ಯುವ ಜನತೆಗೆ ಮಾದರಿಯಾಗಿ ನಿಲ್ಲುವ ಸಿನಿತಾರೆಯರು

By Super

ಸಿನಿಮಾ ತಾರೆಯರನ್ನು ಜನತೆ ಎಂದಿಗೂ ಒಂದು ಆದರ್ಶವಾಗಿ ನೋಡುತ್ತಾರೆ. ಆದರೆ ವಾಸ್ತವ ಜಗತ್ತಿನಲ್ಲಿ ತೆರೆಯ ಮರೆಯಲ್ಲಿ ನಡೆಯುವ ಅವ್ಯವಹಾರ ಮತ್ತು ಒಳಜಗಳಗಳ ಬಗ್ಗೆ ಅರಿಯುತ್ತಿದ್ದಂತೆಯೇ ಈ ಆದರ್ಶ ಮಂಕಾಗುತ್ತದೆ.

ಅದರಲ್ಲೂ ಪ್ರೀತಿ ಪ್ರೇಮದ ರಾಯಭಾರಿಗಳಾಗಿರುವ ಚಿತ್ರತಾರೆಗಳು ತಮ್ಮ ವೈಯಕ್ತಿಕ ಜೀವದಲ್ಲಿ ಅದನ್ನು ಪಾಲಿಸದಿರುವುದನ್ನು ಕಂಡವರು ಚಿತ್ರರಂಗದ ಎಲ್ಲರೂ ಹೀಗೇ ಎಂಬ ಅಭಿಪ್ರಾಯ ತಾಳುತ್ತಾರೆ. ಆದರೆ ವಾಸ್ತವವಾಗಿ ಎಲ್ಲಾ ಕುಟುಂಬದಲ್ಲಿರುವಂತೆಯೇ ಚಿತ್ರರಂಗದಲ್ಲಿಯೂ ಹಲವಾರು ಆದರ್ಶ ದಂಪತಿಗಳಿದ್ದಾರೆ.

ಬಾಲಿವುಡ್ ಸುಂದರಿಯರಾದ ಕರೀನಾ ಕಪೂರ್, ಜಿನೀಲಿಯಾ ಡಿಸೋಜಾ ಮತ್ತು ಗೌರಿ ಖಾನ್ ರವರು ತಮ್ಮ ಕನಸಿನ ರಾಜಕುಮಾರರನ್ನು ಜೀವನಸಂಗಾತಿಗಳನ್ನಾಗಿ ಪಡೆದಂತೆ ತನಗೂ ಕನಸಿನ ರಾಜಕುಮಾರನೊಬ್ಬ ಬೇಕು ಎಂದು ಪ್ರತಿ ಹದಿಹರೆಯದ ಯುವತಿಯರಲ್ಲಿ ಕನಸು ಬಿತ್ತುತ್ತಾರೆ. ಇನ್ನೂ ನಿಗೂಢವಾಗಿ ಉಳಿದ ಸೆಲೆಬ್ರಿಟಿಗಳ ಸಾವಿನ ರಹಸ್ಯ!

ಇಂದು ಆದರ್ಶ ದಂಪತಿಗಳಾಗಿ ಕಂಡುಬರುವ ಜೋಡಿಗಳಲ್ಲಿ ಪ್ರಮುಖವಾಗಿರುವ ಶಾಹಿದ್ ಕಪೂರ್ ಮತ್ತು ಮೀರಾ ರಾಜಪೂತ್ ಪ್ರೇಮದಲ್ಲಿ ವಯಸ್ಸಿನ ಪಾತ್ರ ಮಹತ್ತರವಲ್ಲ ಎಂಬುದನ್ನು ಪ್ರಕಟಿಸಿದ್ದಾರೆ. ಇಬ್ಬರಲ್ಲಿ ಹದಿಮೂರು ವರ್ಷಗಳ ಅಂತರವಿದ್ದರೂ ಪ್ರೇಮ ಇದನ್ನು ಮೀರಿಸಿದೆ.

ಉತ್ತಮ ಸಂಬಂಧ ಹೊಂದಲು ಮತ್ತು ಜೀವನಪರ್ಯಂತ ಬದ್ಧತೆಯನ್ನು ಪಾಲಿಸಲು ಯಾವುದೊಂದು ಕಟ್ಟಳೆಗೆ ಕಟ್ಟುಬೀಳಬೇಕಾಗಿಲ್ಲ ಎಂದು ಇದು ಸಾಬಿತುಪಡಿಸುತ್ತದೆ. ಇಂತಹ ಇನ್ನೂ ಹಲವಾರು ಜೋಡಿಗಳು ಬಾಲಿವುಡ್‌ನಲ್ಲಿದ್ದು ಇತರರಿಗೆ ಮಾದರಿಯಾಗಿದ್ದಾರೆ. ಇವುಗಳಲ್ಲಿ ಪ್ರಮುಖವಾದ ಜೋಡಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಪ್ರೇಮ ಜಾತಿಯನ್ನು ನೋಡುವುದಿಲ್ಲ

ಪ್ರೇಮ ಜಾತಿಯನ್ನು ನೋಡುವುದಿಲ್ಲ

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಇಬ್ಬರೂ ವಿಭಿನ್ನ ಧರ್ಮಕ್ಕೆ ಸೇರಿದವರಾಗಿದ್ದರೂ ಪರಸ್ಪರ ಪ್ರೇಮ ಇವರ ನಡುವೆ ಗೋಡೆಯನ್ನು ಸೃಷ್ಟಿಸಲಿಲ್ಲ. ನಿಮ್ಮ ಧರ್ಮ ಭಿನ್ನವಾಗಿದ್ದರೂ ನಿಮ್ಮ ಪ್ರೇಮ ಅಪ್ಪಟವಾಗಿದ್ದರೆ ಈ ಜೋಡಿ ನಿಮಗೆ ಪ್ರೇರಣೆ ನೀಡುತ್ತದೆ.

ಪ್ರೇಮಕ್ಕೆ ವಯಸ್ಸಿನ ಅಂತರವೂ ಮುಖ್ಯವಲ್ಲ

ಪ್ರೇಮಕ್ಕೆ ವಯಸ್ಸಿನ ಅಂತರವೂ ಮುಖ್ಯವಲ್ಲ

ರಿತೇಶ್ ದೇಶಮುಖ್ ಮತ್ತು ಜಿನೀಲಿಯಾ ಡಿಸೋಜಾರವರ ನಡುವೆ ಒಂಬತ್ತು ವರ್ಷಗಳ ಅಂತರವಿದ್ದರೂ ಇವರ ವಿವಾಹದ ನಡುವೆ ಯಾವುದೇ ಅಡ್ಡಿ ಎದುರಾಗಲಿಲ್ಲ. ಪ್ರೇಮಿಗಳ ನಡುವೆ ಅಪ್ಪಟ ಪ್ರೇಮ ಮತ್ತು ಪರಸ್ಪರ ವಿಶ್ವಾಸ, ಬದ್ದತೆಗಳಿದ್ದರೆ ಅಲ್ಲಿ ವಯಸ್ಸಿನ ಅಂತರಕ್ಕೆ ಏನೂ ಕೆಲಸವಿಲ್ಲ.

ಅಪ್ಪಟ ಪ್ರೇಮ ಎರಡನೆಯ ಅವಕಾಶವನ್ನೂ ಬಳಸಿಕೊಳ್ಳುತ್ತದೆ!

ಅಪ್ಪಟ ಪ್ರೇಮ ಎರಡನೆಯ ಅವಕಾಶವನ್ನೂ ಬಳಸಿಕೊಳ್ಳುತ್ತದೆ!

ತಮ್ಮ ಪ್ರಥಮ ಪ್ರೇಮದಿಂದ ಸಂತುಷ್ಟಿ ಹೊಂದಿರದಿದ್ದ ಆಮಿರ್ ಖಾನ್ ತಮ್ಮ ಪ್ರಥಮ ಪತ್ನಿ ರೀನಾ ದತ್ತಾರಿಂದ 2002ರಲ್ಲಿ ದೂರಸರಿದ ಬಳಿಕ 2005ರಲ್ಲಿ ಕಿರಣ್ ರಾವ್ ರೊಂದಿಗೆ ಪ್ರೇಮವಿವಾಹವಾಗಿದ್ದಾರೆ. ಮೊದಲು ಮಾಂಸಾಹಾರಿಯಾಗಿದ್ದ ಅವರು ತಮ್ಮ ಪತ್ನಿಗಾಗಿ ಈಗ ಸಸ್ಯಾಹಾರಿಯಾಗಿರುವುದು ಇವರ ಪ್ರೇಮವನ್ನು ಮನದಟ್ಟು ಮಾಡಿಸುತ್ತದೆ.

ಕೂಡು ಕುಟುಂಬ ಸ್ವರ್ಗಕ್ಕೆ ಸಮಾನ

ಕೂಡು ಕುಟುಂಬ ಸ್ವರ್ಗಕ್ಕೆ ಸಮಾನ

ಇಂದು ಕೂಡು ಕುಟುಂಬಗಳು ಅಪರೂಪವಾಗುತ್ತಿವೆ. ಅದರಲ್ಲೂ ಇಬ್ಬರು ಸವತಿಯರು ಒಂದು ಸೂರಿನ ಕೆಳಗಿರುವುದು ಅನುಮಾನ. ಅಂತಹದ್ದರಲ್ಲಿ ಸಲ್ಮಾನ್ ಖಾನ್ ರವರ ತಂದೆಯವರಾದ ಸಲೀಂ ಖಾನ್ ರಿಗೆ ಇಬ್ಬರು ಪತ್ನಿಯರಿದ್ದು (ಸಲ್ಮಾ ಖಾನ್ ಮತ್ತು ಹೆಲೆನ್) ಅವರ ಎಲ್ಲಾ ಮಕ್ಕಳು (ಸಲ್ಮಾ ಖಾನ್ ರಿಂದ ನಾಲ್ವರು ಮಕ್ಕಳು -ಸಲ್ಮಾನ್ ಖಾನ್, ಸೊಹೇಲ್ ಖಾನ್, ಅರ್ಬಾಝ್ ಖಾನ್, ಅಲ್ವಿರಾ ಖಾನ್ ಅಗ್ನಿಹೋತ್ರಿ (ಅತುಲ್ ಅಗ್ನಿಹೋತ್ರಿ ಪತ್ನಿ) ಮತ್ತು ಹೆಲೆನ್ ರಿಂದ ಒಬ್ಬಳು ಮಗಳು ಅರ್ಪಿತಾ ಖಾನ್) ಇಂದಿಗೂ ಒಂದೇ ಸೂರಿನಡಿ ಕೂಡುಕುಟುಂಬದಲ್ಲಿ ಸುಖಬಾಳ್ವೆ ನಡೆಸುತ್ತಿದ್ದಾರೆ.

ಹದಿಹರೆಯದ ಪ್ರೇಮ ಜೀವಮಾನ ಪರ್ಯಂತ ಜೀವಂತ

ಹದಿಹರೆಯದ ಪ್ರೇಮ ಜೀವಮಾನ ಪರ್ಯಂತ ಜೀವಂತ

ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ಶಾರುಖ್ ಖಾನ್‌ರನ್ನು ಭೇಟಿಯಾದ ಗೌರಿಯವರಿಗೆ ಅಂದು ಮೊಳೆದ ಪ್ರೇಮ ನಂತರ ಹೆಮ್ಮರವಾಗಿ ಬೆಳೆದು ಇಂದು ಇಬ್ಬರೂ ಅತ್ಯಂತ ಸುಖೀ ದಂಪತಿಗಳಾಗಿದ್ದಾರೆ.

ಪ್ರೇಮ ಸಫಲವಾಗಲು ಪ್ರೇವವಿವಾಹವೇ ಆಗಬೇಕೆಂದಿಲ್ಲ

ಪ್ರೇಮ ಸಫಲವಾಗಲು ಪ್ರೇವವಿವಾಹವೇ ಆಗಬೇಕೆಂದಿಲ್ಲ

ಶಾಹಿದ್ ಕಪೂರ್ ಮತ್ತು ಮೀರಾ ರಾಜಪೂತ್ ರವರದ್ದು ಮನೆಯವರು ನಿಗದಿಪಡಿಸಿದ ವಿವಾಹವಾಗಿದೆ. ಕರೀನಾ, ಪ್ರಿಯಾಂಕಾ ಮತ್ತು ವಿದ್ಯಾ ಬಾಲನ್ ನಡುವೆ ಗುಸುಗುಸು ಕೇಳಿಬರುತ್ತಿದ್ದರೂ ತಾನು ಬಾಲಿವುಡ್ ತಾರೆಯನ್ನು ಮದುವೆಯಾಗಲಾರೆ ಎಂದು ಶಾಹಿದ್ ಹೇಳಿದ್ದರು. ಅಂತೆಯೇ ಸತ್ಸಂಗ್ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಹಿದ್ ತಂದೆ ಪಂಕಜ್ ಕಪೂರ್ ಮತ್ತು ಮೀರಾ ತಂದೆಯವರ ಪರಿಚಯವಾಯಿತು. ಅಂತೆಯೇ ಅವರ ಮಕ್ಕಳೂ ಹತ್ತಿರಾಗಿ ಈ ಪರಿಚಯ ಪ್ರೇಮಕ್ಕೆ ತಿರುಗಿತು. ನಂತರ ಇಬ್ಬರ ಮನೆಯ ಹಿರಿಯರು ಹನ್ನೆರಡು ವರ್ಷ ಅಂತರವಿರುವ ಇಬ್ಬರನ್ನೂ ವಿವಾಹಬಂಧನದ ಮೂಲಕ ಒಂದುಗೂಡಿಸಿದರು.

English summary

Tips To Steal From Bollywood Couples

Bollywood is filled with happy couples. Some married and some pro in the dating world. Bollywood beauties like Kareena Kapoor, Genelia and Gauri have found the man of their dreams and living in this kind of a lifestyle has been and is every girl's wish. So, take a look at these best relationship tips from Bollywood couples. They will inspire you:
Story first published: Friday, July 17, 2015, 13:18 [IST]
X
Desktop Bottom Promotion