Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮದುವೆಗೆ ಮುಂಚೆ ಮುಜುಗರ ತರುವ ಪ್ರಶ್ನೆಯನ್ನು ಕೇಳಬೇಡಿ
ನಿಜ ಮದುವೆಗೆ ಮುಂಚೆ ಕೆಲವೊಂದು ಮುಜುಗರವನ್ನುಂಟು ಮಾಡುವ ವಿಚಾರಗಳನ್ನು ಭಾವಿ ಸಂಗಾತಿಯ ಬಳಿ ಚರ್ಚಿಸಲು ಹೋಗಬಾರದು. ಅವು ಎಷ್ಟೇ ಮುಖ್ಯವಾದ ವಿಚಾರವಾದರೂ ಕೂಡ ಕೆಲವೊಮ್ಮೆ , ನಿಮ್ಮ ಸಂಗಾತಿಗೆ ಮುಜುಗರವನ್ನುಂಟು ಮಾಡಬಹುದು. ಸಂಗಾತಿಗಳಾಗುವವರು ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಹಲವಾರು ವಿಚಾರಗಳನ್ನು ಚರ್ಚಿಸಬೇಕಾಗುತ್ತದೆ. ಇದರಿಂದ ಮುಂದೆ ಯಾವುದೇ ಸಮಸ್ಯೆಗಳು ನಿಮ್ಮ ಸಂಸಾರದಲ್ಲಿ ಎದುರಾಗುವುದಿಲ್ಲ.
ಮುಖ್ಯವಾದ ವಿಷಯವೇನೆಂದರೆ ಮದುವೆಯಾಗುವವರ ಬಳಿಯಲ್ಲಿ ಕೆಲವೊಂದು ವಿಚಾರಗಳನ್ನು ಯಾವುದೇ ಕಾರಣಕ್ಕು ಚರ್ಚಿಸಬಾರದು. ಆದರೂ ನಿಮ್ಮ ಮನಸ್ಸಿನಲ್ಲಿ ಕೆಲವೊಂದು ಪ್ರಶ್ನೆಗಳು ಕಾಡುತ್ತ ಇದ್ದಲ್ಲಿ, ಅದನ್ನು ಅವರ ಬಳಿ ಕೇಳಿ ಉತ್ತರ ತಿಳಿದುಕೊಳ್ಳುವುದು ಉತ್ತಮವಾದ ಆಲೋಚನೆಯೇ ಆದರೂ, ಅವರಿಗೆ ಮುಜುಗರ ತರಿಸುವಂತಹ ಪ್ರಶ್ನೆಗಳನ್ನು ಕೇಳುವಾಗ ಸ್ವಲ್ಪ ಜಾಗರೂಕರಾಗಿ, ಮನಸ್ಸಿಗೆ ಬೇಸರವಾಗದ ಮಾರ್ಗದಲ್ಲಿ ಕೇಳಬೇಕಾಗುತ್ತದೆ. ಬನ್ನಿ ಮುಜುಗರವನ್ನುಂಟು ಮಾಡುವ ಆ ಪ್ರಮುಖ ಪ್ರಶ್ನೆಗಳು ಯಾವುವು ಎಂದು ತಿಳಿದುಕೊಳ್ಳೋಣ...

ಅಸಹ್ಯ ಇತಿಹಾಸ
ಒಂದು ವೇಳೆ ನಿಮಗೆ ನಿಮ್ಮ ಕುರಿತಾಗಿ ಅಸಹ್ಯ ಹುಟ್ಟಿಸುವ ಇತಿಹಾಸವಿದ್ದಲ್ಲಿ, ಅದನ್ನು ನಿಮ್ಮ ಸಂಗಾತಿಯಾಗುವವರು ಕೇಳಿದಾಗ ಹೇಳಿ. ಅದನ್ನು ಮುಚ್ಚಿಡಲು ಹೋಗಬೇಡಿ. ಒಂದು ವೇಳೆ ಇಂತಹ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಇದ್ದರೆ, ಅದನ್ನು ನಿಮ್ಮ ಸಂಗಾತಿಯ ಬಳಿ ಕೇಳಿ ಉತ್ತರ ಪಡೆಯಿರಿ. ಏಕೆಂದರೆ ಮದುವೆಯಾಗುವ ಮುನ್ನ ಇಬ್ಬರು ಪರಸ್ಪರರನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಮದುವೆಯಾಗಬೇಕಾಗುತ್ತದೆ.
ಹಣಕಾಸು
ನಿಮ್ಮ ಸ್ವತ್ತುಗಳು ಮತ್ತು ಆದಾಯ ಏನಿದೆ? ಹಣಕಾಸು ವಿಚಾರವು ಪ್ರೀತಿಗೆ ಅವಶ್ಯಕತೆ ಇಲ್ಲ, ಆದರೆ ಮದುವೆಯಾದ ಮೇಲೆ ಇದರ ಅವಶ್ಯಕತೆ ತುಂಬಾ ಇರುತ್ತದೆ. ಆದ್ದರಿಂದ ಇದನ್ನು ನಿಮ್ಮ ಸಂಗಾತಿಯಾಗುವವರ ಬಳಿ ಚರ್ಚಿಸಬೇಕಾದ ಅಗತ್ಯವಿರುತ್ತದೆ.
ಚಟಗಳು
ಒಂದು ವೇಳೆ ನಿಮ್ಮ ಸಂಗಾತಿಗೆ ಯಾವುದಾದರು ಚಟಗಳು ಇದ್ದಲ್ಲಿ, ಅದರ ಕುರಿತು ಮತ್ತು ಅದನ್ನು ತ್ಯಜಿಸುವ ಕುರಿತು ಚರ್ಚಿಸುವುದು ತಪ್ಪಲ್ಲ.
ತೂಕ
ನಿಮ್ಮ ಸಂಗಾತಿಯು ಅಧಿಕ ತೂಕವಿದ್ದಲ್ಲಿ, ಅದನ್ನು ಕರಗಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಕೇಳಿ. ಇದು ತಪ್ಪಲ್ಲ, ಇದೇ ವಿಚಾರ ಸಣ್ಣಗೆ ಇರುವವರಿಗು ಅನ್ವಯವಾಗುತ್ತದೆ. ಆರೋಗ್ಯವು ಸುಖೀ ದಾಂಪತ್ಯಕ್ಕೆ ಅತ್ಯಂತ ಮುಖ್ಯ.
ಫಲವಂತಿಕೆ
ಗಂಡಸು ಮತ್ತು ಹೆಂಗಸು ಎಂಬ ಭೇದವಿಲ್ಲದೆ ಮದುವೆಗೆ ಮುನ್ನ ಫಲವಂತಿಕೆ ಕುರಿತು ಚರ್ಚಿಸಬಹುದು. ಇದನ್ನು ಚರ್ಚಿಸಲು ಯಾವುದೇ ಮುಜುಗರ ಪಡಬೇಕಿಲ್ಲ. ಇದಕ್ಕಾಗಿ ಆರೋಗ್ಯ ಪರೀಕ್ಷೆಗು ಸಹ ಒಳಪಡಬಹುದು. ಫಲವಂತಿಕೆ ಎಂಬುದು ವಿವಾಹದಲ್ಲಿ ಅತ್ಯಂತ ಮಹತ್ವದ ಅಂಶವಾಗಿರುತ್ತದೆ.



Click it and Unblock the Notifications
