವುದೇ ಮಹಿಳೆಯು ಮದ್ಯಸಾರೀಯ ಪತಿಯಿಂದಾದ ಹಾನಿಯನ್ನು ಒಪ್ಪಿಕೊಳ್ಳುವುದಿಲ್ಲ.
ಅವಮಾನ
ಒಬ್ಬ ಪುರುಷನು ತನ್ನ ಪತ್ನಿಯನ್ನಾಗಲೀ ಅಥವ ತನ್ನ ಗೆಳತಿಯನ್ನಾಗಲೀ ಸದಾ ಅವಮಾನಪಡಿಸುತ್ತಿದ್ದರೆ, ಅಂತಹ ಪತ್ನಿಯಾಗಲೀ ಅಥವಾ ಗೆಳತಿಯಾಗಲೀ ತನ್ನ ಭವಿಷ್ಯದ ಬಗ್ಗೆ ಯಾವ ರೀತಿಯ ಯೋಜನೆಗೆ ಅವಕಾಶವಿರುವುದಿಲ್ಲ. ಅವಮಾನ ಆ ಮಹಿಳೆಯ ಸ್ವಾಭಿಮಾನದ ಮೇಲೆ ಪರಿಣಾಮಬೀಳುತ್ತದೆ. ಯಾವಾಗ ಇಂತಹ ಅವಮಾನಗಳು ದಿನ ನಿತ್ಯವಾದಲ್ಲಿ ಸಂಬಂಧಗಳು ಬಿಟ್ಟುಹೋಗುವ ಕಡೆ ಸಾಗುತ್ತದೆ.
ಹಿಂಸೆ
ಮಹಿಳೆಯು ತನ್ನ ಪುರುಷನಲ್ಲಿರುವ ಆಸಕ್ತಿಯನ್ನು ಏಕೆ ಕಳೆದುಕೊಳ್ಳುತ್ತಾಳೆ ಎಂದು ನಿಮಗೆ ಗೊತ್ತೇ? ಅಲೋಚನೆಗಳು, ಮಾತುಗಳು ಮತ್ತು ಕ್ರಿಯೆಗಳು ಇವುಗಳೆಲ್ಲಾ ಹಿಂಸೆಯಿಂದ ಕೂಡಿದ್ದರೆ ಸಾಮರಸ್ಯ ಸಂಬಂಧಗಳಿಗೆ ಹೆಚ್ಚು ಹಾನಿಕರವಾಗಿರುತ್ತದೆ. ಯಾವ ಮಹಿಳೆಯೂ ತನ್ನ ಸಂಬಂಧದಲ್ಲಿ ಹಿಂಸೆಯಿದ್ದರೆ ಸುಮ್ಮನೆ ಮೌನವಾಗಿ ಕೂಡುವುದಿಲ್ಲ.



Click it and Unblock the Notifications











