Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಿಳೆಯರ ಮನದಾಳವನ್ನು ಅರಿಯುವುದು ಅಷ್ಟು ಸುಲಭವಲ್ಲ ಕಣ್ರೀ!
ಕೆಲವು ಗಂಡಸರಿಗೆ ಮಹಿಳೆಯರಿಗೆ ಏನು ಬೇಕು ಎನ್ನುವುದು ಗೊತ್ತಿರುವುದಿಲ್ಲ. ಮಹಿಳೆಯರೇಕೆ ತೃಪ್ತಿಯನ್ನು ಹೊಂದುವುದಿಲ್ಲ ಎಂದು ಈ ಗಂಡಸರು ಯಾವಾಗಲು ಅಚ್ಚರಿ ವ್ಯಕ್ತಪಡಿಸುತ್ತಿರುತ್ತಾರೆ. ಒಂದು ವೇಳೆ ನೀವು ಒಂದು ಮಹಿಳೆಯ ಜೊತೆಯಲ್ಲಿ ವಾಸವಾಗಿದ್ದರೆ, ಅಂದರೆ ಸಂಬಂಧದಲ್ಲಿದ್ದರೆ, ಮೊದಲು ನೀವು ಆ ಹೆಂಗಸನ್ನು ಹೇಗೆ ಖುಷಿಯಾಗಿಡಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ದುಡ್ಡಿದ್ದರೆ ಎಂತಹ ಮಹಿಳೆಯರನ್ನು ಸಹ ಖುಷಿಯಾಗಿಡಬಹುದು ಎಂದು ನೀವು ಭಾವಿಸಿದರೆ, ಅದು ತಪ್ಪು. ಅದಕ್ಕಿಂತ ಮಿಗಿಲಾಗಿರುವುದು ಒಂದು ಇರುತ್ತದೆ. ಹುಡುಗಿಯರ ಸಮಸ್ಯೆಯನ್ನೂ ಕೂಡ ಅರ್ಥ ಮಾಡಿಕೊಳ್ಳಿ ಸ್ವಾಮಿ!
ಸತ್ಯಾಂಶವೆಂದರೆ, ಮಹಿಳೆಯರನ್ನು ಪ್ರೀತಿಸುವವರು ಮತ್ತು ಆಕೆಯನ್ನು ಒಪ್ಪಿಕೊಳ್ಳುವವರು ಇಲ್ಲವಾದಲ್ಲಿ, ಆಕೆ ಖುಷಿಯಾಗಿರುವುದಿಲ್ಲ. ಇದರ ಜೊತೆಗೆ ಆಕೆಯನ್ನು ಖುಷಿಯಾಗಿಡಲು ಹಲವಾರು ಅಂಶಗಳು ಪ್ರಭಾವ ಬೀರುತ್ತವೆ. ಇವೆಲ್ಲವು ಸಣ್ಣ ಸಣ್ಣ ವಿಚಾರಗಳು ಆಕೆಗೆ ಖುಷಿಯನ್ನು ತರುತ್ತ ಇರುತ್ತವೆ. ಇದನ್ನು ಅರ್ಥ ಮಾಡಿಕೊಂಡರೆ ಸಂಬಂಧ ಎಷ್ಟು ಸರಳ ಎಂದು ನಿಮಗೆ ಅನಿಸುತ್ತದೆ. ಮಹಿಳೆಯರನ್ನು ಗಂಡಸರು ಅರ್ಥ ಮಾಡಿಕೊಳ್ಳಲು ಶುರು ಮಾಡಿದರೆ, ಆಗ ಸಂಬಂಧ ಮುರಿದು ಬೀಳುವ ಪ್ರಕ್ರಿಯೆಗಳು ಕಡಿಮೆಯಾಗುತ್ತವೆ. ಬನ್ನಿ ನಾವು ಸಂಬಂಧದಲ್ಲಿ ಗಮನ, ಆಪ್ಯಾಯತೆ, ಹೊಗಳಿಕೆಗಳ ಮಹತ್ವವನ್ನು ತಿಳಿದುಕೊಳ್ಳೋಣ.

ಗಮನ
ಇದು ಎಲ್ಲಾ ಮಹಿಳೆಯರ ಪ್ರಥಮ ಬೇಡಿಕೆಯಾಗಿರುತ್ತದೆ. ಮಹಿಳೆಯರನ್ನು ವಿಶೇಷವಾಗಿ ಪ್ರೀತಿಸಬೇಕು ಮತ್ತು ಅವರಿಗೆ ಅಗತ್ಯವಾದಷ್ಟು ಗಮನವನ್ನು ಹರಿಸಬೇಕು. ಆಗ ಆಕೆ ತಾನು ಸ್ಪೆಷಲ್ ಎಂಬ ಭಾವನೆ ಬರುತ್ತದೆ. ಸತ್ಯಾಂಶವೆಂದರೆ, ಇದು ಆಕೆಯನ್ನು ನೀವು ಗೌರವಿಸುತ್ತಿದ್ದೀರಿ ಮತ್ತು ಆಕೆಯ ಕುರಿತು ಕಾಳಜಿ ವ್ಯಕ್ತಪಡಿಸುತ್ತಿದ್ದೀರಿ ಎಂದು ತೋರಿಸುತ್ತದೆ. ಸಂಬಂಧದಲ್ಲಿರುವ ಪ್ರತಿಯೊಬ್ಬ ಗಂಡಸರು ಆಕೆಗೆ ಯಾವ ರೀತಿ ಗಮನವನ್ನು ನೀಡಬೇಕೆಂದು ತಿಳಿದುಕೊಳ್ಳಲೆಬೇಕು. ಮೊದಲ ನೋಟದಲ್ಲೇ ಹೆಣ್ಣಿನ ಚಂಚಲ ಮನಸ್ಸನ್ನು ಗೆಲ್ಲಬಹುದೇ?
ಆಪ್ಯಾಯತೆ
ಆಪ್ಯಾಯತೆಯಿಲ್ಲದೆ ಬಾಂಧವ್ಯ ಬರುವುದಿಲ್ಲ. ಅನುಬಂಧದ ವಿಚಾರವಾಗಿ ಮಾತನಾಡುವುದಿದ್ದರು, ಪ್ರೀತಿ ಮತ್ತು ಬಾಂಧವ್ಯದ ಬಗ್ಗೆ ಮಾತನಾಡುವುದಿದ್ದರು, ಆಪ್ಯಾಯತೆ ತುಂಬ ಮುಖ್ಯ. ಇವುಗಳಿದ್ದರೆ ಸಂಬಂಧ ಮಧುರಾತೀಮಧುರ. ಸುಂದರವಾದ ಸಂಬಂಧಗಳು ಎದ್ದು ನಿಂತಿರುವುದು ಪ್ರೀತಿಯ ತಳಹದಿಯ ಮೇಲೆ. ನಿಮ್ಮ ಸಂಗಾತಿಯ ಕುರಿತು ನಿಮಗೆ ಆಪ್ಯಾಯತೆಯಿದ್ದರೆ, ನೀವು ಸಂಬಂಧದ ಕುರಿತು ಎಷ್ಟು ಮುತುವರ್ಜಿಯನ್ನು ವಹಿಸುತ್ತೀರಿ ಎಂಬುದು ತಿಳಿಯುತ್ತದೆ. ಆಗ ಅಂತಹ ಸಂಬಂಧಗಳು ಸದೃಢವಾಗಿರುತ್ತವೆ. ಅವಿನಾಭಾವ ಸಂಬಂಧಕ್ಕೆ ಪ್ರೀತಿ, ವಿಶ್ವಾಸವೇ ರಹದಾರಿ
ಹೊಗಳಿಕೆ
ಹೆಂಗಸರು ಗಂಡಸರಿಂದ ಬಯಸುವುದೇನು? ಮತ್ತೊಂದು ವಿಷಯವನ್ನು ಗಂಡಸರು ಅರ್ಥ ಮಾಡಿಕೊಳ್ಳಬೇಕು. ಹೆಂಗಸರಿಗೆ ಹೊಗಳಿಕೆಗಳೆಂದರೆ ಇಷ್ಟ. ಒಮ್ಮೆ ಹೆಂಗಸರು ಗಂಡಸಿಗೆ ಯಾವ ಯಾವ ಪಾತ್ರದಲ್ಲಿ ನೆರವಾಗುತ್ತಾರೆ ಎಂಬುದನ್ನು ನೆನಪಿಸಿಕೊಳ್ಳಿ. ತಾಯಿಯಾಗಿ, ಸೋದರಿಯಾಗಿ, ಸ್ನೇಹಿತೆಯಾಗಿ ಮತ್ತು ಹೆಂಡತಿ ಹಾಗು ಮಗಳಾಗಿ ಹೀಗೆ ನಾನಾ ಸಂಬಂಧದಲ್ಲಿ ಹೆಂಗಸರು ನಮ್ಮ ಬಾಳಿನ ಅವಿಭಾಜ್ಯ ಅಂಗವಾಗಿರುತ್ತಾರೆ. ಆಕೆ ಮಾಡುವ ಕೆಲಸಗಳಿಗೆ ಪ್ರತಿಯಾಗಿ ನೀವು ಏನು ಮಾಡದಿದ್ದರು ಪರವಾಗಿಲ್ಲ, ಸ್ವಲ್ಪ ಹೊಗಳಿಕೆಯನ್ನು ನೀಡಿ. ಇದರಿಂದ ನಿಮ್ಮ ಸಂಬಂಧ ಗಟ್ಟಿಗೊಳ್ಳುತ್ತದೆ.



Click it and Unblock the Notifications
