Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
ಹೆಂಡತಿಯೊಬ್ಬಳು ಮನೆಯಲ್ಲಿ ಇಲ್ಲದಿದ್ರೆ ನನಗದು ಸೊನ್ನೆ ರೂಪಾಯಿ!
ಹೆಂಡತಿಯೊಬ್ಬಳು ಮನೆಯಲಿದ್ದರೆ ನನಗದು ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಮನೆಯಲಿದ್ದರೆ ನಾನು ಒಬ್ಬ ಸಿಪಾಯಿ ಅಂತ ಕೇವಲ ಹಾಡಿಗಷ್ಟೇ ಸೀಮಿತವಲ್ಲ. ನಿಜ ಜೀವನದಲ್ಲೂ ಕೂಡ ಒಮ್ಮೆ ಹೆಂಡತಿ ಕೆಲವು ದಿನಗಳ ಮಟ್ಟಿಗೆ ತವರು ಮನೆಗೆ ಸೇರಿದ್ರೆ ಗಂಡನಿಗೆ ಬೇಸರ, ಏನೋ ಒಂಥರಾ ಕೈಕಾಲೇ ಆಡದಂತ ಸ್ಥಿತಿ ಎದುರಾಗಿಬಿಡುತ್ತೆ. ಆಕೆ ಬೇಗ ಬಂದ್ರೆ ಸಾಕು ಅಂತ ಅಂದುಕೊಳ್ಳುವ ಗಂಡಂದಿರು ಹಲವಾರು ಮಂದಿ.
ಬಾಯಿ ಮಾತಿಗೆ ನೀನು ಇಲ್ಲದೇ ಇದ್ದಾಗ ಎಷ್ಟು ಆರಾಮಾಗಿತ್ತು ಕಣೆ ಅಂತ ಕಿಚಾಯಿಸಿದ್ರೂ ಕೂಡ ಮನಸ್ಸೊಳಗೆ ಅಬ್ಬಾ! ಬಂದಳಲ್ಲ ಸಾಕು ದೇವರೆ, ಅಂತ ಅನ್ನಿಸೋದಂತೂ ನೂರಕ್ಕೆ ನೂರರಷ್ಟು ಸತ್ಯ. ಅದ್ರಲ್ಲೂ ಹೆಂಡತಿ ಹೆರಿಗೆಗೆ ಅಂತ ತವರು ಸೇರಿದಾಗಂತೂ ಗಂಡನ ಪರಿಸ್ಥಿತಿ, ಆತನ ಕಸಿವಿಸಿ ಹೇಳತೀರದು. ಆದ್ರೆ ಹೆಂಡತಿ ಮನೆಯಲ್ಲಿ ಇಲ್ಲದೇ ಇದ್ದಾಗ ನೀವು ನಿಮ್ಮ ಮನಸ್ಸನ್ನು ಕಂಟ್ರೋಲ್ ಮಾಡ್ಕೊಳ್ಳೋದು ಹೇಗೆ, ಆಕೆಯ ಇಲ್ಲದಿರುವಿಕೆಯನ್ನು ಸಹಿಸಿಕೊಳ್ಳೋದು ಹೇಗೆ ಅನ್ನೋದಕ್ಕೆ ಕೆಲವು ಸಲಹೆಗಳು ಇಲ್ಲಿವೆ. ಮುಂದೆ ಓದಿ

ಹೆಂಡತಿಯ ಜೊತೆ ಆಗಾಗ ಮಾತನಾಡ್ತಾ ಇರಿ
ಹೆಂಡತಿ ತವರು ಮನೆಗೆ ಹೋಗಿದ್ದಾಳೆ ಅಂದ್ರೆ ಆಕೆಯ ತವರಿನಲ್ಲಿ ಏನಂದುಕೊಳ್ಳುತ್ತಾರೋ ಅನ್ನೋ ಆತಂಕದಲ್ಲೇ ಫೋನ್ ಮಾಡೋದನ್ನು ಮರೀಬೇಡಿ. ಇದೇನು ಹಳೆಯ ಕಾಲವಲ್ಲ. ಘಳಿಗೆಗೊಮ್ಮೆ ಬೇಕಾದ್ರೂ ಆಕೆಯನ್ನು ಸುಲಭದಲ್ಲಿ ಸಂಪರ್ಕಿಸಬಹುದಾದ ಸಾಧನಗಳಿವೆ. ಮೆಸೇಜ್ ಮಾಡ್ತಾ ಇರಿ, ಫೋನ್ ಮಾಡಿ ಆಕೆಯ ಜೊತೆ ಮಾತನಾಡ್ತಾ ಇರಿ. ದಿನಕ್ಕೊಮ್ಮೆ ಮಾತ್ರ ಮಾತನಾಡಬೇಕು ಅಂತ ಯಾವ ನಿಯಮಗಳಿಲ್ಲ. ನಿಮಗೆ ಮಾತನಾಡಬೇಕು ಅನ್ನಿಸಿದಾಗೆಲ್ಲ, ನಿಮಗೆ ಆಕೆಯ ನೆನಪಾದಾಗಲೆಲ್ಲ ಮಾತನಾಡಿ ಮತ್ತು ಮನೆಯಲ್ಲಿದ್ದಾಗ ನೀವು ಹೇಗೆ ಆಕೆಯ ಜೊತೆ ಎಲ್ಲವನ್ನು ಹೇಳಿಕೊಳ್ತಾ ಇದ್ರೂ ಅದಕ್ಕಿಂತ ಸ್ವಲ್ಪ ಹೆಚ್ಚೇ ಆಕೆ ಮನೆಯಲ್ಲಿ ಇಲ್ಲದೇ ಇರುವಾಗ ಶೇರ್ ಮಾಡಿಕೊಳ್ಳೋದು ಉತ್ತಮ.

ಎಂಜಾಯ್ ಮಾಡ್ತಾ ಇದ್ದೀರ ಅಂತ ಆಕೆಗೆ ಅನ್ನಿಸಕೂಡದು...!
ಹೆಂಡತಿ ತವರು ಮನೆಗೋ, ನೆಂಟರಿಷ್ಟರ ಮನೆಗೋ, ಇಲ್ಲವೇ ಅಫೀಶಿಯಲ್ ಟ್ರಿಪ್ ಅಥ್ವಾ ಇನ್ಯಾವುದೋ ಕಾರಣಕ್ಕೆ ಕೆಲವು ದಿನ ಮನೆಯಲ್ಲಿ ಇಲ್ಲ ಅಂದ್ರೆ ಆಕೆಯನ್ನು ನೀವು ಮಿಸ್ ಮಾಡಿಕೊಳ್ತಾ ಇದ್ದೀರ ಅಂತ ಅನ್ನಿಸಬೇಕೇ ವಿನಃ, ಆಕೆ ಇಲ್ಲದ ಕ್ಷಣಗಳನ್ನು ನೀವು ಎಂಜಾಯ್ ಮಾಡ್ತಾ ಇದ್ದೀರ ಅಂತ ತೋರಿಸಿಕೊಳ್ಳುವ ಅಗತ್ಯವಿಲ್ಲ. ಹೆಂಡತಿ ಇಲ್ಲದೇ ಇದ್ದಾಗ, ನಿಜವಾಗಿ ಆಕೆಯನ್ನು ನಿಜವಾಗಿ ಪ್ರೀತಿಸುವ ಯಾವ ಗಂಡಸೂ ಕೂಡ ಸಂತೋಷದಿಂದ ಇರಲಾರ. ಹಾಗಿದ್ದಾಗ ಆಕೆಯ ಜೊತೆ ಸುಳ್ಳು ನಾಟಕವಾಡುವ ಬದಲು ಮಿಸ್ ಯು ಅಂತ ಹೇಳಿಕೊಳ್ಳೋದ್ರಲ್ಲೇ ಹೆಚ್ಚು ಸಂತೋಷವಿರುತ್ತೆ ಅನ್ನೋದನ್ನು ಮರೀಬೇಡಿ..

ಹೊರಗಿನ ಊಟಕ್ಕೆ ಬಾಯ್ ಹೇಳಿ ಮನೆಯಲ್ಲಿ ನೀವೇ ತಯಾರಿಸಿಕೊಳ್ಳಿ
ಹೆಂಡತಿ ಮನೆಯಲ್ಲಿ ಇಲ್ಲ ಅಂದ್ರೆ ಹೆಚ್ಚಿನ ಗಂಡಸರು ಹೊರಗಿನ ಊಟಕ್ಕೆ ಮೊರೆ ಹೋಗ್ತಾರೆ. ಹೋಟೆಲ್ ಅಥ್ವಾ ಇನ್ನೆಲ್ಲೋ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲೇ ನಿಮಗೆ ಗೊತ್ತಿರುವ ಯಾವುದೋ ಸುಲಭದ ಖಾದ್ಯವನ್ನು ತಯಾರಿಸಿಕೊಳ್ಳಿ. ನಿಮ್ಮ ಅಡುಗೆಯನ್ನು ನೀವೇ ತಯಾರಿಸಿಕೊಳ್ಳೋದ್ರಿಂದ ಹೆಂಡತಿ ಇಲ್ಲದೇ ಇರುವಾಗ ಮನೆಯಲ್ಲಿ ಸಮಯ ಕಳೆಯಲು ಒಂದು ಕಾರಣವೂ ಆಗುತ್ತೆ. ಜೊತೆಗೆ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತೆ. ಅಡುಗೆ ಮನೆಯ ಸರಂಜಾಮುಗಳು ಸಿಗದೇ ಇದ್ದಲ್ಲಿ ಹೆಂಡತಿಗೆ ಪೋನ್ ಮಾಡಿ ವಿಚಾರಿಸಿ, ಹೇಗೆ ತಯಾರಿಸಿಕೊಳ್ಳಬೇಕೆಂದು ಆಕೆಯನ್ನೇ ಕೇಳಿ. ಹೊಸ ಅಡುಗೆ ಕಲಿಯಲು ಮತ್ತು ನಿಮ್ಮ ಅಡುಗೆ ನೀವೇ ತಯಾರಿಸಿಕೊಳ್ಳಲು ಇದೊಂದು ಸದವಕಾಶ ಎಂದು ಭಾವಿಸಿ.

ಆದಷ್ಟು ಬ್ಯುಸಿಯಾಗಿರಲು ಪ್ರಯತ್ನಿಸಿ
ಹೆಂಡತಿ ಮನೆಯಲ್ಲಿ ಇದ್ದಾಗ, ಹೆಂಡತಿ ಮಕ್ಕಳ ಜೊತೆ ಸಮಯ ಕಳೆಯಲು ಆದಷ್ಟು ಸಮಯವನ್ನು ಮೀಸಲಿಡಬೇಕು. ಆದ್ರೆ ಅವರು ಇಲ್ಲದೇ ಇದ್ದಾಗ ಆದಷ್ಟು ನಿಮ್ಮನ್ನ ನೀವು ಬ್ಯೂಸಿಯಾಗಿ ಇರಿಸಿಕೊಳ್ಳಲು ಪ್ರಯತ್ನಿಸಿ..ನಿಮ್ಮ ಹವ್ಯಾಸಗಳಿಗೆ ಹೆಚ್ಚು ಸಮಯ ಮೀಸಲಿಡಿ. ಪುಸ್ತಕ ಓದುವುದು, ಫಿಲ್ಮ್ ನೋಡೋದು, ವ್ಯಾಯಾಮ ಮಾಡುವುದು, ಅಥ್ವಾ ನಿಮ್ಗಿಷ್ಟವೆನಿಸುವ ಇತರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ಗಿಡಗಳಿದ್ದಲ್ಲಿ ಹೆಂಡತಿ ಇಲ್ಲದೇ ಇದ್ದಾಗ ಅವುಗಳ ಬಗ್ಗೆ ಸ್ವಲ್ಪ ಕೇರ್ ತೆಗೆದುಕೊಳ್ಳಿ.

ಕೆಲವು ದಿನಗಳ ಮಟ್ಟಿಗೆ ಬ್ಯಾಚುಲರ್ ಆಗಿರಲು ಸಂತೋಷ ಪಡಿ
ಹೆಂಡತಿ ಮನೆಯಲ್ಲಿ ಇಲ್ಲ ಅಂದ್ರೆ ಖಂಡಿತವಾಗ್ಲೂ ಅದು ಬೋರಿಂಗ್ ಅನ್ನೋದೇನೋ ನಿಜ. ಹೆಂಡತಿ ಊರಿಗೆ ಹೋದ್ರೆ ಬಾಯಿ ಮಾತಿಗೆ ಖುಷಿ ಪಟ್ರೂ ಕೂಡ ಆಕೆಯ ಇರುವಿಕೆಯಲ್ಲಿರುವ ಸಂತೋಷವನ್ನು ಪ್ರತಿಯೊಬ್ಬ ಗಂಡಸೂ ಕೂಡ ಮಿಸ್ ಮಾಡಿಕೊಳ್ತಾನೆ. ಆದ್ರೂ ಕೂಡ ಕೆಲವು ದಿನಗಳ ಮಟ್ಟಿಗೆ ಬ್ಯಾಚುಲರ್ ಆಗಿರಲು ನೀವು ಸಂತೋಷ ಪಡಿ. ಗೆಳೆಯರನ್ನು ಮೀಟ್ ಮಾಡಿ.. ಅವ್ರ ಜೊತೆ ಸಮಯ ಕಳೆಯಿರಿ. ಫಿಲ್ಮ್ ಗೆ ಹೋಗೋದು, ಗೆಳೆಯರ ಜೊತೆ ಶಾಪಿಂಗ್ ಮಾಡೋದು ಮಾಡಲು ಖಂಡಿತ ನಿಮ್ಗೆ ಈ ಸಮಯ ಉತ್ತಮವಾಗಿರುತ್ತೆ.

ನೆಗೆಟಿವ್ ಆಲೋಚನೆಗಳಿಂದ ದೂರವಿರಿ
ಹೆಂಡತಿ ಮನೆಯಲ್ಲಿ ಇಲ್ಲ ಅಂದ್ರೆ ಹಾಳು ಆಲೋಚನೆಗಳಿಗೇನು ಕೊರತೆ ಇರೋದಿಲ್ಲ. ಹೆಂಡತಿ ಇದ್ದಿದ್ರೆ ಏನೋ ವಟವಟ ಅನ್ಕೊಂಡು ಇರುತ್ತಾ ಇದ್ದಳು. ಈಗ ಮನೆಯಲ್ಲಿ ಮೌನ ಆವರಿಸಿಬಿಟ್ಟಿದೆ. ಹಾಗಾಗಿ ಇಲ್ಲಸಲ್ಲದ ಆಲೋಚನೆಗಳು ನಿಮ್ಮ ತಲೆಯಲ್ಲಿ ಗಿರಕಿ ಹೊಡಿಬಹುದು. ಆದ್ರೆ ಅಂತವುಗಳಿಗೆ ನೀವು ಅವಕಾಶ ನೀಡದೇ ಆದಷ್ಟು ಸಮಾಧಾನ ಚಿತ್ತರಾಗಿರಲು ಪ್ರಯತ್ನಿಸಿ. ಬೇಗ ಬಾ ಬೇಗ ಬಾ ಅಂತ ಹೆಂಡತಿಯನ್ನು ಪೀಡಿಸುವ ಗಂಡಂದಿರೂ ಕೂಡ ಇದ್ದಾರೆ. ಏನೋ ನಾಲ್ಕು ದಿನ ಖುಷಿಯಾಗಿ ತವರು ಮನೆಯಲ್ಲಿ ಇದ್ದು ಬರೋಣ ಅಂತ ಹೋಗಿದ್ದವರನ್ನು ಬಾರೇ ಬೇಗ ಅಂತ ನೆಪ ಮಾಡಿ ಎರಡೇ ದಿನಕ್ಕೆ ಕರೆಸಿಕೊಳ್ಳಬೇಡಿ. ಅವರಿಗೂ ಅವರ ಆಕಾಂಕ್ಷೆಗಳನ್ನು, ಆಸೆಗಳನ್ನು ಪೂರೈಸಿಕೊಳ್ಳಲು ಸಮಯ ಕೊಡಿ.

ಸೆಕ್ಸ್ ಕಂಟ್ರೋಲ್ ಮಾಡಿಕೊಳ್ಳುವ ಪವರ್ ಇರಲೇಬೇಕು
ಅಟ್ ಲಾಸ್ಟ್ ಬಟ್ ನಾಟ್ ಲೀಸ್ಟ್ ಅನ್ನೋ ಹಾಗೆ ತುಂಬಾ ಪ್ರಮುಖವಾದ ವಿಚಾರ ಇದು., ಪ್ರತಿ ಗಂಡಸರಿಗೂ ಹೆಂಡತಿ ಮನೆಯಲ್ಲಿ ಇಲ್ಲದೇ ಇರುವಾಗ ಆಗುವ ಪ್ರಮುಖ ಸಮಸ್ಯೆ ಅಂದ್ರೆ ರಾತ್ರಿಯ ಆ ಘಳಿಗೆಯನ್ನು ಮಿಸ್ ಮಾಡಿಕೊಳ್ಳೋದು. ನಿಜ. ಬಟ್ ಇದು ಅನಿವಾರ್ಯ. ಕೆಲವು ದಿನಗಳಿಗಷ್ಟೇ ಅನ್ನೋದು ನೆನಪಿರಲಿ. ಆಕೆಯ ನಂಬಿಕೆಗೆ ಯಾವತ್ತೂ ದ್ರೋಹ ಮಾಡದೇ ನೀವು ನಿಮ್ಮನ್ನ ಕಂಟ್ರೋಲ್ ಮಾಡಿಕೊಳ್ಳುವ ತಾಕತ್ತು ಬೆಳೆಸಿಕೊಳ್ಳಲೇಬೇಕು. ಅಷ್ಟಕ್ಕೂ ಮೀರಿ ಸಾಧ್ಯತೆ ಆಗುತ್ತಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೆಕ್ಸ್ ಕಂಟ್ರೋಲ್ ಮಾಡಿಕೊಳ್ಳುವ ಪವರ್ ಇರಲೇಬೇಕು
ಹೆಂಡತಿ ಬರೋದು ಇನ್ನೂ ಎರಡು ಮೂರು ತಿಂಗಳು ಬರೋದು ಲೇಟಿದೆ. ಆಕೆ ಹೆರಿಗೆಗೆ ಹೋಗಿದ್ದಾಳೆ ಏನ್ ಮಾಡೋದು ಅನ್ನೋದಾದ್ರೆ , ಸೂಕ್ತ ವೈದ್ಯರ ಬಳಿ ಕೌನ್ಸೆಲಿಂಗ್ ಮಾಡಿಸಿಕೊಳ್ಳೋದು ಉತ್ತಮ ಮಾರ್ಗ. ವೈದ್ಯರ ಮಾರ್ಗದರ್ಶನ ಪಡೆದು ಮುಂದುವರಿದಲ್ಲಿ ಖಂಡಿತ ನಿಮ್ಮನ್ನ ನೀವು ಈ ವಿಚಾರದಲ್ಲಿ ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತೆ. ಒಟ್ಟಿನಲ್ಲಿ ಹೆಂಡತಿಯೊಬ್ಬಳು ಮನೆಯಲ್ಲಿ ಇಲ್ಲದೇ ಇದ್ರೆ ನನಗದು ಸೊನ್ನೆ ರೂಪಾಯಿ ಅಂತ ಅನ್ನಿಸುವ ಗಂಡಸರಿಗೆ ಈ ಸಲಹೆಗಳು ಹೆಚ್ಚು ಪ್ರಸ್ತುತ ಅನ್ನೋದು ನಮ್ಮ ಭಾವನೆ.



Click it and Unblock the Notifications











