ಸಂಬಂಧ ಮುರಿದು ಹೋದ ನಂತರ ಒಂಟಿತನದ ಭಯವೇ?

By Arpitha Rao

ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಮುರಿದು ಬೀಳುವುದು ಸಾಮಾನ್ಯವಾಗಿಬಿಟ್ಟಿದೆ.ಅದಕ್ಕೆ ಕಾರಣಗಳು ಸಾಕಷ್ಟಿರಬಹುದು.ಅಥವಾ ಕೆಲವೊಮ್ಮೆ ಕಾರಣವೇ ಇಲ್ಲದೆ ಹೀಗೆಲ್ಲ ಆಗಿ ಬಿಡಬಹುದು ಅದಕ್ಕಾಗಿ ಕೊರಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನಿಮ್ಮ ಜೀವನ ಮುಂದುವರೆಯಲೇ ಬೇಕು. ಅದಕ್ಕಾಗಿ ನೀವು ಲವಲವಿಕೆಯಿಂದ ಇರಬೇಕು. ನಿಮಗೆ ಹೊಸ ಚೈತನ್ಯ ಆಸಕ್ತಿ ಬರಲು ನೀವು ಹಳೆಯದರಿಂದ ಹೊರಬರುವುದು ಅತಿ ಅವಶ್ಯಕ.

ಸಂಬಂಧಗಳು ಮುರಿದುಬಿದ್ದ ಕಾರಣಕ್ಕೆ ಖಿನ್ನತೆಗೆ ಒಳಗಾಗುವ ಬದಲು ಅದರಿಂದ ಹೊರಬಂದು ಹೊಸ ಜೀವನವನ್ನು ಪ್ರಾರಂಭಿಸಿ.ಆಘಾತಕಾರಿ ವಿಷಯವೆಂದರೆ ನೀವು ಅತಿ ಹೆಚ್ಚು ಪ್ರೀತಿಸುತ್ತಿರುವ ವ್ಯಕ್ತಿ ನಿಮ್ಮನ್ನು ಪ್ರೀತಿಸುತ್ತಿಲ್ಲ, ಪ್ರೀತಿಯ ಬ್ರೇಕ್ ಅಪ್ ಆಗುತ್ತಿದೆ ಎಂದು ತಿಳಿದು ಬಂದಾಗ. ಈ ವಿಷಯ ನಿಮಗೆ ಗೊತ್ತಿಲ್ಲದೇ ಇದ್ದಕ್ಕಿದ್ದಂತೆ ತಿಳಿದಾಗ ಆಘಾತವಾಗುವುದು ಸಹಜ ಅಥವಾ ನಿಮಗೆ ಮೊದಲೇ ಇದರ ಬಗ್ಗೆ ಸ್ವಲ್ಪ ಸುಳಿವು ಸಿಕ್ಕಿದ್ದು ಆನಂತರ ಅಧಿಕೃತವಾಗಿ ತಿಳಿದಾಗ ನಿಮಗೆ ಈ ಆಘಾತಕಾರಿ ವಿಷಯದಿಂದ ಹೊರಬರುವುದು ಅಷ್ಟು ಸುಲಭವಾಗಿಲ್ಲದಿರಬಹುದು. ಆದರೆ ಅವರ ನಿರ್ಧಾರವನ್ನು ಗೌರವಿಸಿ ನೀವು ನಿಮ್ಮ ಜೀವನದ ಬಗ್ಗೆ ಗಮನ ಕೊಟ್ಟಾಗ ಇವೆಲ್ಲದರಿಂದ ಹೊರ ಬರಲು ಸಾಧ್ಯ. ಅದಕ್ಕಾಗಿ ನಿಮಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಅನುಸರಿಸಿ ನೋಡಿ

ಸಮಯ ತೆಗೆದುಕೊಳ್ಳುತ್ತದೆ

Tips on How to Stop Loving Someone Who Doesn't Love You Back

ಇಂತಹ ಸಮಯದಲ್ಲಿ ನಿಮ್ಮ ಮೆದುಳು ಮತ್ತು ಮನಸ್ಸು ಎರಡೂ ಗೊಂದಲದಲ್ಲಿರುತ್ತದೆ. ನೀವು ಇನ್ನೂ ಆತನನ್ನು ಪ್ರೀತಿಸುತ್ತಿದ್ದರೆ ಅದೇ ಹಳೆಯ ಆನಂದದ ದಿನಗಳು ನೆನಪಿಗೆ ಬರುತ್ತವೆ ಮತ್ತು ಅದರಿಂದ ಹೊರಬರುವುದು ಕಷ್ಟವಾಗುತ್ತದೆ. ಮತ್ತೊಂದೆಡೆ ಆತನ ಭಾವನೆಗಳು ಬದಲಾದುದರ ಬಗ್ಗೆ ವ್ಯಥೆ ಕೂಡ ಇರುತ್ತದೆ. ಈ ಗೊಂದಲಗಳ ನಡುವೆ ನಿಮ್ಮ ಮೆದುಳು ಮತ್ತು ಮನಸ್ಸಿಗೆ ವಾಸ್ತವವನ್ನು ಒಪ್ಪಿಕೊಂಡು ಮುನ್ನಡಿಸಿಕೊಂಡು ಹೋಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದ್ದರಿಂದ ನಿಮಗೆ ನೀವು ಸ್ವಲ್ಪ ಸಮಯ ಕೊಡಿ ನಿಧಾನವಾಗಿ ನೀವು ವಾಸ್ತವವನ್ನು ಒಪ್ಪಿಕೊಳ್ಳಲು ಅವಕಾಶ ಮಾಡಿಕೊಳ್ಳಿ.

ಸ್ವಲ್ಪ ದಿನ ದುಃಖ ನಿಭಾಯಿಸಲು ಸಮಯ ಕೊಡಿ


ಕಳೆದುಹೋದ ಸಂಬಂಧದ ಬಗ್ಗೆ ಸ್ವಲ್ಪ ದುಃಖಿಸಿ. ಸಂಬಂಧ ಮುರಿದು ಹೋದ ನಂತರ ಸಿಟ್ಟು, ಅಸಹನೆ, ಆತಂಕ, ದುಃಖ ಇವುಗಳೆಲ್ಲ ಸಾಮಾನ್ಯವಾದುದು ಇವುಗಳಿಗಾಗಿ ಸಮಯ ಕೊಡಿ. ಸ್ವಲ್ಪ ದಿನಗಳು ಕಳೆದ ನಂತರ ಸಮಾಧಾನ ಮಾಡಿಕೊಂಡ ನಂತರ ನಿಮಗೆ ಅನಿಸುತ್ತದೆ ಒಟ್ಟಿಗಿದ್ದು ಕಿರಿಕಿರಿ ಅನುಭವಿಸುವ ಬದಲು ದೂರ ಹೋದದ್ದು ಒಳ್ಳೆಯದು ಎಂಬ ಭಾವನೆ ನಿಮ್ಮಲ್ಲೂ ಬರುತ್ತದೆ. ನಿಮಗೆ ಸಮಾಧಾನ ತರುತ್ತದೆ.

ಜನರೊಂದಿಗೆ ಬೆರೆಯಿರಿ


ನಿಮಗೆ ನೀವು ಸಮಾಧಾನ ಮಾಡಿಕೊಳ್ಳಲು ಮುಂದಿನದನ್ನು ನಿರ್ಧರಿಸಲು ಸ್ವಲ್ಪ ಸಮಯ ನೀಡಿದ ನಂತರ ಹೊರಗಿನ ಜನರೊಂದಿಗೆ ಹೆಚ್ಚು ಬೆರೆಯುವ ಪ್ರಯತ್ನ ಮಾಡಿ.ನೀವು ಇಂತಹ ಸಮಯದಲ್ಲಿ ಒಬ್ಬರೇ ಕುಳಿತು ಅದರ ಬಗ್ಗೆಯೇ ಚಿಂತಿಸಲು ಇಷ್ಟ ಪಡುತ್ತೀರಿ.ಹೀಗೆ ಮಾಡಿದಾಗ ನಿಮ್ಮ ಒಂಟಿತನ ಇನ್ನಷ್ಟು ಹೆಚ್ಚಿ ಕಳೆದುಕೊಂಡವರ ಬಗ್ಗೆ ಇನ್ನಷ್ಟು ನೋವು ಐ ಮಿಸ್ ಯು ಎಂಬ ಭಾವನೆ ಹೆಚ್ಚುತ್ತದೆ ಆದ್ದರಿಂದ ಸ್ನೇಹಿತರೊಂದಿಗೆ ಕುಟುಂಬದೊಂದಿಗೆ ಬೆರೆಯಲು ಪ್ರಯತ್ನಿಸಿ.ನೀವು ನಾಲ್ಕು ಜನರೊಂದಿಗೆ ಬೆರೆತರೆ ಆ ಸಮಯದಲ್ಲಿ ಅದನ್ನೆಲ್ಲ ಮರೆತು ಖುಷಿಯಿಂದ ಇರಬಹುದು.

ನೀವು ನಿಮ್ಮದೇ ಆದ ಗುರಿ ನಿರ್ಧರಿಸಿಕೊಳ್ಳಿ


ನಿಮ್ಮ ಜೀವನದ ಬಗ್ಗೆ ಯೋಚಿಸಿ ಮತ್ತು ಸರಿಯಾದ ಗುರಿಯನ್ನು ನಿರ್ಧರಿಸಿಕೊಳ್ಳಿ.ಹೊಸ ಭಾಷೆಯೊಂದನ್ನು ಕಲಿಯುವುದು,ಹೊಸ ಕಾರು ಕಲಿಯುವುದು, ಕೆಲಸದಲ್ಲಿ ಬಡ್ತಿ ಸಿಗುವಂತೆ ಕೆಲಸ ಮಾಡುವುದು ಈ ರೀತಿಯ ಗುರಿಗಳನ್ನು ಇಟ್ಟುಕೊಳ್ಳಿ. ಬೇರೆ ದೇಶಕ್ಕೆ ಹೋಗಿಬಿಡಿ ಅಥವಾ ನಿಮ್ಮ ವೃತ್ತಿ ಜೀವನ ಬೇರೆ ಹಂತಕ್ಕೆ ಹೋಗಬೇಕು ಎಂಬ ಪಣ ತೊಟ್ಟುಕೊಳ್ಳಿ. ಈ ಎಲ್ಲವನ್ನು ಸಾಧಿಸಲು ಬೇಕಾಗುವ ಛಲವನ್ನು ಹೊಂದಿ ಮತ್ತು ಸಾಧಿಸಿ. ನೀವು ಈಗ ಒಂಟಿ ಇದರಿಂದ ನಿಮಗೆ ಯಾವುದೇ ಭಯವಿಲ್ಲದೆ ಅಥವಾ ಜವಾಬ್ದಾರಿಗಳಿಲ್ಲದೆ ಮುಂದುವರೆಯಲು ಹೆಚ್ಚು ಅವಕಾಶಗಳಿವೆ ಎಂಬುದನ್ನು ಅರಿತುಕೊಳ್ಳಿ.

ಸಂಪೂರ್ಣ ಕಾಂಟಾಕ್ಟ್ ನಿಲ್ಲಿಸಿಬಿಡಿ


ನಿಮ್ಮ ಹಳೆಯ ಪ್ರೇಮಿಯೊಂದಿಗೆ ಯಾವ ಕಾಂಟಾಕ್ಟ್ ಕೂಡ ಇಟ್ಟುಕೊಳ್ಳಬೇಡಿ. ಸೋಶಿಯಲ್ ನೆಟ್ವರ್ಕ್‌ನಲ್ಲಿ ಅವನನ್ನು ಡಿಲಿಟ್ ಮಾಡಿಬಿಡಿ ಇದರಿಂದ ಅವನ ಬಗ್ಗೆ ಯಾವ ಮಾಹಿತಿಯೂ ನಿಮಗೆ ಸಿಗುವುದಿಲ್ಲ ಇದು ಮರೆಯಲು ಸಹಾಯಕವೆನಿಸುತ್ತದೆ.ನಿಮಗೆ ಅವರ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಇರಬಹುದು ಅವರು ಈಗ ಯಾರೊಂದಿಗೆ ಸಂಬಂಧ ಹೊಂದಿದ್ದರೆ ಎಂದು ತಿಳಿಯುವ ಕುತೂಹಲ ಇರಬಹುದು ಮೊಬೈಲ್ ನಲ್ಲಿ ಅವರ ಕಾಂಟಾಕ್ಟ್ ಅಳಿಸಿಬಿಡಿ ಹಾಗೆಯೇ ಇಮೇಲ್ ವಿಳಾಸ ಕೂಡ ಅಳಿಸಿಹಾಕಿ ಇದರಿಂದ ಅವರನ್ನು ಸಂಪರ್ಕಿಸಬೇಕು ಎಂಬ ಅಪೇಕ್ಷೆ ಕಡಿಮೆ ಆಗುತ್ತದೆ ಮತ್ತು ಸಂಪೂರ್ಣ ಕಡಿತ ಹೊಂದಲು ಸಾಧ್ಯವಾಗುತ್ತದೆ.

ಭಾವನಾತ್ಮಕ ಪ್ರಚೋದನೆಗಳನ್ನು ತಪ್ಪಿಸಿ


ನಿಮ್ಮ ಭಾವಿ ಪ್ರೇಮಿಯೊಂದಿಗೆ ನೀವು ಕಳೆದ ದಿನಗಳನ್ನು ನೆನಪಿಸುವಂತಹ ಸಂದರ್ಭದಿಂದ ದೂರವಿರಿ. ನಿಮ್ಮೊಂದಿಗೆ ನೀವಿಬ್ಬರು ಒಟ್ಟಿಗಿರುವ ಹಳೆಯ ಭಾವಚಿತ್ರ, ಸಂವಹನ ನಡೆಸಿದ ಇ ಮೇಲ್, ವಾಯ್ಸ್ ಮೇಲ್, ಮೆಸೇಜ್ ಇವುಗಳನ್ನೆಲ್ಲ ಡಿಲಿಟ್ ಮಾಡಿಬಿಡಿ. ನೀವಿಬ್ಬರು ಕಳೆದ ಸಂತೋಷದ ದಿನಗಳ ಯಾವುದೇ ಕುರುಹುಗಳಿದ್ದರೂ ಕೂಡ ಅದು ನಿಮಗೆ ಹೆಚ್ಚು ನೋವು ನಿರಾಶೆ ಮೂಡಿಸುತ್ತದೆ. ಇವುಗಳೆಲ್ಲ ನಿಮಗೆ ಹಳೆಯದನ್ನು ಮರೆಯಲು ಕಷ್ಟವಾಗುವಂತೆ ಮಾಡುತ್ತದೆ.

ಡೇಟಿಂಗ್ ಮಾಡಲು ಪ್ರಯತ್ನಿಸಿ


ಹಳೆಯದು ಸಂಪೂರ್ಣ ಮುಗಿದು ಹೋಗಿರಬಹುದು ಹೊಸದಾಗಿ ಡೇಟಿಂಗ್‌ಗೆ ಪ್ರಯತ್ನಿಸಿ. ಆದರೆ ಬೇರೊಬ್ಬ ವ್ಯಕ್ತಿಯನ್ನು ಹುಡುಕಲು ಸಾಕಷ್ಟು ಒತ್ತಡಕ್ಕೆ ಒಳಗಾಗಬೇಡಿ. ಬೇರೊಬ್ಬರ ಸಲುಗೆಯಿಂದ ನೀವು ಹಳೆಯದನ್ನು ಮರೆಯಬಹುದು ಆದರೆ ಅದು ಕೇವಲ ಸಂತೋಷಕ್ಕೆ ಮಾತ್ರವಾಗಿರಲಿ. ನಿಮಗೆ ಬ್ರೇಕ್ ಅಪ್ ಆದಾಗ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಒಂದು ಒಳ್ಳೆಯ ಗೆಳೆಯ ನಿಮಗೆ ಸಿಗಬಹುದು ಅಥವಾ ನೀವು ಇಷ್ಟಪಟ್ಟಲ್ಲಿ ಸಿಂಗಲ್ ಆಗಿದ್ದುಕೊಂಡೇ ಜೀವನವನ್ನು ಆನಂದಯುತವಾಗಿ ನಡೆಸಿಕೊಂಡು ಹೋಗಬಹುದು.

Story first published: Monday, January 12, 2015, 22:33 [IST]
X
Desktop Bottom Promotion