Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಜಗಳ, ಕಲಹ, ಕದನ ಒಳ್ಳೆಯದಲ್ಲ ಒಪ್ಪುತ್ತೀರಿ ಅಲ್ಲವೇ?
ಮರಿಯಾಗಿದ್ದಾಗ ಕತ್ತೆಯೂ ಮುದ್ದಾಗಿಯೇ ಇರುತ್ತದೆ, ಅಂತೆಯೇ ಹೊಸತರಲ್ಲಿ ಮದುವೆಯಾದಗಲೂ ಅಷ್ಟೇ, ಕಣ್ಣಿಗೆ ಕಂಡದೆಲ್ಲಾ ಎಲ್ಲವೂ ಸುಂದರ, ಸತ್ಯ ಎಂದೇ ತೋರುತ್ತದೆ. ಆದರೆ ಕೆಲ ಕಾಲ ಕಳೆದಂತೆ ಮದುವೆಯ ಅಮಲು ಇಳಿಯುತ್ತಿದ್ದ ಹಾಗೇ ನಿಜಜೀವನದ ಪರಿಸ್ಥಿತಿ ಹೆಚ್ಚು ಹೆಚ್ಚು ಎದುರಾಗುತ್ತಿದ್ದಂತೆ, ಸಣ್ಣ ಪುಟ್ಟ ಸಮಸ್ಯೆಗಳು ಮನೆಯಲ್ಲಿ ರಣರಂಗವೇ ಆಗಿಬಿಡುತ್ತದೆ...!
ಇತ್ತೀಚೆನ ದಿನಗಳಲ್ಲಿ ದಂಪತಿಗಳ ನಡುವೆಯೂ ನೂರಾರು ವಿಷಯಗಳನ್ನು ಕುರಿತು ಕೋಳಿಜಗಳ ನಡೆಯುತ್ತಲೇ ಇರುತ್ತದೆ, ಮತ್ತು ಇರಬೇಕು ಸಹಾ. ಸುಖದಾಂಪತ್ಯಕ್ಕೆ ಚಿಕ್ಕ ಪುಟ್ಟ ಕಲಹವಿದ್ದರೆ ಊಟದಲ್ಲಿ ಉಪ್ಪಿನಕಾಯಿಯಂತೆ ಜೀವನ ಸುಂದರವಾಗಿರುತ್ತದೆ. ಆದರೆ ಒಂದು ವೇಳೆ ಈ ಜಗಳ ಉಂಡು ಮಲಗಿದ ಬಳಿಕವೂ ಮುಂದುವರೆದರೆ ಮಾತ್ರ ಜಗಳ ಕಲಹಕ್ಕೆ ತಿರುಗಿ, ಕಲಹ ಕದನಕ್ಕೆ ತಿರುಗಿ ಕದನ ವಿರಹದವರೆಗೂ ಮುಂದುವರೆಯಬಹುದು. ಹಾಗಾಗಿ ಸಂಗಾತಿಗಳು ತಮ್ಮ ದೃಷ್ಟಿಕೋನವನ್ನು ಕೊಂಚ ಬದಲಿಸಿ ಬೇರೆ ದೃಷ್ಟಿಯಿಂದ ನೋಡಿದರೆ ಖಂಡಿತ ಸುಖಕರ ಸಂಸಾರ ನಡೆಸಲು ಸಹಾಯಕವಾಗಲಿದೆ.

ಮಾತು ಕಡಿಮೆ ಮಾಡಿ ಹೆಚ್ಚು ಕೇಳಿರಿ
ಸಾಮಾನ್ಯವಾಗಿ ಜಗಳ ಮಾಡುತ್ತಿರುವವರು ಸಿಟ್ಟಿಗೆದ್ದಿರುವ ಕಾರಣ ಅವರ ಮಾತುಗಳೂ ತಾರಕ ಸ್ವರದಲ್ಲಿರುತ್ತವೆ. ಈ ತಾರಕ ಸ್ವರ ಕೇಳಿದಾಕ್ಷಣ ಎದುರಿನ ವ್ಯಕ್ತಿಗೂ ಸಿಟ್ಟು ಏರಿ ತಮ್ಮ ಸ್ವರವನ್ನೂ ತಾರಕಕ್ಕೇರಿಸುತ್ತಾರೆ. ಇದೇ ಜಗಳದ ಅತ್ಯಂತ ದೊಡ್ಡ ತಪ್ಪು. ಜಾಣತನದ ಕ್ರಮವೆಂದರೆ ಸಿಟ್ಟಿಗೆದ್ದಿರುವ ವ್ಯಕ್ತಿಗೆ ತನ್ನ ಮಾತನ್ನು ಪೂರ್ಣಗೊಳಿಸಲು ಬಿಡುವುದು, ಎದುರಿನ ವ್ಯಕ್ತಿ ತಾಳ್ಮೆಯಿಂದ, ತಾನು ಮಾತನಾಡದೇ ಎದುರಿನ ವ್ಯಕ್ತಿ ಹೇಳಿದ ಎಲ್ಲಾ ಮಾತುಗಳನ್ನೂ ಪೂರ್ಣವಾಗಿ ಕೇಳುವುದು. ಮನಃಶಾಸ್ತ್ರಜ್ಞರ ಪ್ರಕಾರ ಸಿಟ್ಟಿನಲ್ಲಿರುವ ವ್ಯಕ್ತಿಯು ತನ್ನ ಮಾತುಗಳನ್ನು ಪೂರ್ಣಗೊಳಿಸಿದರೆ ಸಿಟ್ಟು ತಣ್ಣಗಾಗುತ್ತಾ ಹೋಗುತ್ತದೆ, ಮತ್ತು ಪೂರ್ಣಗೊಳಿಸಲು ಬಿಡದಿದ್ದರೆ ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ. ಈ ವಾಸ್ತವವನ್ನು ಅರಿತರೆ ಜಗಳ ಕೊನೆಗೊಳಿಸಲು ಕೆಲವೇ ನಿಮಿಷಗಳು ಸಾಕು. ಎದುರಿನ ವ್ಯಕ್ತಿ ಹೇಳಿದ ಮಾತುಗಳನ್ನು ಪೂರ್ಣವಾಗಿ ಆಲಿಸಿ ಮುಗಿದ ಬಳಿಕವೇ ತಮ್ಮ ಮಾತುಗಳನ್ನು ಪೂರ್ಣಗೊಳಿಸಿ ನಡುವೆ ತುಂಡರಿಸದಂತೆ ಕೇಳಿಕೊಳ್ಳಬೇಕು. ಶೇಖಡಾ ತೊಂಬತ್ತಕ್ಕೂ ಹೆಚ್ಚು ಜಗಳಗಳು ಇಲ್ಲಿಯೇ ಮುಕ್ತಾಯಗೊಂಡು ಶಾಂತಿಯುತವಾಗಿ ರಾಜಿಗೊಳ್ಳುತ್ತವೆ.
ಬೈಗುಳದ ಪದಗಳನ್ನು ಬಳಸಬೇಡಿ
ಸಿಟ್ಟಿಗೆದ್ದ ವ್ಯಕ್ತಿ ಜಗಳದಲ್ಲಿ ತನಗೆ ಗೊತ್ತಿರುವ ಕೆಟ್ಟ ಪದಗಳನ್ನೆಲ್ಲಾ ಬಳಸುತ್ತಾರೆ. ವಿಶ್ವದ ಯಾವುದೇ ದೇಶಕ್ಕೆ ಹೋದರೂ ಇದು ಸಾಮಾನ್ಯ. ಆದರೆ ಇದರ ಪರಿಣಾಮ ಮಾತ್ರ ಎದುರಿನ ವ್ಯಕ್ತಿಯ ಮೇಲೆ ಅಪಾರವಾಗಿ ಬಿದ್ದು ಆತನ ಸ್ನೇಹ ಮತ್ತು ಮುಂದಿನ ದಿನಗಳಲ್ಲಿ ದೊರಕಬಹುದಾದ ಎಲ್ಲಾ ಸಹಕಾರ, ಸಹಾಯಗಳಿಗೂ ಸಂಚಕಾರ ಉಂಟಾಗುತ್ತದೆ. ಒಂದು ವೇಳೆ ಸಿಟ್ಟಿನ ಭರದಲ್ಲಿ ಕೆಟ್ಟ ಪದಗಳನ್ನು ಉಪಯೋಗಿಸಿದ್ದೇ ಆದರೆ ಜಗಳದ ಬಳಿಕ ಸಮಾಧಾನಭಾವದಿಂದ ಆ ಪದಗಳನ್ನು ಉಪಯೋಗಿಸಿದ ಬಗ್ಗೆ ಕ್ಷಮಾಪಣೆ ಕೇಳಿ. ಇದು ಇಬ್ಬರಿಗೂ ಉತ್ತಮ.
ಎಷ್ಟೋ ಕೊಲೆಗಳ ಕಾರಣವನ್ನು ಕೆದಕಿದಾಗ ಕೊಲೆಪಾತಕಿಗಳು ತಮನ್ನು ಬೈದ ಆ ಪದಗಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಸೇಡು ತೀರಿಸಿಕೊಂಡೆ ಎಂದು ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾರೆ. ನಿಮ್ಮ ಪ್ರೀತಿ ಪಾತ್ರರು ಏಕಾಗಿ ನಿಮಗೆ ಪ್ರೀತಿಪಾತ್ರರಾಗಿದ್ದಾರೆ ಎಂದು ನೆನಪಿನಲ್ಲಿಡಿ ಈ ಜಗತ್ತಿನಲ್ಲಿ ಎಲ್ಲಾ ಒಳ್ಳೆಯ ಗುಣಗಳೇ ಇರುವ ವ್ಯಕ್ತಿಯೇ ಇಲ್ಲ. ನೀವು ಅಪಾರವಾಗಿ ಪ್ರೀತಿಸುವ ವ್ಯಕ್ತಿಯಲ್ಲಿಯೂ ಕೆಲವು ಅವಗುಣಗಳಿವೆ. ಆದರೆ ಜಗಳದ ಸಮಯದಲ್ಲಿ ನಮ್ಮೆಲ್ಲರ ವಿವೇಕ ತಳಕ್ಕೆ ಮುಳುಗಿ ಸಿಟ್ಟಿನ ಭರದಲ್ಲಿ ಆ ವ್ಯಕ್ತಿಯ ಅವಗುಣಗಳೇ ಎದ್ದು ಕಾಣುತ್ತವೆ. ಸಿಟ್ಟು ಏರುತ್ತಿದೆ ಎಂದು ಗೊತ್ತಾದ ತಕ್ಷಣ ಎದುರಿನ ವ್ಯಕ್ತಿಯ ಯಾವ ಗುಣಕ್ಕಾಗಿ ಅವರನ್ನು ಅಪಾರವಾಗಿ ಮೆಚ್ಚಿಕೊಂಡಿದ್ದೀರಿ ಎಂಬುದನ್ನು ನೆನಪು ಮಾಡಿಕೊಳ್ಳಿ. ಯಾವ ಮಾತನ್ನೂ ಆಡದೇ ಈ ಗುಣಗಳು ಒರೆಹಚ್ಚಿದ ಸಂದರ್ಭವನ್ನು ನೆನೆಸಿಕೊಳ್ಳಿ. ತಕ್ಷಣ ಸಿಟ್ಟಿನ ಭರದಲ್ಲಿ ತಳಸೇರಿದ್ದ ವಿವೇಕ ಮೇಲೆದ್ದು ಬರುತ್ತದೆ. ಶಾಂತಿಯಿಂದ ಜಗಳಕ್ಕೆ ಕಾರಣವನ್ನು ಹುಡುಕಿ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ.
ಜಗಳದ ಮೂಲಕ ಗೆಲುವು ಸಾಧಿಸಲು ಯತ್ನಿಸಬೇಡಿ
ಜಗಳ ಮೇಲೇರುತ್ತಿದ್ದಂತೆಯೇ ತಮ್ಮ ವಾದವನ್ನು ಸತ್ಯವೆಂದು ನಿರೂಪಿಸುವ ಭರದಲ್ಲಿ ಜಗಳ ಇನ್ನಷ್ಟು ಹೆಚ್ಚುತ್ತದೆ. ಒಂದು ರೀತಿಯಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿಯನ್ನು ಆರಿಸಲು ಯತ್ನಿಸಿದಂತೆ. ಬದಲಿಗೆ ಆಯಿತು, ನನ್ನದೇ ತಪ್ಪು, ಇದಕ್ಕೆ ಪರಿಹಾರ ಹೇಗೆ ಎಂದು ಶರಣಾಗತರಾಗಿಬಿಡಿ. ಗಂಡ ಹೆಂಡಿರ ನಡುವಣ ಜಗಳಗಳು ಈ ಮಾತು ಬರುತ್ತಿದ್ದಂತೆಯೇ ಥಟ್ಟನೇ ಮುಗಿದು ಪರಸ್ಪರ ಆಲಂಗಿಸಿಕೊಂಡ ಪ್ರಕರಣಗಳು ಲಕ್ಷಾಂತರ ಇವೆ. ನೆನಪಿಡಿ, ಜಗಳವನ್ನು ಮುಂದುವರೆಸದೇ ಸೋಲುವುದೇ ನಿಜವಾದ ಗೆಲುವು.
ಆತ್ಮೀಯವಾಗಿ ಸ್ಪರ್ಶಿಸಿ
ಸಾಮಾನ್ಯವಾಗಿ ಮಾತುಗಳ ಮೂಲಕ ಸಿಟ್ಟಿಗೆದ್ದಿರುವ ಸಂಗಾತಿಯನ್ನು ಆತ್ಮೀಯವಾದ ಸ್ಪರ್ಶ ಮತ್ತು ವಿಶೇಷವಾಗಿ ಆತ್ಮೀಯವಾದ ಅಪ್ಪುಗೆ ಕರಗಿ ನೀರಾಗಿಸಬಲ್ಲುದು. ವಿಶೇಷವಾಗಿ ದಂಪತಿಗಳಲ್ಲಿ ಒಬ್ಬರು ಅತಿ ಸೂಕ್ಷ್ಮ ಪ್ರವೃತ್ತಿಯವರಾದರೆ ಮಾತಿಗಿಂತಲೂ ಅವರನ್ನು ಸಂತೈಸಲು ಸ್ಪರ್ಶ್ವವೇ ಹೆಚ್ಚು ಪರಿಣಾಮಕಾರಿಯಾಗಿದೆ. ವಿಶೇಷವಾಗಿ ಕೈಗಳನ್ನು ಹಿಡಿದುಕೊಳ್ಳುವುದು, ಅವರ ಮಾತುಗಳನ್ನು ಕೇಳುವಾಗ ಭುಜದ ಮೇಲೆ ಕೈಹಾಕಿ ತಮ್ಮೆಡೆಗೆ ಒತ್ತಿಕೊಳ್ಳುವುದು, ಅವರ ತಲೆಯನ್ನು ತಮ್ಮ ಭುಜಕ್ಕೆ ಆನಿಸಿಕೊಳ್ಳಲು ಬಿಡುವುದು ಮೊದಲಾದವು ಸಿಟ್ಟನ್ನು ಕಡಿಮೆಗೊಳಿಸಲು ಸಮರ್ಥವಾದ ವಿಧಾನಗಳಾಗಿವೆ. ಒಂದು ವೇಳೆ ಈ ವಿಷಯದ ಕುರಿತು ನಿಮ್ಮಲ್ಲಿ ಅಮೂಲ್ಯವಾದ ಸಲಹೆಗಳಿದ್ದರೆ ಖಂಡಿತಾ ನಮಗೆ ಬರೆದು ತಿಳಿಸಿ. ಇದಕ್ಕಾಗಿ ಮುಖ್ಯ ಪುಟದ ಕೆಳಗಿರುವ ಕಮೆಂಟ್ಸ್ ಸ್ಥಳವನ್ನು ಬಳಸಿ.



Click it and Unblock the Notifications













